07/03/2026

Law Guide Kannada

Online Guide

ವಾಟ್ಸಾಪ್, ಇಮೇಲ್ ಮೂಲಕ ಆರೋಪಿಗಳಿಗೆ ನೋಟೀಸ್ ನೀಡುವಂತಿಲ್ಲ – ಸುಪ್ರೀಂ ಸ್ಪಷ್ಟ ಸೂಚನೆ

ನವದೆಹಲಿ: ಪೊಲೀಸರು ಆರೋಪಿಗಳಿಗೆ ಕಾನೂನುಬದ್ದವಾಗಿ ನೀಡಬೇಕಿರುವ ಬಂಧನ ಪೂರ್ವ ನೋಟೀಸ್ ಗಳನ್ನು ವಾಟ್ಸಾಪ್, ಇಮೇಲ್ ಮೂಲಕ ಕಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.

ಪೊಲೀಸರು ಮತ್ತು ಕಾನೂನು ಜಾರಿ ಸಂಸ್ಥೆಗಳು ಸಿಆರ್ಪಿಸಿ ಕಲಂ 41ಎ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಕಲಂ 35ರಡಿ ನಿಗದಿತ ಸೇವಾ ವಿಧಾನ ಮೂಲಕವಷ್ಟೇ ನೋಟಿಸ್ ತಲುಪಿಸಬೇಕು. ವಾಟ್ಸಾಪ್ ಅಥವಾ ಇತರೆ ವಿದ್ಯುನ್ಮಾನ ವಿಧಾನಗಳ ಮೂಲಕ ಬಂಧನ-ಪೂರ್ವ ನೋಟಿಸ್ಗಳನ್ನು ಕಳುಹಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.

ಅಪರಾಧ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾ.ಎಂ.ಎಂ. ಸುಂದರೇಶ್ ಮತ್ತು ನ್ಯಾ.ರಾಜೇಶ್ ಬಿಂದಾಲ್ ಅವರ ಪೀಠ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಇಲಾಖೆಗಳಿಗೆ ಈ ಆದೇಶ ತಲುಪುವಂತೆ ಮಾಡುವುದಕ್ಕೂ ಸೂಚನೆ ನೀಡಿದೆ.

ಪೊಲೀಸರು ಅಥವಾ ಕಾನೂನು ಜಾರಿ ಸಂಸ್ಥೆಗಳು ಆರೋಪಿಯನ್ನು ಬಂಧಿಸುವ ಮೊದಲು ಸಿಆರ್ಪಿಸಿ. ಸೆಕ್ಷನ್ 41ಚಿ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಸೆಕ್ಷನ್ 35 ಪ್ರಕಾರ ನೀಡಬೇಕಾದ ನೋಟೀಸ್ ಜಾರಿ ವಿಧಾನ ನಿಗದಿತ ಸೇವಾ ವಿಧಾನದ ಮೂಲಕವೇ ತಲುಪಬೇಕು ಎಂದು ತಾಕೀತು ಮಾಡಿದೆ. ಈ ತೀರ್ಪಿನ ಪ್ರತಿಯನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಇಲಾಖೆಗೆ ತಲುಪಿಸುವಂತೆ ಸುಪ್ರೀಂ ಕೋರ್ಟ್ನ ರಿಜಸ್ವಿಗೆ ನ್ಯಾಯಪೀಠ ಸೂಚನೆ ನೀಡಿದೆ.

ಮೇಲ್ಮನವಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, 7 ವರ್ಷಕ್ಕೂ ಕಡಿಮೆ ಅವಧಿಯ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧ ಪ್ರಕರಣಗಳಲ್ಲಿ ಪೋಲಿಸರು ಸಿಆರ್ಪಿಸಿ ಕಲಂ 41ಎ ಅಡಿ ಕಡ್ಡಾಯ ನೋಟಿಸ್ ಕಾರ್ಯವಿಧಾನವನ್ನು ಅನುಸರಿಸದೆ ವ್ಯಕ್ತಿಗಳನ್ನು ಬಂಧಿಸುವುದನ್ನು ವಿಷೇದಿಸಿದ ಸುಪ್ರೀಂ ಕೋರ್ಟ್ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.