23/04/2026

Law Guide Kannada

Online Guide

‘ವಿವಾಹಿತ ಮಗಳು’ ಇನ್ಮುಂದೆ ಅನುಕಂಪ ನೌಕರಿಗೆ ಅರ್ಹ: ಅಸ್ತು ಎಂದ ಸರ್ಕಾರ

ಬೆಂಗಳೂರು: ಇನ್ಮುಂದೆ ‘ವಿವಾಹಿತ ಮಗಳು ಅನುಕಂಪ ಆಧಾರದ ಸರ್ಕಾರಿ ನೌಕರಿಗೆ ಅರ್ಹಳಾಗಿರುತ್ತಾಳೆ. ಹೌದು ‘ಅನುಕಂಪದ ಆಧಾರ’ದಲ್ಲಿ ಸರಕಾರಿ ಉದ್ಯೋಗ ನೀಡುವಾಗ ವಿವಾಹಿತ ಮಗಳು ಸಂಬಂಧವನ್ನೂ ಸೇರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಳೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು ‘ಅನುಕಂಪದ ಆಧಾರ’ದ ಮೇಲೆ ಸರಕಾರಿ ಉದ್ಯೋಗ ನೀಡುವಾಗ ‘ವಿವಾಹಿತ ಮಗಳು’ ಎಂಬ ಸಂಬಂಧವನ್ನೂ ಸೇರಿಸಲು ಕ್ಯಾಬಿನೆಟ್ ಅಸ್ತು ಎಂದಿದೆ. ಕಾರ್ಕಳದ ನಕ್ಸಲ್ ನಿಗ್ರಹ ದಳದಲ್ಲಿ ದ್ವಿತೀಯ ದರ್ಜೆ ಸಹಾಯಕ ಆಗಿದ್ದ ಪಿ.ಜಗದೀಶ್ ಅವರ ಅವಿವಾಹಿತ ಸಹೋದರಿ ತಾರಾಗೆ ಅನುಕಂಪದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಕರ್ನಾಟಕ ಸಿವಿಲ್ ಸೇವಾ ನಿಯಮ 5ನ್ನು ಸಡಿಲಿಸಲಾಗಿದೆ.

‘ಅನುಕಂಪದ ಆಧಾರ’ದಲ್ಲಿ ಸರಕಾರಿ ಉದ್ಯೋಗ ನೀಡುವಾಗ ಮೃತರ ಸಹೋದರರು, ಸಹೋದರಿಯರು, ಮೊಮ್ಮಗ, ಅವಿವಾಹಿತ ಮೊಮ್ಮಗಳು, ಸೊಸೆ, ವಿಧವಾ ಮಗಳು ಮತ್ತು ವಿಧವಾ ಮೊಮ್ಮಗಳು ಎಂಬ ಪದಗಳ ಬಳಿಕ ಇದೀಗ ‘ವಿವಾಹಿತ ಮಗಳು’ ಎಂಬುದನ್ನೂ ಸೇರಿಸಲಾಗಿದೆ.

ಈ ಹಿಂದೆ, ಅನುಕಂಪದ ಆಧಾರದ ಮೇಲೆ ಸರಕಾರಿ ಉದ್ಯೋಗ ನೀಡುವಾಗ ‘ವಿವಾಹಿತ ಮಗಳು’ ಸಂಬಂಧವನ್ನು ಪರಿಗಣಿಸುತ್ತಿರಲಿಲ್ಲ. ಅನುಕಂಪದ ಆಧಾರದಲ್ಲಿ ಸರಕಾರಿ ಉದ್ಯೋಗ ನೀಡುವಾಗ ಮೃತರ ಸಹೋದರರು, ಸಹೋದರಿಯರು, ಮೊಮ್ಮಗ, ಅವಿವಾಹಿತ ಮೊಮ್ಮಗಳು, ಸೊಸೆ, ವಿಧವಾ ಮಗಳು ಮತ್ತು ವಿಧವಾ ಮೊಮ್ಮಗಳು ಎಂಬ ಪದಗಳ ಸಂಬಂಧಕ್ಕೆ ಮಾತ್ರ ಸೀಮಿತವಾಗಿತ್ತು. ಇದೀಗ ‘ವಿವಾಹಿತ ಮಗಳು’ ಸಂಬಂಧವೂ ಅನುಕಂಪದ ನೌಕರಿಗೆ ಅರ್ಹತೆ ಪಡೆದುಕೊಂಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.