ಎರಡನೇ ಪತ್ನಿ ಸಾಕಲು ತಾಕತ್ತಿರುವ ಪತಿಯು ಮೊದಲ ಪತ್ನಿಗೆ ಜೀವನಾಂಶ ನಿರಾಕರಿಸಬಾರದು – ಹೈಕೋರ್ಟ್
ಅಲಹಾಬಾದ್: ಮೊದಲ ಪತ್ನಿಯಿದ್ದರೂ ಎರಡನೇ ಮದುವೆಯಾಗಿ ಸಂಸಾರ ನಡೆಸುತ್ತಿದ್ದ ವ್ಯಕ್ತಿಯು ಮೊದಲ ಪತ್ನಿಗೆ ಜೀವನಾಂಶ ನೀಡಲು ನಿರಾಕರಿಸದಂತೆ ಅಲಹಾಬಾದ್ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.
ರಡನೇ ಪತ್ನಿಯ ಕಷ್ಟಸುಖಗಳಿಗೆ ಹೆಗಲಾಗುವ ಆಕೆಯನ್ನು ಸಾಕಲು ತಾಕತ್ತಿರುವ ಗಂಡ ಮೊದಲ ಮೊದಲ ಪತ್ನಿಗೆ ಜೀವನಾಂಶ ನೀಡಲೇಬೇಕು ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಹರ್ವೀರ್ ಸಿಂಗ್ ಅವರ ಏಕಸದಸ್ಯ ಪೀಠವು ತೀರ್ಪು ನೀಡಿದೆ ತನ್ನ ಮೊದಲ ಪತ್ನಿಗೆ ಮಾಸಿಕ 20,000 ರೂ. ಜೀವನಾಂಶ ನೀಡುವಂತೆ ಜೂನ್ 6 ರಂದು . ಅಲಿಘರ್ ಕೌಟುಂಬಿಕ ನ್ಯಾಯಾಲಯವು ನೀಡಿದ್ದ ಆದೇಶವನ್ನು ಪ್ರಶ್ನಿಸಿ . ಪತಿ ಮೊಹಮ್ಮದ್ ಆಸಿಫ್ ಅಲಹಾಬಾದ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಎರಡನೇ ಪತ್ನಿಯನ್ನು ಪೋಷಿಸಲು ಸಾಧ್ಯವಾಗುವ ಪತಿಯ ಆರ್ಥಿಕ ಸಾಮರ್ಥ್ಯವು ಮೊದಲ ಪತ್ನಿಯ ಜೀವನಾಂಶ ಹಕ್ಕನ್ನು ನಿರಾಕರಿಸಲು ಕಾರಣವಾಗುವುದಿಲ್ಲ. ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿರುವಾಗ ಮತ್ತು ಆರ್ಥಿಕವಾಗಿ ತನ್ನ ಹೆತ್ತವರ ಮೇಲೆ ಅವಲಂಬಿತಳಾಗಿದ್ದಾಗ ಆಕೆಗೆ ಆರ್ಥಿಕ ನೆರವು ಅತ್ಯಗತ್ಯ ಎಂಬುದನ್ನು ಗಮನಿಸಿತು. ನಂತರ ಕೌಟುಂಬಿಕ ನ್ಯಾಯಾಲಯ ನೀಡಿದ ಜೀವನಾಂಶ ಆದೇಶದ ವಿರುದ್ಧ ಪತಿ ಮೊಹಮ್ಮದ್ ಆಸಿಫ್ ಎಂಬುವವರು ಸಲ್ಲಿಸಿದ್ದ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿತು.
ಆಸಿಫ್ ತನ್ನ ಅರ್ಜಿಯಲ್ಲಿ ತಾನು ಬೆಂಗಳೂರಿನ ಹಾರ್ಡ್ವೇರ್ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕನಾಗಿದ್ದು, ತನ್ನ ಮೊದಲ ಪತ್ನಿಗೆ ತಿಂಗಳಿಗೆ 20,000 ರೂ. ಪಾವತಿಸಲು ತನ್ನ ಸಂಬಳ ಸಾಕಾಗುವುದಿಲ್ಲ ಎಂದು ವಾದಿಸಿದ್ದರು. ಈ ನಿರ್ವಹಣಾ ಮೊತ್ತವು ಅಧಿಕವಾಗಿದ್ದು, ತನ್ನ ಆರ್ಥಿಕ ಸಾಮರ್ಥ್ಯವನ್ನು ಮೀರಿದೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಆಲಿಘರ್ ಕೌಟುಂಬಿಕ ನ್ಯಾಯಾಲಯವು ಆದೇಶ ಹೊರಡಿಸುವಾಗ, ಅರ್ಜಿದಾರರ ವಾರ್ಷಿಕ ಆದಾಯ ಸುಮಾರು 83,000 ರೂ. ಎಂದು ಹೇಳುವ 2018ರ ಆದಾಯ ಪ್ರಮಾಣಪತ್ರವನ್ನು ಕಡೆಗಣಿಸಲಾಗಿದೆ ಎಂದು ಆಸಿಫ್ ಅವರ ವಕೀಲರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವೂ ಪ್ರಮಾಣಪತ್ರವು ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಎಂದಿದೆ.
ಆರಂಭದಲ್ಲಿ ಕೌಟುಂಬಿಕ ನ್ಯಾಯಾಲಯವು 2,000 ರೂ.ಗಳ ಮಧ್ಯಂತರ ಜೀವನಾಂಶವನ್ನು ನೀಡಿತ್ತು, ನಂತರ ಅದನ್ನು 20,000 ರೂ.ಗಳಿಗೆ ಹೆಚ್ಚಿಸಿತ್ತು, ಇದು ಅತಿಯಾದದ್ದು ಮಾತ್ರವಲ್ಲದೆ ದಾಖಲೆಯಲ್ಲಿರುವ ಸಂಗತಿಗಳು ಮತ್ತು ಸಾಕ್ಷ್ಯಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿವಾದಿ ಪತ್ನಿ ಪರ ವಾದ ಮಂಡಿಸಿದ ವಕೀಲರು ಆಸಿಫ್ ಇನ್ನೊಬ್ಬ ಮಹಿಳೆಯನ್ನು ಮರು ಮದುವೆಯಾಗಿದ್ದಾನೆ. ಜೂನ್ 6 ರ ಆದೇಶದಲ್ಲಿ ಈ ಅಂಶ ಬೆಳಕಿಗೆ ಬಂದಿತು. ಆಸಿಫ್ ಕೆಲಸ ಮಾಡುವ ಹಾರ್ಡ್ವೇರ್ ಅಂಗಡಿಯು ಅವನ ತಂದೆಯ ಒಡೆತನದಲ್ಲಿದೆ ಮತ್ತು ಇಬ್ಬರೂ ತೆರಿಗೆದಾರರು ಎಂದು ಕೋರ್ಟ್ಗೆ ಮಾಹಿತಿ ನೀಡಿದರು. ಅವರ ಹಾರ್ಡ್ವೇರ್ ಅಂಗಡಿಯು ನೋಂದಾಯಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಖ್ಯೆಯನ್ನು ಸಹ ಹೊಂದಿದೆ ಎಂದು ತಿಳಿಸಿದರು. ಅರ್ಜಿದಾರರು ತಮ್ಮ ಎರಡನೇ ಪತ್ನಿಯನ್ನು ಸಾಕಲು ಸಾಧ್ಯವಾದರೆ, ಮೊದಲ ಪತ್ನಿಯನ್ನು ನಿರ್ಲಕ್ಷಿಸುವಂತಿಲ್ಲ.ಪ್ರತಿವಾದಿಯು ಯಾವುದೇ ಆದಾಯದ ಮೂಲವಿಲ್ಲದ ನಿರುದ್ಯೋಗಿ ಮಹಿಳೆಯಾಗಿದ್ದು, ಆರ್ಥಿಕವಾಗಿ ತನ್ನ ಹೆತ್ತವರ ಮೇಲೆ ಅವಲಂಬಿತಳಾಗಿದ್ದಾಳೆ ಎಂದು ಹೇಳಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವೂ ಈ ಹಿಂದೆ ಶಮೀಮಾ ಫಾರೂಕಿ ವಿ ಶಾಹಿದ್ ಖಾನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ, ಕಾನೂನುಬದ್ಧವಾಗಿ ವಿವಾಹಿತ ಪತ್ನಿಯನ್ನು ಪೋಷಿಸುವ ಜವಾಬ್ದಾರಿಯನ್ನು ಕೇವಲ ಅಂತಹ ಪರಿಗಣನೆಗಳ ಆಧಾರದ ಮೇಲೆ ಅಳಿಸಿ ಹಾಕಲಾಗುವುದಿಲ್ಲ ಎಂದು ಹೇಳಿ, ಪತಿ ಆಸಿಫ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
