06/03/2026

Law Guide Kannada

Online Guide

ವಕ್ಫ್ ವ್ಯವಸ್ಥಾಪನಾ ಸಮಿತಿ ಸದಸ್ಯರ ವಜಾ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರ: ಹೈಕೋರ್ಟ್

ಬೆಂಗಳೂರು: ‘ವಕ್ಫ್ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನು ವಜಾಗೊಳಿಸುವ ಅಧಿಕಾರ ವಕ್ಫ್ ವ್ಯವಸ್ಥಾಪನಾ ಸಮಿತಿಗೆ ಇಲ್ಲ. ವಕ್ಫ್ ಮಂಡಳಿಗೆ ಮಾತ್ರ ಈ ಅಧಿಕಾರವಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆ ಕೃಷ್ಣಾಪುರದ ಮುಸ್ಲಿಮ್ ಜಮಾತ್ ನ ಬದಾರಿಯಾ ಜುಮ್ಮಾ ಮಸೀದಿಯ ನಿರ್ಧಾರ ಪ್ರಶ್ನಿಸಿ ಸುರತ್ಕಲ್ ನ ಅಬ್ದುಲ್ ಸತ್ತಾರ್ ಮತ್ತು ಮೊಹಮದ್ ಮುಸ್ತಾಫ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇವರು ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠವು , 2024ರ ಅಕ್ಟೋಬರ್ 11ರಂದು ತುರ್ತು ಸಭೆ ನಡೆಸಿ ಅರ್ಜಿದಾರರನ್ನು ವಜಾಗೊಳಿಸಿದ್ದ ವ್ಯವಸ್ಥಾಪನಾ ಸಮಿತಿ ಅದೇಶವನ್ನು ರದ್ದುಗೊಳಿಸಿದೆ. ಹಾಗೆಯೇ ಅರ್ಜಿದಾರರು ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಮುಂದುವರಿಯಬಹುದು’ ಎಂದು ಸ್ಪಷ್ಟಪಡಿಸಿದೆ.

‘ವಕ್ಫ್ ಕಾಯ್ದೆ-1995ರ ಕಲಂ 32(2) (ಜಿ) ಅನುಸಾರ ವ್ಯವಸ್ಥಾಪನಾ ಸಮಿತಿಗೆ, ಮುತವಲ್ಲಿಗಳನ್ನು ನೇಮಿಸುವ ಅಥವಾ ತೆಗೆಯುವ ಅಧಿಕಾರ ವಕ್ಸ್ ಮಂಡಳಿಗೆ ಮಾತ್ರವೇ ಇದೆ. ಮುತವಲ್ಲಿಗಳನ್ನು ವಜಾಗೊಳಿಸುವಾಗ ವಕ್ಫ್ ಕಾಯ್ದೆಯ ಕಲಂ 64 ಮತ್ತು ಕರ್ನಾಟಕ ವಕ್ಫ್ ನಿಯಮಗಳು-2017ರ ನಿಯಮ 58ರ ಅಡಿ ಇರುವ ಕಾರಣಗಳನ್ನು ಪಾಲಿಸಬೇಕು’ ಎಂದು ನ್ಯಾಯಪೀಠ ಸೂಚನೆ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.