ನಟಿ ರಮ್ಯಾ ಮಾನಹಾನಿ ಕೇಸ್ ರದ್ದಿಗೆ ಸುಪ್ರೀಂ ನಕಾರ: ಸುವರ್ಣ ನ್ಯೂಸ್, ವಿಶ್ವೇಶ್ವರ ಭಟ್ ಗೆ ಸಂಕಷ್ಟ
ನವದೆಹಲಿ: ನಟಿ ರಮ್ಯಾ ಆಲಿಯಾಸ್ ದಿವ್ಯ ಸ್ಪ0ದನಾ ಮಾನಹಾನಿ ಪ್ರಕರಣವನ್ನ ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು ಈ ಹಿನ್ನೆಲೆಯಲ್ಲಿ ಇದೀಗ ಸುವರ್ಣ ನ್ಯೂಸ್ ಮತ್ತು ಆಗಿನ ಸಂಪಾದಲ ವಿಶ್ವೇಶ್ವರ ಭಟ್ ಗೆ ಸಂಕಷ್ಟ ಎದುರಾಗಿದೆ
ನಟಿ ರಮ್ಯಾ ಅವರ ಬಗ್ಗೆ ಅವಹೇಳನ ಮಾಡಿ ಸುದ್ದಿ ಮಾಡಿದ್ದ ಸುವರ್ಣ ನ್ಯೂಸ್ ಮತ್ತು ಅದರ ಮಾತೃ ಸ0ಸ್ಥೆ ಹಾಗೂ ವಾಹಿನಿಯ ಆಗಿನ ಸ0ಪಾದಕ ವಿಶ್ವೇಶ್ವರ ಭಟ್ ವಿರುದ್ದ ಮಾನಹಾನಿ ಪ್ರಕರಣ ರದ್ದುಪಡಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಜಿ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ನಿರಾಕರಿಸಿದೆ.
ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ, ನೀವು ಪ್ರಸಾರ ಮಾಡಿರುವ ಸುದ್ದಿಯಲ್ಲಿ ನಟಿ ರಮ್ಯಾ ಅವರ ವೀಡಿಯೋ ಮತ್ತು ಭಾವಚಿತ್ರಗಳನ್ನು ಪ್ರಸಾರ ಮಾಡಲಾಗಿದೆ. ಹಾಗಾಗಿ, ದೂರನ್ನು ವಜಾ ಮಾಡಲಾಗದು. ಹಾಗಾಗಿ, ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿತು.
2013ರ ಮೇ 31ರ0ದು ಕನ್ನಡ ಸಿನಿಮಾ ನಟಿಯರು ಕ್ರಿಕೆಟ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿ0ಗ್ಹಗರಣದಲ್ಲಿ ಭಾಗಿಯಾಗಿದ್ದಾರೆ ಎ0ದು ಸುದ್ದಿ ಮಾಡಲಾಗಿತ್ತು. ಹೀಗೆ ಸುದ್ದಿ ಮಾಡುವಾಗ ನಟಿ ರಮ್ಯಾ ಅವರ ವೀಡಿಯೋ ಮತ್ತು ಭಾವಚಿತ್ರಗಳನ್ನು ಪ್ರಸಾರ ಮಾಡಲಾಗಿತ್ತು.
ಸುದ್ದಿವಾಹಿನಿಯ ಈ ಪ್ರಸಾರದಿ0ದ ತಮ್ಮ ಘನತೆಗೆ ಗಂಭೀರ ಹಾನಿಯಾಗಿದ್ದು. ಸುದ್ದಿಯನ್ನು ಖಚಿತಪಡಿಸದೆ ಪ್ರಸಾರ ಮಾಡಲಾಗಿದೆ ಎ0ದು ರಮ್ಯಾ ಮಾನನಷ್ಟ ಮೂಕದ್ದಮೆ ಹೂಡಿದ್ದರು.
ಕಳೆದ ವರ್ಷದ ಮಾರ್ಚ್ ನಲ್ಲಿ ಸುವರ್ಣ ನ್ಯೂಸ್ ಮತ್ತು ವಿಶ್ವೇಶ್ವರ ಭಟ್ ವಿರುದ್ದ ಮಾನಹಾನಿ ಪ್ರಕರಣ ವಜಾ ಮಾಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿಶ್ವೇಶ್ವರ ಭಟ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
