IPC Section 498A Archives - Law Guide Kannada https://www.lawguidekannada.com/tag/ipc-section-498a/ Online Guide Sun, 30 Nov 2025 01:09:35 +0000 en-US hourly 1 https://wordpress.org/?v=6.9.4 http://www.lawguidekannada.com/wp-content/uploads/2022/09/cropped-Logo_512-32x32.jpg IPC Section 498A Archives - Law Guide Kannada https://www.lawguidekannada.com/tag/ipc-section-498a/ 32 32 IPC ಸೆಕ್ಷನ್ 498ಂ ಅಲ್ಲಿ ಬಳಸಿರುವ ‘ಗಂಡ’ ಎಂಬ ಪದ ಲಿವ್ ಇನ್ ಸಂಬಂಧಗಳಿಗೂ ಅನ್ವಯ- ಹೈಕೋರ್ಟ್ http://www.lawguidekannada.com/the-word-husband-used-in-ipc-section-498a-applies-to-live-in-relationships-too-high-court/ Sun, 30 Nov 2025 01:09:35 +0000 https://www.lawguidekannada.com/?p=2882 ಬೆಂಗಳೂರು: ಐಪಿಸಿ ಸೆಕ್ಷನ್ 498ಎ( ಮದುವೆಯಾದ ಮಹಿಳೆಯ ಮೇಲಿನ ಕ್ರೌರ್ಯ ಮತ್ತು ಹಿಂಸೆ) ಅಲ್ಲಿ ಬಳಸಿರುವ ಗಂಡ ಎಂಬ ಪದವು...

The post IPC ಸೆಕ್ಷನ್ 498ಂ ಅಲ್ಲಿ ಬಳಸಿರುವ ‘ಗಂಡ’ ಎಂಬ ಪದ ಲಿವ್ ಇನ್ ಸಂಬಂಧಗಳಿಗೂ ಅನ್ವಯ- ಹೈಕೋರ್ಟ್ appeared first on Law Guide Kannada.

]]>
ಬೆಂಗಳೂರು: ಐಪಿಸಿ ಸೆಕ್ಷನ್ 498ಎ( ಮದುವೆಯಾದ ಮಹಿಳೆಯ ಮೇಲಿನ ಕ್ರೌರ್ಯ ಮತ್ತು ಹಿಂಸೆ) ಅಲ್ಲಿ ಬಳಸಿರುವ ಗಂಡ ಎಂಬ ಪದವು ಕೇವಲ ಕಾನೂನು ಬದ್ಧವಾಗಿ ವಿವಾಹವಾದ ಸಂಬಂಧಕ್ಕೆ ಮಾತ್ರ ಸೀಮಿತವಲ್ಲ. ಅದು ಲಿವ್-ಇನ್-ರಿಲೇಷನ್ ಶಿಪ್ ಗಳಿಗೂ ಅನ್ವಯಿಸಲಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನ ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ್ರಾಜ್ ಅವರ ಪೀಠ, ವಿವಾಹದ ಸ್ವರೂಪದ ಸಂಬಂಧಗಳಿಗೂ ಕ್ರೌರ್ಯದ ವಿಚಾರದಲ್ಲಿ IPC ಸೆಕ್ಷನ್ 498ಎ ಅನ್ವಯವಾಗಲಿದೆ ಎಂದು ತಿಳಿಸಿದೆ.

ಶಿವಮೊಗ್ಗ ಮೂಲದ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ದೂರುದಾರೆಯೊಂದಿಗೆ ಅರ್ಜಿದಾರನ ವಿವಾಹ ಕಾನೂನಾತ್ಮಕವಾಗಿ ಅಮಾನ್ಯವಾಗಿರುವುದರಿಂದ, 498ಎ ಅನ್ವಯಿಸದು. ಅರ್ಜಿದಾರ ಈಗಾಗಲೇ ವಿವಾಹಿತನಾಗಿರುವುದರಿಂದ, ಆತ ದೂರುದಾರೆಯ ಗಂಡ ಎಂದು ಪರಿಗಣಿಸಲಾಗದು. ಹೀಗಾಗಿ 498ಎ ಅಡಿಯಲ್ಲಿ ಪ್ರಕರಣ ದಾಖಲಿಸುವಂತಿಲ್ಲ ಎಂದು ವಾದಿಸಿದ್ದರು.

ಆದರೆ ಅರ್ಜಿದಾರರ ಪರ ವಕೀಲರ ವಾದ ತಿರಸ್ಕರಿಸಿದ ನ್ಯಾಯಪೀಠವು, ತನ್ನ ಮೊದಲ ವಿವಾಹವನ್ನು ಮರೆಮಾಚಿ ದೂರುದಾರೆ ಜೊತೆಗೆ ಮದುವೆ ಸ್ವರೂಪದ ಸಂಬಂಧ ಇಟ್ಟುಕೊಂಡಿದ್ದಾರೆ. ಅಲ್ಲದೆ ಮೊದಲೇ ಬೇರೊಬ್ಬಳ ಜೊತೆ ಮದುವೆಯಾಗಿ, ಒಂದು ಮಗುವನ್ನೂ ಹೊಂದಿದ್ದಾರೆ. ಹೀಗಿದ್ದರೂ ಆ ವಿಷಯ ಮರೆಮಾಚಿ ದೂರುದಾರೆಯ ಜೊತೆ ಮದುವೆಯಾಗಿ ವಾಸ ಮಾಡಿದ್ದಾರೆ. ಆಕೆಯ ಕುಟುಂಬದಿಂದ ಚಿನ್ನ, ಬೆಳ್ಳಿ ಮತ್ತು ನಗದು ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕವೂ ಹೆಚ್ಚಿನ ಬೇಡಿಕೆಗಳನ್ನು ಮಾಡಿ, ಹಿಂಸೆ ಹಾಗೂ ಕ್ರೌರ್ಯ ನಡೆಸಲಾಗಿದೆ. ಆಕೆ ಪ್ರಾಣ ತೆಗೆಯಲೂ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ಹೀಗಾಗಿ ಅರ್ಜಿದಾರರ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿತು.

ಸಂಬಂಧ ಕಾನೂನಾತ್ಮಕವಾಗಿಲ್ಲ ಎಂಬ ನೆಪದಲ್ಲಿ 498ಎಯಿಂದ ತಪ್ಪಿಸಿಕೊಳ್ಳುವುದು ಸಾಧ್ಯ ಎಂಬ ಸಂದೇಶ ಇದರಿಂದ ಹೊರಬರುತ್ತದೆ. ಅದು ನ್ಯಾಯಕ್ಕೆ ವಿರುದ್ಧ ಎಂದು ನ್ಯಾಯಪೀಠ ಹೇಳಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post IPC ಸೆಕ್ಷನ್ 498ಂ ಅಲ್ಲಿ ಬಳಸಿರುವ ‘ಗಂಡ’ ಎಂಬ ಪದ ಲಿವ್ ಇನ್ ಸಂಬಂಧಗಳಿಗೂ ಅನ್ವಯ- ಹೈಕೋರ್ಟ್ appeared first on Law Guide Kannada.

]]>