judicial system Archives - Law Guide Kannada https://www.lawguidekannada.com/tag/judicial-system/ Online Guide Mon, 01 Dec 2025 10:12:47 +0000 en-US hourly 1 https://wordpress.org/?v=6.9.4 http://www.lawguidekannada.com/wp-content/uploads/2022/09/cropped-Logo_512-32x32.jpg judicial system Archives - Law Guide Kannada https://www.lawguidekannada.com/tag/judicial-system/ 32 32 ನ್ಯಾಯಮೂರ್ತಿ ಬದಲಾದ ಮಾತ್ರಕ್ಕೆ ತೀರ್ಪುಗಳ ಬದಲಾವಣೆ ಸಲ್ಲದು – ನ್ಯಾ. ನಾಗರತ್ನ http://www.lawguidekannada.com/judgement-cannot-be-changed-just-because-a-judge-has-changed-justice-nagaratna/ Mon, 01 Dec 2025 10:12:47 +0000 https://www.lawguidekannada.com/?p=2946 ನವದೆಹಲಿ: ನ್ಯಾಯಮೂರ್ತಿಗಳು ನೀಡುವ ತೀರ್ಪುಗಳನ್ನು ಶಾಯಿಯಲ್ಲಿ ಬರೆಯಲಾಗುತ್ತದೆಯೇ ವಿನಃ ಮರಳಿನ ಮೇಲಲ್ಲ. ಹೀಗಾಗಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಬದಲಾಗಿದ್ದಾರೆ ಎಂಬ ಕಾರಣಕ್ಕೆ,...

The post ನ್ಯಾಯಮೂರ್ತಿ ಬದಲಾದ ಮಾತ್ರಕ್ಕೆ ತೀರ್ಪುಗಳ ಬದಲಾವಣೆ ಸಲ್ಲದು – ನ್ಯಾ. ನಾಗರತ್ನ appeared first on Law Guide Kannada.

]]>
ನವದೆಹಲಿ: ನ್ಯಾಯಮೂರ್ತಿಗಳು ನೀಡುವ ತೀರ್ಪುಗಳನ್ನು ಶಾಯಿಯಲ್ಲಿ ಬರೆಯಲಾಗುತ್ತದೆಯೇ ವಿನಃ ಮರಳಿನ ಮೇಲಲ್ಲ. ಹೀಗಾಗಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಬದಲಾಗಿದ್ದಾರೆ ಎಂಬ ಕಾರಣಕ್ಕೆ, ಅವರು ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಬದಲಾವಣೆ ಮಾಡುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ನಾಗರತ್ನ ಅವರು ತಿಳಿಸಿದ್ದಾರೆ.

ಹರಿಯಾಣದ ಸೋನಿಪತ್ ನಲ್ಲಿರುವ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯದ ಕುರಿತ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ನ್ಯಾ.ನಾಗರತ್ನ ಅವರು ಹಿಂದಿನ ಪೀಠಗಳು ನೀಡಿದ್ದ ತೀರ್ಪುಗಳನ್ನು ಬದಲಿಸುವ ರೂಢಿಯ ಕುರಿತು ಈ ರೀತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‘ನ್ಯಾಯಾಂಗ ವ್ಯವಸ್ಥೆಯು ದೇಶದ ಆಡಳಿತದ ಪಾಲಿಗೆ ಅವಿಭಾಜ್ಯ ಅಂಗವಾಗಿದೆ’ ಎಂದು ಒತ್ತಿ ಹೇಳಿರುವ ಅವರು, ‘ನ್ಯಾಯಮೂರ್ತಿಗಳು ನೀಡುವ ತೀರ್ಪುಗಳಿಂದ ಮಾತ್ರವಲ್ಲದೆ, ಅವರ ನಡವಳಿಕೆಯಿಂದಲೂ ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆಯಾಗುತ್ತದೆ. ‘ನ್ಯಾಯಮೂರ್ತಿಗಳು ನೀಡುವ ತೀರ್ಪುಗಳನ್ನು ಶಾಯಿಯಲ್ಲಿ ಬರೆಯಲಾಗುತ್ತದೆಯೇ ವಿನಃ ಮರಳಿನ ಮೇಲಲ್ಲ. ನ್ಯಾಯಾಂಗದ ಸ್ವಾತಂತ್ರ್ಯದ ಬಗೆಗೆ ಹಂತಹಂತವಾಗಿ ರೂಪುಗೊಂಡ ತಿಳಿವಳಿಕೆಯು, ಕಾನೂನು ವ್ಯವಸ್ಥೆಯ ಮೇಲಿನ ಭರವಸೆಯನ್ನು ಸಮರ್ಥಿಸುತ್ತದೆ ಎಂದು ನ್ಯಾ. ನಾಗರತ್ನ ಅವರು ತಿಳಿಸಿದರು.

ತೀರ್ಪುಗಳನ್ನು ಅವು ಇದ್ದಂತೆಯೇ ಗೌರವಿಸಬೇಕು. ಹಾಗೆಯೇ, ಕಾನೂನಿನ ವ್ಯಾಪ್ತಿಗೆ ಅನುಸಾರವಾಗಿ ಮಾತ್ರವೇ ಆಕ್ಷೇಪಣೆಗಳನ್ನು ಎತ್ತಬೇಕು. ಅದರ ಹೊರತಾಗಿ, ಮುಖಗಳು ಬದಲಾಗಿವೆ ಎಂಬ ಕಾರಣಕ್ಕಾಗಿ ತೀರ್ಪುಗಳನ್ನು ಬದಲಿಸಬಾರದು. ಇದು, ನ್ಯಾಯಾಂಗ ವ್ಯವಸ್ಥೆಯ ಭ್ರಾತೃತ್ವ ಮತ್ತು ಆಡಳಿತದ ಚೌಕಟ್ಟಿನಲ್ಲಿ ಪಾಲ್ಗೊಳ್ಳುವವರ ಕರ್ತವ್ಯವಾಗಿದೆ’ ಎಂದು ನ್ಯಾ. ನಾಗರತ್ನ ಕಿವಿಮಾತು ಹೇಳಿದರು.

ಹಿಂದಿನ ಪೀಠಗಳು ನೀಡಿದ್ದ ತೀರ್ಪುಗಳಿಂದ ಬಾಧಿತರಾದ ಪಕ್ಷಗಳ ವಾದಗಳನ್ನು ಆಲಿಸಿದ ನಂತರ ತೀರ್ಪುಗಳನ್ನು ರದ್ದುಗೊಳಿಸುವ ಪ್ರವೃತ್ತಿ ಬೆಳೆಯುತ್ತಿರುವ ಕುರಿತು ಸುಪ್ರೀಂಕೋರ್ಟ್ ನವೆಂಬರ್ 26ರಂದು ಕಳವಳ ವ್ಯಕ್ತಪಡಿಸಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ನ್ಯಾಯಮೂರ್ತಿ ಬದಲಾದ ಮಾತ್ರಕ್ಕೆ ತೀರ್ಪುಗಳ ಬದಲಾವಣೆ ಸಲ್ಲದು – ನ್ಯಾ. ನಾಗರತ್ನ appeared first on Law Guide Kannada.

]]>
ಜಿಲ್ಲಾ ಕೋರ್ಟ್ ಗಳು ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬು: ಅಧೀನ ನ್ಯಾಯಾಲಯ ಎನ್ನಬಾರದು: CJI ಡಿ.ವೈ. ಚಂದ್ರಚೂಡ್ ಅಭಿಮತ… http://www.lawguidekannada.com/district-courts-backbone-of-judicial-system-not-subordinate-courts-chief-justice-dy-chandrachud/ Mon, 02 Sep 2024 04:30:30 +0000 https://www.lawguidekannada.com/?p=702 ನವದೆಹಲಿ: ಜಿಲ್ಲಾ ಹಂತದ ಕೋರ್ಟ್ ಗಳು ನ್ಯಾಯಾಂಗ ವ್ಯವಸ್ಥೆ ಬೆನ್ನೆಲುಬು ಇದ್ದಂತೆ. ಈ ನ್ಯಾಯಾಲಯಗಳನ್ನು ‘ಅಧೀನ ನ್ಯಾಯಾಲಯಗಳು’ ಎಂದು ಕರೆಯುವುದನ್ನು...

The post ಜಿಲ್ಲಾ ಕೋರ್ಟ್ ಗಳು ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬು: ಅಧೀನ ನ್ಯಾಯಾಲಯ ಎನ್ನಬಾರದು: CJI ಡಿ.ವೈ. ಚಂದ್ರಚೂಡ್ ಅಭಿಮತ… appeared first on Law Guide Kannada.

]]>
ನವದೆಹಲಿ: ಜಿಲ್ಲಾ ಹಂತದ ಕೋರ್ಟ್ ಗಳು ನ್ಯಾಯಾಂಗ ವ್ಯವಸ್ಥೆ ಬೆನ್ನೆಲುಬು ಇದ್ದಂತೆ. ಈ ನ್ಯಾಯಾಲಯಗಳನ್ನು ‘ಅಧೀನ ನ್ಯಾಯಾಲಯಗಳು’ ಎಂದು ಕರೆಯುವುದನ್ನು ನಿಲ್ಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಪ್ರತಿಪಾದಿಸಿದ್ದಾರೆ.

ಜಿಲ್ಲಾ ನ್ಯಾಯಾಲಯಗಳ ರಾಷ್ಟ್ರೀಯ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಜೆಐ ಚಂದ್ರಚೂಡ್, ಕಾನೂನಿಗೆ ಅನುಗುಣವಾದ ಆಡಳಿತದಲ್ಲಿ ಜಿಲ್ಲಾ ನ್ಯಾಯಾಲಯಗಳದ್ದು ಮಹತ್ವದ ಪಾತ್ರವಾಗಿದ್ದು, ನ್ಯಾಯ ಅರಸುವ ವ್ಯಕ್ತಿಗೆ ಮೊದಲು ಸಿಗುವುದು ಜಿಲ್ಲಾ ಹಂತದ ನ್ಯಾಯಾಲಯಗಳು. ಜಿಲ್ಲಾ ನ್ಯಾಯಾಲಯಗಳು ಬಹಳ ದೊಡ್ಡ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಹೀಗಾಗಿ ಇವನ್ನು ನ್ಯಾಯಾಂಗದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬನ್ನು ಪೋಷಿಸಲು, ಜಿಲ್ಲಾ ನ್ಯಾಯಾಲಯಗಳನ್ನು ‘ಅಧೀನ’ ನ್ಯಾಯಾಲಯಗಳು ಎಂದು ಕರೆಯುವುದನ್ನು ನಿಲ್ಲಿಸಬೇಕು .ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರ, ಬ್ರಿಟಿಷ್ ಕಾಲದ ಇನ್ನೊಂದು ಪಳೆಯುಳಿಕೆಯನ್ನು, ಅಂದರೆ ವಸಾಹತು ಮನಃಸ್ಥಿತಿಯಾದ ಅಧೀನತೆಯನ್ನು, ಹೂತುಹಾಕುವ ಕಾಲ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನ್ಯಾಯಾಂಗದ ಸೇವೆಗಳಿಗೆ ಮಹಿಳೆಯರು ಸೇರುವ ಪ್ರಮಾಣ ಹೆಚ್ಚಳ….

ನ್ಯಾಯಾಂಗದ ಸೇವೆಗಳಿಗೆ ಮಹಿಳೆಯರು ಸೇರುವ ಪ್ರಮಾಣ ಹೆಚ್ಚಾಗುತ್ತಿದೆ ‘ಕಳೆದ ಕೆಲವು ವರ್ಷಗಳಲ್ಲಿ ಜಿಲ್ಲಾ ನ್ಯಾಯಾಲಯಗಳಿಗೆ ಮಹಿಳೆಯರು ಸೇರುವ ಪ್ರಮಾಣ ಹೆಚ್ಚಾಗಿದೆ. 2023ರಲ್ಲಿ ರಾಜಸ್ಥಾನದಲ್ಲಿ ನಡೆದ ಸಿವಿಲ್ ನ್ಯಾಯಾಧೀಶರ ಒಟ್ಟು ನೇಮಕಾತಿಯಲ್ಲಿ ಮಹಿಳೆಯರ ಪ್ರಮಾಣ ಶೇಕಡ 58ರಷ್ಟು ಇತ್ತು. 2023ರಲ್ಲಿ ದೆಹಲಿಯಲ್ಲಿ ನೇಮಕಗೊಂಡ ನ್ಯಾಯಾಂಗ ಅಧಿಕಾರಿಗಳಲ್ಲಿ ಮಹಿಳೆಯರ ಪ್ರಮಾಣವು ಶೇ 66ರಷ್ಟು ಆಗಿತ್ತು. ಕೇರಳದಲ್ಲಿ ಈಚೆಗೆ ನಡೆದ ನ್ಯಾಯಾಂಗ ಅಧಿಕಾರಿಗಳ ನೇಮಕಾತಿಯಲ್ಲಿ ಶೇಕಡ 72ರಷ್ಟು ಮಂದಿ ಮಹಿಳೆಯರಾಗಿದ್ದರು. ಉತ್ತರ ಪ್ರದೇಶದಲ್ಲಿ 2022ರ ಬ್ಯಾಚ್‌ನಲ್ಲಿ ಸಿವಿಲ್ ನ್ಯಾಯಾಧೀಶರ (ಕಿರಿಯ ವಿಭಾಗ) ನೇಮಕಾತಿಯಲ್ಲಿ ಮಹಿಳೆಯರ ಪ್ರಮಾಣವು ಶೇ 54ರಷ್ಟು ಇತ್ತು ಎಂದು ಉದಾಹರಣೆಯಾಗಿ ಉಲ್ಲೇಖಿಸಿರುವ ಈ ಅಂಕಿ-ಅಂಶಗಳು ಭವಿಷ್ಯದ ನ್ಯಾಯಾಂಗವು ಆಶಾದಾಯಕವಾಗಿರುತ್ತದೆ ಎಂಬ ಚಿತ್ರಣವನ್ನು ನೀಡುತ್ತಿವೆ ಎಂದು ಚಂದ್ರಚೂಡ್ ಅವರು ನುಡಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಜಿಲ್ಲಾ ಕೋರ್ಟ್ ಗಳು ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬು: ಅಧೀನ ನ್ಯಾಯಾಲಯ ಎನ್ನಬಾರದು: CJI ಡಿ.ವೈ. ಚಂದ್ರಚೂಡ್ ಅಭಿಮತ… appeared first on Law Guide Kannada.

]]>