Karnataka Justice M. Nagaprasanna Archives - Law Guide Kannada https://www.lawguidekannada.com/tag/karnataka-justice-m-nagaprasanna/ Online Guide Mon, 01 Dec 2025 08:13:06 +0000 en-US hourly 1 https://wordpress.org/?v=6.9.4 http://www.lawguidekannada.com/wp-content/uploads/2022/09/cropped-Logo_512-32x32.jpg Karnataka Justice M. Nagaprasanna Archives - Law Guide Kannada https://www.lawguidekannada.com/tag/karnataka-justice-m-nagaprasanna/ 32 32 22 ಸಾವಿರ ಪ್ರಕರಣಗಳ ವಿಲೇವಾರಿ: ದಾಖಲೆ ಬರೆದ ಹೈಕೋರ್ಟ್ ನ್ಯಾ. ಎಂ. ನಾಗಪ್ರಸನ್ನ http://www.lawguidekannada.com/disposal-of-22-thousand-cases-high-court-justice-m-nagaprasanna-sets-a-record/ Mon, 01 Dec 2025 08:13:06 +0000 https://www.lawguidekannada.com/?p=2943 ಬೆಂಗಳೂರು: ತಮ್ಮ ಸೇವಾವಧಿಯಲ್ಲಿ ಪ್ರಕರಣಗಳ ತ್ವರಿತ ಇತ್ಯರ್ಥ ಅತಿಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ದೇಶದಲ್ಲೇ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ...

The post 22 ಸಾವಿರ ಪ್ರಕರಣಗಳ ವಿಲೇವಾರಿ: ದಾಖಲೆ ಬರೆದ ಹೈಕೋರ್ಟ್ ನ್ಯಾ. ಎಂ. ನಾಗಪ್ರಸನ್ನ appeared first on Law Guide Kannada.

]]>
ಬೆಂಗಳೂರು: ತಮ್ಮ ಸೇವಾವಧಿಯಲ್ಲಿ ಪ್ರಕರಣಗಳ ತ್ವರಿತ ಇತ್ಯರ್ಥ ಅತಿಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ದೇಶದಲ್ಲೇ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ದಾಖಲೆ ಬರೆದಿದ್ದಾರೆ.

ಹೌದು, ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಆರು ವರ್ಷಗಳ ತಮ್ಮ ಅವಧಿಯಲ್ಲಿ ಇದುವರೆಗೆ ಅವರು ವಿವಿಧ ನಮೂನೆಗಳ 22 ಸಾವಿರ ಪ್ರಕರಣ ಗಳನ್ನು ವಿಲೇವಾರಿ ಮಾಡಿ ದಾಖಲೆ ಸೃಷ್ಠಸಿದ್ದಾರೆ. ಅಷ್ಟು ಪ್ರಮಾಣದ ಕೇಸ್ಗಳನ್ನು ಇತ್ಯರ್ಥಪಡಿಸಿದ ದೇಶದ ಮೊದಲ ಹೈಕೋರ್ಟ್ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಎಂ.ನಾಗಪ್ರಸನ್ನ ಅವರು ಭಾಜನರಾಗಿದ್ದಾರೆ.

ಅವರು ಇತ್ಯರ್ಥಪಡಿಸಿದ 22 ಸಾವಿರ ತೀರ್ಪುಗಳಲ್ಲಿ 985 ಸೂಚಿತ (ರಿಪೋರ್ಟೆಡ್) ತೀರ್ಪುಗಳಾಗಿ ದಾಖಲಾಗಿವೆ. ಸದ್ಯ ಅವರು ರೊಟೇಷನ್ ಆಧಾರದ ಮೇಲೆ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಂದೇ ದಿನದಲ್ಲಿ 600ಕ್ಕೂ ಅಧಿಕ ಕೇಸುಗಳ ವಿಲೇವಾರಿ ಮಾಡಿ ಎರಡು ಬಾರಿ ದಾಖಲೆ ಬರೆದಿರುವ ನ್ಯಾಯಮೂರ್ತಿಯವರು, ಕೇಸ್ಗಳ ತ್ವರಿತ ಇತ್ಯರ್ಥಕ್ಕೆ ಹೆಸರುವಾಸಿಯಾದವರು. ಹಾಗೆಯೇ ವಿಲೇವಾರಿಯ ಕ್ಷಿಪ್ರಗತಿಯಲ್ಲಿ ಎಂ. ನಾಗಪ್ರಸನ್ನ ಅವರು ದೇಶದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಎಂ. ನಾಗಪ್ರಸನ್ನ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಆರು ವರ್ಷಗಳ ಸೇವೆ ಪೂರೈಸಿದ್ದು, ಅದರ ಬೆನ್ನಲ್ಲೇ ಅತ್ಯಧಿಕ ಕೇಸ್ ಗಳನ್ನು ಇತ್ಯರ್ಥಪಡಿಸಿ ದಾಖಲೆ ನಿರ್ಮಿಸಿದ ಕರ್ನಾಟಕದ ಹೈಕೋಟ್ 9ನೇ ಮೊದಲ ನ್ಯಾಯಮೂರ್ತಿ ಎನಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದನ್ನು ಎತ್ತಿಹಿಡಿದ ತೀರ್ಪು ಸೇರಿದಂತೆ ಹಲವು ಮಹತ್ವದ ತೀರ್ಪುಗಳನ್ನು ನಾಗಪ್ರಸನ್ನ ಅವರು ಬರೆದು ಜನಮನ್ನಣೆ ಗಳಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ 2019ರ ನ.26 ರಂದು ಪ್ರಮಾಣ ವಚನ ಸ್ವೀಕರಿಸಿದ ನ್ಯಾ. ಎಂ. ನಾಗಪ್ರಸನ್ನ ಅವರು ಸೇವಾವಧಿ 2033ರವರೆಗೂ ಕಾರ್ಯನಿರ್ವಹಿಸಲಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post 22 ಸಾವಿರ ಪ್ರಕರಣಗಳ ವಿಲೇವಾರಿ: ದಾಖಲೆ ಬರೆದ ಹೈಕೋರ್ಟ್ ನ್ಯಾ. ಎಂ. ನಾಗಪ್ರಸನ್ನ appeared first on Law Guide Kannada.

]]>