relationship between husband and wife ends within three days of marriage Archives - Law Guide Kannada https://www.lawguidekannada.com/tag/relationship-between-husband-and-wife-ends-within-three-days-of-marriage/ Online Guide Fri, 24 Jan 2025 06:46:40 +0000 en-US hourly 1 https://wordpress.org/?v=7.0 http://www.lawguidekannada.com/wp-content/uploads/2022/09/cropped-Logo_512-32x32.jpg relationship between husband and wife ends within three days of marriage Archives - Law Guide Kannada https://www.lawguidekannada.com/tag/relationship-between-husband-and-wife-ends-within-three-days-of-marriage/ 32 32 ಗಂಡ ಮಕ್ಕಳಿದ್ರೂ 2ನೇ ಮದುವೆ: ಮಹಿಳೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ಕೋರ್ಟ್ http://www.lawguidekannada.com/second-marriage-despite-having-husband-and-children-court-sentences-woman-to-jail-and-fine/ Fri, 24 Jan 2025 06:46:40 +0000 http://www.lawguidekannada.com/?p=1317 ಹೊಸಪೇಟೆ: ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕವಾಗಿ ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ ಸಹ ಮನುಷ್ಯರ ನಡುವಿನ ಬಾಂಧವ್ಯ ಕುಗ್ಗುತ್ತಿದೆ. ಅದರಲ್ಲೂ ಗಂಡ ಹೆಂಡತಿಯ...

The post ಗಂಡ ಮಕ್ಕಳಿದ್ರೂ 2ನೇ ಮದುವೆ: ಮಹಿಳೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ಕೋರ್ಟ್ appeared first on Law Guide Kannada.

]]>
ಹೊಸಪೇಟೆ: ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕವಾಗಿ ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ ಸಹ ಮನುಷ್ಯರ ನಡುವಿನ ಬಾಂಧವ್ಯ ಕುಗ್ಗುತ್ತಿದೆ. ಅದರಲ್ಲೂ ಗಂಡ ಹೆಂಡತಿಯ ಸಂಬಂಧ ಮದುವೆಯಾದ ಮೂರೇ ದಿನಗಳಲ್ಲಿ ಮುಗಿಯುವ ಅದೆಷ್ಟೋ ಪ್ರಕರಣಗಳು ವರದಿಯಾಗಿವೆ. ಅಂತೆಯೇ ಇಲ್ಲೊಬ್ಬ ಮಹಿಳೆ ಗಂಡನಿದ್ದರೂ ಎರಡನೇ ಮದುವೆಯಾಗಿ ಇದೀಗ ಜೈಲುಪಾಲಾಗಿದ್ದಾಳೆ.

ಹೌದು ಗಂಡ ಮಕ್ಕಳಿದ್ದರೂ 2ನೇ ಮದುವೆಯಾದ ಮಹಿಳೆಗೆ ಇಲ್ಲಿನ ಅಧಿಕ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯ ಎರಡು ವರ್ಷ ಸಾದಾ ಜೈಲು ಶಿಕ್ಷೆ 5 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.

ನಗರದ ಟಿಬಿ ಡ್ಯಾಂನ ದೇವಿಕಾ ಎಂಬ ಮಹಿಳೆಯೇ ಜೈಲುಶಿಕ್ಷೆಗೆ ಗುರಿಯಾಗಿರುವುದು ಈಕೆ ಪತಿ ಹಾಗೂ ಇಬ್ಬರು ಮಕ್ಕಳಿದ್ದರೂ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಆಲಹಳ್ಳಿ ಗ್ರಾಮದ ಅಂಬರೀಶ್ ಎಂಬವನೊಂದಿಗೆ 2014ರ ಜನವರಿ 25ರಂದು ಮದುವೆಯಾಗಿದ್ದಳು. ಅಲ್ಲದೇ 2014ರ ಮಾರ್ಚ್ 6ರಂದು ಭಾಲ್ಕಿ ಉಪ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಕೂಡ ಮಾಡಿಸಲಾಗಿತ್ತು.

ಈ ಸಂಬಂಧ ಟಿಬಿಡ್ಯಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ಅಂದಿನ ಎಎಸ್ಐ ಜಿ.ಟಿ. ನಾಗರಾಜ, ಪಿಎಸ್ ಐಗಳಾದ ಯರಿಸ್ವಾಮಿಯವರು ವಸಂತಕುಮಾರ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಅಶೋಕ್ ಆರ್.ಎಚ್ ಅವರು, ದೇವಿಕಾ ಅಪರಾಧ ಎಸಗಿರುವುದು ರುಜುವಾತಾಗಿದೆ ಎಂದು ಐಪಿಸಿ ಕಲಂ 494 ಅಡಿಯಲ್ಲಿ 2 ವರ್ಷ ಸಾದಾ ಜೈಲು ವಾಸ ಮತ್ತು 5ಸಾವಿರ ದಂಡ ವಿಧಿಸಿದ್ದಾರೆ.ದಂಡ ಕಟ್ಟಲು ವಿಫಲವಾದಲ್ಲಿ ಒಂದು ತಿಂಗಳು ಸಾದಾ ಜೈಲು ಶಿಕ್ಷೆ ಹೆಚ್ಚುವರಿಯಾಗಿ ಅನುಭವಿಸತಕ್ಕದ್ದು ಎಂದು ತೀರ್ಪು ನೀಡಿದ್ದಾರೆ.

ಪ್ರಕರಣದ ಇನ್ನುಳಿದ ಆರೋಪಿಗಳ ವಿರುದ್ಧ ಆರೋಪ ಸಾಬೀತಾಗಿಲ್ಲ. ಹಾಗಾಗಿ ಉಳಿದವರನ್ನು ಪ್ರಕರಣದಿಂದ ಬಿಡುಗಡೆ ಮಾಡಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ಎಂ.ಟಿ. ರೇವಣಸಿದಪ ವಾದ ಮಂಡಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಗಂಡ ಮಕ್ಕಳಿದ್ರೂ 2ನೇ ಮದುವೆ: ಮಹಿಳೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ಕೋರ್ಟ್ appeared first on Law Guide Kannada.

]]>