second marriage Archives - Law Guide Kannada http://www.lawguidekannada.com/tag/second-marriage/ Online Guide Fri, 24 Jan 2025 06:46:40 +0000 en-US hourly 1 https://wordpress.org/?v=7.0 http://www.lawguidekannada.com/wp-content/uploads/2022/09/cropped-Logo_512-32x32.jpg second marriage Archives - Law Guide Kannada http://www.lawguidekannada.com/tag/second-marriage/ 32 32 ಗಂಡ ಮಕ್ಕಳಿದ್ರೂ 2ನೇ ಮದುವೆ: ಮಹಿಳೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ಕೋರ್ಟ್ http://www.lawguidekannada.com/second-marriage-despite-having-husband-and-children-court-sentences-woman-to-jail-and-fine/ Fri, 24 Jan 2025 06:46:40 +0000 http://www.lawguidekannada.com/?p=1317 ಹೊಸಪೇಟೆ: ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕವಾಗಿ ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ ಸಹ ಮನುಷ್ಯರ ನಡುವಿನ ಬಾಂಧವ್ಯ ಕುಗ್ಗುತ್ತಿದೆ. ಅದರಲ್ಲೂ ಗಂಡ ಹೆಂಡತಿಯ...

The post ಗಂಡ ಮಕ್ಕಳಿದ್ರೂ 2ನೇ ಮದುವೆ: ಮಹಿಳೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ಕೋರ್ಟ್ appeared first on Law Guide Kannada.

]]>
ಹೊಸಪೇಟೆ: ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕವಾಗಿ ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ ಸಹ ಮನುಷ್ಯರ ನಡುವಿನ ಬಾಂಧವ್ಯ ಕುಗ್ಗುತ್ತಿದೆ. ಅದರಲ್ಲೂ ಗಂಡ ಹೆಂಡತಿಯ ಸಂಬಂಧ ಮದುವೆಯಾದ ಮೂರೇ ದಿನಗಳಲ್ಲಿ ಮುಗಿಯುವ ಅದೆಷ್ಟೋ ಪ್ರಕರಣಗಳು ವರದಿಯಾಗಿವೆ. ಅಂತೆಯೇ ಇಲ್ಲೊಬ್ಬ ಮಹಿಳೆ ಗಂಡನಿದ್ದರೂ ಎರಡನೇ ಮದುವೆಯಾಗಿ ಇದೀಗ ಜೈಲುಪಾಲಾಗಿದ್ದಾಳೆ.

ಹೌದು ಗಂಡ ಮಕ್ಕಳಿದ್ದರೂ 2ನೇ ಮದುವೆಯಾದ ಮಹಿಳೆಗೆ ಇಲ್ಲಿನ ಅಧಿಕ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯ ಎರಡು ವರ್ಷ ಸಾದಾ ಜೈಲು ಶಿಕ್ಷೆ 5 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.

ನಗರದ ಟಿಬಿ ಡ್ಯಾಂನ ದೇವಿಕಾ ಎಂಬ ಮಹಿಳೆಯೇ ಜೈಲುಶಿಕ್ಷೆಗೆ ಗುರಿಯಾಗಿರುವುದು ಈಕೆ ಪತಿ ಹಾಗೂ ಇಬ್ಬರು ಮಕ್ಕಳಿದ್ದರೂ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಆಲಹಳ್ಳಿ ಗ್ರಾಮದ ಅಂಬರೀಶ್ ಎಂಬವನೊಂದಿಗೆ 2014ರ ಜನವರಿ 25ರಂದು ಮದುವೆಯಾಗಿದ್ದಳು. ಅಲ್ಲದೇ 2014ರ ಮಾರ್ಚ್ 6ರಂದು ಭಾಲ್ಕಿ ಉಪ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಕೂಡ ಮಾಡಿಸಲಾಗಿತ್ತು.

ಈ ಸಂಬಂಧ ಟಿಬಿಡ್ಯಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ಅಂದಿನ ಎಎಸ್ಐ ಜಿ.ಟಿ. ನಾಗರಾಜ, ಪಿಎಸ್ ಐಗಳಾದ ಯರಿಸ್ವಾಮಿಯವರು ವಸಂತಕುಮಾರ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಅಶೋಕ್ ಆರ್.ಎಚ್ ಅವರು, ದೇವಿಕಾ ಅಪರಾಧ ಎಸಗಿರುವುದು ರುಜುವಾತಾಗಿದೆ ಎಂದು ಐಪಿಸಿ ಕಲಂ 494 ಅಡಿಯಲ್ಲಿ 2 ವರ್ಷ ಸಾದಾ ಜೈಲು ವಾಸ ಮತ್ತು 5ಸಾವಿರ ದಂಡ ವಿಧಿಸಿದ್ದಾರೆ.ದಂಡ ಕಟ್ಟಲು ವಿಫಲವಾದಲ್ಲಿ ಒಂದು ತಿಂಗಳು ಸಾದಾ ಜೈಲು ಶಿಕ್ಷೆ ಹೆಚ್ಚುವರಿಯಾಗಿ ಅನುಭವಿಸತಕ್ಕದ್ದು ಎಂದು ತೀರ್ಪು ನೀಡಿದ್ದಾರೆ.

ಪ್ರಕರಣದ ಇನ್ನುಳಿದ ಆರೋಪಿಗಳ ವಿರುದ್ಧ ಆರೋಪ ಸಾಬೀತಾಗಿಲ್ಲ. ಹಾಗಾಗಿ ಉಳಿದವರನ್ನು ಪ್ರಕರಣದಿಂದ ಬಿಡುಗಡೆ ಮಾಡಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ಎಂ.ಟಿ. ರೇವಣಸಿದಪ ವಾದ ಮಂಡಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಗಂಡ ಮಕ್ಕಳಿದ್ರೂ 2ನೇ ಮದುವೆ: ಮಹಿಳೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ಕೋರ್ಟ್ appeared first on Law Guide Kannada.

]]>
ಗಂಡನ ಮನೆಯಲ್ಲಿದ್ದೇ 2ನೇ ಮದುವೆಗೆ ಪತ್ನಿ ಯತ್ನ: ವಿಚ್ಚೇದನ ಮಂಜೂರು: ಮಧ್ಯಪ್ರವೇಶಿಸಿಸಲು ಹೈಕೋರ್ಟ್ ನಕಾರ http://www.lawguidekannada.com/wife-attempts-second-marriage-at-husbands-house-divorce-granted-high-court-refuses-to-intervene/ Wed, 18 Dec 2024 08:14:47 +0000 http://www.lawguidekannada.com/?p=1163 ಬೆಂಗಳೂರು: ಮದುವೆಯಾಗಿ ಗಂಡನ ಜೊತೆ ಸಹಬಾಳ್ವೆಯಿಂದ ಜೀವನ ನಡೆಸಬೇಕಾಗಿದ್ದ ಹೆಂಡತಿಯು ಪತಿಯ ಜತೆಯಲ್ಲಿದ್ದುಕೊಂಡೇ 2ನೇ ಮದುವೆಗೆ ಯತ್ನಿಸಿ ಗಂಡನೊಂದಿಗೆ ವೈವಾಹಿಕ...

The post ಗಂಡನ ಮನೆಯಲ್ಲಿದ್ದೇ 2ನೇ ಮದುವೆಗೆ ಪತ್ನಿ ಯತ್ನ: ವಿಚ್ಚೇದನ ಮಂಜೂರು: ಮಧ್ಯಪ್ರವೇಶಿಸಿಸಲು ಹೈಕೋರ್ಟ್ ನಕಾರ appeared first on Law Guide Kannada.

]]>
ಬೆಂಗಳೂರು: ಮದುವೆಯಾಗಿ ಗಂಡನ ಜೊತೆ ಸಹಬಾಳ್ವೆಯಿಂದ ಜೀವನ ನಡೆಸಬೇಕಾಗಿದ್ದ ಹೆಂಡತಿಯು ಪತಿಯ ಜತೆಯಲ್ಲಿದ್ದುಕೊಂಡೇ 2ನೇ ಮದುವೆಗೆ ಯತ್ನಿಸಿ ಗಂಡನೊಂದಿಗೆ ವೈವಾಹಿಕ ಸಂಬಂಧ ಬೆಳೆಸಲು ನಿರಾಕರಿಸಿದ ಮಹಿಳೆಗೆ ಹೈಕೋರ್ಟ್ ವಿಚ್ಚೇದನ ಮಂಜೂರು ಮಾಡಲು ಸಮ್ಮತಿ ಸೂಚಿಸಿದೆ.

ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನ ಪ್ರಶ್ನಿಸಿ ಬೆಂಗಳೂರಿನ ವಿಜಯನಗರದ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಉಮೇಶ್ ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ವಿವಾಹವಾದ ಬಳಿಕ ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಪತ್ನಿಯ ತಂದೆ ಸಾವನ್ನಪ್ಪಿದ್ದು, ಪರಿಣಾಮ, ನಿನ್ನನ್ನು ಮದುವೆಯಾದ ಕಾರಣದಿಂದಲೇ ನಮ್ಮ ಕುಟುಂಬಕ್ಕೆ ದುರದೃಷ್ಟ ಎದುರಾಗಿದೆ. ಹೀಗಾಗಿ ನಮ್ಮ ತಂದೆ ಸಾವಿಗೀಡಾದ್ದಾರೆ ಎಂದು ಪತಿಯ ವಿರುದ್ದ ಪತ್ನಿ ಆರೋಪಿಸಿ ಅನುಮಾನ ಪಡುತ್ತಿದ್ದ ಅಂಶಗಳನ್ನು ಪರಿಗಣಿಸಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ ಈ ಆದೇಶದಲ್ಲಿ ಮಧ್ಯ ಪ್ರವೇಶಕ್ಕೆ ಹೈಕೋರ್ಟ್ ನಿರಾಕರಿಸಿದೆ.

ಈ ಪ್ರಕರಣದಲ್ಲಿ 2018ರ ಜುಲೈನಿಂದ 2019ರ ನವೆಂಬರ್ ವರೆಗೆ ಪತ್ನಿ ಕಳುಹಿಸಿರುವ ವಾಟ್ಸ್ ಆ್ಯಪ್ ಸಂದೇಶಗಳನ್ನು ಪತಿ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಸಂದೇಶಗಳು ಬರೋಬ್ಬರಿ 127 ಪುಟಗಳಷ್ಟಿದೆ. ಪತಿಯೊಂದಿಗೆ ಜೀವನ ನಡೆಸಲು ಪತ್ನಿಗೆ ಇಚ್ಛೆಯಿಲ್ಲ ಎಂಬುದು ಆಕೆಯ ಸಂದೇಶಗಳಿಂದ ಸ್ಪಷ್ಟವಾಗುತ್ತದೆ. ಒಂದಲ್ಲಾ ಒಂದು ಕಾರಣಕ್ಕೆ ಪತಿ, ಆತನ ಪೋಷಕರು ಮತ್ತು ಹತ್ತಿರದ ಸಂಬಂಧಿಕರನ್ನು ಪತ್ನಿ ದೂರುತ್ತಿದ್ದರು. ಜತೆಗೆ, ತನ್ನ ಕನಸುಗಳನ್ನು ಪತಿ ಕೊಂದಿದ್ದಾರೆ. ವಿಚ್ಛೇದನ ನೀಡಿದರೆ ಇಬ್ಬರು ಸಂತೋಷದಿಂದ ಬದುಕಬಹುದು ಎಂದು ಪತ್ನಿ ಹೇಳಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಹಾಗೆಯೇ, ತನ್ನ ಅಂತಸ್ತಿಗೆ ತಕ್ಕಂತೆ ಆರತಕ್ಷತೆ ಮಾಡಿ ಕೊಟ್ಟಿಲ್ಲ ಎಂದು ಮುನಿಸಿಕೊಂಡು ಮದುವೆಯಾಗಿ 7 ವರ್ಷ ಕಳೆದರೂ ವೈವಾಹಿಕ ಜೀವನಕ್ಕೆ ಒಪ್ಪದೇ ದೈಹಿಕ ಹಲ್ಲೆಮಾಡಿ, ಮಾನಸಿಕ ಹಿಂಸೆ ನೀಡಿದ್ದರು . ವಿನಾಕಾರಣ ದೂಷಿಸುತ್ತಾ ಬೆಡ್ ರೂಂನಲ್ಲಿ ಪತಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಬೇರೊಬ್ಬ ನನ್ನು ವಿವಾಹವಾಗಲು ವಿಚ್ಚೇದನ ನೀಡುವುದು ಸೇರಿದಂತೆ ವಿವಿಧ ರೀತಿಯಲ್ಲಿ 127 ಪುಟಗಳಾಗು ವಷ್ಟು ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದರು.

ಅಂತಿಮವಾಗಿ ಪತ್ನಿಯ ಈ ಎಲ್ಲ ಸಂದೇಶಗಳನ್ನು ನೋಡಿದರೆ, ವೈವಾಹಿಕ ಜೀವನ ನಡೆಸಲು ಆಕೆಗೆ ಆಸಕ್ತಿ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಅಲ್ಲದೆ, 2017ರಲ್ಲಿ ವೈವಾಹಿಕ ಜೀವನ ನಡೆಸಲು ಪತ್ನಿ ಅವಕಾಶವೇ ನೀಡಿಲ್ಲ. ಇದೀಗ, ಪತಿಗೆ ಕಿರುಕುಳ ನೀಡಲೆಂದೇ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬುದು ತಿಳಿಯುತ್ತಿದೆ. ಆದ್ದರಿಂದ ಕೌಟುಂಬಿಕ ನ್ಯಾಯಾಲಯ ವಿವಾಹ ವಿಚ್ಚೇದನ ಮಂಜೂರು ಮಾಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಗಂಡನ ಮನೆಯಲ್ಲಿದ್ದೇ 2ನೇ ಮದುವೆಗೆ ಪತ್ನಿ ಯತ್ನ: ವಿಚ್ಚೇದನ ಮಂಜೂರು: ಮಧ್ಯಪ್ರವೇಶಿಸಿಸಲು ಹೈಕೋರ್ಟ್ ನಕಾರ appeared first on Law Guide Kannada.

]]>