sexual minorities Archives - Law Guide Kannada https://www.lawguidekannada.com/tag/sexual-minorities/ Online Guide Thu, 13 Nov 2025 03:45:37 +0000 en-US hourly 1 https://wordpress.org/?v=7.0 http://www.lawguidekannada.com/wp-content/uploads/2022/09/cropped-Logo_512-32x32.jpg sexual minorities Archives - Law Guide Kannada https://www.lawguidekannada.com/tag/sexual-minorities/ 32 32 ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಶೈಕ್ಷಣಿಕ ದಾಖಲೆ ನಿರಾಕರಿಸುವಂತಿಲ್ಲ – ಹೈಕೋರ್ಟ್ http://www.lawguidekannada.com/sexual-minorities-cannot-be-denied-new-educational-records-allahabad-high-court/ Thu, 13 Nov 2025 03:45:37 +0000 https://www.lawguidekannada.com/?p=2728 ಅಲಹಾಬಾದ್: ಲಿಂಗತ್ವ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ದಾಖಲೆ ನಿರಾಕರಣೆ ಮಾಡುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಲಿಂಗ ಪರಿವರ್ತನೆ ಶಸ್ತ್ರ...

The post ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಶೈಕ್ಷಣಿಕ ದಾಖಲೆ ನಿರಾಕರಿಸುವಂತಿಲ್ಲ – ಹೈಕೋರ್ಟ್ appeared first on Law Guide Kannada.

]]>
ಅಲಹಾಬಾದ್: ಲಿಂಗತ್ವ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ದಾಖಲೆ ನಿರಾಕರಣೆ ಮಾಡುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಲಿಂಗ ಬದಲಾಯಿಸಿಕೊಂಡವರಿಗೆ ಹೊಸ ದಾಖಲೆಗಳನ್ನು ನೀಡಲು ನಿರಾಕರಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಲಿಂಗತ್ವ ಅಲ್ಪಸಂಖ್ಯಾತ ಶರದ್ರೋಷನ್ ಸಿಂಗ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸೌರಬ್ ಶ್ಯಾಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಲಿಂಗ ಮತ್ತು ಹೆಸರು ಬದಲಾಯಿಸಿದ ಹೊಸ ಶೈಕ್ಷಣಿಕ ದಾಖಲೆಗಳನ್ನು ಲಿಂಗತ್ವ ಅಲ್ಪಸಂಖ್ಯಾತ ಶರದ್ರೋಷನ್ ಸಿಂಗ್ ಅವರಿಗೆ ನೀಡಲು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ಈ ಮೂಲಕ ಲಿಂಗತ್ವ ಅಲ್ಪಸಂಖ್ಯಾತ ಜನರ ಹಕ್ಕುಗಳನ್ನು ಎತ್ತಿಹಿಡಿದಿದೆ.

ಹೊಸ ದಾಖಲೆಗಾಗಿ ಮನವಿ ಮಾಡುವವರಿಗೆ ಬಹಳ ವಯಸ್ಸಾದ ಮೇಲೆ ಇಂಥ ದಾಖಲೆಗಳನ್ನು ಸರಿಪಡಿಸಿಕೊಡಲು ಸರ್ಕಾರದ ಯಾವುದೇ ನಿಯಮವಿಲ್ಲ ಎಂದು ಹೇಳಿದ್ದ ಬರೇಲಿ ಮಾಧ್ಯಮಿಕ ಶೈಕ್ಷಣಿಕ ಪರಿಷತ್ತು. ಶರದ್ ಅವರಿಗೆ ಹೊಸ ದಾಖಲೆಗಳನ್ನು ನಿರಾಕರಿಸಿತ್ತು. ಈ ಆದೇಶವನ್ನು ಕೋರ್ಟ್ ತಿರಸ್ಕರಿಸಿದೆ.

ಹೊಸ ದಾಖಲೆಗಳನ್ನು ನೀಡಲು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019ರ ಅನ್ವಯ ಅವಕಾಶವಿಲ್ಲ ಎಂದೂ ಶಿಕ್ಷಣ ಇಲಾಖೆ ವಾದಿಸಿತ್ತು. ಈ ಕಾಯ್ದೆಯು ಲಿಂಗತ್ವ ಅಲ್ಪಸಂಖ್ಯಾತರಿಗೆ ಅನುಕೂಲವಾಗುವಂತೆ ಇದೆಯೇ ಹೊರತು, ಅವರ ಹಕ್ಕುಗಳನ್ನು ನಿರಾಕರಿಸುವಂತೆ ಇಲ್ಲ. ಶಿಕ್ಷಣ ಇಲಾಖೆಯು ಕಾನೂನಾತ್ಮಕವಾಗಿ ತಪ್ಪೆಸಗಿದೆ’ ಎಂದು ತೀರ್ಪಿನಲ್ಲಿ ನ್ಯಾಯಪೀಠ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಶೈಕ್ಷಣಿಕ ದಾಖಲೆ ನಿರಾಕರಿಸುವಂತಿಲ್ಲ – ಹೈಕೋರ್ಟ್ appeared first on Law Guide Kannada.

]]>