05/03/2026

Law Guide Kannada

Online Guide

ಚಿಕ್ಕ ಮಗುವಿನಿಂದ ಖಾಸಗಿ ಅಂಗ ಮುಟ್ಟಿಸಿಕೊಳ್ಳುವುದು ಗಂಭೀರ ಲೈಂಗಿಕ ಅಪರಾಧ – ಹೈಕೋರ್ಟ್

ನವದೆಹಲಿ: ಸಣ್ಣ ಮಗುವಿನಿಂದ ಖಾಸಗಿ ಅಂಗ ಮುಟ್ಟಿಸಿಕೊಳ್ಳುವುದು ಸಹ ಗಂಭೀರ ಲೈಂಗಿಕ ಅಪರಾಧವಾಗಿದೆ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ಪೋಕ್ಸೊ ಕಾಯ್ದೆಯ ಪರಿಚ್ಛೇದ 10ರಡಿ ತನ್ನನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ ನೀಡಿರುವುದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ವಜಾಗೊಳಿಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠವು, ಲೈಂಗಿಕ ಭಾವನೆಯಿಂದ ಸಣ್ಣ ಮಗುವಿನಿಂದ ಖಾಸಗಿ ಭಾಗಗಳನ್ನು ಮುಟ್ಟಿಸಿಕೊಳ್ಳುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)ಯಡಿ ಗಂಭೀರ ಲೈಂಗಿಕ ದೌರ್ಜನ್ಯವಾಗಿದೆ.

ಆ ವ್ಯಕ್ತಿಯು ಸುಮಾರು ನಾಲ್ಕು ವರ್ಷದ ಹೆಣ್ಣು ಮಗುವಿಗೆ ತನ್ನ ಗುಪ್ತಾಂಗವನ್ನು ತೋರಿಸಿ ಮಗುವಿನಿಂದ ಮುಟ್ಟಿಸಿಕೊಂಡಿದ್ದನು ಎಂಬ ಆರೋಪವಿದೆ. ಪೋಕ್ಸೊ ಪ್ರಕಾರ, 12 ವರ್ಷಕ್ಕಿಂತ ಕೆಳಗಿನ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯವನ್ನು ಗಂಭೀರ ಲೈಂಗಿಕ ದೌರ್ಜನ್ಯವಾಗಿ ಪರಿಗಣಿಸಲಾಗುತ್ತದೆ ಎಂದು ನ್ಯಾಯಪೀಠ ತಿಳಿಸಿತು.

2024ರ ಜುಲೈನಲ್ಲಿ ವಿಚಾರಣಾ ನ್ಯಾಯಾಲಯವು ಮಗುವಿನ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಆರೋಪಿಯನ್ನು ದೋಷಿ ಎಂದು ಘೋಷಿಸಿ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ಇದನ್ನ ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.