ಅಂಧ ಭಿಕ್ಷುಕ ಪತಿಯಿಂದ ಜೀವನಾಂಶಕ್ಕೆ ಪತ್ನಿ ಮನವಿ: ಮುಸ್ಲೀಮರ ಬಹುಪತ್ನಿತ್ವದ ಬಗ್ಗೆ ಮಹತ್ವದ ತೀರ್ಪು ಕೊಟ್ಟ ಹೈಕೋರ್ಟ್
ಕೇರಳ: ತನ್ನ ಪತ್ನಿಯರನ್ನು ಸಾಕಲು ಆರ್ಥಿಕ ಸಾಮರ್ಥ್ಯವಿಲ್ಲದ ಪುರುಷನಿಗೆ ಬಹುಪತ್ನಿತ್ವಕ್ಕೆ ಅನುಮತಿ ನೀಡಲಾಗುವುದಿಲ್ಲ. ಅಂತಹ ವ್ಯಕ್ತಿಯು ಇನ್ನೊಂದು ವಿವಾಹವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ತಿಳಿಸಿದೆ.
“ಜುಬೈರಿಯಾ ವಿರುದ್ಧ ಸೈದಲ್ವಿ” ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಪಿ.ವಿ. ಕುಂಞ ಕೃಷ್ಣನ್ ಅವರಿದ್ದ ನ್ಯಾಯಪೀಠವು ಈ ತೀರ್ಪು ನೀಡಿದ್ದು, ಪತ್ನಿಯರನ್ನು ಸಲಹುವ ಸಾಮರ್ಥ್ಯ ಇಲ್ಲದಿದ್ದರೆ ಮುಸ್ಲಿಂ ಪುರುಷನೊಬ್ಬ ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.
ಅಪರಾಧ ಪ್ರಕ್ರಿಯಾ ಸಂಹಿತೆಯ ಕಲಂ 125ರ ಅಡಿಯಲ್ಲಿ ತನ್ನ ಅಂಧ ಪತಿಯಿಂದ ಜೀವನಾಂಶವನ್ನು ನೀಡಲು ನಿರ್ದೇಶಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ನ್ಯಾಯಾಲಯದ ಮೆಟ್ಟಲೇರಿದ್ದರು. ಕೌಟುಂಬಿಕ ನ್ಯಾಯಾಲಯ ಮಹಿಳೆಯ ಹಕ್ಕನ್ನು ತಿರಸ್ಕರಿಸಿತು. ಈ ಆದೇಶವನ್ನು ಪ್ರಶ್ನಿಸಿ ಮಹಿಳೆ ಕೇರಳ ಹೈಕೋರ್ಟ್ ನಲ್ಲಿ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿದ್ದರು
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಎದುರುದಾರರು ಕೇವಲ ಭಿಕ್ಷುಕನಾಗಿದ್ದಾಗ, ಮುಸ್ಲಿಮರ ಸಾಂಪ್ರದಾಯಿಕ ಕಾನೂನಿನ ಪ್ರಕಾರವೂ ಸಹ ಅವರ ಸತತ ವಿವಾಹವನ್ನು ಅನುಮತಿಸುವುದಿಲ್ಲ. ಮುಸ್ಲಿಂ ಸಮುದಾಯದಲ್ಲಿ ಬಹುಪತ್ನಿತ್ವವು ಶಿಕ್ಷಣ, ಮುಸ್ಲಿಂ ಸಾಂಪ್ರದಾಯಿಕ ಕಾನೂನುಗಳ ಅರಿವಿನ ಕೊರತೆಯಿಂದಾಗಿ ಸಂಭವಿಸುತ್ತದೆ ಎಂದು ಅಭಿಪ್ರಾಯಪಟ್ಟಿತು.
ಪ್ರಕರಣದ ವಿವರ…
ಪ್ರತಿವಾದಿಯ ಎರಡನೇ ಪತ್ನಿಯಾಗಿರುವ ಅರ್ಜಿದಾರರು, ತನ್ನ ಪತಿ ಕುರುಡನಾಗಿದ್ದರೂ, ಭಿಕ್ಷಾಟನೆಯಿಂದ ಸುಮಾರು ಪ್ರತಿ ತಿಂಗಳು ರೂ. 25,000 ಆದಾಯ ಗಳಿಸುತ್ತಿದ್ದಾರೆ. ಹಾಗಾಗಿ, ತನಗೆ ಆತನಿಂದ ರೂ. 10,000 ಜೀವನಾಂಶ ನೀಡಬೇಕೆಂದು ಪ್ರತಿವಾದಿಸಿ ಜೀವನಾಂಶ ಕೋರಿ ಅರ್ಜಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಪತಿಯು ತನಗೆ ತಲಾಖ್ ಉಚ್ಚರಿಸುವ ಮೂಲಕ ವಿಚ್ಛೇದನ ನೀಡುವುದಾಗಿ ಹಾಗೂ ಮೂರನೇ ಮದುವೆಯಾಗುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ಮೂಲಕ ತನ್ನ ಮೇಲೆ ದೌರ್ಜನ್ಮ ಎಸಗುತ್ತಿರುವುದಾಗಿ ಅರ್ಜಿದಾರರು ಆರೋಪಿಸಿದ್ದರು.
ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠವು, ಅರ್ಜಿದಾರರು ಪ್ರತಿವಾದಿಯನ್ನು ಕುರುಡನೆಂದು ಮತ್ತು ಅವರ ಆದಾಯದ ಮೂಲ ಭಿಕ್ಷಾಟನೆ ಎಂದು ಸಂಪೂರ್ಣವಾಗಿ ತಿಳಿದೂ ಪ್ರತಿವಾದಿಯನ್ನು ಮದುವೆಯಾಗಿದ್ದಾರೆ ಎಂಬ ಅಂಶವನ್ನು ಗಮನಿಸಿ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು.
ಅಲ್ಲದೆ ‘ಮುಸ್ಲಿಂ ಪುರುಷನೊಬ್ಬನಿಗೆ ತನ್ನ ಪತ್ನಿಯರನ್ನು ನೋಡಿಕೊಳ್ಳುವ ಆರ್ಥಿಕ ಸಾಮರ್ಥ್ಯ ಇಲ್ಲದಿದ್ದರೆ ಮತ್ತು ಆತನ ಪತ್ನಿಯರಲ್ಲಿ ಒಬ್ಬರು ಜೀವನಾಂಶಕ್ಕಾಗಿ ಎನ್ನುವುದಾದರೆ ಆತನ ಬಹುಪತ್ನಿತ್ವವನ್ನು ಒಪ್ಪಲು ಸಾಧ್ಯವಿಲ್ಲ ಎಂದಿತು. “ಕೌಟುಂಬಿಕ ನ್ಯಾಯಾಲಯವು ಗಮನಿಸಿದಂತೆ, ಆಕ್ಷೇಪಾರ್ಹ ಆದೇಶಕ್ಕೆ ಸಂಬಂಧಿಸಿದಂತೆ, ಈ ನ್ಯಾಯಾಲಯವು ಭಿಕ್ಷುಕನಿಗೆ ತನ್ನ ಹೆಂಡತಿಗೆ ಜೀವನಾಂಶ ಪಾವತಿಸಲು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಜೀವನಾಂಶದ ಹಕ್ಕನ್ನು ತಿರಸ್ಕರಿಸಿದರೂ, ಕೇರಳ ಹೈಕೋರ್ಟ್ ಮುಸ್ಲಿಂ ಸಾಂಪ್ರದಾಯಿಕ ಕಾನೂನುಗಳ ಅಡಿಯಲ್ಲಿ ಬಹುಪತ್ನಿತ್ವದ ಬಗ್ಗೆ, ವಿಶಾಲವಾದ ಅವಲೋಕನಗಳನ್ನು ಮಾಡಿತ್ತು. ಪ್ರತಿವಾದಿಯು ತನ್ನ ಮೊದಲ ಹೆಂಡತಿ ಜೀವಂತವಾಗಿರುವಾಗ ಎರಡನೇ ವಿವಾಹವನ್ನು ಮಾಡಿಕೊಂಡಿದ್ದಾನೆ. ಮತ್ತೆ ಮೂರನೆ ಮದುವೆಯಾಗುವುದಾಗಿಯೂ ಬೆದರಿಕೆ ಹಾಕುತ್ತಿದ್ರಾನ ಎಂಬುದನ್ನು ನ್ಯಾಯಪೀಠ ಗಮನಿಸಿತು. ಮುಸ್ಲಿಂ ಕಾನೂನುಗಳ ಬಗ್ಗೆ, ವ್ಯಾಪಕವಾದ ತಪ್ಪು ಕಲ್ಪನೆಗಳು ಅಂತಹ ವಿವಾಹಗಳಿಗೆ ಕಾರಣವಾಗಿವೆ. ”ಮುಸ್ಲಿಂ ಸಮುದಾಯದ ಅವರು ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ನಿರ್ವಹಿಸುವಷ್ಟು ಸಂಪತ್ತನ್ನು ಹೊಂದಿದ್ದರೂ ಸಹ, ಬಹುಪಾಲು ಜನರು ಏಕಪತ್ನಿತ್ವವನ್ನು ಅನುಸರಿಸುತ್ತಾರೆ, ಅದು ಪವಿತ್ರ ಕುರಾನ್ ನ ನಿಜವಾದ ಮನೋಭಾವವೂ ಆಗಿದೆ. ಪವಿತ್ರ ಕುರಾನ್ ನ ಶ್ಲೋಕಗಳನ್ನು ಮರೆತು ಬಹುಪತ್ನಿತ್ವವನ್ನು ಅನುಸರಿಸುತ್ತಿರುವ ಮುಸ್ಲಿಂ ಸಮುದಾಯದ ಸಣ್ಣ ಅಲ್ಪಸಂಖ್ಯಾತರು ಧಾರ್ಮಿಕ ಮುಖಂಡರು ಸಮಾಜದಿಂದ ಶಿಕ್ಷಣ ಪಡೆಯಬೇಕು ಎಂದು ನ್ಯಾಯಪೀಠ ಕಿವಿಮಾತು ಹೇಳಿತು.
ಭಿಕ್ಷಾಟನೆಯನ್ನು ರಾಜ್ಯವು ಗುರುತಿಸಿಲ್ಲ ಮತ್ತು ಯಾವುದೇ ನಾಗರಿಕನು ಬದುಕುಳಿಯುವಿಕೆಗಾಗಿ ಭಿಕ್ಷೆ ಬೇಡುವಂತೆ ಒತ್ತಾಯಿಸದಂತೆ ನೋಡಿಕೊಳ್ಳುವ ಕರ್ತವ್ಯ ಸರ್ಕಾರದ್ದು ಅಂತಹ ಸಂದರ್ಭಗಳಲ್ಲಿ ಮುಸ್ಲಿಂ ಸಮುದಾಯದಲ್ಲಿ ಬಹುಪತ್ನಿತ್ವಕ್ಕೆ ಬಲಿಯಾಗುವ ಮಹಿಳೆಯರನ್ನು ರಕ್ಷಿಸುವ ರಾಜ್ಯದ ಜವಾಬ್ದಾರಿಯನ್ನು ನ್ಯಾಯಾಲಯವು ಒತ್ತಿಹೇಳಿತು.
”ಪ್ರತಿವಾದಿಯು ಮತ್ತೊಂದು ಮದುವೆಯನ್ನು ತಪ್ಪಿಸಲು ಸೂಕ್ತ ಸಮಾಲೋಚನೆಯನ್ನು ನೀಡಬೇಕು, ಇದರಿಂದಾಗಿ ಇನ್ನೊಬ್ಬ ಮಹಿಳೆ ನಿರ್ಗತಿಕ ಪತ್ನಿಯಾಗಿ ಉಳಿಯುತ್ತಾಳೆ. ಸರ್ಕಾರದ ಸಂಬಂಧಪಟ್ಟ ಇಲಾಖೆಯು ಧಾರ್ಮಿಕ ಮುಖಂಡರು ಸೇರಿದಂತೆ ಸಮರ್ಥ ಸಲಹೆಗಾರರ ಸಹಾಯದಿಂದ ಪ್ರತಿವಾದಿಗೆ ಸಮಾಲೋಚನೆ ನೀಡಬೇಕು” ಎಂದು ನಿರ್ದೇಶಿಸಿದ ನ್ಯಾಯಾಲಯವು, ಸಮಾಜ ಕಲ್ಯಾಣ ಇಲಾಖೆಯು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿರ್ದೇಶಿಸಿತು. ಪತ್ನಿಯ ಮೇಲ್ಮನವಿಯನ್ನು ಆಲಿಸಿದ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ನಿರ್ಧಾರವನ್ನು ಎತ್ತಿಹಿಡಿಯಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
