ಸದ್ದಿಲ್ಲದೆ ಸೈಬರ್ ಕ್ಷೇತ್ರದಲ್ಲಿ ಸೇವೆ – ಪೊಲೀಸ್ ಅಧಿಕಾರಿಗೆ TRAI ಮೆಚ್ಚುಗೆ

ಕೆ ಎನ್ ಯಶವಂತ್ ಕುಮಾರ್. ಬೆಂಗಳೂರು ಸಿಐಡಿ ಸೈಬರ್ ವಿಭಾಗದ ಡಿವೈಎಸ್ಪಿ. ಆಧುನಿಕ ಜಗತ್ತಿನಲ್ಲಿ ದಿನೇ ದಿನೇ ಸೈಬರ್ ಅಪರಾಧಗಳು ಹೆಚ್ಚುತ್ತಿದೆ. ಪೊಲೀಸರು ಸೈಬರ್ ಅಪರಾಧ ತಡೆಯಲು ಚಾಪೆ ಕೆಳಗೆ ನುಸುಳಿದರೆ ಅಪರಾಧಿಗಳು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚುವುದು ತುಸು ಕಷ್ಟದ ಕೆಲಸ. ಆದರೆ ಸೈಬರ್ ಅಪರಾಧಗಳು ಆಗದಂತೆ ತಡೆಗಟ್ಟುವುದು ಸುಲಭ. ಇದು ಒಂದು ರೀತಿ ದೊಡ್ಡವರು ಹೇಳಿರುವ Preventaion is better than care ಎಂಬ ಮಾತಿನಂತೆ. ಈ ಸತ್ಯವನ್ನು ಅರಿತಿರುವ ಕೆ ಎನ್ ಯಶವಂತ್ ಕುಮಾರ್ ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ ಇದರಿಂದ ಗುರುತರ ಸೈಬರ್ ಅಪರಾಧಗಳು ಆಗುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಅರಸಿ ಬಂದ ಗೌರವ ಪ್ರಶಸ್ತಿ ಸನ್ಮಾನಗಳು
ಕೆ ಎನ್ ಯಶವಂತ್ ಕುಮಾರ್ ಅವರ ಈ ಸಾಧನೆಯನ್ನು ಗುರುತಿಸಿರುವ ಹಲವು ಸಂಘ ಸಂಸ್ಥೆಗಳು. ರಾಜ್ಯ ರಾಷ್ಟ್ರಮಟ್ಟದ ಮಾಧ್ಯಮಗಳು ಇವರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಹಿರಿಯ ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು, ನ್ಯಾಯವಾದಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಗಣ್ಯರು ಹಿರಿಯ ನಾಗರೀಕರು ಸೇರಿ ಹಲವರು ಇವರ ಕಾರ್ಯವೈಖರಿ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಇವರ ಕಾರ್ಯವೈಖರಿ ಹಾಗೂ ಸೈಬರ್ ಬಗ್ಗೆ ಇವರಿಗಿರುವ ಅಪರಿಮಿತ ಜ್ಞಾನದ ಬಗ್ಗೆ ಖುದ್ದು TRAI ( Telecom Regulatory Authority of India ) ಮೆಚ್ಚುಗೆ ವ್ಯಕ್ತಪಡಿಸಿದೆ. ಇತ್ತೀಚೆಗೆ ಟ್ರೈ ಆಯೋಜಿಸಿದ್ದ ಸೆಮೆನಾರ್ನಲ್ಲಿ ಭಾಗವಹಿಸಿದ ಕೆ ಎನ್ ಯಶವಂತ ಕುಮಾರ್ ಸೈಬರ್ ಕ್ರೈಂ ಕಾರ್ಯ ನಿರ್ವಹಣೆ ಹಾಗೂ ತಡೆಗಟ್ಟುವ ಕ್ರಮದ ಬಗ್ಗೆ ವಿಸ್ತೃತವಾಗಿ ವಿಚಾರ ಮಂಡನೆ ಮಾಡಿದ್ದರು. ಇವರ ವಿಚಾರಧಾರೆಯನ್ನು ಕೇಳಿ TRAI ಮೆಚ್ಚುಗೆ ವ್ಯಕ್ತಪಡಿಸಿದ್ದು ಮಾತ್ರವಲ್ಲ ಪ್ರಶಂಸೆಯ ಪತ್ರವನ್ನು ಕಳುಹಿಸಿಕೊಟ್ಟಿದೆ. ಪ್ರಶಂಸೆಯ ಪತ್ರದ ಯಥಾವತ್ ಸಾರಂಶ ಇಲ್ಲಿದೆ.
TRAI extends its sincere appreciation to Shri K N Yeshavantha Kumar, Deputy Superintendent of Police at the Cybercrime Division, CID in Bengaluru, for his exemplary session on “Cybercrime Modus Operandi – Preventive Steps” taken during our recent seminar. Shri Kumar’s elaborate talk in local Kannada language showcased his profound expertise in the field, providing valuable insights into the intricacies of cybercrime and offering practical preventive measures. His session proved to be both enlightening and informative, leaving a lasting impact on the audience. We commend Shri Yeshavantha Kumar for his dedication in raising awareness about cyber threats and appreciate his commitment to fostering a safer digital environment. His contribution significantly enriched the seminar, and we look forward to future collaborations.
We express our gratitude for nominating Shri K N Yeshavantha Kumar and contributing to the success of the Seminar.
With regards,
ಈ ಮೂಲಕ ರಾಜ್ಯದ ಪೊಲೀಸ್ ಅಧಿಕಾರಿ ದೇಶದ ಪ್ರತಿಷ್ಠಿತ ಸಂಸ್ಥೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದೆಹಲಿಯ ಗುರಗಾಂವ್ನಲ್ಲಿ ಸೈಬರ್ ಮೂಟ್ ಕೋರ್ಟ್ – ದೇಶದ ಪೊಲೀಸ್ ಪ್ರತಿನಿಧಿಸುವ ಅವಕಾಶ ಪಡೆದ ಕೆ ಎನ್ ಯಶವಂತ್ ಕುಮಾರ್.
ಹೌದು ದೇಶದಲ್ಲಿ ಆಗುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು AISS ಅಂದರೆANNUAL INFORMATION SECURITY SUMMIT ಆಯೋಜಿಸಲಾಗಿದೆ. ಡಿಸೆಂಬರ್ 19 ಹಾಗೂ 20 ರಂದು ದೆಹಲಿಯ ಗುರಗಾಂವ್ನಲ್ಲಿ ಈ ಸಮಿಟ್ ನಡೆಯಲಿದೆ. ಇದರಲ್ಲಿ HANDLING OF DIGITAL EVIDENCE IN CRIME INVESTIGATION ನಡೆಯಲಿದೆ. ಇದರಲ್ಲಿ ದೆಹಲಿ ಹೈಕೋರ್ಟ್ನ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ತಳವಂತ್ ಸಿಂಗ್, ನಿವೃತ್ತ ವಿಜ್ಞಾನಿ ಶ್ರೀ ಕೃಷ್ಣ ಶಾಸ್ತ್ರಿ ಪೆಂಡ್ಯಾಲ್, ಸುಪ್ರೀಂಕೋರ್ಟ್ ನ್ಯಾಯವಾದಿ ಶ್ರೀ ವಕುಲ್ ಶರ್ಮಾ, ಶ್ರೀ ಡಾ ಅತುಲ್ ಕುಮಾರ್ ಪಾಂಡೆ ಭಾಗವಹಿಸುತ್ತಿದ್ದಾರೆ. ಇವರ ಜೊತೆಗೆ ಪೊಲೀಸ್ ಅಧಿಕಾರಿಯಾಗಿ ಕೆ ಎನ್ ಯಶವಂತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ದೇಶದ ಪೊಲೀಸ್ನ್ನು ಪ್ರತಿನಿಧಿಸುವ ಮೂಲಕ ಕೆ ಎನ್ ಯಶವಂತ ಕುಮಾರ್ ರಾಜ್ಯದ ಪೊಲೀಸರಿಗೆ ಗೌರವ ತಂದುಕೊಟ್ಟಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕರುನಾಡ ಬಾವುಟವನ್ನು ಹಾರಿಸುತ್ತಿರುವ ಯಶವಂತ ಅವರು ಮತ್ತಷ್ಟು ಸಾಧನೆ ಮಾಡುವಂತಾಗಲಿ ಅನ್ನೋದೆ ಲಾಗೈಡ್ ಕನ್ನಡ ಬಳಗದ ಶುಭ ಹಾರೈಕೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ