ಸರ್ಕಾರಿ ನೌಕರನಿಗೆ ಬಲ ತುಂಬಿದ ಭಾ ದ.ಸಂಹಿತೆ ಕಲಂ 188 – ಹಲವು ಸಂದರ್ಭಗಳಲ್ಲಿ ಕಾನೂನಾತ್ಮಕ ಆದೇಶ ಹೊರಡಿಸುವ ಹಕ್ಕು ನೀಡಿದ ಭಾ.ದಂ.ಸಂಹಿತೆ

ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕ ನೌಕರನಿಂದ ಆದೇಶ, ಆದೇಶ ಉಲ್ಲಂಘಿಸಿದವರ ವಿರುದ್ದ ಕಾನೂನು ಪ್ರಕ್ರಿಯೆಯ ಪಕ್ಷಿ ನೋಟ
ಸಮಾಜದಲ್ಲಿ ಕಾನೂನು ಮತ್ತು ಸುವ್ಯಸ್ಥೆಯನ್ನು ಕಾಪಾಡಲು ಸರ್ಕಾರಿ ನೌಕರರಿಗೆ ಕಾನೂನಿನಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಉದಾಹರಣೆಗೆ ಅಕ್ರಮಕೂಟ ಚದುರಿಸಲು, ನಿರ್ಧಿಷ್ಟ ರಸ್ತೆಯಲ್ಲಿ ಧಾರ್ಮಿಕ ಮೆರವಣಿಗೆಗಳು ತೆರಳದಂತೆ, ವಿವಾದಿತ ಸ್ಥಳ, ಸ್ವತ್ತನ್ನು ಯತಾವತ್ತಾಗಿ ಕಾಪಾಡುವಂತೆ ಸಾರ್ವಜನಿಕ ಹಿತ ದೃಷ್ಟಿಯಿಂದ ಆದೇಶಿಸುವ ಅಧಿಕಾರ ಸರ್ಕಾರಿ ನೌಕರನಿಗೆ ಕಲ್ಪಿಸಲಾಗಿದೆ. (ಭಾ.ದ.ಸಂ ಕಲಂ. 188) ಈ ಕಲಂ ನ ರೀತ್ಯದ ಅಪರಾದಗಳು ಸಂಜ್ಞೇಯ, ಜಾಮೀನಿಯ ಹಾಗೂ ರಾಜಿಯಾಗದ ಅಪರಾಧವಾಗಿರುತ್ತದೆ.
ಅಪರಾಧವಾಗಲು ಅವಶ್ಯಕ ಅಂಶಗಳು (ಭಾ.ದಂ.ಸಂ ಕಲಂ.188)
1. ಸರ್ಕಾರಿ ಅಧಿಕಾರಿ ಕಾನೂನು ಸಮ್ಮತವಾಗಿ ಆದೇಶಿಸಲು ಶಕ್ತನಾಗಿರಬೇಕು.
2. ಅಂತಹ ಸರ್ಕಾರಿ ಅಧಿಕಾರಿಯಿಂದ ಆದೇಶವಾಗಿರಬೇಕು.
3. ಆದೇಶದ ರೀತ್ಯಾ ಸಾರ್ವಜನಿಕ ಸ್ವಾಸ್ಥ್ಯ ಕಾಪಾಡಲು ಸೂಚಿಸಿರಬೇಕು.
4. ಆದೇಶ ಪ್ರಚಾರ ಅಥವಾ ಪ್ರಕಟಿಸಿರಬೇಕು.
5. ಆದೇಶದ ಬಗ್ಗೆ ಆರೋಪಿತನಿಗೆ ತಿಳುವಳಿಕೆ ಅಥವಾ ಜ್ಞಾನ ಇರಬೇಕು.
6. ಆದೇಶ ಪಾಲಿಸದೇ ಉಲ್ಲಂಘಿಸಿರಬೇಕು.
7. ಉಲ್ಲಂಘನೆಯಿಂದ ಸಾರ್ವಜನಿಕರಿಗೆ ಕಿರಿಕಿರಿ, ಅಡ್ಡಿ, ದೊಂಬಿ, ಗಾಯ, ಹಾನಿ, ಜೀವ ಮತ್ತು ಸ್ವತ್ತಿನ ಸುರಕ್ಷತೆಗೆ ದಕ್ಕೆ ಉಂಟಾಗುವ ಸನ್ನಿವೇಶ ಉಂಟಾಗಿರಬೇಕು.
ದೂರು ದಾಖಲಿಸುವ ಪ್ರಕ್ರಿಯೆ
ಇಂತಹ ಉಲ್ಲಂಘನೆಯ ಅಪರಾಧ, ಪ್ರಚೋದನೆ, ಪ್ರಯತ್ನ, ಒಳಸಂಚಿಗೆ ಸಂಬಂಧಿಸಿದಂತೆ ಆದೇಶಿತ ಅಧಿಕಾರಿ ಅಥವಾ ಅವರಿಂದ ಲಿಖಿತವಾಗಿ ನಿರ್ದೇಶಿಸಲ್ಪಟ್ಟ ಅಧೀನ ಅಧಿಕಾರಿಯ ಮೌಖಿಕ ಅಥವಾ ಲಿಖಿತ ದೂರನ್ನು ದಂಡಾಧಿಕಾರಿಯ ಮುಂದೆ ಸಲ್ಲಿಸಬೇಕಾಗುತ್ತದೆ. ದಂಡಾಧಿಕಾರಿಯು ಸ್ವೀಕರಿಸಿದ ದೂರಿನ ಅನುಗುಣವಾಗಿ ಕ್ರಮಕೈಗೊಳ್ಳಬಹುದಾಗಿರುತ್ತದೆ. (ದಂ.ಪ್ರ.ಸಂ ಕಲಂ. 195, 200, 2 (ಡಿ))
ಪೊಲೀಸರು ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಿರ್ವಹಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ಒಳಗೊಂಡಿರುವುದಿಲ್ಲ. (ಕಲಂ. 173 (2), 2 (ಆರ್). ಇಂತಹ ವರದಿ ಆಧರಿಸಿ ನ್ಯಾಯಾಲಯ ಸಂಜ್ಞೇಯತೆ ತೆಗೆದುಕೊಳ್ಳಲು ನಿರಾಕರಿಸಬಹುದು, ಬಿಡುಗಡೆ ಮಾಡಬಹುದು ಅಥವಾ ರದ್ದುಗೊಳಿಸಬಹುದು. ಈ ಹಿನ್ನೆಲೆಯಲ್ಲಿ ಆರೋಪಿತರನ್ನು ಅಭಿಯೋಜಿಸುವ ಕುರಿತಂತೆ ಘನ ಸರ್ವೋಚ್ಛ ಮತ್ತು ಉಚ್ಛನ್ಯಾಯಾಲಯದ ತೀರ್ಪುಗಳು ಕೆಳಕಂಡಂತಿವೆ.
1. ಪ್ರಭಾಕರ್ ವಿ/ಎಸ್ ಸ್ಟೇಟ್ ಆಫ್ ಕರ್ನಾಟಕ: (ಕ್ರಿಮಿನಲ್ ಪಿಟಿಷನ್ ಸಂಖ್ಯೆ. 4559/2017)
ಭಾ.ದಂ.ಸಂ ಕಲಂ. 172 ರಿಂದ 188 ರವರೆಗೆ ಉಲ್ಲೇಖಿಸಿರುವ ಅಪರಾಧಗಳನ್ನು ಪೊಲೀಸ್ ಅಧಿಕಾರಿಗಳು ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಂಡು ತನಿಖೆ ನಿರ್ವಹಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತಿಲ್ಲ. ಈ ರೀತಿ ಸಲ್ಲಿಸುವ ವರದಿಗಳನ್ನು ನ್ಯಾಯಾಲಯ ಪರಿಗಣಿಸುವಂತಿಲ್ಲ.
2. ಜೀವಾನಂದಮ್ ವಿರುದ್ದ ರಾಜ್ಯ (ಮದ್ರಾಸ್ ಉಚ್ಛ ನ್ಯಾಯಾಲಯದ ಎಂ.ಡಿ ಕ್ರಿಮಿನಲ್ ಓ.ಪಿ ಸಂಖ್ಯೆ 1356/2018 ರ ತೀರ್ಪಿನ ದಿನಾಂಕ: 20.11.2018 )
ಭಾ.ದಂ.ಸಂ ಕಲಂ. 188 ರ ರೀತ್ಯಾ ಉಲ್ಲಂಘನೆಯ ಆರೋಪದ ಅಭಿಯೋಜನೆಗೆ ಕಲಂ.195 ರ ರೀತ್ಯದ ಪ್ರಕ್ರಿಯೆ ಕಡ್ಡಾಯವಾಗಿರುತ್ತದೆ. ಇಲ್ಲದಿದ್ದಲ್ಲಿ ಅಂತಹ ಪ್ರಕ್ರಿಯೆ ಗಿoiಜ ಚಿb iಟಿiಣio ಎಂದು ಪರಿಗಣಿತವಾಗುತ್ತದೆ.
ಗಿoiಜ ಚಿb iಟಿiಣio ಎಂಬುದು ಲ್ಯಾಟಿನ್ ಪದವಾಗಿದ್ದು, ಪ್ರಾರಂಬಿಕ ಹಂತದಿಂದ ಅಮಾನ್ಯವೆಂದು ಪರಿಗಣಿಸಲ್ಪಡುತ್ತದೆ. ಉದಾಹರಣೆ: ಬೆದರಿಸಿ ಒಪ್ಪಂದ ಪತ್ರಕ್ಕೆ ಸಹಿ ಪಡೆದರೆ ಅಂತಹ ಒಪ್ಪಂದ ಪ್ರಾರಂಬಿಕ ಹಂತದಿಂದ ಅಮಾನ್ಯವಾಗುತ್ತದೆ.
3. ಸಿ. ಮುನಿಯಪ್ಪನ್ ಮತ್ತು ಇತರರ ವಿರುದ್ದ ತಮಿಳುನಾಡು ರಾಜ್ಯ 30.10.2010
ದಂ.ಪ್ರ.ಸಂ ಕಲಂ. 195 ರ ಉದ್ದೇಶ ಯಾವುದೇ ವ್ಯಕ್ತಿಯ ಮೇಲೆ ಅಪರಾಧದ ಅಭಿಯೋನೆಗೊಳಿಸಲು ರಕ್ಷಿಸುವ ಉದ್ದೇಶದಿಂದ ರಚಿತವಾಗಿದೆ ಇದರಿಂದ ಕ್ರಿಮಿನಲ್ ನ್ಯಾಯಾಲಯಗಳಲ್ಲಿ ದೀರ್ಘ ವಿಚಾರಣೆಯಿಂದ ಆಗುವ ಅತ್ಯಮೂಲ್ಯ ಸಮಯದ ವಿನಿಯೋಗವನ್ನು ತಡೆಯುವುದಾಗಿದೆ.
ದಂಡನೆ
ಸಾಮಾನ್ಯ ಸ್ವರೂಪದ ಉಲ್ಲಂಘನೆಗೆ 01 ತಿಂಗಳವರೆಗಿನ ಕಾರಾವಾಸ ಅಥವಾ 200 ರೂ ರವರೆಗಿನ ದಂಡ ಅಥವಾ ಎರಡರಿಂದಲೂ ದಂಡಿತನಾಗತಕ್ಕದ್ದು, ಹೆಚ್ಚಿನ ಮಟ್ಟದ ಉಲ್ಲಂಘನೆಗೆ 06 ತಿಂಗಳವರೆಗಿನ ಕಾರಾವಾಸ ಅಥವಾ 1000 ರೂ ರವರೆಗಿನ ಅಥವಾ ಎರಡರಿಂದಲೂ ದಂಡಿತನಾಗತಕ್ಕದ್ದು.
ಒಟ್ಟಾರೆಯಾಗಿ ಇಂತಹ ಅಪರಾಧವಾಗಲು ಸಾರ್ವಜನಿಕ ನೌಕರನಿಂದ ಪ್ರಕಟಿಸಿದ ಆದೇಶ ತಿಳಿದ ವ್ಯಕ್ತಿ ಉಲ್ಲಂಘಿಸಿದ, ಕಾರಣದಿಂದ ಸಾರ್ವಜನಿಕ ಸ್ವಾಸ್ಥ್ಯ ಕಾನೂನು ಸುವ್ಯವಸ್ಥೆಗೆ ದಕ್ಕೆಯಾದರೆ ಆದೇಶಿತ ಅಧಿಕಾರಿಯ ದೂರಿನನ್ವಯ ದಂಡಾಧಿಕಾರಿ ಸಂಜ್ಞೇಯತೆ ಪರಿಗಣಿಸಿ ನಿರ್ಣಯಿಸುವ ಪ್ರಕ್ರಿಯೆಯಾಗಿರುತ್ತದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ