ತುಟಿ ಸ್ಪರ್ಶಿಸಿದ ಮಾತ್ರಕ್ಕೆ ಅದು ಪೋಕ್ಸೋ ಕಾಯ್ದೆಯಡಿ ಅಪರಾಧವಲ್ಲ – ಹೈಕೋರ್ಟ್

ನವದೆಹಲಿ: ಲೈಂಗಿಕವಾಗಿ ಪ್ರಚೋದಿಸುವಂತಹ ಕೃತ್ಯ ಎಸಗದಿದ್ದರೇ ಲೈಂಗಿಕವಾಗಿ ಯಾವುದೇ ಪ್ರಚೋದನೆ ಇಲ್ಲದ ಬಾಲಕಿಯ ತುಟಿಯನ್ನ ಸ್ಪರ್ಶಿಸುವುದು ಅಥವಾ ಅದನ್ನು ಒತ್ತುವುದು ಆಕೆಯ ಪಕ್ಕದಲ್ಲಿ ಮಲಗುವುದು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಹೇಳಿರುವ ತೀವ್ರ ಸ್ವರೂಪದ ಲೈಂಗಿಕ ಹಲ್ಲೆ ಆಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. ತುಟ್ಟಿ ಒತ್ತುವಂತಹ ಕೃತ್ಯಗಳು ಬಾಲಕಿಯ ಘನತೆಗೆ ಧಕ್ಕೆ ಉಂಟುಮಾಡಬಹುದು. ಆದರೆ ಸ್ಪಷ್ಟವಾದ ಅಥವಾ ತರ್ಕದ ಆಧಾರದಲ್ಲಿ ಹೇಳಬಹುದಾದ ಲೈಂಗಿಕ ಉದ್ದೇಶವು ಈ ಕೃತ್ಯಗಳಲ್ಲಿ ಇರಲಿಲ್ಲ ಎಂದಾದರೆ ಅದು ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ಹೇಳಿರುವ ಅಪರಾಧ ಆಗುವುದಿಲ್ಲ ಎಂದು ಶರ್ಮಾ ಅವರಿದ್ದ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಆದರೆ ಭಾರತೀಯ ದಮಡ ಸಂಹಿತೆಯ(ಐಪಿಸಿ) ಸೆಕ್ಷನ್ 354ರಲ್ಲಿ ಹೇಳಿರುವ ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ ಆಗಿರುವುದು ಪ್ರಕರಣಕ್ಕೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
12 ವರ್ಷದ ಬಾಲಕಿಯ ಸಂಬಂಧಿಕ ತನ್ನ ವಿರುದ್ಧ ಐಪಿಸಿ ಸೆಕ್ಷನ್ 354 ಹಾಗೂ ಪೋಕೋ ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ದೋಷಾರೋಪ ನಿಗದಿ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಪೋಕ್ಸೋ ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ನಿಗದಿಯಾಗಿದ್ದ ದೋಷಾರೋಪದಿಂದ ಆರೋಪಿಯನ್ನು ಮುಕ್ತಗೊಳಿಸಿತು. ಆದರೆ, ಐಪಿಸಿಯ ಅಡಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ