ಭೂಮಿ ಕಳೆದುಕೊಂಡವರಿಗೆ ವಿಳಂಬ ಕಾರಣಕ್ಕೆ ನ್ಯಾಯ ಸಮ್ಮತ ಪರಿಹಾರ ನೀಡಲು ನಿರಾಕರಿಸುವಂತಿಲ್ಲ- ಸುಪ್ರೀಂಕೋರ್ಟ್

ನವದೆಹಲಿ: ಭೂ-ಸ್ವಾಧೀನ ಕಾಯ್ದೆಯಡಿ ಭೂಮಿ ಕಳೆದುಕೊಂಡವರಿಗೆ ವಿಳಂಬ ಕಾರಣಕ್ಕೆ ನ್ಯಾಯಸಮ್ಮತ ಪರಿಹಾರದ ಮೊತ್ತ ನೀಡಲು ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ
ಕಾಲಮಿತಿ ಕಳೆದು ವಿಳಂಬವಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸದ ಪಂಜಾಬ್ ಮತ್ತು ಚಂಡೀಗಢ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.
ಭೂಸ್ವಾಧೀನ ಕಾಯ್ದೆಯಡಿ ಮೇಲ್ಮನವಿ ಸಲ್ಲಿಸಲು ವಿಳಂಬವಾಗಿದೆ ಎಂಬ ಕಾರಣಕ್ಕೆ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತ ವ್ಯಕ್ತಿಗೆ ನ್ಯಾಯಸಮ್ಮತ ಪರಿಹಾರದ ಮೊತ್ತವನ್ನು ನಿರಾಕರಿಸುವಂತಿಲ್ಲ. ಇಂತಹ ಅರ್ಜಿಗಳ ವಿಲೇವಾರಿಗೆ ನ್ಯಾಯಾಲಯಗಳು ಉದಾರ ಮನೋಭಾವವನ್ನು ಅನುಸರಿಸಬೇಕು ಎಂದು ನ್ಯಾಯಪೀಠ ಸಲಹೆ ನೀಡಿತು.
ಇದೇ ವೇಳೆ ಕಲೆಕ್ಟರ್, ಭೂಸ್ವಾಧೀನಾಧಿಕಾರಿ, ಆನಂದ್ ನಾಗ್ ಗಿs ಕಟಿಜಿ ಮತ್ತಿತರರು ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಪೀಠವು, ಸಾಮಾನ್ಯವಾಗಿ, ಭೂಸ್ವಾಧೀನಕ್ಕೆ ಪರಿಹಾರ ಕೋರಿ ವಿಳಂಬವಾಗಿ ಅರ್ಜಿ ಸಲ್ಲಿಸಿದರೆ ಅರ್ಜಿದಾರರಿಗೆ ಯಾವುದೇ ಲಾಭ ಇಲ್ಲ. ಪ್ರತಿದಿನದ ವಿಳಂಬವನ್ನೂ ವಿವರಿಸಬೇಕು ಎಂಬ ತತ್ವವನ್ನು ಎಲ್ಲ ಅರ್ಜಿಗೂ ಅನ್ವಯಿಸಲಾಗದು ಎಂದು ಹೇಳಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ