ತೀರ್ಪು ಬರೆಯಲು ಅಸಮರ್ಥ: ನ್ಯಾಯಾಧೀಶರನ್ನ ತರಬೇತಿಗೆ ಕಳುಹಿಸುವಂತೆ ಹೈಕೋರ್ಟ್ ಆದೇಶ

ಪ್ರಯಾಗರಾಜ್: ನ್ಯಾಯಾಂಗ ಅಧಿಕಾರಿಯೊಬ್ಬರು ತೀರ್ಪು ಬರೆಯಲು ಅಸಮರ್ಥರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅಲಹಾಬಾದ್ ಹೈಕೋರ್ಟ್, ಕಾನ್ಸುರ ನಗರದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಮಿತ್ ವರ್ಮಾ ಅವರನ್ನು ಮೂರು ತಿಂಗಳ ತರಬೇತಿಗಾಗಿ ನ್ಯಾಯಾಂಗ ತರಬೇತಿ ಸಂಸ್ಥೆಗೆ ಕಳುಹಿಸುವಂತೆ ಆದೇಶಿಸಿದೆ
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಮಿತ್ ವರ್ಮಾ ಅವರ ತೀರ್ಪುಗಳನ್ನು ಬರೆಯಲು ಅಸಮರ್ಥತೆಯ ಬಗ್ಗೆ ಅಲಹಾಬಾದ್ ಹೈಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ. ವರ್ಮಾ ಅವರು ನ್ಯಾಯಾಂಗ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮೂರು ತಿಂಗಳ ತರಬೇತಿಯನ್ನು ಪಡೆಯಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ.
ಕಾನ್ಪುರ ನಗರದ ಮುನ್ನಿ ದೇವಿ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ನೀರಜ್ ತಿವಾರಿ ಈ ಆದೇಶ ಹೊರಡಿಸಿದ್ದಾರೆ. ಆದರೆ ಬಾಡಿಗೆ ವ್ಯಾಜ್ಯವೊಂದರಲ್ಲಿ ಹೆಚ್ಚುವರಿ ಅಂಶಗಳನ್ನು ಸೇರಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಲಾಗಿದೆ.
ಈ ದೋಷಪೂರಿತ ಆದೇಶವನ್ನು ಪರಿಶೀಲಿಸಿದ ಹೈಕೋರ್ಟ್, ಏಪ್ರಿಲ್ 22ರಂದು ನೀಡಿದ ತೀರ್ಪಿನಲ್ಲಿ “ಕಾನ್ಸುರ ನಗರದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿರುವ ಅಮಿತ್ ವರ್ಮಾ ಅವರು ತೀರ್ಪು ಬರೆಯಲು ಅಸಮರ್ಥರು ಎಂಬ ದೃಢ ನಿರ್ಧಾರಕ್ಕೆ ಹೈಕೋರ್ಟ್ ಬಂದಿದೆ. ಆದ್ದರಿಂದ ಅವರನ್ನು ಕನಿಷ್ಠ ಮೂರು ತಿಂಗಳ ತರಬೇತಿಗಾಗಿ ಲಕ್ನೋದಲ್ಲಿರುವ ನ್ಯಾಯಾಂಗ ತರಬೇತಿ ಮತ್ತು ಸಂಶೋಧನಾ ಸಂಸ್ಥೆಗೆ ಕಳುಹಿಸಬೇಕು” ಎಂದು ಆದೇಶಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ