07/03/2026

Law Guide Kannada

Online Guide

ಬಿಹಾರ: ಕೈಬಿಟ್ಟ 65 ಲಕ್ಷ ಮತದಾರರ ವಿವರವನ್ನ ಕಾರಣ ಸಹಿತ ಪ್ರಕಟಿಸಿ- ಚು.ಆಯೋಗಕ್ಕೆ ಸುಪ್ರೀಂ ತಾಕೀತು.

ನವದೆಹಲಿ: ಬಿಹಾರದಲ್ಲಿ ಕೈಬಿಟ್ಟ 65 ಲಕ್ಷ ಮತದಾರರ ವಿವರವನ್ನ ಕಾರಣ ಸಹಿತ ಪ್ರಕಟಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಯಮಾಲಾ ಬಾಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಖಡಕ್ ಆದೇಶ ಹೊರಡಿಸಿದ್ದು, ಮತಪಟ್ಟಿಯಿಂದ ಹೊರಗುಳಿದ ಎಲ್ಲಾ 65 ಲಕ್ಷ ಮತದಾರರ ಹೆಸರುಗಳನ್ನು ಪ್ರಕಟಿಸಬೇಕು. ಅದನ್ನು ಜಿಲ್ಲಾವಾರು ಪ್ರಕಾರ ಹೆಸರುಗಳು ಪ್ರಕಟಿಸಬೇಕು. ಚುನಾವಣಾ ಪಟ್ಟಿಯಿಂದ ಕೈಬಿಡಲು ಉದ್ಯವಾದ ಕಾರಣಗಳೇನು ಎಂಬುದನ್ನೂ ವಿವರಿಸಬೇಕುಸ್ಪಷ್ಟವಾದ ನಿರ್ದೇಶನವನ್ನು ನೀಡಿದೆ.

ಮತಪಟ್ಟಿಯಿಂದ ಹೊರಗುಳಿದ ಎಲ್ಲಾ 65 ಲಕ್ಷ ಮತದಾರರ ಹೆಸರುಗಳಲ್ಲಿ ಚುನಾವಣಾ ಆಯೋಗ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದು. ಇವರಲ್ಲಿ ಬಹುತೇಕರು ಜೀವಂತವಾಗಿದ್ದಾರೆ ಎಂದು ಬಿಜೆಪಿಯೇತರ ವಿವಿಧ ರಾಜಕೀಯ ಪಕ್ಷಗಳು ಆಕ್ಷೇಪ ಎತ್ತಿವೆ.

ಬಿಹಾರದ ಜಿಲ್ಲಾ ಚುನಾವಣಾ ಅಧಿಕಾರಿಗಳ (ಆಇಔs) ವೆಬ್ಸೈಟ್ಗಳು, ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (ಅಇಔ) ಅವರ ವೆಬ್ಸೈಟ್ ನಲ್ಲಿ ಕೈಬಿಟ್ಟ ಮತದಾರರ ವಿವರ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಮತಪಟ್ಟಿಯಲ್ಲಿ ಮತದಾರರು ತಮ್ಮ ಹೆಸರಿನ ಸ್ಟೇಟಸ್ ನ್ನು ಸುಲಭವಾಗಿ ಪರಿಶೀಲಿಸಲು ಸಾಧ್ಯವಾಗುವಂತೆ ಈ ಪಟ್ಟಿಗಳು ಇPIಅ ಆಧಾರಿತ ಹುಡುಕಾಟಕ್ಕೆ ಒಳಪಡಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ನಿರ್ದೇಶನದಲ್ಲಿ ಒತ್ತಿ ಹೇಳಿದೆ.

ರಾಜಕೀಯ ಪಕ್ಷಗಳಿಗೆ ಈಗಾಗಲೇ ಬೂತ್ ಮಟ್ಟದ ಪಟ್ಟಿಗಳನ್ನು ನೀಡಲಾಗಿದೆ. ಆದರೆ, ಮತದಾರರು ಯಾವುದೇ ರಾಜಕೀಯ ಪಕ್ಷದ ಏಜೆಂಟರನ್ನು ಏಕೆ ಅವಲಂಬಿಸಬೇಕು. ಮತಪಟ್ಟಿಯನ್ನು ಜನರ ಮುಂದಿಡುವ ಕೆಲಸವನ್ನು ಆಯೋಗವೇ ಮಾಡಬೇಕು ಎಂದು ಪೀಠ ಸ್ಪಷ್ಟನುಡಿಗಳಲ್ಲಿ ನಿರ್ದೇಶನ ನೀಡಿತು. ಈಗ ಆಯೋಗದ ಮೇಲೆ “ಮತ ಕಳವು” ಆರೋಪ ಬಂದಿದೆ. ಕಣ್ಮರೆಯಾಗಿರುವ ಹೆಸರುಗಳ ಪಟ್ಟಿಯಲ್ಲಿ ನೀವು ಸಾರ್ವಜನಿಕ ವೇದಿಕೆಗೆ ತೆರೆದಿಟ್ಟರೆ, ಚುನಾವಣಾ ಆಯೋಗದ ವಿರುದ್ಧದ ಟೀಕೆಗಳು ಕಣ್ಮರೆಯಾಗುತ್ತದೆ ಎಂದು ಸುಪ್ರೀಂ ನ್ಯಾಯಪೀಠ ಹೇಳಿತು.

ಆಗಸ್ಟ್ 19ರೊಳಗೆ ಆಯೋಗ ಜಾರಿಗೆ ತರಬೇಕಾದ ಮಧ್ಯಂತರ ಕ್ರಮಗಳ ಬಗ್ಗೆ ನ್ಯಾಯಪೀಠ ಪಟ್ಟಿ ಮಾಡಿದೆ ಅವುಗಳು ಈ ಕೆಳಕಂಡಂತಿದೆ…
ಕರಡು ಪಟ್ಟಿಯಿಂದ ಕೈಬಿಟ್ಟಿರುವ ಸುಮಾರು 65 ಲಕ್ಷ ಮತದಾರರ ಪಟ್ಟಿಯನ್ನು ಜಿಲ್ಲಾವಾರು ಪ್ರಕಟಿಸುವುದು, ಬೂತ್ ಮಟ್ಟದ ವಿವರಗಳು ಮತ್ತು ಅಳಿಸುವಿಕೆಗೆ ಕಾರಣಗಳನ್ನು ಇPIಅ ಸಂಖ್ಯೆಗಳ ಮೂಲಕ ಪ್ರವೇಶಿಸಬಹುದು. DEOS ನ ಸ್ಥಳೀಯ ಪತ್ರಿಕೆಗಳು, ಟಿವಿ, ರೇಡಿಯೋ ಮತ್ತು ಅಧಿಕೃತ ಸಾಮಾಜಿಕ ಮಾಧ್ಯಮ ಚಾನೆಲ್ಗಳಲ್ಲಿ ವ್ಯಾಪಕ ಪ್ರಚಾರ ಮಾಡುವುದು.

ಬ್ಲಾಕ್ ಅಭಿವೃದ್ಧಿ ಮತ್ತು ಪಂಚಾಯತ್ ಕಚೇರಿಗಳಲ್ಲಿನ ಸೂಚನಾ ಫಲಕಗಳಲ್ಲಿ, ಕಾರಣಗಳೊಂದಿಗೆ, ಬೂತ್ವಾರು ಪಟ್ಟಿಗಳ ಭೌತಿಕ ಪ್ರದರ್ಶನ. ಬಾಧಿತ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಹಕ್ಕು ಸಲ್ಲಿಸಬಹುದು ಎಂದು ಸಾರ್ವಜನಿಕ ಪ್ರಕಟಣೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಬಿಹಾರದ ಸಿಇಒ ತನ್ನ ವೆಬ್ ಸೈಟ್ನಲ್ಲಿ ಕ್ರೋಢೀಕೃತ ಜಿಲ್ಲಾವಾರು ಪಟ್ಟಿಯನ್ನು ಅಪ್ ಲೋಡ್ ಮಾಡಬೇಕು. ಎಲ್ಲಾ ಆನ್ಲೈನ್ ಪಟ್ಟಿಗಳು ಇPIಅ ಆಧಾರಿತ ಹುಡುಕಾಟಕ್ಕೆ ಒಳಪಟ್ಟಿರಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.