ಪ್ರವೇಶ ಅನುಮತಿ ಪತ್ರದ ನಂತರೇ ಆಸ್ತಿ ತೆರಿಗೆ ಹೈಕೋರ್ಟ್ ತೀರ್ಪು

ಬೆಂಗಳೂರು : ಯಾವುದೇ ಕಟ್ಟಡ ಪೂರ್ಣಗೊಂಡು ಪ್ರವೇಶ ಅನುಮತಿ ಪತ್ರ (ಆಕ್ಯುಪೆನ್ಸಿ ಸರ್ಟಿಫಿಕೇಟ್) ಪಡೆದ ನಂತರವೇ ಸ್ಥಳೀಯ ಸಂಸ್ಥೆಗಳು ತೆರಿಗೆ ವಿಧಿಸಬಹುದು ಎಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾ.ಸೂರಜ್ ಗೋವಿಂದರಾಜ್ ಅವರು ಮೈಸೂರಿನ ಸಂಸ್ಥೆಯೊಂದು ಸಲ್ಲಿಸಿದ ಅರ್ಜಿ ಕುರಿತು ವಿಚಾರಣೆ ನಡೆಸಿ ಈ ತೀರ್ಪು ನೀಡಿದ್ದಾರೆ.
ಯಾವುದೇ ಕಟ್ಟಡ ನಿರ್ಮಿಸಬೇಕಿದ್ದರೆ ಸ್ಥಳೀಯ ಸಂಸ್ಥೆಯ ಅನುಮತಿ ಇರಬೇಕು. ಹೀಗೆ ಅನುಮತಿ ಪಡೆದು ಕಟ್ಟಡ ನಿರ್ಮಿಸಿದ ನಂತರ ಪ್ರವೇಶ ಅನುಮತಿ ಪತ್ರ ಪಡೆಯಬೇಕು. ಇದಾದ ನಂತರವೇ ತೆರಿಗೆ ವಿಧಿಸಬಹುದು. ಇದಕ್ಕೆ ಮುನ್ನ ತೆರಿಗೆ ವಿಧಿಸುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
ಮೈಸೂರಿನ ಸಂಸ್ಥೆಯೊಂದು ಬೆಂಗಳೂರಿನಲ್ಲಿಕಟ್ಟಡ ನಿರ್ಮಿಸಿತು. ಕಟ್ಟಡಕ್ಕೆ ಪ್ರವೇಶ ಅನುಮತಿ ಪತ್ರವನ್ನು ಕೋರಿತು. ಬಿಬಿಎಂಪಿ ಪ್ರವೇಶ ಅನುಮತಿ ಪತ್ರವನ್ನೂ ನೀಡಿತು. ಆದರೆ, ಸಂಸ್ಥೆಯು
ಅರ್ಜಿಯಲ್ಲಿತಪ್ಪು ದಿನಾಂಕವನ್ನು ನಮೂದಿಸಿದೆ ಎಂದು ಬಿಬಿಎಂಪಿ ವಾದಿಸಿತು. ತಾನು ನೀಡಿದ ಪ್ರವೇಶ ಅನುಮತಿ ಪತ್ರದ ದಿನಾಂಕಕ್ಕಿಂತಲೂ ಹಳೆಯ ದಿನಾಂಕವೊಂದನ್ನು ನಮೂದಿಸಿ ಈ ದಿನಾಂಕದಿಂದಲೇ ಸಂಸ್ಥೆಯು ಆಸ್ತಿ ತೆರಿಗೆ ಪಾವತಿಸಬೇಕೆಂದು ಸಂಸ್ಥೆಗೆ ಸೂಚಿಸಿತ್ತು. ಬಿಬಿಎಂಪಿಯ ಈ ಆದೇಶವನ್ನು ಪ್ರಶ್ನಿಸಿ ಸಂಸ್ಥೆಯು ನ್ಯಾಯಾಲಯದ ಮೊರೆ ಹೋಗಿತ್ತು.