12/03/2026

Law Guide Kannada

Online Guide

RTI ಕಾಯ್ದೆ ನಿಯಮಗಳ ಉಲ್ಲಂಘನೆ: ಅಧಿಕಾರಿಗಳಿಗೆ 1.25 ಲಕ್ಷ ರೂ. ದಂಡ

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ ಇಬ್ಬರು ಅಧಿಕಾರಿಗಳಿಗೆ ರಾಜ್ಯ ಮಾಹಿತಿ ಆಯೋಗವು ಒಟ್ಟು 1.25 ಲಕ್ಷ ರೂ. ದಂಡ ವಿಧಿಸಿದೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉಪಕಾರ್ಯದರ್ಶಿ-1 ಉಮೇಶ್ ಅವರಿಗೆ 1 ಲಕ್ಷ ರೂ. ಹಾಗೂ ದಂಡ ವಿಧಿಸಿದೆ. ಬಿಡಿಎ ಕಾರ್ಯದರ್ಶಿ ಸಿ.ಎಲ್. ಶಿವಕುಮಾರ್ ಅವರಿಗೆ 25,000 ರೂ. ದಂಡ ವಿಧಿಸಿದೆ. ಎಲ್ಲ ಸಾರ್ವಜನಿಕ ಪ್ರಾಧಿಕಾರಗಳೂ ಕಾರ್ಯನಿರ್ವಹಣೆ ಮತ್ತು ಇತರ ದಾಖಲೆ ಪತ್ರಗಳನ್ನು ತಮ್ಮ ಜಾಲತಾಣದಲ್ಲಿ ಪ್ರದರ್ಶಿಸಬೇಕು ಎಂದು ಮಾಹಿತಿ ಹಕ್ಕು ಕಾಯ್ದೆ ಹೇಳುತ್ತದೆ.

ಬಿಡಿಎಯ ಉಪಕಾರ್ಯದರ್ಶಿ-1 ಉಮೇಶ್ ಅವರು ಈ ಕಾರ್ಯದ ಹೊಣೆಗಾರರಾಗಿದ್ದು, ಅವರು ಜಾಲತಾಣದಲ್ಲಿ ಮಾಹಿತಿ ಅಪ್ ಡೇಟ್ ಮಾಡಿಸದೇ ಇರುವುದರ ಬಗ್ಗೆ ಆಯೋಗಕ್ಕೆ ನಾಲ್ಕು ದೂರುಗಳು ಸಲ್ಲಿಕೆಯಾಗಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಆಯೋಗವು, ಉಮೇಶ್ ಅವರಿಗೆ ಪ್ರತಿ ಪ್ರಕರಣದಲ್ಲಿ ತಲಾ 25,000 ರೂ.ದಂತೆ ಒಟ್ಟು 1 ಲಕ್ಷ ರೂ. ದಂಡ ವಿಧಿಸಿದೆ.

ಬಿಡಿಎ ಕಾರ್ಯದರ್ಶಿ 25 ಸಾವಿರ ರೂ. ದಂಡ.
ಇನ್ನು ಸಾರ್ವಜನಿಕರೊಬ್ಬರು ಮಾಹಿತಿ ಹಕ್ಕು ಕಾಯ್ದೆ ಅಡಿ ಕೋರಿದ್ದ ಮಾಹಿತಿಯನ್ನು ನೀಡದ ಆರೋಪದ ಮೇಳೆ ಬಿಡಿಎ ಕಾರ್ಯದರ್ಶಿ ಸಿ.ಎಲ್. ಶಿವಕುಮಾರ್ ಅವರಿಗೆ ಆಯೋಗವು 25,000 ರೂ. ದಂಡ ವಿಧಿಸಿದೆ.

ದಂಡ ಪಾವತಿಸಬೇಕು ಮತ್ತು ಮಾಹಿತಿಯನ್ನು ಕೂಡಲೇ ಒದಗಿಸಬೇಕು. ಇಲ್ಲದಿದ್ದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿಯೂ ವಾರ್ನಿಂಗ್ ಕೊಟ್ಟಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.