ನನ್ನ ಬಳಿ 1,700 ಅರ್ಜಿಗಳಿವೆ: ಇದೇ ರೋಸ್ಟರ್ ನಲ್ಲಿ ಎಲ್ಲ ಹಳೆಯ ಪ್ರಕರಣಗಳೂ ಇತ್ಯರ್ಥ- ನ್ಯಾ.ರಾಚಯ್ಯ
ಬೆಂಗಳೂರು: ನನ್ನ ಬಳಿ ಹಿಂದಿನವೂ ಸೇರಿ 1,700 ಅರ್ಜಿಗಳಿವೆ. ಇದೇ ರೋಸ್ಟರ್ ನಲ್ಲಿ ಎಲ್ಲ ಹಳೆಯ ಪ್ರಕರಣಗಳನ್ನೂ ಇತ್ಯರ್ಥಪಡಿಸುತ್ತೇನೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ರಾಚಯ್ಯ ಭರವಸೆ ನೀಡಿದರು.
ಬೆಂಗಳೂರು ಪ್ರಧಾನ ಪೀಠದಲ್ಲಿ 22ನೇ ಕೋರ್ಟ್ ಹಾಲ್ ನಲ್ಲಿ ನ್ಯಾ.ರಾಚಯ್ಯ ಅವರು ಕಾರ್ಯ ನಿರ್ವಹಿಸುತ್ತಿದ್ದು ಬೆಳಗಿನ ಕಲಾಪ ಆರಂಭಿಸುವ ಮುನ್ನ ಮೆಮೊ (ಜ್ಞಾಪನಾ ಪತ್ರ) ಸ್ವೀಕರಿಸುವ ವೇಳೆ ಈ ಕುರಿತು ವಕೀಲ ವೃಂದಕ್ಕೆ ಮೌಖಿಕ ಭರವಸೆ ಕೊಟ್ಟರು.
ವೇಗ ನ್ಯಾಯದಾನದ ಆಶಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರು, ‘ಈ ರೋಸ್ಟರ್ ನಲ್ಲಿ ನನ್ನ ಬಳಿ ಹಿಂದಿನವೂ ಸೇರಿದಂತೆ ಒಟ್ಟು 1,700 ಅರ್ಜಿಗಳಿವೆ. ಇವುಗಳಲ್ಲಿ ಈಗಾಗಲೇ 250 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದೇನೆ. ‘ಮಿಕ್ಕಿರುವ ಹಳೆಯ ಎಲ್ಲ ಪ್ರಕರಣಗಳನ್ನೂ ಇದೇ ರೋಸ್ಟರ್ನಲ್ಲಿ (ಕರ್ತವ್ಯಸೂಚಿ ನಾಮಾವಳಿ) ಇತ್ಯರ್ಥಪಡಿಸುತ್ತೇನೆ’ ಎಂದು ತಿಳಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
