ಮದುವೆಯಾದವರ ಜೊತೆ ‘ಲೀವ್ ಇನ್ ಸಂಬಂಧ’ ತಪ್ಪೇ..? ಅಥವಾ ಅದು ಕಾನೂನು ಬದ್ಧವೇ..?
ಬೆಂಗಳೂರು: ಮದುವೆಯಾದ ಪುರುಷನ ಜೊತೆ ಮತ್ತೊಬ್ಬ ಮಹಿಳೆ ಲಿವ್-ಇನ್ ಸಂಬಂಧದಲ್ಲಿದ್ದರೆ ಅದು ತಪ್ಪೇ? ಅಥವಾ ಅದು ಕಾನೂನುಬದ್ಧವೇ ಎಂಬ ದಶಕಗಳ ಪ್ರಶ್ನೆಗೆ ಹೈಕೋರ್ಟ್ ಸ್ಪಷ್ಟ ಉತ್ತರ ನೀಡಿದ್ದು ಮದುವೆಯಾದವರ ಜೊತೆ ಲೀವ್ ಇನ್ ಸಂಬಂಧ ತಪ್ಪೇನಲ್ಲ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.
ವಿವಾಹಿತ ಪುರುಷ ಮತ್ತು ಮಹಿಳೆಯೊಬ್ಬರು ಒಟ್ಟಿಗೆ ವಾಸಿಸುತ್ತಿದ್ದು, ತಮ್ಮ ಕುಟುಂಬ ಮತ್ತು ಸಮಾಜದಿಂದ ಜೀವಕ್ಕೆ ಬೆದರಿಕೆ ಇದೆ ಎಂದು ರಕ್ಷಣೆ ಕೋರಿ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಮದುವೆಯಾದ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ಇರುವುದನ್ನು ಕಾನೂನು ಯಾವುದೇ ಕಾರಣಕ್ಕೂ ಅಪರಾಧ ಎಂದು ಪರಿಗಣಿಸುವುದಿಲ್ಲ. ಇಬ್ಬರು ವಯಸ್ಕರು ತಮ್ಮ ಸ್ವಯಂ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ನಿರ್ಧರಿಸಿದರೆ, ಅದು ಅವರ ಖಾಸಗಿ ಬದುಕಿನ ಆಯ್ಕೆಯಾಗಿರುತ್ತದೆ. ಇಂತಹ ಸಂಬಂಧಗಳಲ್ಲಿ ತೊಡಗಿಸಿಕೊಳ್ಳುವುದು ಅವರ ವೈಯಕ್ತಿಕ ಹಕ್ಕು ಕಾನೂನಿನ ಚೌಕಟ್ಟಿನಲ್ಲಿ ಇದಕ್ಕೆ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಾಗೆಯೇ ಇಂತಹ ಸಂಬಂಧಗಳು ಸಮಾಜದ ದೃಷ್ಟಿಯಲ್ಲಿ ನೈತಿಕವಾಗಿ ಒಪ್ಪಿಗೆಯನ್ನು ಪಡೆಯದೇ ಇರಬಹುದು ಅಥವಾ ಸಂಪ್ರದಾಯಗಳಿಗೆ ವಿರುದ್ಧವಾಗಿ ಕಾಣಿಸಬಹುದು. ಆದರೆ, ಕಾನೂನಿನ ದೃಷ್ಟಿಯಲ್ಲಿ ವ್ಯಕ್ತಿಯೊಬ್ಬನ ಜೀವನದ ಆಯ್ಕೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವುದು ಸಂವಿಧಾನಬದ್ಧ ಕರ್ತವ್ಯವಾಗಿದೆ. ನೈತಿಕತೆಯ ಆಧಾರದ ಮೇಲೆ ಅದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಜೊತೆಗೆ, ಅರ್ಜಿದಾರ ಜೋಡಿಗೆ ಜೀವ ಬೆದರಿಕೆ ಇದ್ದರೆ ಯಾವುದೇ ರೀತಿಯ ಅಪಾಯವಿದ್ದರೆ ಅವರಿಗೆ ತಕ್ಷಣವೇ ರಕ್ಷಣೆ ನೀಡಬೇಕು ಎಂದು ಸೂಚಿಸಿದ ನ್ಯಾಯಪೀಠವು, ಇದು ಪೊಲೀಸರ ಪ್ರಾಥಮಿಕ ಕರ್ತವ್ಯ. ವ್ಯಕ್ತಿಗಳ ಸುರಕ್ಷತೆಯನ್ನು ಯಾವುದೇ ಸಾಮಾಜಿಕ ಪೂರ್ವಾಗ್ರಹಗಳಿಲ್ಲದೆ ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ನಿರ್ದೇಶನ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
