ಶಾಕಿಂಗ್ ನ್ಯೂಸ್: ದೇಶದಲ್ಲಿ ಶೇ 35ರಿಂದ 40ರಷ್ಟು ವಕೀಲರು ನಕಲಿ…!
ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು ದೇಶದಲ್ಲಿ ಸುಮಾರು ಶೇ 35ರಿಂದ 40ರಷ್ಟು ವಕೀಲರು ನಕಲಿ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಕುಮಾರ್ ಮಿಶ್ರಾ ಹೇಳಿದ್ದಾರೆ.
ದೇಶದಲ್ಲಿ ಸುಮಾರು 35-40 ಪ್ರತಿಶತದಷ್ಟು ವಕೀಲರು ನಕಲಿ ಪದವಿಗಳನ್ನು ಹೊಂದಿದ್ದಾರೆ. ವಕೀಲ ವೃತ್ತಿ ನಡೆಸುತ್ತಿರುವವರ ಪೈಕಿ ಶೇ 35ರಿಂದ 40ರಷ್ಟು ಮಂದಿ ನಕಲಿ ಪ್ರಮಾಣಪತ್ರ ಹೊಂದಿದ್ದಾರೆ. ನಕಲಿ ಪದವಿ ಪ್ರಮಾಣಪತ್ರಗಳ ಆಧಾರದ ಮೇಲೆ ನ್ಯಾಯಾಲಯಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ಬಿಸಿಐ ಅಧ್ಯಕ್ಷ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಸ್ಪೋಟಕ ಮಾಹಿತಿ ಹೊರ ಹಾಕಿದ್ದಾರೆ, ಇದು ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಇದು ದೊಡ್ಡ ಹೊಡೆತವಾಗಿದೆ. ಬಿಸಿಐಗೆ ಈ ವಿಷಯದ ಬಗ್ಗೆ ತಿಳಿದಿದ್ದು ನಕಲಿ ವಕೀಲರ ವಿರುದ್ದ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮನನ್ ಕುಮಾರ್ ಮಿಶ್ರಾ ಸ್ಪಷ್ಟಪಡಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
