ಕ್ರಿಮಿನಲ್ ಪ್ರಕರಣದಿಂದ ಡಿಸ್ ಚಾರ್ಜ್: ಸಹ ಆರೋಪಿಗೂ ಸಿಗುತ್ತೆ ಬಿಡುಗಡೆ ಭಾಗ್ಯ – ಸುಪ್ರೀಂ
ನವದೆಹಲಿ: ಯಾವುದೇ ಒಂದು ಕ್ರಿಮಿನಲ್ ಪ್ರಕರಣದಿಂದ ಆರೋಪಿಯನ್ನು ನ್ಯಾಯಾಲಯವು ದೋಷಾರೋಪಣೆಯಿಂದ ಡಿಸ್ ಚಾರ್ಜ್ ಮಾಡಿದ್ದರೆ ಸಹ ಆರೋಪಿಗೂ ಬಿಡುಗಡೆ ಭಾಗ್ಯ ಸಿಗುತ್ತದೆ. ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯನ್ನು ದೋಷಾರೋಪಣೆಯಿಂದ ಡಿಸ್ ಚಾರ್ಜ್ ಮಾಡಿದ್ದರೆ ಸಹ ಆರೋಪಿಯೂ ಸಹ ಬಿಡುಗಡೆಯಾಗಬಹುದು ಆದರೆ, ಅದು ಷರತ್ತು ಬದ್ಧವಾಗಿರುತ್ತದೆ ಎಂದು ತಿಳಿಸಿದೆ.
ಸಹ ಆರೋಪಿತನು ತನ್ನ ವಿರುದ್ಧದ ಪ್ರಕರಣದಿಂದ ಬಿಡುಗಡೆಗೊಂಡಿದ್ದಲ್ಲಿ, ವಿಚಾರಣೆ ಬಾಕಿ ಇರುವ ಆರೋಪಿಯ ವಿರುದ್ಧದ ಸಾಕ್ಷವು ಗುಣಾತ್ಮಕವಾಗಿ ಹೆಚ್ಚು ಬಲವಾದದ್ದಾಗಿಲ್ಲದಿದ್ದರೆ, ಆರೋಪಿಗೂ ಸಮಾನ ಪರಿಗಣನೆ ಪಡೆಯುವ ಹಕ್ಕಿದೆ ಎಂದು ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
