ಸರ್ಕಾರಿ ಅಭಿಯೋಜಕರ ವಿರುದ್ದವೇ ಈIಖ ದಾಖಲಿಸಿದ ಆರೋಪಿಗಳು: ಕಾರಣ…?
ನವದೆಹಲಿ: ಸರ್ಕಾರಿ ಅಭಿಯೋಜಕರ ವಿರುದ್ಧವೇ ಆರೋಪಿಗಳು ದೂರು ನೀಡಿದ್ದು ಎಫ್ ಐಆರ್ ದಾಖಲಾಗಿದೆ.
ಸರ್ಕಾರಿ ಅಭಿಯೋಜಕ ವಕೀಲ ಶೇಖರ್ ಕಾಕಾಸಾಹೇಬ್ ಜಗತಾಪ್ ತನ್ನ ವಿರುದ್ಧ ಆರೋಪಿಗಳು ದಾಖಲಿಸಿರುವ ಎಫ್ ಐಆರ್ ರದ್ದುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ತ್ವರಿತ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಮುಂಬೈ ಹೈಕೋರ್ಟ್ ಗೆ ಸೂಚಿಸಿದೆ.
ವಕೀಲ ಶೇಖರ್ ಕಾಕಾಸಾಹೇಬ್ ಜಗತಾಪ್ ಅವರ ಪರ ಹಾಜರಾಗಿ ವಾದಿಸಿದ ಹಿರಿಯ ವಕೀಲ ಗೌರವ್ ಅಗರ್ವಾಲ್ ಅವರು ಸಿಜೆಐ ಬಿಆರ್.ಗವಾಯಿ ಮತ್ತು ನ್ಯಾಯಮೂತಿ ಕೆ.ವಿನೋದ್ ಚಂದ್ರನ್ ಅವರಿರುವ ಪೀಠದ ಮುಂದೆ ವಿವರ ನೀಡಿದರು.
ಅರ್ಜಿದಾರ ಅಭಿಯೋಜಕರಾದ ಜಗತಾಪ್ ಅವರು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಹಾಗೂ ಉದ್ಯಮಿ ಸಂಜಯ್ ಪುನಮಿಯಾ ವಿರುದ್ಧ ಸುಂದರ್ ಅಗರ್ವಾಲ್ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ ಅಭಿಯೋಜಕರಾಗಿದ್ದಾರೆ ಎಂದು ತಿಳಿಸಿದರು.
ಇದರ ರದ್ದತಿಗೆ ಜಗತಾಪ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದಾರೆ. ಮತ್ತೊಬ್ಬರು ನ್ಯಾಯಮೂರ್ತಿಗಳಿಗೆ ಪ್ರಕರಣ ನಿಯೋಜಿಸಲಾಗಿದ್ದು, ಒಂದು ವರ್ಷದಿಂದ ಪ್ರಕರಣ ಬಾಕಿ ಇದೆ ಎಂದು ಪೀಠದ ಗಮನಕ್ಕೆ ತಂದರು. ಮುಂಬೈ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿರುವ ಪೀಠದಿಂದ ಪ್ರಕರಣವನ್ನು ವಾಪಾಸ್ ಮಾಡಿ ತ್ವರಿತವಾಗಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ನ್ಯಾಯಪೀಠ ಸೂಚಿಸಿತು.
ಪರಮ್ ಬೀರ್ ಸಿಂಗ್ ವಿರುದ್ಧದ ಪ್ರಕರಣದ ವಿಚಾರಣೆಗೆ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕ ಮಾಡಿರುವ ದಾಖಲೆಗಳು ನಕಲಿ ಎಂದು ಜಗತಾಪ್ ವಿರುದ್ಧದ ಎಫ್ಐಆರ್ ನಲ್ಲಿ ಆರೋಪಿಗಳು ವಾದಿಸಿದ್ದಾರೆ.
ತಮ್ಮ ವಿರುದ್ಧ ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘದಲ್ಲಿಯೂ ಹಲವು ದೂರುಗಳನ್ನು ಪುನಾಮಿಯಾ ದಾಖಲಿಸಿದ್ದು, ಇವು ತಿರಸ್ಕೃತವಾಗಿದೆ. ಎಂದು ಜಗತಾಪ್ ವಿವರಿಸಿದ್ದಾರೆ. ಪ್ರಾಥಮಿಕ ತನಿಖೆ ನಡೆಸದೇ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಕಳೆದ 23 ವರ್ಷಗಳಿಂದ ಪ್ರಾಕ್ಟೀಸ್ ಮಾಡುತ್ತಿರುವ ತಮ್ಮನ್ನು ಮಹಾರಾಷ್ಟ್ರ ಸರ್ಕಾರ ಸರ್ಕಾರಿ ಅಭಿಯೋಜಕರ ಪಟ್ಟಿಗೆ ಸೇರಿಸಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
