ಹಿರಿಯ ಅಡ್ವೋಕೇಟ್ ಆಗಿ 11 ಮಹಿಳೆಯರ ನೇಮಕ

ನವದೆಹಲಿ: ಸುಪ್ರೀಂಕೋರ್ಟ್ ಶುಕ್ರವಾರ ಒಂದೇ ದಿನದಲ್ಲಿ 11 ಮಹಿಳಾ ವಕೀಲರನ್ನು ಹಿರಿಯ ಅಡ್ವೋಕೇಟ್ ಆಗಿ ನೇಮಿಸಿದೆ.
ಒಟ್ಟು 56 ವಕೀಲರಿಗೆ ಹಿರಿಯ ವಕೀಲರ ಸ್ಥಾನ ನೀಡಲಾಯಿತು. ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಒಂದೇ ದಿನ 11 ಮಹಿಳಾ ವಕೀಲರಿಗೆ ಹಿರಿಯ ಅಡ್ವೋಕೇಟ್ ಸ್ಥಾನ ನೀಡಿರುವುದು ಇದೇ ಮೊದಲು.
ಸ್ವರುಪಮಾ ಚತುರ್ವೇದಿ, ಲಿಜ್ ಮ್ಯಾಥ್ಯೂ, ಶೋಭಾ ಗುಪ್ತ, ಉತ್ತರಾ ಬಬ್ಬರ್, ಹರಿಪ್ರಿಯಾ ಪದ್ಮನಾಭನ್, ಕರುಣಾನಂದಿ, ಶಿರಿನ್ ಖಜುರಿಯಾ, ಅರ್ಚನಾ ತಪಾಠಕ್ ದವೆ, ಎಚ್.ಜನನಿ, ಎನ್.ಎಸ್. ನಪ್ಪಿನೈ, ನಿಶಾ ಬಾಗ್ಜಿ ಅವರು ಹಿರಿಯ ವಕೀಲರ ಸ್ಥಾನ ಪಡೆದ ಮಹಿಳೆಯರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ