ಖಾಸಗಿ ವಾಹನಗಳಲ್ಲಿ, LED ಹೆಡ್ ಲೈಟ್, ಕೆಂಪು- ನೀಲಿ ಬೀಕನ್ ಗಳನ್ನು ನಿಷೇಧಿಸಿ – ಸುಪ್ರೀಂ ಸೂಚನೆ
ನವದೆಹಲಿ: ಖಾಸಗಿ ವಾಹನಗಳಲ್ಲಿ ಎಲ್ ಇಡಿ ಹೆಡ್ ಲೈಟ್, ಕೆಂಪು -ನೀಲಿ ಬಣ್ಣದ ಬೀಕನ್ ಗಳನ್ನು ನಿಷೇಧೀಸುವಂತೆ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಖಾಸಗಿ ವಾಹನಗಳು ಎಲ್ ಇಡಿ ಹೆಡ್ ಲೈಟ್, ತುರ್ತು ವಾಹನಗಳಿಗೆಂದು ಇರುವ ಕೆಂಪು- ನೀಲಿ ಬೀಕನ್ ಗಳನ್ನು ಬಳಕೆ ಮಾಡುವುದರಿಂದ ಅಪಘಾತಗಳು ಸಂಭವಿಸಬಹುದು. ಹೀಗಾಗಿ ನಿಷೇಧಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಮೂಳೆ ಶಸ್ತ್ರಚಿಕಿತ್ಸಕ ಡಾ. ಎಸ್. ರಾಜಶೇಖರನ್ ಅವರು 2012 ರಲ್ಲಿ ಸಲ್ಲಿಸಿದ ರಿಟ್ ಅರ್ಜಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ಹೆಲ್ಮೆಟ್ ಬಳಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ತಪ್ಪು ಹಾದಿಯಲ್ಲಿ ವಾಹನ ಚಲಾಯಿಸುವುದನ್ನು ನಿಷೇಧಿಸುವುದು, ಅಸುರಕ್ಷಿತ ಓವರ್ಟೇಕಿಂಗ್, ಪ್ರಕಾಶಮಾನವಾದ ಎಲ್ಇಡಿ ದೀಪಗಳ ಬಳಕೆ ಮತ್ತು ಕೆಂಪು-ನೀಲಿ ಸ್ಟ್ರೋಬ್ ದೀಪಗಳು ಮತ್ತು ಹಾರ್ನ್ ಗಳ ಅನಧಿಕೃತ ಮಾರಾಟ ನಿಷೇಧಿಸುವಂತೆ ನಿರ್ದೇಶನ ನೀಡಿತು.
ಕಾನೂನು ಬಾಹಿರ ಎಲ್ ಇಡಿ ಲೈಟ್ ಗಳು ರಸ್ತೆ ಅಪಘಾತಗಳನ್ನು ಹೆಚ್ಚಿಸುತ್ತಿವೆ. ತುರ್ತು ವಾಹನಗಳಿಗೆಂದು ಇರುವ ಕೆಂಪು- ನೀಲಿ ಬೀಕನ್ ಗಳನ್ನು ಖಾಸಗಿ ವಾಹನಗಳಲ್ಲಿ ಬಳಸಲಾಗುತ್ತಿದೆ. ಇದು ಜನರಿಗೆ ತಪ್ಪು ಸಂದೇಶ ನೀಡುತ್ತಿದೆ. ಹೀಗಾಗಿ ಖಾಸಗಿ ವಾಹನಗಳಲ್ಲಿ ಎಲ್ಇಡಿ ಹೆಡ್ ಲೈಟ್, ಕೆಂಪು -ನೀಲಿ ಬಣ್ಣದ ಬೀಕನ್ ಗಳ ಬಳಕೆ ನಿಷೇಧಿಸಿ ಎಂದು ಸುಪ್ರೀಂಕೋರ್ಟ್ ರಾಜ್ಯಗಳಿಗೆ ಸೂಚನೆ ನೀಡಿದೆ.
ತುರ್ತು ವಾಹನಗಳ ಎಚ್ಚರಿಕೆ ಶಬ್ದವನ್ನು ಸಹ ಖಾಸಗಿ ವಾಹನದವರು ಬಳಕೆ ಮಾಡುತ್ತಿದ್ದಾರೆ. ಇದರಿಂದ ಸಂಚಾರ ವೇಳೆ ಅಪಘಾತ, ಪಾದಚಾರಿಗಳಿಗೆ ಗಾಬರಿಯಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಕಿಡಿಕಾರಿದ್ದು, ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
