19/05/2025

Law Guide Kannada

Online Guide

ಮಾವನ `ಆಸ್ತಿ’ಯಲ್ಲಿ ಅಳಿಯ ಕೂಡ ಪಾಲು ಕೇಳಬಹುದೇ…? ಈ ಬಗ್ಗೆ ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್

ನವದೆಹಲಿ : ಮಾವನ `ಆಸ್ತಿ’ಯಲ್ಲಿ ಅಳಿಯ ಕೂಡ ಪಾಲು ಕೇಳಬಹುದೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಮಾವ ಸಂಪಾದಿಸಿದ ಆಸ್ತಿಯನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಕೂಡ ಮಾವನ ಆಸ್ತಿಗೆ ಹಕ್ಕುದಾರನಾಗಬಹುದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಳಿಯ ತನ್ನ ಮಾವನ ಆಸ್ತಿಯನ್ನು ಪಡೆದುಕೊಳ್ಳಬಹುದು.
ಆದರೆ, ಇದರ ಹಿಂದೆ ವಿಶೇಷ ಕಾರಣವಿರಬೇಕು. ಮಾವ ತಾನು ಸಂಪಾದಿಸಿದ ಆಸ್ತಿಯಲ್ಲಿ ಒಂದಿಷ್ಟು ಅಥವಾ ಎಲ್ಲವನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಆಸ್ತಿಗೆ ಹಕ್ಕು ಸಾಧಿಸಬಹುದು ಎಂದು ನ್ಯಾಯಾಧೀಶ ಅನಿಲ್ ಕುಮಾರ್ ತಿಳಿಸಿದ್ದಾರೆ.

ಅಳಿಯನು ಮಾವನ ಆಸ್ತಿಯ ಮೇಲೆ ಹಕ್ಕು ಕೇಳುತ್ತಿರುವಾಗ, ಮಾವ ಯಾವುದೇ ಒತ್ತಡ ಅಥವಾ ಬಲದಿಂದ ಆಸ್ತಿಯನ್ನು ಅಳಿಯನಿಗೆ ವರ್ಗಾಯಿಸಿಲ್ಲ ಎಂಬುದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. . ಇದಕ್ಕೆ ಸಾಕ್ಷಿ ಸಿಕ್ಕರೆ ಅಳಿಯನಿಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಂತಹ ಪರಿಸ್ಥಿತಿಯಲ್ಲಿ, ಮಾವ ತನ್ನ ಆಸ್ತಿಯನ್ನು ಮರಳಿ ಪಡೆಯಲು ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಲು ಅವಕಾಶವಿದರ.

ವಾಸ್ತವವಾಗಿ, ಪ್ರಕರಣವೊಂದರಲ್ಲಿ, ಮಾವ ಆಸ್ತಿಯಲ್ಲಿ ಅಳಿಯನಿಗೆ ಯಾವುದೇ ಹಕ್ಕಿಲ್ಲ ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಳಿಯನು ಭೂಮಿ ಅಥವಾ ಕಟ್ಟಡ ಅಥವಾ ಅವನ ಚರ ಆಸ್ತಿಯ ಮೇಲೆ ಯಾವುದೇ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ. ನ್ಯಾಯಾಧೀಶ ಅನಿಲ್ ಕುಮಾರ್ ಅವರು ತೀರ್ಪನಿತ್ತಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.