ಅಕ್ಷೇಪಾರ್ಹ ಕಮೆಂಟ್ ಮಾಡಿದ್ದ ಖಜಾನೆ ಅಧಿಕಾರಿ ವಿರುದ್ದ ಬಿತ್ತು ಕೇಸ್
ಮಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ವಿಚಾರವಾದಿ ಡಾ. ನರೇಂದ್ರ ನಾಯಕ್ ಅವರ ಬಗ್ಗೆ ಅಕ್ಷೇಪಾರ್ಹ ಕಮೆಂಟ್ ಹಾಕಿದ್ದ ಸರ್ಕಾರಿ ಅಧಿಕಾರಿಯೊಬ್ಬರಿಗೆ ಇದೀಗ ಸಂಕಷ್ಟ ಎದುರಾಗಿದೆ.
ಹೌದು, ಫೇಸ್ ಬುಕ್ ನಲ್ಲಿ ಅಕ್ಷೇಪಾರ್ಹ ಕಮೆಂಟ್ ಹಾಕಿದ್ದ ಖಜಾನೆ ಅಧಿಕಾರಿ ಕೆ.ಎಸ್. ನಟರಾಜ್ ವಿರುದ್ಧ ದೂರು ದಾಖಲಾಗಿದ್ದು, ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ವಿಚಾರವಾದಿ ಡಾ. ನರೇಂದ್ರ ನಾಯಕ್ ಅವರು ದೂರು ದಾಖಲಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಡಾ. ನರೇಂದ್ರ ನಾಯಕ್ ಅವರ ಕುರಿತು ಆಕ್ಷೇಪಾರ್ಹ ಹಾಗೂ ನಿಂದನಾತ್ಮಕ ವಿಚಾರ ಮತ್ತು ಅಭಿವ್ಯಕ್ತಿಯುಳ್ಳ ವೀಡಿಯೋವನ್ನು ಪ್ರೊ. ಪವಿತ್ರಾ ಕಾಂಚನ್ ಎಂಬ ನಕಲಿ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವೀಡಿಯೋ ಲಿಂಕ್ ಅನ್ನು ಲಕ್ಷಾಂತರ ಜನರ ವೀಕ್ಷಣೆ ಮಾಡಿದ್ದು, ಈ ವೀಡಿಯೋ ಪೋಸ್ಟ್ ಗೆ ಹಲವು ನೆಟ್ಟಿಗರು ಕಮೆಂಟ್ ಹಾಕಿದ್ದರು. ಈ ಪೈಕಿ ಖಜಾನೆ ಅಧಿಕಾರಿ ಕೆ.ಎಸ್. ನಟರಾಜ್ ಅವರ ಕಾಮೆಂಟ್ ಕೂಡ ಒಂದಾಗಿದೆ.
ಪ್ರೊ. ನರೇಂದ್ರ ನಾಯಕ್ ಅವರು ಈ ವೀಡಿಯೋ, ದಾಖಲೆಗಳನ್ನು ಲಿಂಕ್ ಸಹಿತ ಪೊಲೀಸರಿಗೆ ನೀಡಿದ್ದು, ಕ್ರಮ ಕೈಗೊಳ್ಳುವಂತೆ ಪೊಲಿಸರ ಬಳಿ ಮನವಿ ಮಾಡಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
