High Court Archives - Law Guide Kannada https://www.lawguidekannada.com/category/high-court/ Online Guide Sun, 07 Jun 2026 00:49:26 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg High Court Archives - Law Guide Kannada https://www.lawguidekannada.com/category/high-court/ 32 32 ಬಡ ಭೂಮಾಲೀಕರ ಭೂಮಿ ಸ್ವಾಧೀನವು ಕಾನೂನಿನ ಮೇಲೆ ನಡೆಸಿದ ವಂಚನೆ – ಹೈಕೋರ್ಟ್ ಛೀಮಾರಿ https://www.lawguidekannada.com/land-acquisition-of-poor-landowners-is-a-fraud-on-the-law-high-court-reprimands/ Sun, 07 Jun 2026 00:49:26 +0000 https://www.lawguidekannada.com/?p=4025 ಬೆಂಗಳೂರು: ಬಡ ಭೂಮಾಲೀಕರ ಹಿತಾಸಕ್ತಿಗೆ ಧಕ್ಕೆ ತಂದು ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಹೈಕೋರ್ಟ್, ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ...

The post ಬಡ ಭೂಮಾಲೀಕರ ಭೂಮಿ ಸ್ವಾಧೀನವು ಕಾನೂನಿನ ಮೇಲೆ ನಡೆಸಿದ ವಂಚನೆ – ಹೈಕೋರ್ಟ್ ಛೀಮಾರಿ appeared first on Law Guide Kannada.

]]>
ಬೆಂಗಳೂರು: ಬಡ ಭೂಮಾಲೀಕರ ಹಿತಾಸಕ್ತಿಗೆ ಧಕ್ಕೆ ತಂದು ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಹೈಕೋರ್ಟ್, ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC)ದ ಪಾರ್ಕಿಂಗ್ ವಲಯಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

ಲಾಭ ಗಳಿಸುವ ಖಾಸಗಿ ಸಂಸ್ಥೆಯ ವಿಸ್ತರಣೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾಗಿದೆ. ಅಲ್ಪ ಪರಿಹಾರ ನೀಡಿ ಜನರ ಭೂಮಿಯನ್ನು ಕಸಿದುಕೊಳ್ಳಲು ಅಧಿಕಾರಿಗಳು ಕಾನೂನಿನ ಮೇಲೆ ನಡೆಸಿದ ವಂಚನೆಯಾಗಿದೆ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ. ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಟಿ ಎಂ ನಡಾಫ್ ಅವರಿದ್ದ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.

ಈ ಭೂಮಿಯನ್ನು M/s Indian Machine Tools Manufacturers’ Association (IMTMA) ಸ್ಥಾಪಿಸಿರುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದ ಪಾರ್ಕಿಂಗ್ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಐಎಂಟಿಎಂಎಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂಪೂರ್ಣ ಪ್ರಕ್ರಿಯೆಯು ಸಂವಿಧಾನಾತ್ಮಕ ವ್ಯವಸ್ಥೆಗೆ ವಿರುದ್ಧವಾಗಿದೆ. ಬಡ ಭೂಮಾಲೀಕರ ಹಿತಾಸಕ್ತಿಗೆ ಧಕ್ಕೆ ತಂದು ಸರ್ಕಾರ ತನ್ನ ಆಯ್ಕೆಯ ಖಾಸಗಿ ಸಂಸ್ಥೆಗೆ ಭೂಮಿಯನ್ನು ಒದಗಿಸಲು ಸಾಧ್ಯವಿಲ್ಲ. ಸರ್ಕಾರದ ‘ಎಮಿನೆಂಟ್ ಡೊಮೇನ್’ ಅಧಿಕಾರದ ಬಳಕೆ ಕಾನೂನುಬದ್ಧ ವಂಚನೆಯಾಗಬಾರದು ಅಥವಾ ಖಾಸಗಿ ಕೈಗಳಿಗೆ ಭೂಮಿ ವರ್ಗಾಯಿಸುವ ಸಾಧನವಾಗಬಾರದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

2013ರಲ್ಲಿ ಭೂಮಾಲೀಕರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಅಂಗೀಕರಿಸಿದ ನ್ಯಾಯಪೀಠವು, KIADB ಮತ್ತು IMTMA ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದೆ. ಜೊತೆಗೆ, ಏಕಸದಸ್ಯ ನ್ಯಾಯಮೂರ್ತಿಗಳ ಆದೇಶವನ್ನು ರದ್ದುಪಡಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನೇ ಅಮಾನ್ಯಗೊಳಿಸಿದೆ.

ಅಂತಿಮ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 14 ವರ್ಷಗಳಾದರೂ ಪರಿಹಾರದ ಮೊತ್ತ ನಿಗದಿಪಡಿಸುವ ಪ್ರಶಸ್ತಿ (Award) ಘೋಷಿಸಿಲ್ಲ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆಯು ಕಾಲಹರಣಗೊಂಡಿದೆ ಎಂದು ನಾವು ಅಭಿಪ್ರಾಯಪಡುತ್ತೇವೆ. ಹಣಕಾಸು ದಾಖಲೆಗಳಿಂದ ಸ್ಪಷ್ಟವಾಗುವಂತೆ ಲಾಭದಾಯಕ ಖಾಸಗಿ ಸಂಸ್ಥೆಗಾಗಿ ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿರಲಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB ) ಕಾಯ್ದೆಯ ಉದ್ದೇಶವು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಭೂಮಿ ಸ್ವಾಧೀನಪಡಿಸಿಕೊಳ್ಳುವುದೇ ಹೊರತು, ನಿರ್ದಿಷ್ಟ ಖಾಸಗಿ ಸಂಸ್ಥೆಗಾಗಿ ಭೂಮಿ ಸಂಗ್ರಹಿಸುವುದಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿದ ನಂತರ, ಅಲ್ಲಿ ಕೈಗಾರಿಕೆ ಸ್ಥಾಪಿಸಲು ಅರ್ಜಿದಾರರಿಗೆ ಭೂಮಿ ಹಂಚಿಕೆ ಮಾಡಬಹುದು ಎಂದು ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಬಡ ಭೂಮಾಲೀಕರ ಭೂಮಿ ಸ್ವಾಧೀನವು ಕಾನೂನಿನ ಮೇಲೆ ನಡೆಸಿದ ವಂಚನೆ – ಹೈಕೋರ್ಟ್ ಛೀಮಾರಿ appeared first on Law Guide Kannada.

]]>
ಪತಿ ವಿರುದ್ದ ನಿರಂತರ ಸುಳ್ಳು ದೂರು ಮಾನಸಿಕ ಕ್ರೌರ್ಯಕ್ಕೆ ಸಮ: ವಿಚ್ಚೇದನ ಆದೇಶ ಸರಿಯಿದೆ – ಹೈಕೋರ್ಟ್ https://www.lawguidekannada.com/continuous-false-complaints-against-husband-amount-to-mental-cruelty-divorce-order-is-valid-high-court/ Sat, 06 Jun 2026 11:09:31 +0000 https://www.lawguidekannada.com/?p=4019 ಬೆಂಗಳೂರು: ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತ್ನಿ...

The post ಪತಿ ವಿರುದ್ದ ನಿರಂತರ ಸುಳ್ಳು ದೂರು ಮಾನಸಿಕ ಕ್ರೌರ್ಯಕ್ಕೆ ಸಮ: ವಿಚ್ಚೇದನ ಆದೇಶ ಸರಿಯಿದೆ – ಹೈಕೋರ್ಟ್ appeared first on Law Guide Kannada.

]]>
ಬೆಂಗಳೂರು: ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ, ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಅರ್ಜಿಯನ್ನ ವಜಾಗೊಳಿಸಿದೆ. ಪತಿಯ ವೃತ್ತಿ ಜೀವನ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಸುಳ್ಳು ಆರೋಪಗಳನ್ನು ಹೊರಿಸಿ ಆತನ ಮೇಲಾಧಿಕಾರಿಗಳಿಗೆ ಪತ್ರ ಬರೆಯುವ ಮತ್ತು ದೂರು ನೀಡುವ ಪತ್ನಿಯ ಕೃತ್ಯವು ಮಾನಸಿಕ ಕ್ರೌರ್ಯಕ್ಕೆ ಸಮಾನ. ಪತ್ನಿಯ ನಿರಂತರ ಸುಳ್ಳು ದೂರುಗಳು ಮತ್ತು ವರ್ತನೆಯಿಂದ ಪತಿಯು ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಈ ಹಿನ್ನಲೆಯಲ್ಲಿ ವಿಚ್ಛೇದನ ನೀಡಿರುವ ಆದೇಶವು ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿದೆ.

ವಿಚಾರಣೆಯ ವೇಳೆ ದಂಪತಿಯು 2013ರಿಂದಲೇ ಯಾವುದೇ ಸಂಪರ್ಕ ಮತ್ತು ಸಹಜೀವನವಿಲ್ಲದೆ ದೂರು ಉಳಿದಿರುವುದು ನ್ಯಾಯಲಯದ ಗಮನಕ್ಕೆ ಬಂದಿದೆ. ಪತ್ನಿಯು ತನ್ನ ಕ್ರಾಸ್ ಎಕ್ಸಾಮಿನೇಷನ್ ನಲ್ಲಿ ತನಗೆ ಪತಿಯೊಂದಿಗೆ ಮರಳಿ ಸಂಸಾರ ನಡೆಸುವ ಇಚ್ಛೆ ಇದೆ ಎಂದು ಎಲ್ಲೂ ಹೇಳಿಲ್ಲ. ಬದಲಿಗೆ ಪತಿಯು ಹೊಸದಾಗಿ ನಿರ್ಮಿಸಿರುವ ಮನೆಯ ಒಂದು ಭಾಗದಲ್ಲಿ ವಸತಿ ಮತ್ತು ಜೀವನಾಂಶದ ಹಣದ ಹೆಚ್ಚಳವನ್ನು ಮಾತ್ರ ಕೋರಿದ್ದಾರೆ. ಇದರಿಂದಾಗಿ ಇಬ್ಬರ ನಡುವಿನ ವೈವಾಹಿಕ ಸಂಬಂಧವು ಸಂಪೂರ್ಣವಾಗಿ ಕೊನೆಗೊಂಡಿದೆ ಎಂದು ತಿಳಿಯುತ್ತದೆ ಎಂದು ನ್ಯಾಯಪೀಠ ಹೇಳಿತು.

ಪ್ರಕರಣದ ವಿವರ..
ದಂಪತಿಗಳು 2008ರಲ್ಲಿ ಕೊಡಗಿನಲ್ಲಿ ವಿವಾಹವಾಗಿದ್ದು, ಒಬ್ಬ ಗಂಡು ಮಗನಿಂದ್ದಾನೆ. ತಾನು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣ, ಪತ್ನಿಯು ಪದೇ ಪದೇ ಯಾವುದೇ ಕಾರಣ ನೀಡದೆ ಮನೆ ಬಿಟ್ಟು ಆಕೆಯ ತವರಿಗೆ ಹೋಗುತ್ತಿದ್ದಳು. ನಂತರದ ದಿನಗಳಲ್ಲಿ ಮಹಿಳಾ ಸಾಂತ್ವನ ಕೇಂದ್ರ ಮತ್ತು ತನ್ನ ಸೇನಾ ಮೇಲಾಧಿಕಾರಿಗಳಿಗೆ ನಿರಂತವಾಗಿ ಸುಳ್ಳು ಆರೋಪಗಳನ್ನು ಹೊರಿಸಿ ದೂರು ನೀಡಿದ್ದಾಳೆ. ಈ ಆರೋಪಗಳು ತನ್ನ ಸೇನಾ ವೃತ್ತಿ ಮತ್ತು ಗೌರವಕ್ಕೆ ತೀವ್ರ ಚ್ಯುತಿ ತಂದಿವೆ ಎಂದು ಕೋರಿ ಪತಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಕೌಟುಂಬಿಕ ನ್ಯಾಯಾಲಯ ವಿಚ್ಚೇದನ ಮಂಜೂರು ಮಾಡಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಪತಿ ವಿರುದ್ದ ನಿರಂತರ ಸುಳ್ಳು ದೂರು ಮಾನಸಿಕ ಕ್ರೌರ್ಯಕ್ಕೆ ಸಮ: ವಿಚ್ಚೇದನ ಆದೇಶ ಸರಿಯಿದೆ – ಹೈಕೋರ್ಟ್ appeared first on Law Guide Kannada.

]]>
ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಪತ್ನಿ: ಪತಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ್ದಕ್ಕೆ ಹೈಕೋರ್ಟ್ ತೀವ್ರ ಟೀಕೆ https://www.lawguidekannada.com/wife-survives-suicide-attempt-high-court-strongly-criticizes-husband-for-filing-charge-sheet/ Tue, 02 Jun 2026 12:16:39 +0000 https://www.lawguidekannada.com/?p=3992 ಬೆಂಗಳೂರು: ಪತಿಯ ಕಿರುಕುಳದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ ಬದುಕುಳಿದಿದ್ದರೂ ಪತಿಯ ಮೇಲೆ ಚಾರ್ಜ್ಶೀಟ್ ಹಾಕಿದ ತನಿಖಾಧಿಕಾರಿ ಇನ್ಸ್ ಪೆಕ್ಟರ್ ವಿರುದ್ದ...

The post ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಪತ್ನಿ: ಪತಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ್ದಕ್ಕೆ ಹೈಕೋರ್ಟ್ ತೀವ್ರ ಟೀಕೆ appeared first on Law Guide Kannada.

]]>
ಬೆಂಗಳೂರು: ಪತಿಯ ಕಿರುಕುಳದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ ಬದುಕುಳಿದಿದ್ದರೂ ಪತಿಯ ಮೇಲೆ ಚಾರ್ಜ್ಶೀಟ್ ಹಾಕಿದ ತನಿಖಾಧಿಕಾರಿ ಇನ್ಸ್ ಪೆಕ್ಟರ್ ವಿರುದ್ದ ಕರ್ನಾಟಕ ಹೈಕೋರ್ಟ್ ಗರಂ ಆಗಿದ್ದು ಇಲಾಖಾ ವಿಚಾರಣೆ ನಡೆಸುವಂತೆ ಆದೇಶಿಸಿದೆ.

ಪ್ರಕರಣದ ಸಂಬಂಧ ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಆರ್.ಎಸ್.ಪಾಳ್ಯದ ನಿವಾಸಿ ನಿಕ್ಸನ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ತೀರ್ಪು ನೀಡಿದೆ.

ಪತ್ನಿ ಆತ್ಮಹತ್ಯೆಗೆ ಪ್ರಯತ್ನಿಸಿ ಪ್ರಾಣಾಪಾಯದಿಂದ ಪಾರಾಗಿದ್ದರೂ ಪತಿ ಮೇಲೆ ಬಿಎನ್ಎಸ್ ಸೆಕ್ಷನ್ 108 ಅಡಿಯಲ್ಲಿ ಕೇಸ್ ದಾಖ ಲಿಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ಬಾಣಸವಾಡಿ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಏನಿದು ಕೇಸ್:.
2025ರ ಅ.20ರಂದು ಅರ್ಜಿದಾರ ಹಾಗೂ ಆತನ ಪತ್ನಿ ನಡುವೆ ವೈಮನಸ್ಸು ಉಂಟಾಗಿ ಜಗಳವಾಗಿ ಪತ್ನಿ ಮನೆಯ 2ನೇಯ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಪರಿಣಾಮ ಬೆನ್ನುಮೂಳೆ ಮತ್ತು ಕೈ ಮುರಿದಿತ್ತು. ನಂತರ ಸಂಪೂರ್ಣ ಚೇತರಿಸಿಕೊಂಡಿದ್ದರು.

ಆತ್ಮಹತ್ಯೆಗೆ ಪ್ರಯತ್ನಿಸಿದ ಅರ್ಜಿದಾರರ ಪತ್ನಿ ಬದುಕಿರುವಾಗ ತನಿಖಾಧಿಕಾರಿಗಳು ಬಿಎನ್ಎಸ್ ಸೆಕ್ಷನ್ 108ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧ ಮೇಲೆ ಅರ್ಜಿದಾರನ ಮೇಲೆ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಮೂರ್ಖತನ. ಅಜಾಗರೂಕತೆಯಿಂದ ಅಥವಾ ಕಾನೂನು ಕ್ರಮ ಕೈಗೊಳ್ಳುವ ಆತುರದಲ್ಲಿ ದೋಷಾರೋಪ ಪಟ್ಟಿಯನ್ನು ತಪ್ಪಾಗಿ ಸಲ್ಲಿಸಲಾಗಿದೆ. ಇದರಿಂದ ಈವರೆಗೂ ಅರ್ಜಿದಾರರನ್ನು ಬಂಧಿಸಿ ಇಡಲಾಗಿದೆ. ಇದು ತನಿಖೆಯ ಅವಿವೇಕ ಮತ್ತು ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಅಸಡ್ಡೆ ಹೊಂದಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಹೈಕೋರ್ಟ್ ನ್ಯಾಯಪೀಠ ಕಿಡಿಕಾರಿದೆ.

ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಯ (ಇನ್ ಸ್ಪೆಕ್ಟರ್ ) ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ತೋರುವ ಈ ಪ್ರಕರಣ ನ್ಯಾಯಾಂಗದ ಮನಃಸ್ಸಾಕ್ಷಿಗೆ ಆಘಾತ ಉಂಟು ಮಾಡಿದೆ. ಹಾಗಾಗಿ ಅರ್ಜಿದಾರ ರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು. ಇನ್ಸ್ ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಅದರ ಆಧಾರದಲ್ಲಿ ಕೈಗೊಂಡ ಕ್ರಮದ ಬಗ್ಗೆ 3 ತಿಂಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.

ಇನ್ನು ಪತಿ ಹಾಗೂ ಪತ್ನಿ ಇನ್ನು ಜತೆಯಾಗಿ ಜೀವನ ಮಾಡಲಾಗುವುದು ಹಾಗೂ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವುದಾಗಿ ತಿಳಿಸಿದ್ದು ಅರ್ಜಿದಾರನ ವಿರುದ್ದದ ಪ್ರಕರಣ ವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ಪತ್ನಿ: ಪತಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ್ದಕ್ಕೆ ಹೈಕೋರ್ಟ್ ತೀವ್ರ ಟೀಕೆ appeared first on Law Guide Kannada.

]]>
ಮಾಲೀಕರ ಸಾಲಕ್ಕೆ ಬಾಡಿಗೆದಾರ ಹೊಣೆಗಾರನಲ್ಲ: ಹೈಕೋರ್ಟ್ https://www.lawguidekannada.com/tenant-not-liable-for-owners-loan-high-court/ Tue, 02 Jun 2026 12:13:03 +0000 https://www.lawguidekannada.com/?p=3990 ಬೆಂಗಳೂರು: ಮಾಲೀಕರು ಬ್ಯಾಂಕುಗಳಿಂದ ಸಾಲ ಪಡೆದ ಆಸ್ತಿ-ಕಟ್ಟಡಗಳಲ್ಲಿ ವಾಸಿಸುವ ಬಾಡಿಗೆದಾರರು ಆ ಸಾಲಕ್ಕೆ ಹೊಣೆಗಾರರಲ್ಲ. ಅವರನ್ನು ಯಾವುದೇ ಕಾರಣಕ್ಕೂ ಸಾಲಗಾರ...

The post ಮಾಲೀಕರ ಸಾಲಕ್ಕೆ ಬಾಡಿಗೆದಾರ ಹೊಣೆಗಾರನಲ್ಲ: ಹೈಕೋರ್ಟ್ appeared first on Law Guide Kannada.

]]>
ಬೆಂಗಳೂರು: ಮಾಲೀಕರು ಬ್ಯಾಂಕುಗಳಿಂದ ಸಾಲ ಪಡೆದ ಆಸ್ತಿ-ಕಟ್ಟಡಗಳಲ್ಲಿ ವಾಸಿಸುವ ಬಾಡಿಗೆದಾರರು ಆ ಸಾಲಕ್ಕೆ ಹೊಣೆಗಾರರಲ್ಲ. ಅವರನ್ನು ಯಾವುದೇ ಕಾರಣಕ್ಕೂ ಸಾಲಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಇಟ್ಟಿಯಂ ಸಿಸ್ಟಮ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ.ಸೂರಜ್ ಗೋವಿಂದರಾಜ್ ಅವರ ನೇತೃತ್ವದ ವಿಭಾಗೀಯಪೀಠ, ಬ್ಯಾಂಕುಗಳಿಂದ ಸಾಲ ಪಡೆದ ಆಸ್ತಿ-ಕಟ್ಟಡಗಳ ಮಾಲೀಕರು ಸುಸ್ತಿದಾರರಾದಾಗ, ಆ ಆಸ್ತಿಯಲ್ಲಿ ವಾಸವಿರುವ ಅಥವಾ ಕಚೇರಿ ಹೊಂದಿರುವ ಬಾಡಿಗೆದಾರರು ಸಾಲ ವಸೂಲಾತಿಗೆ ನ್ಯಾಯಾಧಿಕರಣ (ಡಿಆರ್ಟಿ) ನೀಡಿದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಾಲದ ಮೊತ್ತದ ಶೇ.50ರಷ್ಟನ್ನು ಠೇವಣಿ ಇಡಬೇಕು ಎಂಬುದು ಕಡ್ಡಾಯವಲ್ಲ . ಕಟ್ಟಡದಲ್ಲಿರುವ ಬಾಡಿಗೆದಾರರನ್ನು ಯಾವುದೇ ಕಾರಣಕ್ಕೂ ಸಾಲಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ, ಸಾಲದ ಹೊಣೆಗಾರಿಕೆಯನ್ನು ಬಾಡಿಗೆ ದಾರನ ಮೇಲೆ ಹೇರಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ…
ಉತ್ತಮ್ ಚಂದಾನಿ ಎಂಬುವರ ಮಾಲೀಕತ್ವದ ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ‘ಕಾನ್ಸುಲೇಟ್-1’ ಕಟ್ಟಡದ 4ನೇ ಮಹಡಿಯಲ್ಲಿ 7,045 ಚ.ಅಡಿ ಯಲ್ಲಿ ಇಟ್ಟಿಯಂ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ 2001ರಿಂದ ಬಾಡಿಗೆಗೆ ಇದೆ. ಈ ಕಟ್ಟಡದ ಮಾಲೀಕ ಉತ್ತಮ್ ಚಂದಾನಿ ಎಂಬುವವರು ಮುಂಬೈನ ‘ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನಿಂದ’ ಸಾಲ ಪಡೆದಿದ್ದರು. ಆದರೆ, ಸಾಲ ಮರುಪಾವತಿಸಲು ವಿಫಲರಾದಾಗ ಬ್ಯಾಂಕ್ ‘ಸರ್ಫೇಸಿ’ ಕಾಯ್ದೆಯಲ್ಲಿ ಕಟ್ಟಡದ ಸ್ವಾಧೀನ ಪ್ರಕ್ರಿಯೆ ಆರಂಭಿಸಿ ಕಂಪನಿ ಕಚೇರಿಯನ್ನು ತೆರವಿಗೆ ಮುಂದಾಯಿತು. ಅದನ್ನು ಪ್ರಶ್ನಿಸಿ ಕಂಪನಿಯು ಸಾಲ ವಸೂಲಾತಿ ನ್ಯಾಯಾಧೀಕರಣದ (ಡಿಆರ್ ಟಿ) ಮೊರೆ ಹೋಗಿತ್ತು. ಆ ಅರ್ಜಿಯನ್ನು ಡಿಆರ್ಟಿಯು ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಕಂಪನಿಯು ಚೆನ್ನೈನ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಬೇಕಾದರೆ ನಿಯಮಾವಳಿಗಳ ಪ್ರಕಾರ ಪೂರ್ವ ಠೇವಣಿ ಇಡಬೇಕು ಎಂದು ಡಿಆರ್ಎಟಿ ಆದೇಶಿಸಿ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಕಂಪನಿ ಹೈಕೋರ್ಟ್ ಮೊರೆಹೋಗಿತ್ತು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠವು, ಹಣಕಾಸು ಆಸ್ತಿಗಳ ಸಕ್ಯುರಿಟೈಸೇಶನ್ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಆಸಕ್ತಿ ಜಾರಿ(ಸರ್ಫೇಸಿ) ಕಾಯ್ದೆಯ ಸೆಕ್ಷನ್ 18ರಲ್ಲಿ ‘ಸಾಲಗಾರ’ ಮತ್ತು ‘ಸಾಲಗಾರನಲ್ಲದ ಇತರ ವ್ಯಕ್ತಿ’ ಎಂದು ಇಬ್ಬರನ್ನೂ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. 2ನೇ ನಿಬಂಧನೆಯಲ್ಲಿ ಕೇವಲ ‘ಸಾಲಗಾರ’ ಮಾತ್ರ ಶೇ.50 ರಷ್ಟು ಪೂರ್ವ ಠೇವಣಿ ಇಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗಾಗಿ, ಸಾಲಗಾರನಲ್ಲದ 3ನೇ ವ್ಯಕ್ತಿಯ ಮೇಲೆ ಸಾಲದ ಹೊರೆ ಹೊರಿಸುವುದು ತಾರತಮ್ಯ ಮತ್ತು ಅನ್ಯಾಯವಾಗಲಿದೆ. ಅದ್ದರಿಂದ ಮಾಲೀಕರ ಸಾಲದ ಹೊಣೆಗಾರಿಕೆಯನ್ನ ಬಾಡಿಗೆದಾರರ ಮೇಲೆ ಹೇರಲಾಗುವುದಿಲ್ಲ ಎಂದು ಹೇಳಿದೆ

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಮಾಲೀಕರ ಸಾಲಕ್ಕೆ ಬಾಡಿಗೆದಾರ ಹೊಣೆಗಾರನಲ್ಲ: ಹೈಕೋರ್ಟ್ appeared first on Law Guide Kannada.

]]>
ಕಾನೂನು ಬದ್ಧವಾಗಿ ನೋಟೀಸ್ ನೀಡದಿದ್ರೆ ಗಂಭೀರ ಅಪರಾಧ: ತನಿಖೆ ಹೆಸರಲ್ಲಿ ಹಿಂಸೆ ನೀಡಿದ್ರೆ ಕ್ರಮ: – ಹೈಕೋರ್ಟ್ ವಾರ್ನಿಂಗ್ https://www.lawguidekannada.com/failure-to-give-legal-notice-is-a-serious-crime-action-if-torture-is-done-in-the-name-of-investigation-high-court-warning/ Sun, 31 May 2026 03:23:35 +0000 https://www.lawguidekannada.com/?p=3983 ಬೆಂಗಳೂರು: ತನಿಖೆ ಹೆಸರಿನಲ್ಲಿ ವಿನಾಕಾರಣ ಠಾಣೆಗೆ ಕರೆದು ಹಿಂಸೆ ನೀಡಿದರೆ ತನಿಖಾಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಹಾಗೆಯೇ ಕಾನೂನು ಬದ್ಧವಾಗಿ...

The post ಕಾನೂನು ಬದ್ಧವಾಗಿ ನೋಟೀಸ್ ನೀಡದಿದ್ರೆ ಗಂಭೀರ ಅಪರಾಧ: ತನಿಖೆ ಹೆಸರಲ್ಲಿ ಹಿಂಸೆ ನೀಡಿದ್ರೆ ಕ್ರಮ: – ಹೈಕೋರ್ಟ್ ವಾರ್ನಿಂಗ್ appeared first on Law Guide Kannada.

]]>
ಬೆಂಗಳೂರು: ತನಿಖೆ ಹೆಸರಿನಲ್ಲಿ ವಿನಾಕಾರಣ ಠಾಣೆಗೆ ಕರೆದು ಹಿಂಸೆ ನೀಡಿದರೆ ತನಿಖಾಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಹಾಗೆಯೇ ಕಾನೂನು ಬದ್ಧವಾಗಿ ನೋಟೀಸ್ ನೀಡದೇ ಇದ್ದರೆ ಅದೊಂದು ಗಂಭೀರ ಅಪರಾಧ ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಬೆಂಗಳೂರಿನ ಅತ್ತಿಬೆಲೆ ಠಾಣೆಯ ಪೊಲೀಸರು ಸಹಿ ಮತ್ತು ನಿರ್ದಿಷ್ಟ ಸೆಕ್ಷನ್ ಉಲ್ಲೇಖಿಸದೇ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದ ನೋಟಿಸ್ ಪ್ರಶ್ನಿಸಿ ವರುಣ್ ಜ್ಯೂವೆಲ್ಲರ್ ಸ್ಥಾಪಕ ನರೇಶ್ ಕುಮಾರ್ ಸಿಯಾಲ್ ಮತ್ತು ಪ್ರಕಾಶ್ ಚಾಂದ್ ಸಿಯಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ನ್ಯಾಯಪೀಠ ಈ ಎಚ್ಚರಿಕೆ ನೀಡಿದೆ.

ತನಿಖೆಯ ಹೆಸರಿನಲ್ಲಿ ವಿನಾಕಾರಣ ಠಾಣೆಗೆ ಕರೆದು ಕಿರುಕುಳ ನೀಡುವುದು ಮತ್ತು ದಾಖಲಾಗಿರುವ ಅಪರಾಧದ ಹೊರತುಪಡಿಸಿ ವಿಚಾರಣೆ ನಡೆಸಿದರೆ ಸಂಬಂಧಪಟ್ಟ ತನಿಖಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗೆ ವಾರ್ನಿಂಗ್ ಮಾಡಿದೆ.

ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿಗೊಳಿಸುವಾಗ ಕಾನೂನಿನ ಯಾವ ಕಲಂ ಅಡಿಯಲ್ಲಿ ಒಬ್ಬ ವ್ಯಕ್ತಿಗೆ ಸಮನ್ಸ್ ನೀಡಲಾಗಿದೆ ಎಂಬ ವಿವರ ಮತ್ತು ನೀಡಿದ ಅಧಿಕಾರಿಯ ಹೆಸರು, ಅವರ ಹುದ್ದೆ ಕಡ್ಡಾಯವಾಗಿ ನಮೂದಾಗಿರಬೇಕು. ಪೊಲೀಸರು ಜಾರಿಗೊಳಿಸಿದ ನೋಟಿಸ್ ನಲ್ಲಿ ಯಾವ ಕಾನೂನಿನ ಅಡಿ ಸಮನ್ಸ್ ನೀಡಲಾಗಿದೆ ಎಂಬ ಉಲ್ಲೇಖವಿಲ್ಲ, ಜೊತೆಗೆ, ನೋಟಿಸ್ ನೀಡಿದ ಅಧಿಕಾರಿಯ ಹೆಸರು ಮತ್ತು ಹುದ್ದೆಯೂ ಇಲ್ಲದಿರುವುದರಿಂದ ಈ ನೋಟೀಸಿನ ಸಾಚಾತಾನದ ಬಗ್ಗೆ ನ್ಯಾಯಪೀಠ ಅನುಮಾನ ವ್ಯಕ್ತಪಡಿಸಿದೆ.

ಯಾವ ಅಧಿಕಾರದ ಅಡಿಯಲ್ಲಿ ಈ ನೋಟಿಸ್ ನೀಡಲಾಗಿದೆ ಮತ್ತು ಅಧಿಕಾರಿಯ ಹೆಸರು ಯಾಕೆ ನಮೂದಿಸಿಲ್ಲ ಎಂಬ ಬಗ್ಗೆ ಎರಡು ವಾರಗಳ ಒಳಗಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಪ್ರತಿವಾದಿ ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನಾಲ್ಕನೇ ವಾರಕ್ಕೆ ಮುಂದೂಡಿಕೆ ಮಾಡಿತು.

ಏನಿದು ಪ್ರಕರಣ
ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ 26 ವರ್ಷದ ಮೋಹನ್ ಎಂಬ ವ್ಯಕ್ತಿಯು ಚೀಟಿ ವ್ಯವಹಾರದಲ್ಲಿ ನಷ್ಟ ಅನುಭವಿಸಿ, ಸಾಲ ನೀಡಿರುವವರ ಕಿರುಕುಳ ತಾಳಲಾರದೇ ತಾಯಿ, ರೋಗ ಬಾದಿತಳಾದ ಅಕ್ಕನಿಗೆ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದನು. ಅಕ್ಕನ ಮಗನನ್ನು ಕತ್ತು ಕೊಯ್ದು ಸಾಯಿಸಿ, ತಾನೂ ಕೊಲೆಗೆ ಯತ್ನಿಸಿದ್ದನು. ಅದೃಷ್ಟವಶಾತ್ ಅಕ್ಕನ ಮಗ ಮತ್ತು ಮೋಹನ್ ಬದುಕುಳಿದಿದ್ದರು.

ಕೊಲೆಗೂ ಮುನ್ನ ಮೋಹನ್ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಸಾಲ ಪಡೆದಿರುವುದನ್ನು ತೀರಿಸಲಾಗದೇ ಅವರ ಕಿರುಕುಳದಿಂದ ಸಾವಿಗೆ ಮುಂದಾಗಿರುವುದಾಗಿ ವಿವರಿಸಿದ್ದರು. ಈ ಪ್ರಕರಣದ ಸಂಬಂಧ ಅರ್ಜಿದಾರರನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧ ಯಾವುದೇ ಪ್ರಕರಣ ದಾಖಲಾಗದಿದ್ದರೂ ವಿನಾ ಕಾರಣ ಅವರಿಗೆ ನೋಟಿಸ್ ನೀಡಲಾಗಿದೆ. ಅರ್ಜಿದಾರರಿಗೆ ತಡವಾಗಿ ನೋಟಿಸ್ ತಲುಪಿದ್ದರೂ ಸಹ ಠಾಣೆಗೆ ಹಾಜರಾಗಿದ್ದರು. ನೋಟಿಸ್ ನಲ್ಲಿ ಯಾವ ಸೆಕ್ಷನ್ ಅಡಿ ಅಪರಾಧಕ್ಕೆ ಅರ್ಜಿದಾರರನ್ನು ಕರೆಯಲಾಗಿದೆ ಎಂದು ಉಲ್ಲೇಖಿಸಲಾಗಿಲ್ಲ. ಅಲ್ಲದೇ, ತನಿಖಾಧಿಕಾರಿಯ ಸಹಿ ಮತ್ತು ಪದನಾಮವನ್ನೂ ಉಲ್ಲೇಖಿಸಿಲ್ಲ. ಪೊಲೀಸರು ಪ್ರಕರಣದ ತನಿಖೆ ಹೊರತುಪಡಿಸಿ, ಇತರ ಅಂಶಗಳು ಅಂದರೆ, ವ್ಯಾಪಾರದ ವಹಿವಾಟು ಹಾಗೂ ಲಾಭದ ಬಗ್ಗೆ ಇಡೀ ದಿನ ವಿಚಾರಣೆ ನಡೆಸಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಪೀಠಕ್ಕೆ ವಿವರಿಸಿದ್ದರು.

ಈ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠವು, ನಿಯಮಾವಳಿಗಳ ಸ್ಪಷ್ಟ ಉಲ್ಲೇಖವಿಲ್ಲದೇ ಅರ್ಜಿದಾರರನ್ನು ಪೊಲೀಸ್ ಠಾಣೆಗೆ ಕರೆಯಿಸಬಾರದು. ಒಂದು ವೇಳೆ ಕರೆಯಿಸಿದರೂ ಯಾವುದೇ ಕಿರುಕುಳ ನೀಡದೇ, ನಿಗದಿತ ಅವಧಿಯೊಳಗೆ ವಿಚಾರಣೆ ಮುಗಿಸಬೇಕು ಎಂದು ಸೂಚಿಸಿತು.

ಕಾನೂನು ಹೊರತುಪಡಿಸಿ ಅಧಿಕಾರ ಚಲಾಯಿಸಲು ಅವಕಾಶವಿಲ್ಲ. ವಿನಾಕಾರಣ ಜನರನ್ನು ಪೊಲೀಸರು ಠಾಣೆಗೆ ಕರೆಯಲಾಗದು. ಯಾವ ಅಪರಾಧ ಕೃತ್ಯದ ಆರೋಪದ ಮೇಲೆ ತಮ್ಮನ್ನು ತನಿಖೆಗೆ ಕರೆಯಲಾಗುತ್ತದೆ ಎಂಬುದನ್ನು ಪೊಲೀಸರು ವಿವರಿಸಬೇಕು. ಇ-ಆಫೀಸ್ ನನ್ನು ಬಳಕೆ ಮಾಡಿ ಡಿಜಿಟಲ್ ಸಹಿ ಹೊಂದಿರುವ ನೋಟಿಸ್ ಮಾತ್ರ ನೀಡಬೇಕು. ಅದನ್ನು ಏಕೆ ಮಾಡಿಲ್ಲ ಎಂದು ಪೀಠ ಪ್ರಶ್ನಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಕಾನೂನು ಬದ್ಧವಾಗಿ ನೋಟೀಸ್ ನೀಡದಿದ್ರೆ ಗಂಭೀರ ಅಪರಾಧ: ತನಿಖೆ ಹೆಸರಲ್ಲಿ ಹಿಂಸೆ ನೀಡಿದ್ರೆ ಕ್ರಮ: – ಹೈಕೋರ್ಟ್ ವಾರ್ನಿಂಗ್ appeared first on Law Guide Kannada.

]]>
ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: 75 ವರ್ಷದ ಮಾವನಿಗೆ ಜಾಮೀನು ಮಂಜೂರು https://www.lawguidekannada.com/accused-of-sexually-assaulting-his-daughter-in-law-bail-granted-to-75-year-old-father-in-law/ Thu, 28 May 2026 14:25:02 +0000 https://www.lawguidekannada.com/?p=3974 ಬೆಂಗಳೂರು: ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪವೊತ್ತು ನ್ಯಾಯಾಂಗ ಬಂಧನದಲ್ಲಿದ್ದ 75 ವರ್ಷದ ವೃದ್ಧನಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು...

The post ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: 75 ವರ್ಷದ ಮಾವನಿಗೆ ಜಾಮೀನು ಮಂಜೂರು appeared first on Law Guide Kannada.

]]>
ಬೆಂಗಳೂರು: ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪವೊತ್ತು ನ್ಯಾಯಾಂಗ ಬಂಧನದಲ್ಲಿದ್ದ 75 ವರ್ಷದ ವೃದ್ಧನಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಎಸ್. ಕಮಲ್ ಅವರಿದ್ದ ಪೀಠ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.. ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಂತ್ರಸ್ತೆ ನ್ಯಾಯಾಲಯಕ್ಕೆ ತಿಳಿಸಿದ್ದ ಹಿನ್ನೆಲೆ ಈ ಆದೇಶ ನೀಡಲಾಗಿದೆ.

ವಿಚಾರಣೆ ಸಮಯದಲ್ಲಿ ಸಂತ್ರಸ್ತೆ ಮಹಿಳೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ, ತನ್ನ ಪರ ವಕೀಲರ ಮೂಲಕ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಆರೋಪಿಗೆ ಜಾಮೀನು ನೀಡುವುದಕ್ಕೆ ಯಾವುದೇ ಆಕ್ಷೇಪ ಇಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದರು. ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ಆರೋಪಿಯ ವಯಸ್ಸು, ಆರೋಗ್ಯ ಹಾಗೂ ಕಳೆದ ಎಂಟು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ ವಿಚಾರ ಗಮನಿಸಿ ಜಾಮೀನು ಮಂಜೂರು ಮಾಡಿತು. ಹಾಗೆಯೇ 1 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಇಬ್ಬರು ಸ್ಥಳೀಯ ಶ್ಯೂರಿಟಿಗಳನ್ನು ಸಲ್ಲಿಸುವಂತೆ ಷರತ್ತು ವಿಧಿಸಿದೆ.

ಜಾಮೀನು ನೀಡಿರುವುದೇ ಆರೋಪಿಯ ನಿರ್ದೋಷಿತ್ವವನ್ನು ಸಾಬೀತುಪಡಿಸುವುದಲ್ಲ ಪ್ರಕರಣದ ವಿಚಾರಣೆ ಮುಂದುವರಿಯಲಿದ್ದು, ಆರೋಪಗಳ ಸತ್ಯಾಸತ್ಯತೆ ಕುರಿತು ಅಂತಿಮ ತೀರ್ಮಾನವನ್ನು ನ್ಯಾಯಾಲಯವೇ ಕೈಗೊಳ್ಳಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಇನ್ನು ಆರೋಪಿಯ ಪರ ವಕೀಲರು ವಾದ ಮಂಡಿಸಿ, “ಅರ್ಜಿದಾರರಿಗೆ 75 ವರ್ಷ ವಯಸ್ಸಾಗಿದ್ದು, ಹಿರಿಯ ನಾಗರಿಕರಾಗಿದ್ದಾರೆ. ಕಳೆದ ಎಂಟು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಾಖಲಾದ ಸುಳ್ಳು ಪ್ರಕರಣ. ದೂರಿನಲ್ಲಿ ಘಟನೆ ನಡೆದ ದಿನಾಂಕ ಹಾಗೂ ಸಮಯ ಸ್ಪಷ್ಟವಾಗಿಲ್ಲ. ಪ್ರತ್ಯಕ್ಷ ಸಾಕ್ಷಿಗಳೂ ಇಲ್ಲ” ಎಂದು ತಿಳಿಸಿದ್ದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಆರೋಪಗಳು ಗಂಭೀರ ಸ್ವರೂಪದ್ದಾಗಿರುವುದರಿಂದ ಜಾಮೀನು ನೀಡಬಾರದು ಎಂದು ಕೋರಿದ್ದರು. ಆದರೆ, ಸಂತ್ರಸ್ತೆ ಸ್ವತಃ ನ್ಯಾಯಾಲಯದಲ್ಲಿ ರಾಜಿ ಪ್ರಕ್ರಿಯೆ ನಡೆಯುತ್ತಿರುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ತನ್ನ ಪತಿ, ಅತ್ತೆ ಹಾಗೂ ಮಾವನಿಂದ ನಿರಂತರ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಸಂತ್ರಸ್ತೆಮಹಿಳೆ ದೂರು ದಾಖಲಿಸಿದ್ದರು. ಈ ಸಂಬಂಧ ಕುಟುಂಬದ ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: 75 ವರ್ಷದ ಮಾವನಿಗೆ ಜಾಮೀನು ಮಂಜೂರು appeared first on Law Guide Kannada.

]]>
ನಕಲಿ ಅಂಗವೈಕಲ್ಯ ಪ್ರಮಾಣಪತ್ರಗಳ ಮೂಲಕ ಸಾರ್ವಜನಿಕ ಉದ್ಯೋಗ ಪಡೆಯುವುದು ನೈತಿಕ ಅಧೋಗತಿಗೆ ಸಮಾನ – ಹೈಕೋರ್ಟ್ https://www.lawguidekannada.com/getting-public-employment-through-fake-disability-certificates-is-moral-turpitude-high-court/ Thu, 28 May 2026 14:13:19 +0000 https://www.lawguidekannada.com/?p=3967 ಮುಂಬೈ: ಸಾರ್ವಜನಿಕ ಉದ್ಯೋಗವನ್ನು ನಕಲಿ ಅಂಗವೈಕಲ್ಯ ಪ್ರಮಾಣಪತ್ರಗಳ ಮೂಲಕ ಪಡೆಯುವುದು ಗಂಭೀರ ನೈತಿಕ ಅಧೋಗತಿ (Moral Turpitude) ಆಗಿದ್ದು. ಅಂತಹ...

The post ನಕಲಿ ಅಂಗವೈಕಲ್ಯ ಪ್ರಮಾಣಪತ್ರಗಳ ಮೂಲಕ ಸಾರ್ವಜನಿಕ ಉದ್ಯೋಗ ಪಡೆಯುವುದು ನೈತಿಕ ಅಧೋಗತಿಗೆ ಸಮಾನ – ಹೈಕೋರ್ಟ್ appeared first on Law Guide Kannada.

]]>
ಮುಂಬೈ: ಸಾರ್ವಜನಿಕ ಉದ್ಯೋಗವನ್ನು ನಕಲಿ ಅಂಗವೈಕಲ್ಯ ಪ್ರಮಾಣಪತ್ರಗಳ ಮೂಲಕ ಪಡೆಯುವುದು ಗಂಭೀರ ನೈತಿಕ ಅಧೋಗತಿ (Moral Turpitude) ಆಗಿದ್ದು. ಅಂತಹ ವ್ಯಕ್ತಿಗಳಿಗೆ ಸೇವೆಯಲ್ಲಿ ಮುಂದುವರಿಯುವ ಯಾವುದೇ ರಕ್ಷಿತ ಹಕ್ಕು ಇರುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.

ನಕಲಿ ಅಂಗವೈಕಲ್ಯ ಪ್ರಮಾಣಪತ್ರಗಳು ನೈತಿಕ ಅಧೋಗತಿಗೆ ಸಮಾನ ಎಂದಿರುವ ನ್ಯಾಯಾಲಯ ಅನುಮಾನಿತ ಉದ್ಯೋಗಿಯ ಅಂಗವೆ,ಕಲ್ಯ ಮರುಮೌಲ್ಯಮಾಪನಕ್ಕೆ ಒಪ್ಪಿಗೆ ನೀಡಿದೆ. ಬಾಂಬೆ ಹೈಕೋರ್ಟ್ ರಾಜ್ಯದ ನಿಯಂತ್ರಣಾಧಿಕಾರವನ್ನು ಸಮರ್ಥಿಸಿ ಮಹತ್ವದ ತೀರ್ಪು ನೀಡಿದ್ದು. ಸರ್ಕಾರಿ ನೌಕರರು ಸಲ್ಲಿಸುವ ದಾಖಲೆಗಳ ನಿಜ ಅಸ್ತಿತ್ವವನ್ನು ಪರಿಶೀಲಿಸುವುದು ಪ್ರತಿಯೊಬ್ಬ ಸಾರ್ವಜನಿಕ ಉದ್ಯೋಗದಾತನ ಅಂತರ್ನಿಹಿತ ಹಕ್ಕಾಗಿದೆ ಎಂದು ಹೇಳಿದೆ.

ನ್ಯಾಯಮೂರ್ತಿ ರವೀಂದ್ರ ಪಿ ಶುಗೆ ಮತ್ತು ನ್ಯಾಯಮೂರ್ತಿ ಅಭಯ್ ಜಿ ಮಂತ್ರಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಇದರಲ್ಲಿ ಅಂಗವೈಕಲ್ಯ ಪ್ರಮಾಣಪತ್ರಗಳನ್ನು ಹೊಂದಿರುವ ಸರ್ಕಾರಿ ನೌಕರರ ವಿರುದ್ಧ ತಪ್ಪು ಮಾಹಿತಿ ಅಥವಾ ವ್ಯವಸ್ಥಿತವಾಗಿ ವಂಚನೆಯ ಬಗ್ಗೆ, ನಿಜವಾದ ಅನುಮಾನ ಉದ್ಭವಿಸಿದಾಗ, ಅವರ ವೈದ್ಯಕೀಯ ಸ್ಥಿತಿಯ ಮರುಪರಿಶೀಲನೆ ನಡೆಸುವ ಅಧಿಕಾರವೂ ಸೇರಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ವಿವಿಧ ವಕೀಲರು ಸಲ್ಲಿಸಿದ್ದ ಪಟ್ಟಿಗಳ ಪ್ರಕಾರ, “ಶ್ರವಣ ದೋಷ” (hearing impairment) ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಂಗವೈಕಲ್ಯವಾಗಿದ್ದು, ಇಂತಹ PwD ವ್ಯಕ್ತಿಗಳಲ್ಲಿ 90% ಕ್ಕಿಂತ ಹೆಚ್ಚು ಮಂದಿ ನೇಮಕಾತಿಯ ನಂತರವೇ ಅಂಗವೈಕಲ್ಯ ಪಡೆದಿರುವುದಾಗಿ ತೋರಿಸಲಾಗಿದೆ. ಇದು ರಾಜ್ಯ ಸರ್ಕಾರ ಅಂಗವಿಕಲ ಉದ್ಯೋಗಿಗಳಿಗೆ ವಿಶೇಷ ಸೌಲಭ್ಯಗಳನ್ನು ಪರಿಚಯಿಸಿದ ಬಳಿಕ ಹೆಚ್ಚಾಗಿ ಕಂಡುಬಂದಿದೆ ಎಂದು ನ್ಯಾಯಪೀಠ ಗಮನಿಸಿದೆ.

ನಕಲಿ ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ ಸಾರ್ವಜನಿಕ ಉದ್ಯೋಗ ಪಡೆಯುವುದು ಅಥವಾ ಉಳಿಸಿಕೊಳ್ಳುವುದು ಭಾರತದ ಸಂವಿಧಾನದ ವಿರುದ್ಧದ ವಂಚನೆ ಹಾಗೂ ಗಂಭೀರ ನೈತಿಕ ಅಧೋಗತಿ. ಕಲ್ಯಾಣ ಯೋಜನೆಗಳ ಮೀಸಲಾತಿಯನ್ನು ದುರುಪಯೋಗಪಡಿಸಿಕೊಳ್ಳುವುದು ಉದ್ಯೋಗದಾತರ ವಿಶ್ವಾಸವನ್ನು ನಾಶಮಾಡುತ್ತದೆ ಮತ್ತು ಆ ಮೂಲಕ ಪಡೆದ ಎಲ್ಲಾ ಸೌಲಭ್ಯಗಳು ಆರಂಭದಿಂದಲೇ ಅಮಾನ್ಯವಾಗುತ್ತವೆ ಎಂದು ನ್ಯಾಯಪೀಠ ಹೇಳಿದೆ.

ಮಹಾರಾಷ್ಟ್ರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂತಹ ನಕಲಿ ಸರ್ಟಿಫಿಕೇಟ್ ಹಗರಣ ನಡೆದಿದೆ. ಅನೇಕ ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗಲೇ ದೈಹಿಕ ಅಂಗವೈಕಲ್ಯ ಪ್ರಮಾಣಪತ್ರಗಳನ್ನು ಪಡೆದು ಕಲ್ಯಾಣ ಸೌಲಭ್ಯಗಳನ್ನು ಪಡೆಯಲು ಆರಂಭಿಸಿದ್ದರು. ವಿಶೇಷವಾಗಿ, ಶ್ರವಣ ದೋಷವನ್ನು ಉಲ್ಲೇಖಿಸಿ ಸೌಲಭ್ಯಗಳನ್ನು ಬೇಡಿಕೊಂಡವರಲ್ಲಿ 90% ಕ್ಕಿಂತ ಹೆಚ್ಚು ಮಂದಿ ನೇಮಕಾತಿಯ ನಂತರವೇ ಅಂಗವೈಕಲ್ಯ ಹೊಂದಿದ್ದಾರೆಂದು ತೋರಿಸಿಕೊಂಡಿದ್ದು, ಇದು ಸರ್ಕಾರದ ವಿಶೇಷ ಸೌಲಭ್ಯಗಳ ಪರಿಚಯದ ಬಳಿಕ ಹೆಚ್ಚಾಗಿದೆ ಎಂದು ರಾಜ್ಯ ಸರ್ಕಾರ ಗಮನಕ್ಕೆ ತಂದಿತ್ತು. ಇದರಿಂದ ರಾಜ್ಯ ಸರ್ಕಾರ 16 ಜೂನ್ 2025 ರಂದು ಸರ್ಕ್ಯುಲರ್ ಹಾಗೂ 9 ಅಕ್ಟೋಬರ್ 2025 ರಂದು ಸರ್ಕಾರದ ನಿರ್ಣಯ ಹೊರಡಿಸಿ, ಅಂಗವೈಕಲ್ಯ ಮೀಸಲಾತಿಯಲ್ಲಿ ನೇಮಕಗೊಂಡ ಪ್ರಾಥಮಿಕ ಶಿಕ್ಷಕರ ವೈದ್ಯಕೀಯ ದಾಖಲೆಗಳನ್ನು ಮರುಪರಿಶೀಲಿಸಲು ಆದೇಶಿಸಿತು.

ಮರುಪರಿಶೀಲನೆಯ ವೇಳೆ ಅನೇಕ ಶಿಕ್ಷಕರ ಅಂಗವೈಕಲ್ಯ ಪ್ರಮಾಣವು ಕಾನೂನಿನ ಪ್ರಕಾರ ಅಗತ್ಯವಿರುವ 40% ಗಿಂತ ಕಡಿಮೆ ಇರುವುದಾಗಿಯೂ, ಕೆಲವರು ಸಂಪೂರ್ಣವಾಗಿ ಸಾಮಾನ್ಯ ದೈಹಿಕ ಸ್ಥಿತಿಯಲ್ಲಿರುವುದಾಗಿಯೂ ವೈದ್ಯಕೀಯ ಮಂಡಳಿಗಳು ಪತ್ತೆಹಚ್ಚಿದವು. ಇದರಿಂದ ಪುಣೆ ಜಿಲ್ಲಾ ಪರಿಷತ್ ಮುಂತಾದ ಪ್ರಾದೇಶಿಕ ಸಂಸ್ಥೆಗಳು ಅಮಾನತು ಹಾಗೂ ಕಾರಣ ಕಾಣಿಕೆ ನೋಟಿಸ್ ಕ್ರಮಗಳನ್ನು ಆರಂಭಿಸಿತು ಈ ಕ್ರಮಗಳನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯ ರಾಜ್ಯದ ಅಧಿಕಾರವನ್ನು ಸಮರ್ಥಿಸಿ, ಸಮಾನ ಅವಕಾಶಗಳನ್ನು ರಕ್ಷಿಸುವುದು ರಾಜ್ಯದ ಸಂವಿಧಾನಾತ್ಮಕ ಕರ್ತವ್ಯವಾಗಿದ್ದು, ನಿಜವಾದ ಅಂಗವೈಕಲ್ಯ ಹೊಂದಿದವರಿಗೆ ಮೀಸಲಾದ ಸೌಲಭ್ಯಗಳನ್ನು ವಂಚನೆಯ ಮೂಲಕ ಕಬಳಿಸುವವರನ್ನು ತಡೆಯುವ ಜವಾಬ್ದಾರಿಯೂ ಅದರಲ್ಲಿ ಸೇರಿದೆ ಎಂದು ಹೇಳಿತು. “RPWD Act ಅಡಿಯಲ್ಲಿ ಒಮ್ಮೆ ಅಂಗವೈಕಲ್ಯ, ಪ್ರಮಾಣಪತ್ರ ನೀಡಿದರೆ ಅದು ಎಲ್ಲಾ ಸಂದರ್ಭಗಳಲ್ಲಿಯೂ ಶಾಶ್ವತವಾಗಿ ಅಂತಿಮವೆಂದು ಪರಿಗಣಿಸಲಾಗುವುದಿಲ್ಲ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಅರ್ಜಿಗಳನ್ನು ಭಾಗಶಃ ಮಾನ್ಯಗೊಳಿಸಿ, ತಕ್ಷಣದ ಅಮಾನತು ಅಥವಾ ವೇತನ ನಿಲ್ಲಿಸುವ ಕ್ರಮಗಳನ್ನು ರದ್ದು ಪಡಿಸಿತು. ಆದರೆ ಎಲ್ಲಾ ಅರ್ಜಿದಾರರೂ ವಿಶೇಷ ವೈದ್ಯಕೀಯ ಮಂಡಳಿಯ ಮುಂದೆ ಮರು ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು ಎಂದು ಆದೇಶಿಸಿತು.

ಮರುಪರಿಶೀಲನೆಯಲ್ಲಿ ಅಂಗವೈಕಲ್ಯ ಪ್ರಮಾಣ 40% ಕ್ಕಿಂತ ಕಡಿಮೆ ಎಂದು ಕಂಡುಬಂದರೆ, ಕಡ್ಡಾಯ ನಿವೃತ್ತಿ ಅಥವಾ ಸೇವೆಯಿಂದ ವಜಾಗೊಳಿಸುವ ಮೊದಲು ಸರಿಯಾದ ಇಲಾಖಾ ತನಿಖೆ ನಡೆಸಬೇಕು ಎಂದು ನ್ಯಾಯಪೀಠ ಸೂಚಿಸಿದೆ. ಜೊತೆಗೆ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಲು ಸಹಕರಿಸಿದ ವೈದ್ಯರ ವಿರುದ್ಧ ಕಠಿಣ ಶಿಸ್ತು ಮತ್ತು ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆದೇಶಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ನಕಲಿ ಅಂಗವೈಕಲ್ಯ ಪ್ರಮಾಣಪತ್ರಗಳ ಮೂಲಕ ಸಾರ್ವಜನಿಕ ಉದ್ಯೋಗ ಪಡೆಯುವುದು ನೈತಿಕ ಅಧೋಗತಿಗೆ ಸಮಾನ – ಹೈಕೋರ್ಟ್ appeared first on Law Guide Kannada.

]]>
ವಕೀಲರ ವೃತ್ತಿಪರ ದುರ್ವರ್ತನೆ ಆರೋಪ ಕುರಿತು ಪೊಲೀಸರು ತನಿಖೆ ನಡೆಸುವಂತಿಲ್ಲ- ಹೈಕೋರ್ಟ್ https://www.lawguidekannada.com/police-cannot-investigate-allegations-of-professional-misconduct-by-lawyers-high-court/ Thu, 28 May 2026 13:33:12 +0000 https://www.lawguidekannada.com/?p=3952 ಮುಂಬೈ: ವಕೀಲರ ವಿರುದ್ಧ ಕೇಳಿ ಬರುವ ವೃತ್ತಿಪರ ದುರ್ವರ್ತನೆ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸಲು ಸಾಧ್ಯವಿಲ್ಲ, ಬಾರ್ ಕೌನ್ಸಿಲ್...

The post ವಕೀಲರ ವೃತ್ತಿಪರ ದುರ್ವರ್ತನೆ ಆರೋಪ ಕುರಿತು ಪೊಲೀಸರು ತನಿಖೆ ನಡೆಸುವಂತಿಲ್ಲ- ಹೈಕೋರ್ಟ್ appeared first on Law Guide Kannada.

]]>
ಮುಂಬೈ: ವಕೀಲರ ವಿರುದ್ಧ ಕೇಳಿ ಬರುವ ವೃತ್ತಿಪರ ದುರ್ವರ್ತನೆ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸಲು ಸಾಧ್ಯವಿಲ್ಲ, ಬಾರ್ ಕೌನ್ಸಿಲ್ ಗೆ ಮಾತ್ರ ಇಂತಹ ಆರೋಪಗಳ ಕುರಿತು ವಕೀಲರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಥಾಣೆ ನಗರ ಪೊಲೀಸ್ ಠಾಣೆ ಮತ್ತು ಕೊಲಾಬಾ ಪೊಲೀಸ್ ಠಾಣೆಗಳಲ್ಲಿ ವಕೀಲರು, ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ಖಾಸಗಿ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಸಂಚು, ನಕಲಿ ದಾಖಲೆ ಸೃಷ್ಟಿ, ಸುಳ್ಳು ವ್ಯಕ್ತಿತ್ವ ಧಾರಣೆ ಮತ್ತು ಬೆದರಿಕೆ ಆರೋಪಗಳಡಿ ದಾಖಲಿಸಲಾದ ಎಫ್ ಐಆರ್ ಗಳನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾದ ಹಲವು ರಿಟ್ ಅರ್ಜಿಗಳು ಮತ್ತು ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಹಾಗೂ ನ್ಯಾಯಮೂರ್ತಿ ಸುಮನ ಶ್ಯಾಮ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ವಕೀಲರ ವಿರುದ್ಧ ದಾಖಲಿಸಲಾದ ಹಲವು ಎಫ್ ಐಆರ್ ಗಳನ್ನು ರದ್ದುಪಡಿಸಿದ ನ್ಯಾಯಪೀಠವು, ವಕೀಲರ ವೃತ್ತಿಪರ ದುರ್ವರ್ತನೆ ಆರೋಪಗಳ ತನಿಖೆಯನ್ನು ಪೊಲೀಸರು ನಡೆಸಲು ಸಾಧ್ಯವಿಲ್ಲ. ಏಕೆಂದರೆ, ಬಾರ್ ಕೌನ್ಸಿಲ್ ಮಾತ್ರ ವಕೀಲರ ಕುರಿತ ಏಕೈಕ ಶಿಸ್ತು ಪ್ರಾಧಿಕಾರ ಆಗಿದೆ. ಬಾರ್ ಕೌನ್ಸಿಲ್ ಆಫ್ ಮಹಾರಾಷ್ಟ್ರ ಮತ್ತು ಗೋವಾ ಸಂಸ್ಥೆಯಲ್ಲೇ ನೋಂದಾಯಿತ ವಕೀಲರು ದುರ್ವರ್ತನೆ ನಡೆಸಿದರೆ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಅದಕ್ಕೇ ಇದೆ. ದ್ವಿತೀಯ ಪ್ರತಿವಾದಿ ಮುಂದಿಟ್ಟಿರುವ ದುರ್ವರ್ತನೆ ಆರೋಪಗಳನ್ನು ಪೊಲೀಸರು ತನಿಖೆಯ ಸಂದರ್ಭದಲ್ಲಿ ಪರಿಶೀಲಿಸಲು ಸಾಧ್ಯವಿಲ್ಲ.” ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ಬಾರ್ ಕೌನ್ಸಿಲ್ ಆಫ್ ಮಹಾರಾಷ್ಟ್ರ ಮತ್ತು ಗೋವಾನಲ್ಲಿ ನೋಂದಾಯಿತ ವಕೀಲರ ವಿರುದ್ಧ ವೃತ್ತಿಪರ ದುರ್ವರ್ತನೆ ಆರೋಪಗಳ ತನಿಖೆಯನ್ನು ಖಾಸಗಿ ದೂರುದಾರರ ಮನವಿಯ ಮೇರೆಗೆ ಪೊಲೀಸರು ನಡೆಸಲು ಸಾಧ್ಯವಿಲ್ಲ. ವಕೀಲರ ಮೇಲಿನ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವು ಕಾನೂನಿನ ಪ್ರಕಾರ ಸಂಪೂರ್ಣವಾಗಿ ಬಾರ್ ಕೌನ್ಸಿಲ್ ಗೆ ಮಾತ್ರ “ಆರೋಪಿತ ದುರ್ವರ್ತನೆ ಕುರಿತು ಯಾವುದೇ ವಿಚಾರಣೆ ಅಥವಾ ತನಿಖೆ ನಡೆಸುವುದು ಬಾರ್ ಕೌನ್ಸಿಲ್ ಆಫ್ ಮಹಾರಾಷ್ಟ್ರ ಮತ್ತು ಗೋವಾ ಸಂಸ್ಥೆಯ ಅಧಿಕಾರ ವ್ಯಾಪ್ತಿಗೆ ಧಕ್ಕೆಯಾಗುತ್ತದೆ. ಆದ್ದರಿಂದ ಇಂತಹ ದುರ್ವರ್ತನೆ ಕುರಿತು ಪೊಲೀಸ್ ತನಿಖೆ ನಡೆಸುವುದು ಕಾನೂನಿನ ಪ್ರಕಾರ ಅನುಮತಿಸಲಾಗುವುದಿಲ್ಲ.” ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಅರ್ಜಿದಾರರ ವಿರುದ್ಧ ದಾಖಲಿಸಲಾದ ಎಫ್ ಐಆರ್ಗಳು ಸ್ಪಷ್ಟವಾಗಿ ದುರುದ್ದೇಶಪೂರಿತವಾಗಿದ್ದು, ಕಾನೂನುಬದ್ಧವಾಗಿ ತಡೆಯಲಾಗದವು ಹಾಗೂ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿವೆ ಎಂದು ತೀರ್ಮಾನಿಸಿದ ನ್ಯಾಯಪೀಠವು, ಎಲ್ಲಾ ರಿಟ್ ಅರ್ಜಿಗಳು ಮತ್ತು ಕ್ರಿಮಿನಲ್ ಅರ್ಜಿಗಳನ್ನು ಅನುಮೋದಿಸಿ, ವಿವಾದಿತ ಎಫ್ ಐಆರ್ ಗಳಿಂದ ಉದ್ಭವಿಸಿದ ಎಲ್ಲಾ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದು ಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ವಕೀಲರ ವೃತ್ತಿಪರ ದುರ್ವರ್ತನೆ ಆರೋಪ ಕುರಿತು ಪೊಲೀಸರು ತನಿಖೆ ನಡೆಸುವಂತಿಲ್ಲ- ಹೈಕೋರ್ಟ್ appeared first on Law Guide Kannada.

]]>
ಸೂಕ್ತ ಕಾಲಮಿತಿಯೊಳಗೆ ದಾಖಲಿಸದ ‘PTCL’ ಪ್ರಕರಣಗಳು ಕಾನೂನುಬದ್ಧವಾಗಿ ನಿಲ್ಲುವುದಿಲ್ಲ- ಡಿಸಿ ಆದೇಶ ರದ್ದುಗೊಳಿಸಿದ ಹೈಕೋರ್ಟ್ https://www.lawguidekannada.com/sukta-kalamitiyo%e1%b8%b7age-dakhalisada-ptcl-prakara%e1%b9%87aga%e1%b8%b7u-kanunubaddhavagi-nilluvudilla-%e1%b8%8disi-adesa-raddugo%e1%b8%b7isida-haikor%e1%b9%ad-be%e1%b9%85ga/ Thu, 28 May 2026 13:28:42 +0000 https://www.lawguidekannada.com/?p=3949 ಬೆಂಗಳೂರು : ಸೂಕ್ತ ಕಾಲಮಿತಿಯೊಳಗೆ ದಾಖಲಿಸದ ‘ಪಿಟಿಸಿಎಲ್ ’ ಪ್ರಕರಣಗಳು ಕಾನೂನುಬದ್ಧವಾಗಿ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್, ದಶಕಗಳ...

The post ಸೂಕ್ತ ಕಾಲಮಿತಿಯೊಳಗೆ ದಾಖಲಿಸದ ‘PTCL’ ಪ್ರಕರಣಗಳು ಕಾನೂನುಬದ್ಧವಾಗಿ ನಿಲ್ಲುವುದಿಲ್ಲ- ಡಿಸಿ ಆದೇಶ ರದ್ದುಗೊಳಿಸಿದ ಹೈಕೋರ್ಟ್ appeared first on Law Guide Kannada.

]]>
ಬೆಂಗಳೂರು : ಸೂಕ್ತ ಕಾಲಮಿತಿಯೊಳಗೆ ದಾಖಲಿಸದ ‘ಪಿಟಿಸಿಎಲ್ ’ ಪ್ರಕರಣಗಳು ಕಾನೂನುಬದ್ಧವಾಗಿ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್, ದಶಕಗಳ ಬಳಿಕ ಸಲ್ಲಿಕೆಯಾಗಿದ್ದ ಪಿಟಿಸಿಎಲ್ ಅರ್ಜಿ ಪುರಸ್ಕರಿಸಿದ್ದ ಆದೇಶ ಎತ್ತಿಹಿಡಿದಿದ್ದ ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದುಗೊಳಿಸಿದೆ.

ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ಬೆಂಗಳೂರು ಉತ್ತರದ ಯಲಹಂಕ ತಾಲೂಕಿನ ತರಹುಣಸೆ ಗ್ರಾಮದ ಟಿ. ಪಿ. ಗೋಪಾಲಪ್ಪ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಜಮೀನು ಪರಭಾರೆಯಾದ ಬರೋಬ್ಬರಿ 43 ವರ್ಷಗಳ ನಂತರ ಪರಿಶಿಷ್ಟ ಜಾತಿಗಳ(ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯಿದೆ ಅಡಿಯಲ್ಲಿ ದಾಖಲಾಗಿದ್ದ ಮನವಿಯನ್ನು ಪುರಸ್ಕರಿಸಿದ್ದ ಉಪ ವಿಭಾಗಾಧಿಕಾರಿಗಳು ಪುರಸ್ಕರಿಸಿದ್ದರು. ಈ ಆದೇಶವನ್ನು ಎತ್ತಿಹಿಡಿದಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶವನ್ನು ಇದೀಗ ಹೈಕೋರ್ಟ್ ನ್ಯಾಯಪೀಠವು ರದ್ದುಗೊಳಿಸಿ ಆದೇಶಿಸಿದೆ.

ಪಿಟಿಸಿಎಲ್ ಕಾಯಿದೆ ಕುರಿತು ‘ನೆಕ್ಕಂಟಿ ರಾಮಲಕ್ಷ್ಮಿ’ ಮತ್ತು ‘ವಿವೇಕ್ ಹಿಂದೂಜಾ’ ಪ್ರಕರಣಗಳ ತೀರ್ಪು ಮತ್ತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಈ ಹಿಂದಿನ ಆದೇಶಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಸಾಕಷ್ಟು ವಿಳಂಬವಾಗಿ ದಾವೆ ಹೂಡಲಾಗಿದೆ. ಆದ್ದರಿಂದ, ಜಿಲ್ಲಾಧಿಕಾರಿಗಳ ಆದೇಶ ಕಾನೂನು ಬಾಹಿರ. ಸೂಕ್ತ ಕಾಲಮಿತಿಯೊಳಗೆ ದಾಖಲಿಸದ ಪಿಟಿಸಿಎಲ್ ಪ್ರಕರಣಗಳು ಕಾನೂನುಬದ್ಧವಾಗಿ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಏನಿದು ಪ್ರಕರಣ..
ಬೆಂಗಳೂರಿನ ಯಲಹಂಕ ತಾಲೂಕಿನ ತರಹುಣಸೆ ಗ್ರಾಮದ ಜಮೀನಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವರ್ಗಕ್ಕೆ ಸೇರಿದ್ದ ಮುನಿಲಕ್ಷ್ಮಮ್ಮ ಮತ್ತು ರಾಜಣ್ಣ ಎಂಬುವವರು ಸರ್ಕಾರದಿಂದ ಮಂಜೂರಾಗಿದ್ದ ಜಮೀನು ಮಾರಾಟವಾದ 43 ವರ್ಷಗಳು ಮತ್ತು ಪಿಟಿಸಿಎಲ್ ಕಾಯಿದೆ ಜಾರಿಯಾದ 37 ವರ್ಷಗಳ ಬಳಿಕ ಅಂದರೆ, 2017ರಲ್ಲಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಈಗಾಗಲೇ ಮಾರಾಟವಾಗಿರುವ ಭೂಮಿಯನ್ನು ಮತ್ತೆ ತಮ್ಮ ಹೆಸರಿಗೆ ಪುನರ್ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಈ ಅರ್ಜಿಗಳ ಪರಿಗಣಿಸಿದ್ದ ಉಪವಿಭಾಗಾಧಿಕಾರಿಗಳು ಜಮೀನಿನ ಹಕ್ಕುಗಳನ್ನು ಮರುಸ್ಥಾಪನೆಗೆ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಜಮೀನಿನ ಖರೀದಿದಾರರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಆದೇಶವನ್ನು ಎತ್ತಿಹಿಡಿದಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ ನಲ್ಲಿ ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಈ ಭೂಮಿಯ ಮೂಲ ಮಂಜೂರುದಾರರು ದಶಕಗಳ ಹಿಂದೆಯೇ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಜಮೀನು ಹಸ್ತಾಂತರವಾಗಿ 43 ವರ್ಷಗಳು ಹಾಗೂ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದು 37 ವರ್ಷಗಳು ಕಳೆದ ನಂತರ ಅರ್ಜಿದಾರರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಕಾಲಮಿತಿಯ ನಿಯಮವನ್ನು ನಿರ್ಲಕ್ಷಿಸಿ ಆದೇಶಿಸಿದ್ದು, ಆದೇಶವನ್ನು ರದ್ದುಮಾಡಬೇಕು ಎಂದು ಮನವಿ ಮಾಡಿದ್ದರು.
ಮನವಿ ಪುರಸ್ಕರಿಸಿದ ನ್ಯಾಯಪೀಠವು ಡಿಸಿ ಮತ್ತು ಎಸಿ ಅವರ ಆದೇಶಗಳನ್ನು ರದ್ದುಗೊಳಿಸಿ, ಇಡೀ ಪ್ರಕ್ರಿಯೆಯನ್ನು ವಜಾಗೊಳಿಸಿದೆ. ಜತೆಗೆ, ಪ್ರಕರಣವನ್ನು ಕೈಬಿಡಲು ಉಭಯ ಪಕ್ಷಕಾರರು ಜಿಲ್ಲಾಧಿಕಾರಿಗಳ ಮುಂದೆ ಜಂಟಿ ಜ್ಞಾಪನಾ ಪತ್ರ ಸಲ್ಲಿಸಿದ್ದಾರೆ. ಆದರೂ ಜಿಲ್ಲಾಧಿಕಾರಿಗಳು ಆದೇಶವನ್ನು ನೀಡಿರುವುದನ್ನು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಸೂಕ್ತ ಕಾಲಮಿತಿಯೊಳಗೆ ದಾಖಲಿಸದ ‘PTCL’ ಪ್ರಕರಣಗಳು ಕಾನೂನುಬದ್ಧವಾಗಿ ನಿಲ್ಲುವುದಿಲ್ಲ- ಡಿಸಿ ಆದೇಶ ರದ್ದುಗೊಳಿಸಿದ ಹೈಕೋರ್ಟ್ appeared first on Law Guide Kannada.

]]>
ಕೋರ್ಟ್ ಕಲಾಪ ಬಹಿಷ್ಕಾರ ಕರೆ ಧಿಕ್ಕರಿಸುವ ವಕೀಲರ ವಿರುದ್ದ ಕ್ರಮಕೈಗೊಳ್ಳುವ ಅಧಿಕಾರ, ಹಕ್ಕು ವಕೀಲರ ಸಂಘಕ್ಕಿದೆಯೇ..? https://www.lawguidekannada.com/does-the-bar-association-have-the-power-and-authority-to-take-action-against-lawyers-who-defy-the-call-to-boycott-court-proceedings/ Fri, 22 May 2026 00:37:18 +0000 https://www.lawguidekannada.com/?p=3929 ತ್ರಿಪುರ: ಕೋರ್ಟ್ ಕಲಾಪ ಬಹಿಷ್ಕಾರ ಮಾಡುವಂತೆ ನೀಡಿದ ಕರೆಯನ್ನು ಧಿಕ್ಕರಿಸುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳಲು ವಕೀಲರ ಸಂಘಕ್ಕೆ ಯಾವುದೇ...

The post ಕೋರ್ಟ್ ಕಲಾಪ ಬಹಿಷ್ಕಾರ ಕರೆ ಧಿಕ್ಕರಿಸುವ ವಕೀಲರ ವಿರುದ್ದ ಕ್ರಮಕೈಗೊಳ್ಳುವ ಅಧಿಕಾರ, ಹಕ್ಕು ವಕೀಲರ ಸಂಘಕ್ಕಿದೆಯೇ..? appeared first on Law Guide Kannada.

]]>
ತ್ರಿಪುರ: ಕೋರ್ಟ್ ಕಲಾಪ ಬಹಿಷ್ಕಾರ ಮಾಡುವಂತೆ ನೀಡಿದ ಕರೆಯನ್ನು ಧಿಕ್ಕರಿಸುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳಲು ವಕೀಲರ ಸಂಘಕ್ಕೆ ಯಾವುದೇ ಹಕ್ಕು, ಅಧಿಕಾರವಿಲ್ಲ ಎಂದು ತ್ರಿಪುರ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವಕೀಲರ ಸಂಘದ “ಬಹಿಷ್ಕಾರ ನಿರ್ಣಯ’ವನ್ನು ಧಿಕ್ಕರಿಸಿ ಅಗರ್ತಲಾದಲ್ಲಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗದ ಮುಂದೆ ಹಾಜರಾದ ವಕೀಲರನ್ನು ವಕೀಲರ ಸಂಘ ಅಮಾನತುಗೊಳಿಸಿತ್ತು.

ತ್ರಿಪುರಾ ಬಾರ್ ಅಸೋಸಿಯೇಷನ್ ಸದಸ್ಯರು ಮತ್ತು ಕಿರಿಯ ವಕೀಲರು, ತಮ್ಮ ವೃತ್ತಿಪರ ಬಾಧ್ಯತೆಗಳಿಗೆ ಅನುಗುಣವಾಗಿ ಗ್ರಾಹಕ ವೇದಿಕೆಯ ಮುಂದೆ ಹಾಜರಾದ ಹಿನ್ನೆಲೆಯಲ್ಲಿ ಅವರಿಗೆ ಫೆಬ್ರವರಿ 7 ರಂದು ನೀಡಲಾದ ಶೋಕಾಸ್ ನೋಟಿಸ್ ಮತ್ತು ಅದರ ಪಶ್ಚಾತ್ ಪರಿಣಾಮವಾದ ಅಮಾನತು ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಸಂಬಂಧ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸಿದ್ದಕ್ಕಾಗಿ ತ್ರಿಪುರ ಬಾರ್ ಅಸೋಸಿಯೇಷನ್ ನಿಂದ ಅಮಾನತು ಮತ್ತು ಶಿಸ್ತು ಕ್ರಮವನ್ನು ಎದುರಿಸಿದ ಕಿರಿಯ ವಕೀಲರಿಗೆ ತ್ರಿಪುರ ಹೈಕೋರ್ಟ್ ನ್ಯಾಯಮೂರ್ತಿ ಟಿ ಅಮರನಾಥ್ ಗೌಡ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನ್ಯಾಯಪೀಠವು ಮಧ್ಯಂತರ ಪರಿಹಾರ ನೀಡಿದೆ.

2026ರ ಜನವರಿ 19 ರಂದು ಬಾರ್ ಅಸೋಸಿಯೇಷನ್ ತೆಗೆದುಕೊಂಡ ನಿರ್ಣಯದ ಜಾರಿಯನ್ನು ಹಾಗೂ ಕಿರಿಯ ವಕೀಲರ ವಿರುದ್ಧ ಪ್ರಾರಂಭಿಸಲಾದ ಶೋಕಾಸ್ ನೋಟಿಸ್ ಮತ್ತು ಅಮಾನತು ಸೇರಿದಂತೆ ಎಲ್ಲಾ ಶಿಸ್ತು ಕ್ರಮಗಳನ್ನು ನ್ಯಾಯಪೀಠ ತಡೆಹಿಡಿಯಿತು ವಕೀಲರ ಸಂಘ ಬಹಿಷ್ಕಾರದ ಕರೆ ನೀಡಿದ್ದರೂ ಸಹ ನ್ಯಾಯಾಲಯಕ್ಕೆ ಹಾಜರಾಗಿದ್ದಕ್ಕಾಗಿ ಬಾರ್ ಅಸೋಸಿಯೇಷನ್ ಗಳು ವಕೀಲರಿಗೆ ದಂಡ ವಿಧಿಸಲು ಸಾಧ್ಯವಿಲ್ಲ. ಕಕ್ಷಿದಾರರನ್ನು ಪ್ರತಿನಿಧಿಸಲು ಮತ್ತು ನ್ಯಾಯಾಲಯಕ್ಕೆ ಸಹಾಯ ಮಾಡಲು ವಕೀಲರ ಕಾಯ್ದೆಯ ಅಡಿಯಲ್ಲಿ ವಕೀಲರು ಶಾಸನಬದ್ಧ ಕರ್ತವ್ಯವನ್ನು ಹೊಂದಿದ್ದಾರೆ. ಈ ಕರ್ತವ್ಯವನ್ನು ವಕೀಲರ ಸಂಘದ ಯಾವುದೇ ನಿರ್ಣಯ ಅಥವಾ ಉಪಕಾನೂನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

“ವಕೀಲರ ಸಂಘದ ಪದಾಧಿಕಾರಿಗಳ ಕ್ರಮವು ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾಗಿದೆ ಮತ್ತು ವಕೀಲರ ಸಂಘದ ಪದಾಧಿಕಾರಿಗಳ ಅಂತಹ ಕ್ರಮ ದೋಷಪೂರಿತವಾಗಿದೆ. ಈ ಅಮಾನತನ್ನು ಮನ್ನಿಸಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಅದನ್ನು ಸರಿಪಡಿಸಬೇಕಾಗಿದೆ. ಯಾವುದೇ ಬಾರ್ ಕೌನ್ಸಿಲ್ ಅಥವಾ ಬಾರ್ ಅಸೋಸಿಯೇಷನ್ ನಿಯಮಗಳು ಮತ್ತು ನಿಬಂಧನೆಗಳು ಅಥವಾ ಅದರ ಉಪ ಕಾನೂನುಗಳು ನ್ಯಾಯಾಲಯಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸುವುದಿಲ್ಲ” ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ದಾಖಲೆಗಳ ಪ್ರಕಾರ, ಬಾರ್ ಅಸೋಸಿಯೇಷನ್ ಜನವರಿ 19 ರಂದು ಅಗರ್ತಲಾದ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗದ ಮುಂದೆ ಹಾಜರಾಗದಂತೆ ತನ್ನ ಸದಸ್ಯರನ್ನು ಕರೆಯುವ ನಿರ್ಣಯವನ್ನು ಅಂಗೀಕರಿಸಿತ್ತು. ಫೆಬ್ರವರಿ 6 ರಂದು ಅರ್ಜಿದಾರರು ವೇದಿಕೆಯ ಮುಂದೆ ಹಾಜರಾದಾಗ, ಅವರು ಉದ್ದೇಶಪೂರ್ವಕವಾಗಿ ನಿರ್ಣಯವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಂಘವು ಶೋಕಾಸ್ ನೋಟಿಸ್ ನೀಡಿತ್ತು.

ಕಿರಿಯ ವಕೀಲರು ತಮ್ಮ ವಿವರಣೆಯನ್ನು ಸಲ್ಲಿಸಿ ತ್ರಿಪುರಾದ ಬಾರ್ ಕೌನ್ಸಿಲ್ ಮೊರೆ ಹೋಗಿದ್ದರು. ಬಾರ್ ಕೌನ್ಸಿಲ್ ಕೂಡ ವಕೀಲರ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಆದರೆ, ಸ್ಥಳೀಯ ವಕೀಲರ ಸಂಘ ಶಿಸ್ತು ಕ್ರಮವನ್ನು ಮುಂದುವರೆಸಿದ್ದು, ರಾಜ್ಯ ವಕೀಲರ ಪರಿಷತ್ತಿನ ಮಧ್ಯಪ್ರವೇಶಿಸುವ ಅಧಿಕಾರವನ್ನು ಪ್ರಶ್ನಿಸಿತು. ಇದನ್ನು ಗಮನಿಸಿದ ನ್ಯಾಯಾಲಯವು, ಅರ್ಜಿದಾರರ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಿದ ವಿಧಾನಕ್ಕೆ ತೀವು ಅಸಮ್ಮತಿ ವ್ಯಕ್ತಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಕೋರ್ಟ್ ಕಲಾಪ ಬಹಿಷ್ಕಾರ ಕರೆ ಧಿಕ್ಕರಿಸುವ ವಕೀಲರ ವಿರುದ್ದ ಕ್ರಮಕೈಗೊಳ್ಳುವ ಅಧಿಕಾರ, ಹಕ್ಕು ವಕೀಲರ ಸಂಘಕ್ಕಿದೆಯೇ..? appeared first on Law Guide Kannada.

]]>