Judgement Archives - Law Guide Kannada https://www.lawguidekannada.com/category/judgement/ Online Guide Sat, 30 Dec 2023 02:28:58 +0000 en-US hourly 1 https://wordpress.org/?v=7.0 http://www.lawguidekannada.com/wp-content/uploads/2022/09/cropped-Logo_512-32x32.jpg Judgement Archives - Law Guide Kannada https://www.lawguidekannada.com/category/judgement/ 32 32 ಸರ್ಕಾರಿ ನೌಕರನಿಗೆ ಬಲ ತುಂಬಿದ ಭಾ ದ.‌ಸಂ‌ಹಿತೆ ಕಲಂ 188 – ಹಲವು ಸಂದರ್ಭಗಳಲ್ಲಿ ಕಾನೂನಾತ್ಮಕ ಆದೇಶ ಹೊರಡಿಸುವ ಹಕ್ಕು ನೀಡಿದ ಭಾ.ದಂ.ಸಂಹಿತೆ http://www.lawguidekannada.com/%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%a8%e0%b3%8c%e0%b2%95%e0%b2%b0%e0%b2%a8%e0%b2%bf%e0%b2%97%e0%b3%86-%e0%b2%ac%e0%b2%b2-%e0%b2%a4%e0%b3%81%e0%b2%82%e0%b2%ac/ Sat, 30 Dec 2023 02:28:58 +0000 https://www.lawguidekannada.com/?p=250 ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕ ನೌಕರನಿಂದ ಆದೇಶ, ಆದೇಶ ಉಲ್ಲಂಘಿಸಿದವರ ವಿರುದ್ದ ಕಾನೂನು ಪ್ರಕ್ರಿಯೆಯ ಪಕ್ಷಿ ನೋಟ ಸಮಾಜದಲ್ಲಿ ಕಾನೂನು...

The post ಸರ್ಕಾರಿ ನೌಕರನಿಗೆ ಬಲ ತುಂಬಿದ ಭಾ ದ.‌ಸಂ‌ಹಿತೆ ಕಲಂ 188 – ಹಲವು ಸಂದರ್ಭಗಳಲ್ಲಿ ಕಾನೂನಾತ್ಮಕ ಆದೇಶ ಹೊರಡಿಸುವ ಹಕ್ಕು ನೀಡಿದ ಭಾ.ದಂ.ಸಂಹಿತೆ appeared first on Law Guide Kannada.

]]>
ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕ ನೌಕರನಿಂದ ಆದೇಶ, ಆದೇಶ ಉಲ್ಲಂಘಿಸಿದವರ ವಿರುದ್ದ ಕಾನೂನು ಪ್ರಕ್ರಿಯೆಯ ಪಕ್ಷಿ ನೋಟ
ಸಮಾಜದಲ್ಲಿ ಕಾನೂನು ಮತ್ತು ಸುವ್ಯಸ್ಥೆಯನ್ನು ಕಾಪಾಡಲು ಸರ್ಕಾರಿ ನೌಕರರಿಗೆ ಕಾನೂನಿನಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಉದಾಹರಣೆಗೆ ಅಕ್ರಮಕೂಟ ಚದುರಿಸಲು, ನಿರ್ಧಿಷ್ಟ ರಸ್ತೆಯಲ್ಲಿ ಧಾರ್ಮಿಕ ಮೆರವಣಿಗೆಗಳು ತೆರಳದಂತೆ, ವಿವಾದಿತ ಸ್ಥಳ, ಸ್ವತ್ತನ್ನು ಯತಾವತ್ತಾಗಿ ಕಾಪಾಡುವಂತೆ ಸಾರ್ವಜನಿಕ ಹಿತ ದೃಷ್ಟಿಯಿಂದ ಆದೇಶಿಸುವ ಅಧಿಕಾರ ಸರ್ಕಾರಿ ನೌಕರನಿಗೆ ಕಲ್ಪಿಸಲಾಗಿದೆ. (ಭಾ.ದ.ಸಂ ಕಲಂ. 188) ಈ ಕಲಂ ನ ರೀತ್ಯದ ಅಪರಾದಗಳು ಸಂಜ್ಞೇಯ, ಜಾಮೀನಿಯ ಹಾಗೂ ರಾಜಿಯಾಗದ ಅಪರಾಧವಾಗಿರುತ್ತದೆ.
ಅಪರಾಧವಾಗಲು ಅವಶ್ಯಕ ಅಂಶಗಳು (ಭಾ.ದಂ.ಸಂ ಕಲಂ.188)
1. ಸರ್ಕಾರಿ ಅಧಿಕಾರಿ ಕಾನೂನು ಸಮ್ಮತವಾಗಿ ಆದೇಶಿಸಲು ಶಕ್ತನಾಗಿರಬೇಕು.
2. ಅಂತಹ ಸರ್ಕಾರಿ ಅಧಿಕಾರಿಯಿಂದ ಆದೇಶವಾಗಿರಬೇಕು.
3. ಆದೇಶದ ರೀತ್ಯಾ ಸಾರ್ವಜನಿಕ ಸ್ವಾಸ್ಥ್ಯ ಕಾಪಾಡಲು ಸೂಚಿಸಿರಬೇಕು.
4. ಆದೇಶ ಪ್ರಚಾರ ಅಥವಾ ಪ್ರಕಟಿಸಿರಬೇಕು.
5. ಆದೇಶದ ಬಗ್ಗೆ ಆರೋಪಿತನಿಗೆ ತಿಳುವಳಿಕೆ ಅಥವಾ ಜ್ಞಾನ ಇರಬೇಕು.
6. ಆದೇಶ ಪಾಲಿಸದೇ ಉಲ್ಲಂಘಿಸಿರಬೇಕು.
7. ಉಲ್ಲಂಘನೆಯಿಂದ ಸಾರ್ವಜನಿಕರಿಗೆ ಕಿರಿಕಿರಿ, ಅಡ್ಡಿ, ದೊಂಬಿ, ಗಾಯ, ಹಾನಿ, ಜೀವ ಮತ್ತು ಸ್ವತ್ತಿನ ಸುರಕ್ಷತೆಗೆ ದಕ್ಕೆ ಉಂಟಾಗುವ ಸನ್ನಿವೇಶ ಉಂಟಾಗಿರಬೇಕು.

ದೂರು ದಾಖಲಿಸುವ ಪ್ರಕ್ರಿಯೆ

ಇಂತಹ ಉಲ್ಲಂಘನೆಯ ಅಪರಾಧ, ಪ್ರಚೋದನೆ, ಪ್ರಯತ್ನ, ಒಳಸಂಚಿಗೆ ಸಂಬಂಧಿಸಿದಂತೆ ಆದೇಶಿತ ಅಧಿಕಾರಿ ಅಥವಾ ಅವರಿಂದ ಲಿಖಿತವಾಗಿ ನಿರ್ದೇಶಿಸಲ್ಪಟ್ಟ ಅಧೀನ ಅಧಿಕಾರಿಯ ಮೌಖಿಕ ಅಥವಾ ಲಿಖಿತ ದೂರನ್ನು ದಂಡಾಧಿಕಾರಿಯ ಮುಂದೆ ಸಲ್ಲಿಸಬೇಕಾಗುತ್ತದೆ. ದಂಡಾಧಿಕಾರಿಯು ಸ್ವೀಕರಿಸಿದ ದೂರಿನ ಅನುಗುಣವಾಗಿ ಕ್ರಮಕೈಗೊಳ್ಳಬಹುದಾಗಿರುತ್ತದೆ. (ದಂ.ಪ್ರ.ಸಂ ಕಲಂ. 195, 200, 2 (ಡಿ))

ಪೊಲೀಸರು ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಿರ್ವಹಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ಒಳಗೊಂಡಿರುವುದಿಲ್ಲ. (ಕಲಂ. 173 (2), 2 (ಆರ್). ಇಂತಹ ವರದಿ ಆಧರಿಸಿ ನ್ಯಾಯಾಲಯ ಸಂಜ್ಞೇಯತೆ ತೆಗೆದುಕೊಳ್ಳಲು ನಿರಾಕರಿಸಬಹುದು, ಬಿಡುಗಡೆ ಮಾಡಬಹುದು ಅಥವಾ ರದ್ದುಗೊಳಿಸಬಹುದು. ಈ ಹಿನ್ನೆಲೆಯಲ್ಲಿ ಆರೋಪಿತರನ್ನು ಅಭಿಯೋಜಿಸುವ ಕುರಿತಂತೆ ಘನ ಸರ್ವೋಚ್ಛ ಮತ್ತು ಉಚ್ಛನ್ಯಾಯಾಲಯದ ತೀರ್ಪುಗಳು ಕೆಳಕಂಡಂತಿವೆ.

1. ಪ್ರಭಾಕರ್ ವಿ/ಎಸ್ ಸ್ಟೇಟ್ ಆಫ್ ಕರ್ನಾಟಕ: (ಕ್ರಿಮಿನಲ್ ಪಿಟಿಷನ್ ಸಂಖ್ಯೆ. 4559/2017)
ಭಾ.ದಂ.ಸಂ ಕಲಂ. 172 ರಿಂದ 188 ರವರೆಗೆ ಉಲ್ಲೇಖಿಸಿರುವ ಅಪರಾಧಗಳನ್ನು ಪೊಲೀಸ್ ಅಧಿಕಾರಿಗಳು ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಂಡು ತನಿಖೆ ನಿರ್ವಹಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತಿಲ್ಲ. ಈ ರೀತಿ ಸಲ್ಲಿಸುವ ವರದಿಗಳನ್ನು ನ್ಯಾಯಾಲಯ ಪರಿಗಣಿಸುವಂತಿಲ್ಲ.

2. ಜೀವಾನಂದಮ್ ವಿರುದ್ದ ರಾಜ್ಯ (ಮದ್ರಾಸ್ ಉಚ್ಛ ನ್ಯಾಯಾಲಯದ ಎಂ.ಡಿ ಕ್ರಿಮಿನಲ್ ಓ.ಪಿ ಸಂಖ್ಯೆ 1356/2018 ರ ತೀರ್ಪಿನ ದಿನಾಂಕ: 20.11.2018 )
ಭಾ.ದಂ.ಸಂ ಕಲಂ. 188 ರ ರೀತ್ಯಾ ಉಲ್ಲಂಘನೆಯ ಆರೋಪದ ಅಭಿಯೋಜನೆಗೆ ಕಲಂ.195 ರ ರೀತ್ಯದ ಪ್ರಕ್ರಿಯೆ ಕಡ್ಡಾಯವಾಗಿರುತ್ತದೆ. ಇಲ್ಲದಿದ್ದಲ್ಲಿ ಅಂತಹ ಪ್ರಕ್ರಿಯೆ ಗಿoiಜ ಚಿb iಟಿiಣio ಎಂದು ಪರಿಗಣಿತವಾಗುತ್ತದೆ.
ಗಿoiಜ ಚಿb iಟಿiಣio ಎಂಬುದು ಲ್ಯಾಟಿನ್ ಪದವಾಗಿದ್ದು, ಪ್ರಾರಂಬಿಕ ಹಂತದಿಂದ ಅಮಾನ್ಯವೆಂದು ಪರಿಗಣಿಸಲ್ಪಡುತ್ತದೆ. ಉದಾಹರಣೆ: ಬೆದರಿಸಿ ಒಪ್ಪಂದ ಪತ್ರಕ್ಕೆ ಸಹಿ ಪಡೆದರೆ ಅಂತಹ ಒಪ್ಪಂದ ಪ್ರಾರಂಬಿಕ ಹಂತದಿಂದ ಅಮಾನ್ಯವಾಗುತ್ತದೆ.

3. ಸಿ. ಮುನಿಯಪ್ಪನ್ ಮತ್ತು ಇತರರ ವಿರುದ್ದ ತಮಿಳುನಾಡು ರಾಜ್ಯ 30.10.2010
ದಂ.ಪ್ರ.ಸಂ ಕಲಂ. 195 ರ ಉದ್ದೇಶ ಯಾವುದೇ ವ್ಯಕ್ತಿಯ ಮೇಲೆ ಅಪರಾಧದ ಅಭಿಯೋನೆಗೊಳಿಸಲು ರಕ್ಷಿಸುವ ಉದ್ದೇಶದಿಂದ ರಚಿತವಾಗಿದೆ ಇದರಿಂದ ಕ್ರಿಮಿನಲ್ ನ್ಯಾಯಾಲಯಗಳಲ್ಲಿ ದೀರ್ಘ ವಿಚಾರಣೆಯಿಂದ ಆಗುವ ಅತ್ಯಮೂಲ್ಯ ಸಮಯದ ವಿನಿಯೋಗವನ್ನು ತಡೆಯುವುದಾಗಿದೆ.
ದಂಡನೆ
ಸಾಮಾನ್ಯ ಸ್ವರೂಪದ ಉಲ್ಲಂಘನೆಗೆ 01 ತಿಂಗಳವರೆಗಿನ ಕಾರಾವಾಸ ಅಥವಾ 200 ರೂ ರವರೆಗಿನ ದಂಡ ಅಥವಾ ಎರಡರಿಂದಲೂ ದಂಡಿತನಾಗತಕ್ಕದ್ದು, ಹೆಚ್ಚಿನ ಮಟ್ಟದ ಉಲ್ಲಂಘನೆಗೆ 06 ತಿಂಗಳವರೆಗಿನ ಕಾರಾವಾಸ ಅಥವಾ 1000 ರೂ ರವರೆಗಿನ ಅಥವಾ ಎರಡರಿಂದಲೂ ದಂಡಿತನಾಗತಕ್ಕದ್ದು.

ಒಟ್ಟಾರೆಯಾಗಿ ಇಂತಹ ಅಪರಾಧವಾಗಲು ಸಾರ್ವಜನಿಕ ನೌಕರನಿಂದ ಪ್ರಕಟಿಸಿದ ಆದೇಶ ತಿಳಿದ ವ್ಯಕ್ತಿ ಉಲ್ಲಂಘಿಸಿದ, ಕಾರಣದಿಂದ ಸಾರ್ವಜನಿಕ ಸ್ವಾಸ್ಥ್ಯ ಕಾನೂನು ಸುವ್ಯವಸ್ಥೆಗೆ ದಕ್ಕೆಯಾದರೆ ಆದೇಶಿತ ಅಧಿಕಾರಿಯ ದೂರಿನನ್ವಯ ದಂಡಾಧಿಕಾರಿ ಸಂಜ್ಞೇಯತೆ ಪರಿಗಣಿಸಿ ನಿರ್ಣಯಿಸುವ ಪ್ರಕ್ರಿಯೆಯಾಗಿರುತ್ತದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಸರ್ಕಾರಿ ನೌಕರನಿಗೆ ಬಲ ತುಂಬಿದ ಭಾ ದ.‌ಸಂ‌ಹಿತೆ ಕಲಂ 188 – ಹಲವು ಸಂದರ್ಭಗಳಲ್ಲಿ ಕಾನೂನಾತ್ಮಕ ಆದೇಶ ಹೊರಡಿಸುವ ಹಕ್ಕು ನೀಡಿದ ಭಾ.ದಂ.ಸಂಹಿತೆ appeared first on Law Guide Kannada.

]]>
ಅಪಘಾತ ಸಂಭವಿಸಿದರೆ ಮೂಲ ಮಾಲೀಕರೇ ನೇರ ಹೊಣೆಗಾರರು: ಹೈಕೋರ್ಟ್ ಮಹತ್ವದ ತೀರ್ಪು http://www.lawguidekannada.com/%e0%b2%85%e0%b2%aa%e0%b2%98%e0%b2%be%e0%b2%a4-%e0%b2%b8%e0%b2%82%e0%b2%ad%e0%b2%b5%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86-%e0%b2%ae%e0%b3%82%e0%b2%b2-%e0%b2%ae%e0%b2%be%e0%b2%b2/ Sat, 16 Sep 2023 08:54:28 +0000 https://www.lawguidekannada.com/?p=179 ಫಾರಂ ಸಂಖ್ಯೆ 29ರಲ್ಲಿ ಸಹಿ ಮತ್ತು ನಿರಾಪೇಕ್ಷಣಾ ಪ್ರಮಾಣ ಪತ್ರವನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್.ಟಿ.ಒ.) ದಾಖಲೆಗಳಲ್ಲಿ ನಮೂದಿಸದ ಹೊರತು...

The post ಅಪಘಾತ ಸಂಭವಿಸಿದರೆ ಮೂಲ ಮಾಲೀಕರೇ ನೇರ ಹೊಣೆಗಾರರು: ಹೈಕೋರ್ಟ್ ಮಹತ್ವದ ತೀರ್ಪು appeared first on Law Guide Kannada.

]]>
ಫಾರಂ ಸಂಖ್ಯೆ 29ರಲ್ಲಿ ಸಹಿ ಮತ್ತು ನಿರಾಪೇಕ್ಷಣಾ ಪ್ರಮಾಣ ಪತ್ರವನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್.ಟಿ.ಒ.) ದಾಖಲೆಗಳಲ್ಲಿ ನಮೂದಿಸದ ಹೊರತು ವಾಹನದ ಮಾಲೀಕರ ಹೆಸರು ಸ್ವಯಂಚಾಲಿತವಾಗಿ ವರ್ಗಾವಣೆಗೊಳ್ಳುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.


2015ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾತಕಿ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಪ್ರಶ್ನಿಸಿ ಮಹಾರಾಷ್ಟ್ರದ ಕೊಲ್ಹಾಪುರದ ಅವಿನಾಷ್ ಹರಿಬಾ ಅಳಬೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಶ್ರೀಷಾನಂದ ಅವರು ಧಾರವಾಡ ಪೀಠದಲ್ಲಿ ಈ ಆದೇಶ ನೀಡಿದ್ದಾರೆ.


ಅಪಘಾತ ಸಂಭವಿಸಿದಾಗ ವಾಹನದ ಮಾಲೀಕತ್ವವು ಶಶಿಕಾಂತ ಶೋಮಗೌಡ ಪಾಟೀಲ್ ಎಂಬುವರ ಹೆಸರಿನಲ್ಲಿತ್ತು. ಆದರೆ ಅವರು ವಾಹನವನ್ನು ಮಾರಾಟ ಮಾಡಿದಾಗ ಖರೀದಿದಾರರ ಹೆಸರಿಗೆ ವರ್ಗಾಯಿಸಿರುವುದಿಲ್ಲ ಮತ್ತು ಆರ್.ಟಿ.ಒ. ರಿಜಿಸ್ಟರ್ನಲ್ಲಿ ನಮೂದಿಸಿರುವುದಿಲ್ಲ. ಹಿಂದಿನ ಮಾಲೀಕರು ಆರ್.ಟಿ.ಒ. ದಾಖಲೆಗಳಿಂದ ತನ್ನ ಹೆಸರನ್ನು ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮತ್ತು ನಂತರದ ಖರೀದಿದಾರರ ಹೆಸರನ್ನು ನಮೂದಿಸದಿದ್ದರೆ ಅದರ ಹೊಣೆಗಾರಿಕೆಯನ್ನು ಹಿಂದಿನ ಮಾಲೀಕರೇ ಭರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
‘ಹೆಸರು ವರ್ಗಾಯಿಸದ ಕಾರಣ ತನಿಖಾ ಸಂಸ್ಥೆಯು ಅರ್ಜಿದಾರರನ್ನು ಆರೋಪಿ ಎಂದು ಘೋಷಿಸಲು ಅನುಮತಿಯಿಲ್ಲ. ಈ ಬಗ್ಗೆ ತನಿಖೆ ನಡೆಸಿ ವಾಹನದ ಮಾಲೀಕ ಮತ್ತು ಅಪಘಾತಕ್ಕೆ ಕಾರಣರಾದವರ ವಿರುದ್ಧ ವರದಿ ಸಲ್ಲಿಸಲು ಪೊಲೀಸರಿಗೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.


ಪ್ರಕರಣದ ವಿವರ : ಬೆಳಗಾವಿಯಿಂದ ಕಾಕತಿ ಕಡೆಗೆ ಹೋಗುತ್ತಿದ್ದ ಕಾರು, ಸರಕು ಸಾಗಣೆ ವಾಹನ ಮತ್ತು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಹಾಗೂ ಸರಕು ಸಾಗಣೆ ವಾಹನದಲ್ಲಿದ್ದವರು ಗಾಯಗೊಂಡಿದ್ದರು. ಅಪಘಾತ ಸಂಭವಿಸದಾಗ ತಾವು ವಾಹನದ ಮಾಲೀಕರಾಗಿರಲಿಲ್ಲ, ಆದ್ದರಿಂದ ತಾನು ಆರೋಪಿ ಎಂದು ಪರಿಗಣಿಸಲಾಗುವುದಿಲ್ಲ ಎಂದು
 ತನಿಖಾ ಸಂಸ್ಥೆಯ ಗಮನಕ್ಕೆ ತಂದರೂ ತನ್ನ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.

The post ಅಪಘಾತ ಸಂಭವಿಸಿದರೆ ಮೂಲ ಮಾಲೀಕರೇ ನೇರ ಹೊಣೆಗಾರರು: ಹೈಕೋರ್ಟ್ ಮಹತ್ವದ ತೀರ್ಪು appeared first on Law Guide Kannada.

]]>
ವಕೀಲರ ಸಮ್ಮುಖದಲ್ಲಿ ನಡೆಯುವ ವಿವಾಹಕ್ಕೂ ಮನ್ನಣೆ: ಸುಪ್ರೀಂಕೋರ್ಟ್ http://www.lawguidekannada.com/%e0%b2%b5%e0%b2%95%e0%b3%80%e0%b2%b2%e0%b2%b0-%e0%b2%b8%e0%b2%ae%e0%b3%8d%e0%b2%ae%e0%b3%81%e0%b2%96%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%a1%e0%b3%86%e0%b2%af%e0%b3%81%e0%b2%b5/ Fri, 15 Sep 2023 01:07:17 +0000 https://www.lawguidekannada.com/?p=190 ವಕೀಲರ ಕೊಠಡಿಯಲ್ಲಿಯೇ ಗಂಡು-ಹೆಣ್ಣು ಪರಸ್ಪರ ಹೂವಿನ ಹಾರಗಳನ್ನು ಬದಲಾಯಿಸಿಕೊಂಡು ಅಥವಾ ಉಂಗುರ ತೊಡಿಸುವ ಮೂಲಕ ಸರಳವಾಗಿ ಮದುವೆಯಾಗಬಹುದು. ಇದಕ್ಕೂ ಹಿಂದೂ...

The post ವಕೀಲರ ಸಮ್ಮುಖದಲ್ಲಿ ನಡೆಯುವ ವಿವಾಹಕ್ಕೂ ಮನ್ನಣೆ: ಸುಪ್ರೀಂಕೋರ್ಟ್ appeared first on Law Guide Kannada.

]]>
ವಕೀಲರ ಕೊಠಡಿಯಲ್ಲಿಯೇ ಗಂಡು-ಹೆಣ್ಣು ಪರಸ್ಪರ ಹೂವಿನ ಹಾರಗಳನ್ನು ಬದಲಾಯಿಸಿಕೊಂಡು ಅಥವಾ ಉಂಗುರ ತೊಡಿಸುವ ಮೂಲಕ ಸರಳವಾಗಿ ಮದುವೆಯಾಗಬಹುದು. ಇದಕ್ಕೂ ಹಿಂದೂ ವಿವಾಹ ಕಾಯ್ದೆಯಲ್ಲಿ ಮನ್ನಣೆ ಸಿಗಲಿದೆ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ.
ಅಪರಿಚಿತರ ಸಮ್ಮುಖದಲ್ಲಿ ರಹಸ್ಯವಾಗಿ ನಡೆಯುವ ವಿವಾಹವನ್ನು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಮತ್ತು 7(ಎ) ಅಡಿ ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿತು.
ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ರವೀಂದ್ರಭಟ್ ಮತ್ತು ಅರವಿಂದಕುಮಾರ್ ಅವರಿದ್ದ ವಿಭಾಗೀಯ ಪೀಠವು ‘ನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸುವುದಕ್ಕಷ್ಟೇ ವಕೀಲರ ಸಾಮಥ್ರ್ಯ ಸೀಮಿತಗೊಂಡಿಲ್ಲ, ಸ್ನೇಹಿತ, ಸಂಬಂಧಿ ಹಾಗೂ ಸಾಮಾಜಿಕ ಕಾರ್ಯಕರ್ತನ ಸ್ಥಾನದಲ್ಲಿ ನಿಂತುಕೊಂಡು ಮದುವೆ ಮಾಡಿಸಬಹುದು ಎಂದು ಕಾಯ್ದೆಯ ಸೆಕ್ಷನ್ (ಎ) ಅಡಿ ಸ್ಪಷ್ಟಪಡಿಸಲಾಗಿದೆ (ತಮಿಳುನಾಡು ಸರ್ಕಾರದ ತಿದ್ದುಪಡಿ ಕಾಯ್ದೆ) ಎಂದು ಹೇಳಿದೆ.
ಸಂಬಂಧಿಕರು, ಸ್ನೇಹಿತರು ಅಥವಾ ಇತರೆ ವ್ಯಕ್ತಿಗಳ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಯುವ ಮದುವೆಗೆ ಸೆಕ್ಷನ್ (ಎ) ಅನ್ವಯಿಸುತ್ತದೆ. ಅರ್ಚಕರ ಉಪಸ್ಥಿತಿ ಇಲ್ಲದೆಯೇ ನಡೆಯುವ ವಿವಾಹಕ್ಕೂ ಕಾನೂನಿನ ಮನ್ನಣೆ ನೀಡುವುದಕ್ಕೆ ಈ ಸೆಕ್ಷನ್ ಅವಕಾಶ ಕಲ್ಪಿಸಲಿದೆ ಎಂದು ಹೇಳಿದೆ.

The post ವಕೀಲರ ಸಮ್ಮುಖದಲ್ಲಿ ನಡೆಯುವ ವಿವಾಹಕ್ಕೂ ಮನ್ನಣೆ: ಸುಪ್ರೀಂಕೋರ್ಟ್ appeared first on Law Guide Kannada.

]]>
ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಜಯಕುಮಾರ್ ಅಮಾನತು http://www.lawguidekannada.com/%e0%b2%9c%e0%b2%a8%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%a8%e0%b2%bf%e0%b2%a7%e0%b2%bf%e0%b2%97%e0%b2%b3-%e0%b2%b5%e0%b2%bf%e0%b2%b6%e0%b3%87%e0%b2%b7-%e0%b2%b8%e0%b3%86%e0%b2%b7%e0%b2%a8/ Thu, 14 Sep 2023 17:43:56 +0000 https://www.lawguidekannada.com/?p=178   ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಇತರ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ...

The post ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಜಯಕುಮಾರ್ ಅಮಾನತು appeared first on Law Guide Kannada.

]]>
 

ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಇತರ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಿದ ಸೆಷನ್ಸ್ ನ್ಯಾಯಾಧೀಶರನ್ನು ತೆಲಂಗಾಣ ಹೈಕೋರ್ಟ್ ಅಮಾನತುಗೊಳಿಸಿದೆ .

ಈ ವಿಚಾರದಲ್ಲಿ ನ್ಯಾಯಾಧೀಶರು ಅನಾವಶ್ಯಕ ಆತುರದಿಂದ ವರ್ತಿಸಿದ್ದಾರೆ ಎಂದು ಹೈಕೋರ್ಟ್ ಹೇಳಿದೆ. ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಜಯಕುಮಾರ್ ಅಮಾನತುಗೊಂಡವರು.

ರಾಘವೇಂದ್ರ ರಾಜು ಅವರು ಸಿಆರ್‌ಪಿಸಿಯ ಸೆಕ್ಷನ್ 200 ರ ಅಡಿಯಲ್ಲಿ ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ಯಾವುದೇ ಪ್ರಾಥಮಿಕ ತನಿಖೆ ನಡೆಸದೆ ಮತ್ತು ದೂರುದಾರರ ಹೇಳಿಕೆಯನ್ನು ದಾಖಲಿಸದೆ ಅನಾವಶ್ಯಕ ತರಾತುರಿಯಲ್ಲಿ ವರ್ತಿಸಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.

2018ರ ಚುನಾವಣೆ ವೇಳೆ ಸಲ್ಲಿಸಿದ್ದ ಅಪಿಡವಿಟ್ ತಿರುಚಲಾಗಿದೆ ಎಂದು ಸಚಿವ ಶ್ರೀನಿವಾಸ ಗೌಡ, ಸಿಇಸಿ ರಾಜೀವ್‌ಕುಮಾರ್‌ ಹಾಗೂ ಇತರರ ವಿರುದ್ಧ ಆಗಸ್ಟ್‌ನಲ್ಲಿ ಎಫ್ ಐ ಆರ್ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಸಚಿವ ಶ್ರೀನಿವಾಸ್ ಅವರನ್ನು ಮೊದಲ ಆರೋಪಿ ಎಂದು ಹೆಸರಿಸಲಾಗಿದ್ದು, ಸಿಇಸಿ ಕುಮಾರ್ ಮತ್ತು ಇತರ ಹಲವಾರು ಅಧಿಕಾರಿಗಳನ್ನು ಸಹ ಆರೋಪಿಗಳನ್ನಾಗಿ ಮಾಡಲಾಗಿದೆ.

ಎಂಪಿ/ಎಂಎಲ್ಎಗಳ ವಿಚಾರಣಾ ನ್ಯಾಯಾಲಯದಲ್ಲಿ ವಿಶೇಷ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಕೆ.ಜಯಕುಮಾರ್ ವಿರುದ್ಧ ಆಡಳಿತಾತ್ಮಕ ಕ್ರಮವಾಗಿ ಅಮಾನತು ಆದೇಶ ನೀಡಲಾಗಿದೆ. ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೈಕೋರ್ಟ್‍ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ತೆಲಂಗಾಣ ನಾಗರಿಕ ಸೇವೆಗಳ ನಿಯಮಗಳು, 1991ರಡಿ ನ್ಯಾಯಾಂಗ ಅಧಿಕಾರಿಯನ್ನು ಉಚ್ಚ ನ್ಯಾಯಾಲಯವು ಅಮಾನತುಗೊಳಿಸಿದೆ.

The post ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಜಯಕುಮಾರ್ ಅಮಾನತು appeared first on Law Guide Kannada.

]]>
ಆರೋಪಿ ಬಿಟ್ಟು ಬೇರೆಯವನನ್ನು ಬಂಧಿಸಿದಕ್ಕೆ 25 ಲಕ್ಷ ಪರಿಹಾರ – ಪೊಲೀಸರಿಂದ ದಂಡ ವಸೂಲಿಗೆ ಹೈಕೋರ್ಟ್ ಸೂಚನೆ http://www.lawguidekannada.com/%e0%b2%86%e0%b2%b0%e0%b3%8b%e0%b2%aa%e0%b2%bf-%e0%b2%ac%e0%b2%bf%e0%b2%9f%e0%b3%8d%e0%b2%9f%e0%b3%81-%e0%b2%ac%e0%b3%87%e0%b2%b0%e0%b3%86%e0%b2%af%e0%b2%b5%e0%b2%a8%e0%b2%a8%e0%b3%8d%e0%b2%a8%e0%b3%81/ Sat, 05 Aug 2023 02:42:40 +0000 https://www.lawguidekannada.com/?p=165 ವಿಶೇಷ ಪ್ರಕರಣವೊಂದರಲ್ಲಿ ವಾರೆಂಟ್ ಜಾರಿಯಾಗಿದ್ದ ಆರೋಪಿಯ ಬದಲು ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿದ ಕಾರಣಕ್ಕಾಗಿ 25 ಲಕ್ಷ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ...

The post ಆರೋಪಿ ಬಿಟ್ಟು ಬೇರೆಯವನನ್ನು ಬಂಧಿಸಿದಕ್ಕೆ 25 ಲಕ್ಷ ಪರಿಹಾರ – ಪೊಲೀಸರಿಂದ ದಂಡ ವಸೂಲಿಗೆ ಹೈಕೋರ್ಟ್ ಸೂಚನೆ appeared first on Law Guide Kannada.

]]>
ವಿಶೇಷ ಪ್ರಕರಣವೊಂದರಲ್ಲಿ ವಾರೆಂಟ್ ಜಾರಿಯಾಗಿದ್ದ ಆರೋಪಿಯ ಬದಲು ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿದ ಕಾರಣಕ್ಕಾಗಿ 25 ಲಕ್ಷ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಬೆಂಗಳೂರಿನ ನಿವಾಸಿ ಎನ್.ನಿಂಗರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ವಾರೆಂಟ್ ಜಾರಿ ಗೊಳಿಸಿ ಆರೋಪಿಯನ್ನು ಬಂಧಿಸುವ ಮುನ್ನ ಅನುಸರಿಸಬೇಕಾದ ವಿಧಾನಗಳ ಕುರಿತು ಡಿಜಿಪಿ ಅವರು ಮಾರ್ಗಸೂಚಿ ಹೊರಡಿಸಬೇಕು ಎಂದು ನಿರ್ದೇಶಿಸಿದೆ.

ಎನ್‌ಜಿಎನ್ ರಾಜು ಎಂಬುವವರ ವಿರುದ್ಧ ವಾರೆಂಟ್ ಜಾರಿಯಾಗಿತ್ತು. ಆದರೆ, ತನಿಖಾಧಿಕಾರಿಗಳು ಬೆಂಗಳೂರಿನ ನಿವಾಸಿ ಎನ್.ನಿಂಗರಾಜು ಎಂಬುವರನ್ನು ಬಂಧಿಸಿದ್ದರು. ಎನ್‌ಜಿಎನ್ ರಾಜು ಅವರ ತಂದೆಯ ಹೆಸರು ನಿಂಗೇಗೌಡ ಆಗಿತ್ತು. ಅದೇ ಮಾದರಿ ಹೆಸರು ಹೊಂದಿರುವ ಕಾರಣಕ್ಕೆ ಗೊಂದಲಕ್ಕೆ ಒಳಗಾಗಿ ಅರ್ಜಿದಾರ ನಿಂಗರಾಜು ಅವರನ್ನು ಬಂಧಿಸಲಾಗಿತ್ತು.

ಈ ಪ್ರಕರಣಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್‌

ತಂದೆ ಹೆಸರು ಒಂದೇ ಇತ್ತು ಎನ್ನುವ ಕಾರಣಕ್ಕೆ ಬಂಧಿಸಬೇಕಾದ ವ್ಯಕ್ತಿಯನ್ನು ಬಿಟ್ಟು ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿದ ಕ್ರಮ ಸರಿಯಲ್ಲ. ಯಾವುದೇ ವ್ಯಕ್ತಿಯನ್ನು ಬಂಧಿಸಬೇಕಾದರೆ ಪ್ರಾಥಮಿಕವಾಗಿ ಆತನ ವಿವರಗಳನ್ನು ಪರಿಶೀಲಿಸಬೇಕಲ್ಲವೇ ? ಎಂದು ಕೋರ್ಟ್ ಪ್ರಶ್ನಿಸಿತು ಪೊಲೀಸರ ಕ್ರಮದಿಂದ ಬಂಧಿತನ ವ್ಯಕ್ತಿಗೆ ಸಂವಿಧಾನದತ್ತವಾಗಿ ದೊರೆತಿರುವ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹರಣವಾಗಿದೆ. ಇದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಅರ್ಜಿದಾರರಿಗೆ 8 ವಾರದೊಳಗೆ 25 ಲಕ್ಷ ಪರಿಹಾರವನ್ನು ನೀಡಬೇಕು. ಆ ಮೊತ್ತವನ್ನು ತಪ್ಪೆಸಗಿರುವ ಪೊಲೀಸ್ ಅಧಿಕಾರಿಯಿಂದ ವಸೂಲಿ ಮಾಡಬಹುದು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ವರದಿ : ಲಾಗೈಡ್

The post ಆರೋಪಿ ಬಿಟ್ಟು ಬೇರೆಯವನನ್ನು ಬಂಧಿಸಿದಕ್ಕೆ 25 ಲಕ್ಷ ಪರಿಹಾರ – ಪೊಲೀಸರಿಂದ ದಂಡ ವಸೂಲಿಗೆ ಹೈಕೋರ್ಟ್ ಸೂಚನೆ appeared first on Law Guide Kannada.

]]>
ಸಾಕ್ಷಿ ಸಂಗ್ರಹಕ್ಕೆ ದಂತ ವೈದ್ಯರ ನೆರವು ಅಪರೂಪದಲ್ಲಿ‌ ಅಪರೂಪದ ಪ್ರಕರಣ – ಅತ್ಯಾಚಾರ ಆರೋಪಿಗೆ ಆಜೀವ ಜೀವಾವಧಿ ಶಿಕ್ಷೆ http://www.lawguidekannada.com/%e0%b2%b8%e0%b2%be%e0%b2%95%e0%b3%8d%e0%b2%b7%e0%b2%bf-%e0%b2%b8%e0%b2%82%e0%b2%97%e0%b3%8d%e0%b2%b0%e0%b2%b9%e0%b2%95%e0%b3%8d%e0%b2%95%e0%b3%86-%e0%b2%a6%e0%b2%82%e0%b2%a4-%e0%b2%b5%e0%b3%88/ Wed, 26 Jul 2023 15:16:50 +0000 https://www.lawguidekannada.com/?p=120 ಮಾನಸಿಕ ಖಿನ್ನತೆಗೊಳಗಾಗಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆಗೆ ಯತ್ನಿಸಿದ ಆರೋಪಿಗೆ ಬಾಗಲಕೋಟೆ ಜಿಲ್ಲಾ ನ್ಯಾಯಾಲಯ ಕೊನೆಯ ಉಸಿರಿರುವವರೆಗೂ ಆಜೀವ ಜೀವಾವಧಿ...

The post ಸಾಕ್ಷಿ ಸಂಗ್ರಹಕ್ಕೆ ದಂತ ವೈದ್ಯರ ನೆರವು ಅಪರೂಪದಲ್ಲಿ‌ ಅಪರೂಪದ ಪ್ರಕರಣ – ಅತ್ಯಾಚಾರ ಆರೋಪಿಗೆ ಆಜೀವ ಜೀವಾವಧಿ ಶಿಕ್ಷೆ appeared first on Law Guide Kannada.

]]>
ಮಾನಸಿಕ ಖಿನ್ನತೆಗೊಳಗಾಗಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆಗೆ ಯತ್ನಿಸಿದ ಆರೋಪಿಗೆ ಬಾಗಲಕೋಟೆ ಜಿಲ್ಲಾ ನ್ಯಾಯಾಲಯ ಕೊನೆಯ ಉಸಿರಿರುವವರೆಗೂ ಆಜೀವ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅತ್ಯಂತ ವಿರಳ ಪ್ರಕರಣಗಳಲ್ಲಿ ನ್ಯಾಯಾಲಯಗಳು ಆಜೀವ ಜೀವಾವಧಿ ಶಿಕ್ಷೆ ವಿಧಿಸುತ್ತವೆ. ಮಾನಸಿಕ ಖಿನ್ನತೆಯುಳ್ಳ ಯುವತಿ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಪ್ರಕರಣದಲ್ಲಿ ಆರೋಪಿಗೆ ಕೊನೆಯ ಉಸಿರಿರುವವರೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹನುಮಂತ ಶಿಕ್ಷೆಗೊಳಗಾದ ಆರೋಪಿ. ಪ್ರಕರಣದಲ್ಲಿ ಸಾಕ್ಷಿ ಕೊರತೆಯಿದ್ದುದರಿಂದ ದಂತ ವೈದ್ಯರ ಸಹಾಯ ಪಡೆದು ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಶೇಷ.

ಘಟನೆಯ ವಿವರ

2019ರ ಮೇ 17ರಂದು ವಿಶೇಷ ಚೇತನ ಮಹಿಳೆ ಮೇಲೆ ಆರೋಪಿ ಅತ್ಯಾಚಾರ ನಡೆಸಿದ್ದ ಆಕೆ ಬಿಡಿಸಿಕೊಳ್ಳಲು ಯತ್ನಿಸಿದಾಗ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದ. ನಂತರ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದ.

ದಂತ ಮಾದರಿ ವರದಿ ನೆರವು ಯುವತಿ ಮಾನಸಿಕವಾಗಿ ಖಿನ್ನಳಾಗಿದ್ದರಿಂದ ಆರೋಪಿ ಹೆಸರು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗರಲಿಲ್ಲ.

ಆಗಿನ ಪಿಎಸ್‌ಐ ಪ್ರಕಾಶ್ ಬಣಕಾರ ಬೆರಳು ಮುದ್ರೆ ಆಧಾರದ ಮೇಲೆ ಆರೋಪಿ ಹನಮಂತನನ್ನು ಬಂಧಿಸಿ ಕಳ್ಳತನ ಮಾಡಿದ್ದ ಮೊಬೈಲ್ ವಶಪಡಿಸಿಕೊಂಡರು. ಆಗಿನ ಸಿಪಿಐ ಕೆ.ಎಸ್.ಹಟ್ಟಿ ತನಿಖೆ ಕೈಗೊಂಡಿದ್ದರು. ಸಾಕ್ಷಿ ಕೊರತೆ ಕಾರಣ ಯುವತಿಗೆ ಆರೋಪಿ ಕಚ್ಚಿದ ಗುರುತುಗಳನ್ನು ವೈಜ್ಞಾನಿಕವಾಗಿ ಸಾಕ್ಷಿಯಾಗಿ ಪರಿಗಣಿಸಲಾಯಿತು. ಹುಬ್ಬಳ್ಳಿಯ ಶ್ರೀ ಮಂಜುನಾಥ ಡೆಂಟಲ್ ಕಾಲೇಜಿನ ತಜ್ಞ ಡಾ.ಆಶಿತ್ ಆಚಾರ್ಯ ಗಾಯದ ಹಲ್ಲಿನ ಗುರುತುಗಳನ್ನು ಆರೋಪಿಯದ್ದೇ ಎಂದು ವರದಿ ನೀಡಿದರು. ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯ ದಂತ ವೈದ್ಯ ಡಾ.ಪ್ರಮೋದ ಇಂಗಳೇಶ್ವರ ಹೋಲಿಕೆ ಮಾಡುವಲ್ಲಿ ಸಾಥ್ ನೀಡಿದರು. ಡಾ.ಆತೀಶ್ ಹೊಸ ದಿಲ್ಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದಲ್ಲಿಯೂ ಆರೋಪಿಗಳ ದಂತ ಮಾದರಿ ವರದಿ ನೀಡಿದ್ದರು.

ಪ್ರಕರಣದ ಬಗ್ಗೆ ತನಿಖೆ ನಡೆಸಿ ಸಿಪಿಐ ಆರ್‌.ಎಚ್‌. ಹಾನಾಪೂರ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಆರೋಪಿಗೆ ಆಜೀವ ಜೀವಾವಧಿ ಶಿಕ್ಷೆ ಹಾಗೂ 42 ಸಾವಿರ ರೂ. ದಂಡ ವಿಧಿಸಲಾಗಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಎ.ಜಿ.ಹೆಬಸೂರ ವಾದ ಮಂಡಿಸಿದ್ದರು.

ಲಾಗೈಡ್ ವರದಿ

The post ಸಾಕ್ಷಿ ಸಂಗ್ರಹಕ್ಕೆ ದಂತ ವೈದ್ಯರ ನೆರವು ಅಪರೂಪದಲ್ಲಿ‌ ಅಪರೂಪದ ಪ್ರಕರಣ – ಅತ್ಯಾಚಾರ ಆರೋಪಿಗೆ ಆಜೀವ ಜೀವಾವಧಿ ಶಿಕ್ಷೆ appeared first on Law Guide Kannada.

]]>
ಪೋಕ್ಸೋ ಕಾಯ್ದೆ – ಸುಪ್ರೀಂ ಕೋರ್ಟ್ ಮಹತ್ವದ, ಐತಿಹಾಸಿಕ ತೀರ್ಪು http://www.lawguidekannada.com/%e0%b2%aa%e0%b3%8b%e0%b2%95%e0%b3%8d%e0%b2%b8%e0%b3%8b-%e0%b2%95%e0%b2%be%e0%b2%af%e0%b3%8d%e0%b2%a6%e0%b3%86-%e0%b2%b8%e0%b3%81%e0%b2%aa%e0%b3%8d%e0%b2%b0%e0%b3%80%e0%b2%82-%e0%b2%95%e0%b3%8b/ Sat, 22 Jul 2023 11:28:40 +0000 https://www.lawguidekannada.com/?p=108 ಪೋಕ್ಸೋ ಕಾಯ್ದೆ – ವಯಸ್ಸು ಫೊಕ್ಸೋ ಕಾಯ್ದೆ ನ್ಯಾಯಾಂಗದ ಅತ್ಯಂತ ಮಹತ್ವದ ಕಾಯ್ದೆಗಳಲ್ಲಿ ಒಂದು. ಮಕ್ಕಳ ಮೇಲೆ ಆಗುವ ಲೈಂಗಿಕ...

The post ಪೋಕ್ಸೋ ಕಾಯ್ದೆ – ಸುಪ್ರೀಂ ಕೋರ್ಟ್ ಮಹತ್ವದ, ಐತಿಹಾಸಿಕ ತೀರ್ಪು appeared first on Law Guide Kannada.

]]>
ಪೋಕ್ಸೋ ಕಾಯ್ದೆ – ವಯಸ್ಸು

ಫೊಕ್ಸೋ ಕಾಯ್ದೆ ನ್ಯಾಯಾಂಗದ ಅತ್ಯಂತ ಮಹತ್ವದ ಕಾಯ್ದೆಗಳಲ್ಲಿ ಒಂದು. ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯದಿಂದ ಹಿಡಿದು ಅತ್ಯಾಚಾರ ಪ್ರಕರಣಗಳಿಗಾಗಿ ವಿಶೇವಾಗಿ ರೂಪಿಸಲಾದ ಕಾಯ್ದೆಯಿದು. ಈ ಕಾಯ್ದೆಯಲ್ಲಿ ಆರೋಪಿಗೆ ಶಿಕ್ಷೆ ನೀಡುವುದರ ಜೊತೆಗೆ ನೊಂದವರ ಹಿತ ಕಾಯುವುದಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಕಾಯ್ದೆಯು 18 ವರ್ಷ ಒಳಗಿನ ಮಕ್ಕಳಿಗೆ ಅನ್ವಯವಾಗುತ್ತದೆ. ಹೀಗಾಗಿ ದೌರ್ಜನ್ಯಕ್ಕೆ ಒಳಗಾದವರ ವಯಸ್ಸು ನಿರ್ಧರಿಸುವ ಮಾನದಂಡ ಇಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ಪಡೆದುಕೊಂಡಿದೆ.

ವಯಸ್ಸು ತಿಳಿಯುವ ಮಾನದಂಡ
ಸಾಮಾನ್ಯವಾಗಿ ನೊಂದವರ ವಯಸ್ಸನ್ನು ಪತ್ತೆ ಹಚ್ಚಲು ಈ ಹಿಂದೆ ನೊಂದವರ ಶಾಲಾ ದಾಖಲಾತಿಗಳ ಆಧಾರವನ್ನು ಪರಿಗಣಿಸಲಾಗುತಿತ್ತು. ಆದರೆ ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ಇತ್ತೀಚಿನ ತೀರ್ಪಿನಲ್ಲಿ ಇದಕ್ಕೆ ಬ್ರೇಕ್ ಹಾಕಿದೆ. ನ್ಯಾಯಾಲಯದ ಪ್ರಕಾರ ಶಾಲಾ ವರ್ಗಾವಣೆ ಪ್ರಮಾಣ ಪತ್ರ ಹಾಗೂ ಶಾಲಾ ರಿಜಿಸ್ಟರ್ ಆಧಾರದಲ್ಲಿ ಪೋಕ್ಸೋ ಪ್ರಕರಣದಲ್ಲಿ ನೊಂದ ಬಾಲಕಿ ಅಥವಾ ಬಾಲಕನ ವಯಸ್ಸನ್ನು ನಿರ್ಧರಿಸಲು ಸಾಧ್ಯವಿಲ್ಲವೆಂದು ತಿಳಿಸಿದೆ. ಮಾನ್ಯ ನ್ಯಾಯಾಧೀಶರಾದ ಜಸ್ಟೀಸ್ ರವೀಂದ್ರ ಭಟ್ ಹಾಗೂ ಜಸ್ಟೀಸ್ ಅರವಿಂದ ಕುಮಾರ್ ಅವರ ಪೀಠ ಈ ಬಗ್ಗೆ ಮಹತ್ವದ ತೀರ್ಪು ನೀಡಿದೆ.  ತೀರ್ಪಿನಲ್ಲಿ ಯಾವುದೇ ಪೋಕ್ಸೋ ಪ್ರಕರಣದಲ್ಲಿ ವ್ಯಕ್ತಿಯ ವಯಸ್ಸಿನ ವಿಷಯದಲ್ಲಿ ತಕರಾರು ಬಂದಾಗ ಅದನ್ನು ಕಲಂ 94 ಎuveಟಿiಟe ರಿusಣiಛಿe ಚಿಛಿಣ ಪ್ರಕಾರ ನಿರ್ಧರಿಸಬೇಕೆಂದು ಸೂಚಿಸಿದೆ. ಇನ್ನು ಸರ್ವೋಚ್ಚ ನ್ಯಾಯಾಲಯವು, ಪೋಕ್ಸೋ ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯ ಮೇಲ್ಮನವಿಯನ್ನು ನಿರ್ಧರಿಸುವ ಸಮಯದಲ್ಲಿ ಈ ತೀರ್ಪು ನೀಡಿದೆ. ಪ್ರಕರಣದಲ್ಲಿ ಕೆಳ ನ್ಯಾಯಾಲಯವು ಶಾಲಾ ವರ್ಗಾವಣೆ ಪ್ರಮಾಣ ಪತ್ರ ಹಾಗೂ ಶಾಲಾ ರಿಜಿಸ್ಟರ್ ಆಧಾರದಲ್ಲಿ ತೀರ್ಪು ನೀಡಿತ್ತು. ಆದರೆ ವೈದ್ಯಕೀಯ ಪರೀಕ್ಷೆಯ ಪ್ರಕಾರ ಬಾಲಕಿಯ ವಯಸ್ಸು ಅಂದಾಜು18 ವರ್ಷಕ್ಕಿಂತ ಮೇಲೆ ಹಾಗೂ 20 ವರ್ಷಕ್ಕಿಂತ ಕೆಳಗಿರಬಹುದು ಎಂದು ನೀಡಲಾಗಿತ್ತು. ಆದರೆ ವೈದ್ಯರು ವೈದ್ಯಕೀಯ ದಾಖಲಾತಿಗಳ ಸಾಕ್ಷಿಯಯನ್ನು ಪರಿಗಣಿಸಲಾಗುವುದಿಲ್ಲ ಎಂದು ತಳ್ಳಿ ಹಾಕಿ ಶಾಲಾ ದಾಖಲಾತಿಗಳ ಅಧಾರದ ಮೇಲೆ ತೀರ್ಪು ನೀಡಿತ್ತು. 

ಕೆಳ ನ್ಯಾಯಾಲಯದ ತೀರ್ಪಿಗೆ ವ್ಯತಿರಿಕ್ತ ತೀರ್ಪು

 ಉಚ್ಚ ನ್ಯಾಯಾಲಯವು ಶಾಲಾ ದಾಖಲೆಗಳಿಂದ ನಿರ್ದಿಷ್ಟ ವಯಸ್ಸು ತಿಳಿದಾಗ, ವೈದ್ಯರ ಸಾಕ್ಷವನ್ನು ಪರಿಗಣಿಸಲಾಗುವುದೆಲ್ಲವೆಂದು ತಳ್ಳಿ ಹಾಕಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ ಈ ಆದೇಶಕ್ಕೆ ಅಸಮ್ಮತಿ ಸೂಚಿಸಿದೆ. ಅಷ್ಟೇ ಅಲ್ಲ ಸುಪ್ರೀಂ ಕೋರ್ಟ್‌ನ ಪೀಠವು, “ಉಚ್ಚ ನ್ಯಾಯಾಲಯದ ಈ ತೀರ್ಪು ಕಾನೂನು ಬದ್ಧವಾಗಿಲ್ಲ ಹಾಗೂ ತಪ್ಪಿನಿಂದ ಕೂಡಿರುತ್ತದೆ ಎಂದು ತೀರ್ಪು ನೀಡಿದೆ‌. ಕಲಂ 94 ಜುವೆನೈಲ್ ಜಸ್ಟಿಸ್ ಆಕ್ಟ್ ಪ್ರಕಾರ ಶಾಲಾ ದಾಖಲಾತಿಗಳ ಆಧಾರದ ಮೇಲೆ ವ್ಯಕ್ತಿಯ ವಯಸ್ಸನ್ನು ನಿರ್ಧರಿಸುವುದು ಅಸಮಂಜಸ. ಅದಲ್ಲದೆ ದಾಖಲಾತಿಗಳು ಕಲಂ 94(2) ಅಡಿಯಲ್ಲಿ ತಿಳಿಸಿರುವಂತಹ ದಾಖಲೆಗಳಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ವೈದ್ಯರು ನೀಡಿರುವ ಆಸಿಫಿಕೇಶನ್ ಪರೀಕ್ಷೆಯ ಆಧಾರದ ಮೇಲೆ ವಯಸ್ಸು ನಿರ್ಧರಿಸುವುದು ಸರಿಯಾದ ಕ್ರಮವಾಗಿರುತ್ತದೆ. ವೈದ್ಯರು ನೊಂದ ಬಾಲಕಿಯ ಹಲವಾರು ಎಕ್ಸರೇ ಚಿತ್ರಗಳನ್ನು ಪರಿಶೀಲಿಸಿ, ತಮ್ಮ ಸಾಕ್ಷಿ ನುಡಿಯುವಾಗ ಆ ಬಾಲಕಿಯ ವಯಸ್ಸು 19 ವರ್ಷ ಇರಬಹುದೆಂದು ನುಡಿದಿರುತ್ತಾರೆ. ಇವೆಲ್ಲಾ ಸಾಕ್ಷಾಧಾರಗಳನ್ನು ಗಮನಿಸಿದಾಗ ವೈದ್ಯಕೀಯ ಆಸಿಫಿಕೇಶನ್ ಪರೀಕ್ಷೆಯು ನಂಬಬಹುದಾದಂತಹ ಸಾಕ್ಷ್ಯವೆಂದು ಪರಿಗಣಿಸಿರುತ್ತದೆ ಎಂದು ತಿಳಿಸಿದೆ. ಇದಕ್ಕೂ ಮುಂದುವರೆದು ಈ ಪ್ರಕರಣದಲ್ಲಿ ನೊಂದ ಬಾಲಕಿಯು ಆರೋಪಿಯಿಂದ ಯಾವುದೇ ಠಿeಟಿeಣಡಿಚಿಣive sexuಚಿಟ ಅಟ್ಯಾಕ್ ಆಗಿರುವುದಿಲ್ಲವೆಂದು ತಿಳಿಸಿರುತ್ತಾಳೆ. ಹಾಗಾಗಿ ಈ ಪ್ರಕರಣವು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲವೆಂದು ತೀರ್ಮಾನಿಸಿ ಆರೋಪಿಯನ್ನು ಬಿಡುಗಡೆ ಮಾಡಿ ಐತಿಹಾಸಿಕ ತೀರ್ಪು ನೀಡಿರುತ್ತದೆ. ಪೋಕ್ಸ ಕಾಯ್ದೆಯಲ್ಲಿ ದಾಖಲಾದ ಪ್ರಕರಣಗಳಿಗೆ ಇದು ಒಂದು ರೀತಿ ವಿಶೇಷ ಮೈಲುಗಲ್ಲಾಗಿದೆ‌.

ಲೇಖಕರು 
ಶ್ರೀ ಜೀ ವಿ ರಾಮಮೂರ್ತಿ – ಹಿರಿಯ ವಕೀಲರು,
ಮೈಸೂರು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರು 
 ಮೈಸೂರು.

 

The post ಪೋಕ್ಸೋ ಕಾಯ್ದೆ – ಸುಪ್ರೀಂ ಕೋರ್ಟ್ ಮಹತ್ವದ, ಐತಿಹಾಸಿಕ ತೀರ್ಪು appeared first on Law Guide Kannada.

]]>
Judgement http://www.lawguidekannada.com/judgement/ Mon, 19 Sep 2022 12:24:15 +0000 https://www.lawguidekannada.com/?p=58 Judgement Test News

The post Judgement appeared first on Law Guide Kannada.

]]>
Judgement Test News

The post Judgement appeared first on Law Guide Kannada.

]]>