Mysore City Archives - Law Guide Kannada https://www.lawguidekannada.com/category/mysore-city/ Online Guide Sat, 06 Jun 2026 11:00:44 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg Mysore City Archives - Law Guide Kannada https://www.lawguidekannada.com/category/mysore-city/ 32 32 ಆನ್ ಲೈನ್ ಬೆಟ್ಟಿಂಗ್ ಗೇಮ್ ಗಳಿಗೆ ಸಾಂವಿಧಾನಿಕ ರಕ್ಷಣೆಯಿಲ್ಲ: ನಿಷೇಧ ಕ್ರಮ ಎತ್ತಿಹಿಡಿದ ಸುಪ್ರೀಂಕೋರ್ಟ್ https://www.lawguidekannada.com/online-betting-games-have-no-constitutional-protection-supreme-court-upholds-ban/ Sat, 06 Jun 2026 11:00:44 +0000 https://www.lawguidekannada.com/?p=4015 ನವದೆಹಲಿ: ಆನ್ ಲೈನ್ ಬೆಟ್ಟಿಂಗ್ ಗೇಮ್ ಗಳು ಮೂಲಭೂತ ಹಕ್ಕು ಅಲ್ಲ, ಕೌಶಲ್ಯದ ಹೆಸರಲ್ಲೂ ಬೆಟ್ಟಿಂಗ್ ನಡೆಸುವ ಯಾವುದೇ ಗೇಮ್...

The post ಆನ್ ಲೈನ್ ಬೆಟ್ಟಿಂಗ್ ಗೇಮ್ ಗಳಿಗೆ ಸಾಂವಿಧಾನಿಕ ರಕ್ಷಣೆಯಿಲ್ಲ: ನಿಷೇಧ ಕ್ರಮ ಎತ್ತಿಹಿಡಿದ ಸುಪ್ರೀಂಕೋರ್ಟ್ appeared first on Law Guide Kannada.

]]>
ನವದೆಹಲಿ: ಆನ್ ಲೈನ್ ಬೆಟ್ಟಿಂಗ್ ಗೇಮ್ ಗಳು ಮೂಲಭೂತ ಹಕ್ಕು ಅಲ್ಲ, ಕೌಶಲ್ಯದ ಹೆಸರಲ್ಲೂ ಬೆಟ್ಟಿಂಗ್ ನಡೆಸುವ ಯಾವುದೇ ಗೇಮ್ ಗಳಿಗೂ ಸಾಂವಿಧಾನಿಕ ರಕ್ಷಣೆಯಿಲ್ಲ. ಅವುಗಳನ್ನ ನಿಷೇಧಿಸಿರುವ ಕ್ರಮ ಸರಿಯಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಆನ್ ಲೈನ್ ಬೆಟ್ಟಿಂಗ್ ಗೇಮ್ ಸಂಪೂರ್ಣವಾಗಿ ನಿಷೇಧಿಸುವ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ಕ್ರಮವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಆನ್ ಲೈನ್ ಜೂಜಾಟವನ್ನು ನಿಷೇಧಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸ್ಪಷ್ಟಪಡಿಸಿತು 

ಆನ್ಲೈನ್ ಬೆಟ್ಟಿಂಗ್ ನೀಷಧ ಹೇರಿದ್ದ ಎರಡೂ ರಾಜ್ಯ ಸರ್ಕಾರಗಳ ವಿರುದ್ಧ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಬಿ. ಪಾರ್ಥಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠವು, ಆನ್ ಲೈನ್ ರಮ್ಮಿ ಮತ್ತು ಪೋಕರ್ ನಂತಹ ಅಪ್ಲಿಕೇಶನ್ ಗಳಲ್ಲಿ ಬೆಟ್ಟಿಂಗ್ ನಡೆಸುವ ಅಭ್ಯಾಸವನ್ನು ತೀವ್ರವಾಗಿ ಖಂಡಿಸಿತು.

ಸಂವಿಧಾನದ ಪ್ರಕಾರ ಬೆಟ್ಟಿಂಗ್ ಮತ್ತು ಜೂಜಾಟದ ಬಗ್ಗೆ ಕಾನೂನುಗಳನ್ನು ಮಾಡುವ ಏಕೈಕ ಅಧಿಕಾರ ರಾಜ್ಯಗಳಿಗೆ ಇದೆ. ಆಟವನ್ನು ಆಡಲು ಕೌಶಲ್ಯ ಅಗತ್ಯವಿದ್ದರೂ, ಅದರ ಮೇಲೆ ಹಣವನ್ನು ಪಣತೊಟ್ಟರೆ ಮಾತ್ರ ಅದು ಜೂಜಾಟದ ವರ್ಗಕ್ಕೆ ಸೇರುತ್ತದೆ.

ಆನ್ ಲೈನ್ ಬೆಟ್ಟಿಂಗ್ ವ್ಯಸನಗಳಿಗೆ ಮಾರು ಹೋಗಿ ಯುವಕರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಾಮಾಜಿಕ ಪರಿಸ್ಥಿತಿಗಳನ್ನು ನಮ್ಮ ಮುಂದಿವೆ. ಸಮಾಜದ ಹಿತದೃಷ್ಟಿಯಿಂದ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಆನ್ ಲೈನ್ ಗೇಮಿಂಗ್ ಪ್ಲಾಟ್ ಫಾರ್ಮ್ಗಳ ಮೇಲೆ ನಿಷೇಧ ಹೇರುವುದು ಸರಿಯಾದ ನಿರ್ಧಾರ ಎಂದು ನ್ಯಾಯಪೀಠ ತಿಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಆನ್ ಲೈನ್ ಬೆಟ್ಟಿಂಗ್ ಗೇಮ್ ಗಳಿಗೆ ಸಾಂವಿಧಾನಿಕ ರಕ್ಷಣೆಯಿಲ್ಲ: ನಿಷೇಧ ಕ್ರಮ ಎತ್ತಿಹಿಡಿದ ಸುಪ್ರೀಂಕೋರ್ಟ್ appeared first on Law Guide Kannada.

]]>
MPJAs Pratibha Puraskar 2026 https://www.lawguidekannada.com/mpjas-pratibha-puraskar-2026/ Wed, 20 May 2026 03:57:14 +0000 https://www.lawguidekannada.com/?p=3922 Mysuru Photo Journalists Association to Present Pratibha Puraskar to SSLC & PUC Toppers on May...

The post MPJAs Pratibha Puraskar 2026 appeared first on Law Guide Kannada.

]]>
Mysuru Photo Journalists Association to Present Pratibha Puraskar to SSLC & PUC Toppers on May 19

The Mysuru Photo Journalists Association (MPJA) will present the Pratibha Puraskar to students who have secured the highest marks in SSLC and PUC examinations at a special programme to be held at Pathrakarthara Bhavan on May 19, 2026.

The programme is being organised in memory of Dr. K. B. Ganapathy and Rajashekar Koti.

Vikram Muthanna and Ravi Koti will present the Puraskar to the students.

K. Deepak will attend the event as the chief guest. The programme will be presided over by Pragathi Gopalakrishna, while H. N. Venkatesh, popularly known as “Law Guide,” will be the special invitee.


ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post MPJAs Pratibha Puraskar 2026 appeared first on Law Guide Kannada.

]]>
ಹೈಕೋರ್ಟ್ ನ್ಯಾ. ಶರ್ಮಾ ಅವರ ಮಕ್ಕಳು ಕೇಂದ್ರ ಸರ್ಕಾರದ ವಕೀಲರು: ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ ಕೇಜ್ರಿವಾಲ್ https://www.lawguidekannada.com/former-cm-kejriwal-claims-hc-judge-sharmas-children-are-govt-lawyers/ Fri, 17 Apr 2026 01:53:02 +0000 https://www.lawguidekannada.com/?p=3765 ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ವಿರುದ್ಧ ದೆಹಲಿಯ ಮಾಜಿ ಸಿಎಂ ಹಾಗೂ ಆಮ್ ಆದ್ಮಿ...

The post ಹೈಕೋರ್ಟ್ ನ್ಯಾ. ಶರ್ಮಾ ಅವರ ಮಕ್ಕಳು ಕೇಂದ್ರ ಸರ್ಕಾರದ ವಕೀಲರು: ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ ಕೇಜ್ರಿವಾಲ್ appeared first on Law Guide Kannada.

]]>
ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ವಿರುದ್ಧ ದೆಹಲಿಯ ಮಾಜಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಹೊಸ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ್ದು ಇದರಲ್ಲಿ ಮಹತ್ವದ ಅಂಶವೊಂದನ್ನು ಪ್ರತಿಪಾದಿಸಿದ್ದಾರೆ.

ಹೌದು, ತಮ್ಮ ಮೇಲೆ ದಾಖಲಾಗಿರುವ ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಮಕ್ಕಳು ಕೇಂದ್ರ ಸರ್ಕಾರದ ವಕೀಲರಾಗಿದ್ದಾರೆ. ಸಿಬಿಐ ಪರ ಹಾಜರಾಗುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರ ಮೂಲಕ ಕೆಲಸ ಪಡೆಯುತ್ತಿದ್ದಾರೆ ಎಂದು ಅರವಿಂದ ಕೇಜ್ರವಾಲ್ ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮನ್ನು ಖುಲಾಸೆಗೊಳಿಸಿದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಶರ್ಮಾ ಅವರು ವಿಚಾರಣೆ ನಡೆಸಬಾರದು ಎಂದು ಕೇಜ್ರಿವಾಲ್ ಈ ಅಫಿಡವಿಟ್ ನಲ್ಲಿ ಪುನರುಚ್ಚರಿಸಿದ್ದಾರೆ.

ನ್ಯಾಯಾಮೂರ್ತಿ ಶರ್ಮಾ ಅವರ ಮಗ ಮತ್ತು ಮಗಳು ಇಬ್ಬರೂ ಕೇಂದ್ರ ಸರ್ಕಾರದ ವಕೀಲರಾಗಿ ಪಟ್ಟಿಯಲ್ಲಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಕೋರಿರುವ ಅರ್ಜಿ ಸಂಬಂಧ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್ ನಲ್ಲಿ ಅವರು ಹೀಗೆ ಹೇಳಿದ್ದಾರೆ.

ನ್ಯಾಯಮೂರ್ತಿ ಶರ್ಮಾ ಅವರ ಮಕ್ಕಳನ್ನು ಕೇಂದ್ರ ಸರ್ಕಾರಿ ವಕೀಲರನ್ನಾಗಿ ನೇಮಕ ಮಾಡಿಕೊಂಡಿರುವುದನ್ನು ತೋರಿಸುವ ದಾಖಲೆಗಳು ತನಗೆ ದೊರೆತಿವೆ. ಅವರ ಮಗ ಸುಪ್ರೀಂ ಕೋರ್ಟ್ನ ಗ್ರೂಪ್ ಎ ಪ್ಯಾನಲ್ ಕೌನ್ಸಿಲ್ ಆಗಿದ್ದರೆ, ಅವರ ಮಗಳು ಗ್ರೂಪ್ ಸಿ ಪ್ಯಾನಲ್ ಕೌನ್ಸಿಲ್ ಆಗಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಹೀಗಾಗಿ ನ್ಯಾಯಮೂರ್ತಿ ಶರ್ಮಾ ಅವರ ಪೀಠದ ಮುಂದೆ ಈ ಪ್ರಕರಣದ ವಿಚಾರಣೆಯನ್ನು ಮುಂದುವರಿಸುವುದರಿಂದ ನ್ಯಾಯಾಂಗ ತಟಸ್ಥ, ಸ್ವತಂತ್ರ್ಯವಾಗಿ ಕೆಲಸ ಮಾಡಲಿಕ್ಕಿಲ್ಲ ಎನ್ನುವ ಭಯ ಉಂಟಾಗಿದೆ. ಅದ್ದರಿಂದ ಪ್ರತ್ಯುತ್ತರ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆಯೂ ಕೇಜ್ರಿವಾಲ್ ಅವರು ಕೋರಿದ್ದಾರೆ.

‘ಈ ಕ್ರಿಮಿನಲ್ ಪ್ರಕರಣದಲ್ಲಿ, ಸಿಬಿಐ ಪ್ರಾಸಿಕ್ಯೂಟಿಂಗ್ ಏಜೆನ್ಸಿಯಾಗಿದ್ದು ಕೇಂದ್ರ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿಗಳು ನನ್ನ ವಿರುದ್ಧ ವಾದ ಮಂಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ಕುಟುಂಬದ ನಿಕಟ ಸದಸ್ಯರು ಕೇಂದ್ರ ಸರ್ಕಾರದ ವಕೀಲರ ಪಟ್ಟಿಯಲ್ಲಿ ಅನೇಕ ಸಕ್ರಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಅದೇ ಕಾನೂನು ಸಂಸ್ಥೆ ಮತ್ತು ಕಾನೂನು ಅಧಿಕಾರಿಯ ಮೂಲಕ ಸರ್ಕಾರದ ಕೆಲಸಗಳನ್ನು ಪಡೆಯುತ್ತಿರುವುದು ನನ್ನ ಆತಂಕಕ್ಕೆ ಕಾರಣವಾಗಿದೆ’ ಎಂದು ಏಪ್ರಿಲ್ 14 ರಂದು ಸಲ್ಲಿಸಿದ ಅಫಿಡವಿಟ್ ನಲ್ಲಿ ಪ್ರತಿಪಾದಿಸಲಾಗಿದೆ. ಆರ್ಟಿಐ ಮೂಲಕ ಪಡೆದ ಮಾಹಿತಿ ಸೇರಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳನ್ನು ಕೇಜ್ರವಾಲ್ ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ. ನ್ಯಾಯಮೂರ್ತಿ ಶರ್ಮಾ ಅವರ ಪುತ್ರನಿಗೆ ಗಣನೀಯ ಪ್ರಮಾಣದ ಕಾನೂನು ಕೆಲಸಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ನ್ಯಾಯಮೂರ್ತಿಗಳ ಪುತ್ರನಿಗೆ 2023ರಲ್ಲಿ ಒಟ್ಟು 2,487, 2024ರಲ್ಲಿ 1,784, 2025ರಲ್ಲಿ 1,633 ಪ್ರಕರಣಗಳನ್ನು ನೀಡಲಾಗಿತ್ತು ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ. ಸಾಲಿಸಿಟರ್ ಜನರಲ್ ಮೂಲಕ ಮಕ್ಕಳಿಗೆ ವೃತ್ತಿಪರ ಕೆಲಸ ಸಿಗುತ್ತಿರುವುದರಿಂದ, ನ್ಯಾಯಮೂರ್ತಿಗಳು ನಿಷ್ಪಕ್ಷಪಾತವಾಗಿ ತೀರ್ಪು ನೀಡಲು ಸಾಧ್ಯವಿಲ್ಲ ಎಂಬ ‘ಸಮಂಜಸವಾದ ಆತಂಕ ಉಂಟಾಗಿದೆ. ಈ ಹೊಸ ವಿಚಾರಗಳ ಬಗ್ಗೆ ವಾದ ಮಂಡಿಸಲು ತಮಗೆ ಹೆಚ್ಚಿನ ಸಮಯ ನೀಡಬೇಕು ಮತ್ತು ನ್ಯಾಯಮೂರ್ತಿಗಳು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಕೇಜ್ರಿವಾಲ್ ಅವರು ವಿನಂತಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಹೈಕೋರ್ಟ್ ನ್ಯಾ. ಶರ್ಮಾ ಅವರ ಮಕ್ಕಳು ಕೇಂದ್ರ ಸರ್ಕಾರದ ವಕೀಲರು: ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ ಕೇಜ್ರಿವಾಲ್ appeared first on Law Guide Kannada.

]]>
ಅಪ್ರಾಪ್ತ ಮಕ್ಕಳ ಕಸ್ಟಡಿ: ಮುಸ್ಲಿಂ ವೈಯಕ್ತಿಕ ಕಾನೂನು ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಟ್ ನ ವ್ಯಾಪ್ತಿ ತಡೆಯಲ್ಲ- ಹೈಕೋರ್ಟ್ https://www.lawguidekannada.com/muslim-law-doesnt-bar-child-custody-under-guardians-act-allahabad-hc/ Fri, 03 Apr 2026 13:48:25 +0000 https://www.lawguidekannada.com/?p=3711 ಅಲಹಾಬಾದ್: ಅಪ್ರಾಪ್ತ ಮಗುವಿನ ಕಸ್ಟಡಿ ವಿಷಯದಲ್ಲಿ ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಟ್ ಗೆ ಮುಸ್ಲಿಂ ವೈಯಕ್ತಿಕ ಕಾನೂನು ಅಡ್ಡಿಯಾಗದು ಎಂದು...

The post ಅಪ್ರಾಪ್ತ ಮಕ್ಕಳ ಕಸ್ಟಡಿ: ಮುಸ್ಲಿಂ ವೈಯಕ್ತಿಕ ಕಾನೂನು ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಟ್ ನ ವ್ಯಾಪ್ತಿ ತಡೆಯಲ್ಲ- ಹೈಕೋರ್ಟ್ appeared first on Law Guide Kannada.

]]>
ಅಲಹಾಬಾದ್: ಅಪ್ರಾಪ್ತ ಮಗುವಿನ ಕಸ್ಟಡಿ ವಿಷಯದಲ್ಲಿ ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಟ್ ಗೆ ಮುಸ್ಲಿಂ ವೈಯಕ್ತಿಕ ಕಾನೂನು ಅಡ್ಡಿಯಾಗದು ಎಂದು ಹೈಕೋರ್ಟ್ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ತನ್ನ ಇಬ್ಬರು ಅಪ್ರಾಪ್ತ ಮಕ್ಕಳ ಕಸ್ಟಡಿಯನ್ನು ಪಡೆಯಲು ಮುಸ್ಲಿಂ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಅನಿಲ್ ಕುಮಾರ್ ಅವರ ಪೀಠವು, ಮುಸ್ಲಿಂ ವೈಯಕ್ತಿಕ ಕಾನೂನು ಅಪ್ರಾಪ್ತ ಮಕ್ಕಳ ಕಸ್ಟಡಿ ವಿಷಯಗಳಲ್ಲಿ ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಟ್ ನ ವ್ಯಾಪ್ತಿಯನ್ನು ತಡೆಯುವುದಿಲ್ಲ. ಪಕ್ಷಗಳು ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಇದ್ದರೂ ಸಹ, ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಟ್, 1890 ಅಡಿಯಲ್ಲಿ ನ್ಯಾಯಾಲಯದ ವ್ಯಾಪ್ತಿ ಅಚಲವಾಗಿಯೇ ಇರುತ್ತದೆ. ಅಪ್ರಾಪ್ತ ಮಗುವಿನ ಹಿತವೇ ಮುಖ್ಯ ಪರಿಗಣನೆ ಆಗಿದ್ದು, ಅದು ಇತರ ಎಲ್ಲಾ ಅಂಶಗಳಿಗಿಂತ ಮೇಲುಗೈ ಸಾಧಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಪ್ರಾಪ್ತ ಮಕ್ಕಳ ಅಭಿರಕ್ಷೆಯ ವಿಷಯದಲ್ಲಿ ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಟ್ ಹಾಗೂ ಫ್ಯಾಮಿಲಿ ಕೋರ್ಟ್ ಗಳ ಆಕ್ಟ್ ಅಡಿಯಲ್ಲಿ ಪರಿಹಾರ ಲಭ್ಯವಿದೆ ಮತ್ತು ವೈಯಕ್ತಿಕ ಕಾನೂನು ಹಾಗೂ ಮಗುವಿನ ಕಲ್ಯಾಣ ಎರಡನ್ನೂ ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ವಿಚಾರಣೆ ನಡೆಸಲು ಅರ್ಹವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹೇಬಿಯಸ್ ಕಾರ್ಪಸ್ ರಿಟ್ ಸ್ವರೂಪದಲ್ಲಿ ಸಂಕ್ಷಿಪ್ತವಾಗಿದ್ದು, ಮಗುವಿನ ಹಿತಾಸಕ್ತಿಯನ್ನು ನಿರ್ಧರಿಸಲು ಅಗತ್ಯವಿರುವ ವಿಶದ ಸಾಕ್ಷ್ಯಾಧಾರ ಪರಿಶೀಲನೆಗೆ ಸೂಕ್ತವಲ್ಲ.ಆದ್ದರಿಂದ ಅರ್ಜಿದಾರರು ಫ್ಯಾಮಿಲಿ ಕೋರ್ಟ್ಗೆ ಮೊರೆ ಹೋಗಬೇಕು ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:
2013ರಲ್ಲಿ ಒಂದನೇ ಅರ್ಜಿದಾರರು ಮುಸ್ಲಿಂ ಸಂಪ್ರದಾಯದಂತೆ ನಾಲ್ಕನೇ ಪ್ರತಿವಾದಿ ಯೊಂದಿಗೆ ವಿವಾಹವಾಗಿದ್ದರು. ಈ ವಿವಾಹದಿಂದ ಇಬ್ಬರು ಮಕ್ಕಳು ಜನಿಸಿದರು. ವರದಕ್ಷಿಣೆಯ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಗಂಡನು ತನ್ನನ್ನು ಮನೆಯಿಂದ ಹೊರಹಾಕಿದ್ದಾನೆ. ಹೊರಹಾಕುವ ಮೊದಲು ಮಕ್ಕಳನ್ನು ಬಲವಂತವಾಗಿ ತನ್ನಿಂದ ಬೇರ್ಪಡಿಸಲಾಗಿದೆ ಎಂದು ಅರ್ಜಿದಾರ್ತಿ ಆರೋಪಿಸಿದ್ದಾರೆ. ಇದರಿಂದಾಗಿ ಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ತನ್ನ ಕಸ್ಟಡಿಗೆ ನೀಡುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು.

ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರು, ಪಕ್ಷಗಳು ಮುಸ್ಲಿಂ ವೈಯಕ್ತಿಕ ಕಾನೂನಿಗೆ ಒಳಪಟ್ಟಿರುವುದರಿಂದ ತಾಯಿಗೆ ಶಿಶುಗಳ ಕಸ್ಟಡಿಯ ಹಕ್ಕು ಇದೆ ಎಂದು ವಾದಿಸಿದರು. ವಿಶೇಷವಾಗಿ, ಏಳು ವರ್ಷ ವಯಸ್ಸು ತಲುಪುವವರೆಗೂ ಗಂಡು ಮಗುವಿನ ಕಸ್ಟಡಿ ತಾಯಿಗೇ ಸಲ್ಲುತ್ತದೆ ಎಂದು ಅವರು ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದರು. ಜೊತೆಗೆ, ಮುಸ್ಲಿಂ ದಂಪತಿಗಳ ನಡುವೆ ಕಸ್ಟಡಿ ವಿಚಾರಗಳನ್ನು ಹೇಬಿಯಸ್ ಕಾರ್ಪಸ್ ಮೂಲಕವೇ ನಿರ್ಧರಿಸಬೇಕು ಮತ್ತು ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಟ್ ಅವರಿಗೆ ಅನ್ವಯಿಸುವುದಿಲ್ಲ ಎಂದು ವಾದಿಸಿದರು.

ಇನ್ನೊಂದೆಡೆ, ರಾಜ್ಯ ಮತ್ತು ಅರ್ಜಿದಾರರ ಪತಿ (ಪ್ರತಿವಾದಿ ಸಂಖ್ಯೆ 4) ಮುಸ್ಲಿಂ ವೈಯಕ್ತಿಕ ಕಾನೂನು ತಂದೆಗೆ ತನ್ನ ಮಕ್ಕಳ ಕಸ್ಟಡಿ ಪಡೆಯಲು ತಡೆಯುವುದಿಲ್ಲ ಎಂದು ವಾದಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಅನಿಲ್ ಕುಮಾರ್ ಅವರ ಪೀಠವು, “ಕಸ್ಮಡಿ ಮತ್ತು ಗಾರ್ಡಿಯನ್ ಶಿಪ್ ವಿಷಯಗಳಲ್ಲಿ, ಪಕ್ಷಗಳು ವೈಯಕ್ತಿಕ ಕಾನೂನಿಗೆ ಒಳಪಟ್ಟಿದ್ದರೂ ಸಹ, ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಟ್ ಅಡಿಯಲ್ಲಿ ನ್ಯಾಯಾಲಯದ ವ್ಯಾಪ್ತಿ ಮುಂದುವರಿಯುತ್ತದೆ. ವೈಯಕ್ತಿಕ ಕಾನೂನು ಪಕ್ಷಗಳ ಹಕ್ಕುಗಳನ್ನು ನಿರ್ಧರಿಸಲು ಮಾರ್ಗದರ್ಶನ ನೀಡಬಹುದು. ಆದರೆ ಮುಖ್ಯವಾಗಿ ಪರಿಗಣಿಸಬೇಕಾದ ಅಂಶ ಅಪ್ರಾಪ್ತ ಮಗುವಿನ ಹಿತವೇ ಆಗಿದ್ದು, ಅದು ಇತರ ಎಲ್ಲಾ ಅಂಶಗಳಿಗಿಂತ ಮೇಲುಗೈ ಸಾಧಿಸುತ್ತದೆ. ಹೀಗಾಗಿ, ಪಕ್ಷಗಳು ಮುಸ್ಲಿಂ ವೈಯಕ್ತಿಕ ಕಾನೂನಿಗೆ ಒಳಪಟ್ಟಿರುವುದರಿಂದ ಮಾತ್ರ ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಸ್ನಡಿ ಕಸ್ಟಡಿಗಾಗಿ ಅರ್ಜಿ ಸಲ್ಲಿಸಲು ಅವರಿಗೆ ತಡೆಯಿದೆ ಎಂದು ಹೇಳಲು ಸಾಧ್ಯವಿಲ್ಲಎಂದಿತು.

ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಟ್, 1990 ಎಲ್ಲಾ ನಾಗರಿಕರಿಗೆ ಅನ್ವಯಿಸುವ ಸಾಮಾನ್ಯ ಕಾನೂನು ಆಗಿದ್ದು, ಧರ್ಮದ ಆಧಾರದ ಮೇಲೆ ಯಾರನ್ನೂ ಹೊರತುಪಡಿಸುವುದಿಲ್ಲ. “ಗಾರ್ಡಿಯನ್” ಎಂಬ ಪದವು ವ್ಯಾಪಕ ಅರ್ಧ ಹೊಂದಿದ್ದು, “ಕಸ್ಟಡಿ”ಯನ್ನೂ ಒಳಗೊಂಡಿದೆ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

ಮಗುವಿನ ಕಸ್ಟಡಿಯನ್ನು ಯಾಂತ್ರಿಕವಾಗಿ ನಿರ್ಧರಿಸಲಾಗುವುದಿಲ್ಲ. ಮಗುವಿನ ಹಿತಾಸಕ್ತಿಯ ಕುರಿತು ಸಂಪೂರ್ಣ ಪರಿಶೀಲನೆ ಅಗತ್ಯವಿದೆ ಎಂದು ನ್ಯಾಯಪೀಠವು ತಿಳಿಸಿದೆ. ಇದಕ್ಕಾಗಿ ಸಾಕ್ಷಾಧಾರಗಳ ಪರಿಶೀಲನೆ, ಪಕ್ಷಗಳೊಂದಿಗೆ ಸಂವಹನ ಹಾಗೂ ಸಂಬಂಧಿತ ಎಲ್ಲಾ ಅಂಶಗಳ ವಿಶ್ಲೇಷಣೆ ಅಗತ್ಯವಿದೆ ಎಂದು ಹೇಳಿದೆ. ಹೀಗಾಗಿ, ಅರ್ಜಿದಾರರು ಫ್ಯಾಮಿಲಿ ಕೋರ್ಟ್ ಮುಂದೆ ಸೂಕ್ತ ಪರಿಹಾರವನ್ನು ಪಡೆಯುವುದು ಒಳಿತು ಎಂದು ಹೇಳಿ, ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಅಪ್ರಾಪ್ತ ಮಕ್ಕಳ ಕಸ್ಟಡಿ: ಮುಸ್ಲಿಂ ವೈಯಕ್ತಿಕ ಕಾನೂನು ಗಾರ್ಡಿಯನ್ಸ್ ಅಂಡ್ ವಾರ್ಡ್ಸ್ ಆಕ್ಟ್ ನ ವ್ಯಾಪ್ತಿ ತಡೆಯಲ್ಲ- ಹೈಕೋರ್ಟ್ appeared first on Law Guide Kannada.

]]>
ಹೆಚ್ಚುತ್ತಿರುವ ಬಾಕಿ ಪ್ರಕರಣಗಳ ನಿಯಂತ್ರಣಕ್ಕೆ ನ್ಯಾಯಾಂಗ ಸುಧಾರಣಾ ಆಯೋಗ ಅವಶ್ಯಕ-ನ್ಯಾ. ಬಿ.ವಿ.ನಾಗರತ್ನ https://www.lawguidekannada.com/justice-b-v-nagaratna-calls-for-judicial-reforms-commission-on-case-pendency/ Tue, 24 Mar 2026 03:28:51 +0000 https://www.lawguidekannada.com/?p=3656 ಬೆಂಗಳೂರು: ‘ನ್ಯಾಯದಾನ ನೀಡುವಲ್ಲಿ ವಿಳಂಬವಾಗುತ್ತಿದ್ದು ‘ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನು ನಿಯಂತ್ರಿಸಲು ‘ನ್ಯಾಯಾಂಗ ಸುಧಾರಣಾ ಆಯೋಗ’...

The post ಹೆಚ್ಚುತ್ತಿರುವ ಬಾಕಿ ಪ್ರಕರಣಗಳ ನಿಯಂತ್ರಣಕ್ಕೆ ನ್ಯಾಯಾಂಗ ಸುಧಾರಣಾ ಆಯೋಗ ಅವಶ್ಯಕ-ನ್ಯಾ. ಬಿ.ವಿ.ನಾಗರತ್ನ appeared first on Law Guide Kannada.

]]>
ಬೆಂಗಳೂರು: ‘ನ್ಯಾಯದಾನ ನೀಡುವಲ್ಲಿ ವಿಳಂಬವಾಗುತ್ತಿದ್ದು ‘ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನು ನಿಯಂತ್ರಿಸಲು ‘ನ್ಯಾಯಾಂಗ ಸುಧಾರಣಾ ಆಯೋಗ’ ರಚನೆ ಮಾಡುವುದು ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ತಿಳಿಸಿದರು.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್ಸಿಬಿಎ) ‘ನ್ಯಾಯಾಂಗ ಆಡಳಿತದ ಮರುಕಲ್ಪನೆ; ಪ್ರಜಾಸತ್ತಾತ್ಮಕ ನ್ಯಾಯಕ್ಕಾಗಿ ಸಂಸ್ಥೆಗಳ ಸದೃಢೀಕರಣ’ ವಿಷಯ ಕುರಿತು ಆಯೋಜಿಸಿದ್ದ ಪ್ರಥಮ ರಾಷ್ಟ್ರೀಯ ಸಮ್ಮೇಳನದಲ್ಲಿ ಬಾಕಿ ಪ್ರಕರಣಗಳ ಕುರಿತಂತೆ ಮಾತನಾಡಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ, ‘ನ್ಯಾಯದಾನ ನೀಡುವಲ್ಲಿ ಆಗುತ್ತಿರುವ ವಿಳಂಬಕ್ಕೆ ಸರ್ಕಾರ ಸೇರಿದಂತೆ ಎಲ್ಲರ ಕೊಡುಗೆಯೂ ಇದ್ದು ಇದರ ಸುಧಾರಣೆಗೆ ಆಯೋಗವೊಂದನ್ನು ರಚಿಸಿವ ಅವಶ್ಯಕತೆ ಇದೆ. ಇದು ರಜೆ ಪಡೆಯಲೂ ಆಗದಂತಹ ನ್ಯಾಯಾಧೀಶರ ಮೇಲಿನ ಒತ್ತಡಗಳನ್ನು ತಗ್ಗಿಸುತ್ತದೆ’ ಎಂದು ತಿಳಿಸಿದರು.

‘ಸುಧಾರಣಾ ಆಯೋಗದಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳ ಸದಸ್ಯರು ಮಾತ್ರವಲ್ಲ, ಬಾರ್ ಅಸೋಸಿಯೇಷನ್, ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್, ವಕೀಲರ ಪರಿಷತ್ತುಗಳ ಅಧ್ಯಕ್ಷರೂ ಸದಸ್ಯರಾಗಬೇಕು. ಸರ್ಕಾರದ ಪ್ರತಿನಿಧಿತ್ವ ಇರಬೇಕು. ಆಗ ಪರಸ್ಪರ ಚರ್ಚೆಯಿಂದ ಬಾಕಿ ಪ್ರಕರಣಗಳ ಇತ್ಯರ್ಥ ಬೇಗ ಆಗಲಿದೆ. ‘ಸರ್ಕಾರವೇ ದೊಡ್ಡ ಸಂಖ್ಯೆಯ ವ್ಯಾಜ್ಯ ಪ್ರಕರಣಗಳ ಜನಕ ಎನಿಸಿಕೊಳ್ಳುತ್ತಿದೆ. ಆರಂಭದಲ್ಲೇ ಇತ್ಯರ್ಥ ಮಾಡಬಹುದಾದರೂ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳು ಮೇಲ್ಮನವಿ ಹಾಕುತ್ತಾರೆ. ಹೀಗಾಗಿ ಪ್ರಕರಣ ಅನಗತ್ಯವಾಗಿ ನ್ಯಾಯಾಂಗ ಪ್ರಕ್ರಿಯೆಯ ಹಲವು ಹಂತಗಳನ್ನು ದಾಟುತ್ತದೆ’ ಎಂದು ನಾಗರತ್ನ ಅವರು ಬೇಸರ ವ್ಯಕ್ತಪಡಿಸಿದರು.

ನ್ಯಾಯಾಧೀಶರ ನೇಮಕಾತಿಗಳಲ್ಲಿ ವಿಳಂಬ, ಮೂಲಸೌಕರ್ಯ ಕೊರತೆ, ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸದಿರುವುದೂ ಸೇರಿ ಅನೇಕ ಸಮಸ್ಯೆಗಳೂ ಇವೆ. ಪ್ರಕರಣಗಳ ನಿರ್ವಹಣೆ, ಅನಗತ್ಯ ಮುಂದೂಡಿಕೆ ನಿಯಂತ್ರಣ, ತಂತ್ರಜ್ಞಾನದ ಅಳವಡಿಕೆ, ಆದ್ಯತೆ ಮೇಲೆ ಪ್ರಕರಣ ಕೈಗೆತ್ತಿಕೊಳ್ಳುವುದು, ವಿವಾದ ಇತ್ಯರ್ಥಕ್ಕೆ ಪರ್ಯಾಯ ಮಾರ್ಗ ಹುಡುಕುವುದು, ವಿಷಯ ತಜ್ಞ ಪೀಠಗಳ ರಚನೆಯಿಂದ ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥ ಸಾಧ್ಯವಿದೆ’ ಎಂದು ಬಿ.ವಿ ನಾಗರತ್ನ ಅವರು ತಿಳಿಸಿದರು.

ಕಕ್ಷಿದಾರರು ಅನಗತ್ಯ ದಾವೆ ಹೂಡಬಾರದು, ಸರ್ಕಾರ ವಾಸ್ತವ ವ್ಯಾಜ್ಯ ನೀತಿಯನ್ನು ಅಳವಡಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ನ್ಯಾಯಾಂಗಕ್ಕೆ ಅನುದಾನ ನೀಡಿ. ನೇಮಕಾತಿಗಳನ್ನು ಮಾಡಬೇಕು. ವಕೀಲರು ವೃತ್ತಿಪರತೆ ಮತ್ತು ನೈತಿಕ ಬದ್ಧತೆ ಪಾಲಿಸಬೇಕು ಎಂದು ಅವರು ಬಿ.ವಿ ನಾಗರತ್ನ ಅವರು ಸಲಹೆ ನೀಡಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಹೆಚ್ಚುತ್ತಿರುವ ಬಾಕಿ ಪ್ರಕರಣಗಳ ನಿಯಂತ್ರಣಕ್ಕೆ ನ್ಯಾಯಾಂಗ ಸುಧಾರಣಾ ಆಯೋಗ ಅವಶ್ಯಕ-ನ್ಯಾ. ಬಿ.ವಿ.ನಾಗರತ್ನ appeared first on Law Guide Kannada.

]]>
ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರು ಕಡ್ಡಾಯವೇ..? ಸ್ಪಷ್ಟಪಡಿಸಿದ ಹೈಕೋರ್ಟ್ https://www.lawguidekannada.com/is-the-fathers-name-mandatory-in-the-childs-birth-certificate-high-court-clarifies/ Thu, 12 Mar 2026 08:17:12 +0000 https://www.lawguidekannada.com/?p=3569 ಬೆಂಗಳೂರು: ಜನನ ಪ್ರಮಾಣಪತ್ರದಲ್ಲಿ ಮಗುವಿನ ತಂದೆಯ ಹೆಸರು ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಜನನ ಪ್ರಮಾಣಪತ್ರದಲ್ಲಿ ಉಪ ನಾಮ...

The post ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರು ಕಡ್ಡಾಯವೇ..? ಸ್ಪಷ್ಟಪಡಿಸಿದ ಹೈಕೋರ್ಟ್ appeared first on Law Guide Kannada.

]]>
ಬೆಂಗಳೂರು: ಜನನ ಪ್ರಮಾಣಪತ್ರದಲ್ಲಿ ಮಗುವಿನ ತಂದೆಯ ಹೆಸರು ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಜನನ ಪ್ರಮಾಣಪತ್ರದಲ್ಲಿ ಉಪ ನಾಮ ಬದಲಾವಣೆಗೆ ಕೋರಿ ಸಲ್ಲಿಸಿದ್ದ ಮನವಿಯಲ್ಲಿ ಕಾರಣ ನೀಡದೆ ತಿರಸ್ಕರಿಸಿದ ಜನನ ಮತ್ತು ಮರಣ ನೋಂದಣಾಧಿಕಾರಿಗಳ ಕ್ರಮ ಪ್ರಶ್ನಿಸಿ ಮಗುವಿನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಲಿವ್ ಇನ್ ರಿಲೇಶನ್ ನಲ್ಲಿ ಜನಿಸಿದ ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರು ಅಳಿಸಿದರೆ ಕಾನೂನುಬದ್ಧ ಹಕ್ಕುಗಳ ಮೇಲೆ ಯಾವುದೇ ಪರಿಣಾಮ ಬೀರದು. ಮಗುವಿಗೆ ತಂದೆಯ ಉಪನಾಮ ಕಡ್ಡಾಯವಲ್ಲ ಎಂದು ಹೇಳಿದೆ.

ತಾಯಿ ಏಕೈಕ ಆರೈಕೆದಾರರು ಮತ್ತು ನೈಸರ್ಗಿಕ ಪೋಷಕರಾಗಿದ್ದರೆ ವಾಸ್ತವವಾಗಿ ತಾಯಿ ವಂಶಾವಳಿಯನ್ನು ಮಗುವಿನ ಉಪನಾಮದ ಗುರುತು ಎಂದು ಗುರುತಿಸುವಲ್ಲಿ ಯಾವುದೇ ಸಂವಿಧಾನಿಕ ಅಡಚಣೆ ಇಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

ಜನನ ಪ್ರಮಾಣಪತ್ರದಲ್ಲಿನ ಹೆಸರಿನಲ್ಲಿ ಉಪ ನಾಮ ಬದಲಾವಣೆಗೆ ನಮಗೆ ಅಧಿಕಾರವಿಲ್ಲ ಎಂಬ ಉಪ ನೋಂದಣಾಧಿಕಾರಿಯವರ ವಾದ ತಳ್ಳಿ ಹಾಕಿದ ನ್ಯಾಯಪೀಠುವು, 1969ರ ಜನನ ಮತ್ತು ನೋಂದಣಿ ಕಾಯ್ದೆಯ ಪ್ರಕಾರ ಹೆಸರಿನಲ್ಲಿ ಗೊಂದಲ ಸರಿಪಡಿಸಲು ಇಲಾಖೆಯ ರಿಜಿಸ್ಟ್ರಾರ್ ಗೆ ಅಧಿಕಾರವಿರಲಿದೆ. ಅದರಂತೆ ಹೆಸರಿನಲ್ಲಿ ದೋಷಗಳನ್ನು ಮಾತ್ರವಲ್ಲದೆ ವಿಷಯ ವಸ್ತುವನ್ನೂ ಸರಿಪಡಿಸಬಹುದಾಗಿದೆ ಎಂದು ವಿವರಿಸಿತು.

ಜನನ ಪ್ರಮಾಣಪತ್ರದಿಂದ ತಂದೆಯ ಹೆಸರನ್ನು ಅಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿಲ್ಲ. ತಂದೆಗೆ ಸಂಬಂಧಿಸಿದ ನಮೂನೆಯಲ್ಲಿ ಜೈವಿಕ ತಂದೆಯ ಹೆಸರಿನ ಜೊತೆಗೆ ತಾಯಿಯ ಕುಟುಂಬದ ಹೆಸರನ್ನೂ ಸೇರಿಸಿ ಮಗುವಿನ ಉಪನಾಮಕ್ಕೆ ಮಾತ್ರ ಬದಲಾವಣೆ ಕೋರಿದ್ದಾರೆ. ಮಗುವಿನ ಉಪನಾಮ ಬದಲಾಯಿಸುವುದರಿಂದ ಅನುವಂಶಿಕತೆ, ಉತ್ತರಾಧಿಕಾರ ಮತ್ತು ನಿರ್ವಹೆಯ ಹಕ್ಕುಗಳು ಸೇರಿ ಪ್ರಸ್ತುತ ಜಾರಿಯಲ್ಲಿ ಇರುವ ಯಾವುದೇ ಕಾನೂನಿನ ಅಡಿ ಮಗುವಿನ ಜೈವಿಕ ತಂದೆಯಿಂದ ಇರಬಹುದಾದ ಹಕ್ಕುಗಳನ್ನು ಕಸಿದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿತು.

ಏನಿದು ಘಟನೆ
ನೇಪಾಳ ಮೂಲದ ಪುರುಷನೊಂದಿಗೆ ಅರ್ಜಿದಾರ ಮಹಿಳೆ ಲಿವ್ ಇನ್ ರಿಲೇಷನ್ ಹೊಂದಿದ್ದರು. ಇವರಿಗೆ 2017ರಲ್ಲಿ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮಗು ಜನಿಸಿದ್ದು, ಮಗು ಜನನದ ಬಳಿಕ ತಂದೆ, ಮಹಿಳೆ ಮತ್ತು ಮಗುವಿನಿಂದ ದೂರ ನೆಲೆಸಿದ್ದರು. ಅಲ್ಲದೆ, ಮಗುವಿನ ಪಾಲನೆಗೆ ಯಾವುದೇ ನೆರವು ನೀಡಲಿಲ್ಲ.
ಈ ನಡುವೆ, ಮಗುವಿನ ಜನನ ಪ್ರಮಾಣದಲ್ಲಿನ ಉಪನಾಮವನ್ನು ತಂದೆಯ ಬದಲಿಗೆ ತಾಯಿಯ ಹೆಸರನ್ನು ಸೇರಿಸುವಂತೆ ಕೋರಿ ಮಹಿಳೆ ಬಿಬಿಎಂಪಿ ಜನನ ಮರಣ ರಿಜಿಸ್ಟ್ರಾರ್ ಗೆ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ರಿಜಿಸ್ಟ್ರಾರ್ ತಿರಸ್ಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಬಾಧಿತ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರು ಕಡ್ಡಾಯವೇ..? ಸ್ಪಷ್ಟಪಡಿಸಿದ ಹೈಕೋರ್ಟ್ appeared first on Law Guide Kannada.

]]>
Selection of Students from JSS Law College as Civil Judges by the High Court of Karnataka https://www.lawguidekannada.com/selection-of-students-from-jss-law-college-as-civil-judges-by-the-high-court-of-karnataka/ Sat, 07 Mar 2026 03:13:40 +0000 https://www.lawguidekannada.com/?p=3557 Senior Advocate and Editor H V Venkatesh delivered a thought-provoking speech at a function organized...

The post Selection of Students from JSS Law College as Civil Judges by the High Court of Karnataka appeared first on Law Guide Kannada.

]]>
Senior Advocate and Editor H V Venkatesh delivered a thought-provoking speech at a function organized by JSS Veedyapeeta in Mysuru, celebrating the selection of students from JSS Law College as Civil Judges by the High Court of Karnataka.

In his address, he eloquently highlighted the core philosophy of JSS Veedyapeeta—“Vidya Daan” (imparting knowledge), “Annadaan” (providing food), and “Udyogadaan” (facilitating employment)—which has guided the institution’s service to society.

He lauded the newly selected Civil Judges and noted that their achievement at such a young age stands as a testament to their hard work, perseverance, and dedication. Congratulating them on reaching this significant milestone, he said their success should inspire many more aspiring students.

His remarks not only celebrated the accomplishment of the young judges but also underscored the institution’s enduring commitment to its founding ideals.

— S. H. Hosagoudar
Retired District Judge



The post Selection of Students from JSS Law College as Civil Judges by the High Court of Karnataka appeared first on Law Guide Kannada.

]]>
ನ್ಯಾಯಾಧೀಶರು ಪರಿಪೂರ್ಣರಂತೆ ನಟಿಸಿದಾಗ ನ್ಯಾಯಾಂಗ ನಾಯಕತ್ವಕ್ಕೆ ಹಿನ್ನಡೆ- CJI ಸೂರ್ಯಕಾಂತ್ https://www.lawguidekannada.com/judicial-leadership-suffers-when-judges-pretend-to-be-perfect-cji-surya-kant/ Sat, 21 Feb 2026 15:38:19 +0000 https://www.lawguidekannada.com/?p=3469 ನವದೆಹಲಿ: ನ್ಯಾಯಾಧೀಶರು ತಾವು ಪರಿಪೂರ್ಣರಾಗಿದ್ದಾರೆ ಎಂದು ತೋರಿಸಲು ಪ್ರಯತ್ನಿಸಿದಾಗ ನ್ಯಾಯಾಂಗ ನಾಯಕತ್ವಕ್ಕೆ ತೊಂದರೆ ಹಿನ್ನಡೆಯಾಗುತ್ತದೆ. ಜಾಗತಿಕ ನ್ಯಾಯಾಂಗ ಸಮುದಾಯದ ಸದಸ್ಯರು...

The post ನ್ಯಾಯಾಧೀಶರು ಪರಿಪೂರ್ಣರಂತೆ ನಟಿಸಿದಾಗ ನ್ಯಾಯಾಂಗ ನಾಯಕತ್ವಕ್ಕೆ ಹಿನ್ನಡೆ- CJI ಸೂರ್ಯಕಾಂತ್ appeared first on Law Guide Kannada.

]]>
ನವದೆಹಲಿ: ನ್ಯಾಯಾಧೀಶರು ತಾವು ಪರಿಪೂರ್ಣರಾಗಿದ್ದಾರೆ ಎಂದು ತೋರಿಸಲು ಪ್ರಯತ್ನಿಸಿದಾಗ ನ್ಯಾಯಾಂಗ ನಾಯಕತ್ವಕ್ಕೆ ತೊಂದರೆ ಹಿನ್ನಡೆಯಾಗುತ್ತದೆ. ಜಾಗತಿಕ ನ್ಯಾಯಾಂಗ ಸಮುದಾಯದ ಸದಸ್ಯರು ವಿನಯ ಮತ್ತು ನಿರಂತರ ಅಧ್ಯಯನವನ್ನು ನ್ಯಾಯಾಂಗ ಹುದ್ದೆಯ ಮೂಲ ತತ್ವಗಳಾಗಿ ಅಳವಡಿಸಿಕೊಳ್ಳಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಕಿವಿಮಾತು ಹೇಳಿದರು.

ನವದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ನ್ಯಾಯಾಂಗ ಶಿಕ್ಷಣವೇತ್ತರ 11ನೇ ದೈವಾರ್ಷಿಕ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ವಿಶೇಷ ಭಾಷಣ ಮಾಡಿದ ಸಿಜೆಐ ಸೂರ್ಯಕಾಂತ್ ಅವರು, ನ್ಯಾಯಾಧೀಶರನ್ನು “ಪೂರ್ಣವಾಗಿ ರೂಪುಗೊಂಡ ಉತ್ಪನ್ನಗಳು” ಎಂದು ನೋಡುವ ಕಲ್ಪನೆ ಮೆಚ್ಚುಗೆಯಾದರೂ ಸಂಸ್ಥೆಗೆ ಹಾನಿಕಾರಕವಾಗಿದೆ. ಬಹಳ ಕಾಲದಿಂದ ನಾವು ನ್ಯಾಯಾಧೀಶರು ನೇಮಕವಾಗುವ ಕಣದಲ್ಲೇ ಸಂಪೂರ್ಣರಾಗಿದ್ದಾರೆ, ರೂಪುಗೊಂಡಿದ್ದಾರೆ, ಪರಿಪೂರ್ಣರಾಗಿದ್ದಾರೆ ಎಂಬ ದೃಷ್ಟಿಕೋನದಲ್ಲಿ ಆರಾಮವಾಗಿದ್ದೇವೆ. ನ್ಯಾಯಾಧೀಶರು ಅಪೂರ್ಣರಾಗಿರುವುದರಿಂದ ನ್ಯಾಯಾಂಗ ನಾಯಕತ್ವ ಹಿನ್ನಡೆಯಾಗುವುದಿಲ್ಲ ಅವರು ಅಪೂರ್ಣರಲ್ಲ ಎಂದು ನಾವು ನಟಿಸಿದಾಗ ಅದು ಹಿನ್ನಡೆಯಾಗುತ್ತದೆ. ಆದ್ದರಿಂದ ನ್ಯಾಯಾಂಗ ನಾಯಕತ್ವಕ್ಕಾಗಿ ಶಿಕ್ಷಣ ನೀಡಬೇಕಾದರೆ, ಮೊದಲು ನಾವು ಒಂದು ಪ್ರಾಮಾಣಿಕ ಮೂಲಭೂತ ತತ್ವವನ್ನು ಒಪ್ಪಿಕೊಳ್ಳಬೇಕು. ನ್ಯಾಯಾಧೀಶರು, ಅವರು ಮುನ್ನಡೆಸುವ ಸಂಸ್ಥೆಗಳಂತೆಯೇ, ಬೆಳವಣಿಗೆ, ತಿದ್ದುಪಡಿ ಮತ್ತು ಸುಧಾರಣೆಗೆ ಸದಾ ಸಾಮರ್ಥ್ಯ ಹೊಂದಿರುತ್ತಾರೆ,” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದರು.

“Educating for Judicial Leadership” ಎಂಬ ವಿಷಯಾಧಾರಿತ ಸಮ್ಮೇಳನವನ್ನು ಉದ್ಘಾಟಿಸುತ್ತಾ, ಉಪನಿಷತ್ತಿನ ಪ್ರಾಚೀನ ಭಾರತೀಯ ಸೂಕ್ತಿ ವಿದ್ಯಾ ದದಾತಿ ವಿನಯಂ” (ನಿಜವಾದ ವಿದ್ಯೆ ವಿನಯವನ್ನು ಉಂಟುಮಾಡುತ್ತದೆ) ಅನ್ನು ಉಲ್ಲೇಖಿಸಿದ ಸಿಜೆಐ ಸೂರ್ಯಕಾಂತ್, ಇತಿಹಾಸದಲ್ಲಿನ ಅತ್ಯಂತ ಗೌರವಾನ್ವಿತ ನ್ಯಾಯಾಂಗ ನಾಯಕರು ತಮ್ಮನ್ನು ದೋಷರಹಿತರಾಗಿ ಪ್ರದರ್ಶಿಸಿದವರು ಅಲ್ಲ. ತಮ್ಮ ಜ್ಞಾನಕ್ಕೆ ಮಿತಿಗಳಿವೆ ಎಂಬ ಅರಿವು ಹೊಂದಿ, ತಿದ್ದುಪಡಿ ಸ್ವೀಕರಿಸಲು ಸದಾ ತೆರೆದ ಮನಸ್ಸು ಹೊಂದಿದ್ದವರೇ ಆಗಿದ್ದರು. ಅದು “ವಿನಯ,” ಎಂದು ಅವರು ಹೇಳಿದರು, “ವೈಯಕ್ತಿಕ ಗುಣ ಮಾತ್ರವಲ್ಲ. ಅದು ವೃತ್ತಿಪರ ರಕ್ಷಣಾ ಸಾಧನವಾಗಿದೆ. ಈ ಮಹತ್ವದ ಗುಣವನ್ನು ಪ್ರತಿಯೊಬ್ಬ ನ್ಯಾಯಾಧಿಕಾರಿಗೆ ವಿನಾಯಿತಿ ಇಲ್ಲದೆ ಕಲಿಸಬೇಕು ಎಂದು ನಾನು ನಂಬುತ್ತೇನೆ ಎಂದು ನುಡಿದರು.

ಕಾಮನ್ವೆಲ್ತ್ ನ್ಯಾಯಾಂಗ ಶಿಕ್ಷಣ ಸಂಸ್ಥೆಯ ಕೆಲಸವನ್ನು ಅವರು ಪರಂಪರೆ ನಿರ್ಮಾಣದ ಕಾರ್ಯವೆಂದು ವರ್ಣಿಸಿ, ಬದಲಾವಣೆಗಳಿಂದ ಕೂಡಿದ ಜಗತ್ತಿನಲ್ಲಿ ನೈತಿಕ ಹಾಗೂ ತಾಂತ್ರಿಕ ಸವಾಲುಗಳನ್ನು ನಿಭಾಯಿಸಲು ಸಮರ್ಥರಾಗಿರುವ “ಜ್ಞಾನಿ ನ್ಯಾಯದ ಸಂರಕ್ಷಕರು” ಆಗಿ ನ್ಯಾಯಾಧೀಶರನ್ನು ರೂಪಿಸುತ್ತಿದೆ. ಕಾಮನ್ ವೆಲ್ತ್ ವ್ಯಾಪ್ತಿಯಲ್ಲಿ ನ್ಯಾಯಾಂಗ ವ್ಯವಸ್ಥೆಗಳು ಸ್ಥಿರತೆ, ಪರಿವರ್ತನೆ ಮತ್ತು ಸಾಮಾಜಿಕ ಒತ್ತಡಗಳ ವಿಭಿನ್ನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಗಮನಿಸಿದರು. ಇಂತಹ ವೈವಿಧ್ಯತೆಯಲ್ಲಿ ಸಹಪಾಠ ಅಧ್ಯಯನ ಮತ್ತು ಸಂರಚಿತ ಸಂವಾದ ಅತ್ಯಾವಶ್ಯಕವಾಗುತ್ತದೆ.

CJEI ಸಂಸ್ಥೆಯನ್ನು ಕೇವಲ ಆಚರಣಾತ್ಮಕ ಸಂಸ್ಥೆಯಾಗಿ ಅಥವಾ ಏಕಮುಖ ಉಪದೇಶ ವೇದಿಕೆಯಾಗಿಯಾಗಿ ಸ್ಥಾಪಿಸಲಾಗಿಲ್ಲ ಎಂದು ಅವರು ಹೇಳಿದರು. ಸ್ಥಾಪನೆಯಿಂದಲೂ ಇದು ನ್ಯಾಯಾಂಗ ಶಿಕ್ಷಣಕರನ್ನು ಸಂಪರ್ಕಿಸುವ, ಸಹಪಾಠ ಅಧ್ಯಯನವನ್ನು ಉತ್ತೇಜಿಸುವ ಮತ್ತು ಪ್ರತ್ಯೇಕ ನ್ಯಾಯವ್ಯವಸ್ಥೆಗಳು ತಮ್ಮ ವೈಶಿಷ್ಟ್ಯ ಕಳೆದುಕೊಳ್ಳದೆ ಪರಸ್ಪರ ಕಲಿಯಲು ನೆರವಾಗುವ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಿದೆ ಎಂದು ಸಿಜೆಐ ಸೂರ್ಯಕಾಂತ್ ತಿಳಿಸಿದರು.

2014ರಲ್ಲಿ ಹ್ಯಾಲಿಫ್ಯಾಕ್ಸ್ನಲ್ಲಿ ನಾನು ಇದನ್ನು ಅತ್ಯಂತ ಸ್ಪಷ್ಟವಾಗಿ ಕಂಡೆ, ಮತ್ತು ಕಳೆದ ವರ್ಷ ಮಾಲ್ಟಾದಲ್ಲಿ ನಡೆದ ಮುಖ್ಯ ಪೋಷಕರ ಸಭೆಯಲ್ಲಿ ಭಾಗವಹಿಸಿದಾಗಲೂ ಕಂಡೆ,” ಎಂದು ಅವರು ಸ್ಮರಿಸಿದರು. ಸಮ್ಮೇಳನದ ಕಾರ್ಯಸೂಚಿಯನ್ನು ಉಲ್ಲೇಖಿಸಿ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯೊಂದಿಗೆ ಸಂವಹನ, ಪರಿಸರ ನ್ಯಾಯ, ಅಖಂಡತೆ ಮತ್ತು ಸಾರ್ವಜನಿಕ ನಂಬಿಕೆ ರಕ್ಷಣೆ, ನ್ಯಾಯಾಧೀಶರ ಕಲ್ಯಾಣ ಮತ್ತು ತೀರ್ಪು ಬರವಣಿಗೆಯ ಕೌಶಲ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಎಂದು ಅವರು ಹೇಳಿದರು.

ಕಾನೂನು ಒಂದು ಜೀವಂತ, ಉಸಿರಾಡುವ ಘಟಕವಾಗಿದೆ. ಅದು ತನ್ನ ಸುತ್ತಲಿನ ಜಗತ್ತಿನೊಂದಿಗೆ ಅಭಿವೃದ್ಧಿಯಾಗುತ್ತದೆ,” ಎಂದು ಅವರು ಹೇಳಿ, ನ್ಯಾಯಾಧೀಶರು ಪೂರ್ವನಿದರ್ಶನಗಳ ಪಾಠದಲ್ಲಿ ಪರಿಣತಿ ಹೊಂದುವುದರ ಜೊತೆಗೆ ಸಮಕಾಲೀನ ಕಾಲಘಟ್ಟದಲ್ಲಿ ನ್ಯಾಯ ಸಾಧಿಸುವಂತೆ ಕಾನೂನನ್ನು ವ್ಯಾಖ್ಯಾನಿಸುವ ಚಾತುರ್ಯವೂ ಹೊಂದಿರಬೇಕು ಎಂದು ಒತ್ತಿ ಹೇಳಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ನ್ಯಾಯಾಧೀಶರು ಪರಿಪೂರ್ಣರಂತೆ ನಟಿಸಿದಾಗ ನ್ಯಾಯಾಂಗ ನಾಯಕತ್ವಕ್ಕೆ ಹಿನ್ನಡೆ- CJI ಸೂರ್ಯಕಾಂತ್ appeared first on Law Guide Kannada.

]]>
ಘೋಷಿತ ಅಪರಾಧಿಗಳಿಗೆ ನಿರೀಕ್ಷಣಾ ಜಾಮೀನು..? ನ್ಯಾಯತೀರ್ಪುಗಳ ವಿಶ್ಲೇಷಣೆ ಏನು..? ಇಲ್ಲಿದೆ ವಿವರ https://www.lawguidekannada.com/anticipatory-bail-for-declared-criminals-what-is-the-analysis-of-the-judgments-here-is-the-detail/ Thu, 05 Feb 2026 08:00:48 +0000 https://www.lawguidekannada.com/?p=3364 ಬೆಂಗಳೂರು: ಘೋಷಿತ ಅಪರಾಧಿಗಳಿಗೆ ನಿರೀಕ್ಷಣಾ ಜಾಮೀನು ಸಿಗುತ್ತದೆಯೇ? ಇಲ್ಲವೋ? ಈ ಬಗ್ಗೆ ಈವರೆಗೆ ನೀಡಿರುವ ನ್ಯಾಯ ತೀರ್ಪುಗಳು ಏನು ಹೇಳುತ್ತವೆ?...

The post ಘೋಷಿತ ಅಪರಾಧಿಗಳಿಗೆ ನಿರೀಕ್ಷಣಾ ಜಾಮೀನು..? ನ್ಯಾಯತೀರ್ಪುಗಳ ವಿಶ್ಲೇಷಣೆ ಏನು..? ಇಲ್ಲಿದೆ ವಿವರ appeared first on Law Guide Kannada.

]]>
ಬೆಂಗಳೂರು: ಘೋಷಿತ ಅಪರಾಧಿಗಳಿಗೆ ನಿರೀಕ್ಷಣಾ ಜಾಮೀನು ಸಿಗುತ್ತದೆಯೇ? ಇಲ್ಲವೋ? ಈ ಬಗ್ಗೆ ಈವರೆಗೆ ನೀಡಿರುವ ನ್ಯಾಯ ತೀರ್ಪುಗಳು ಏನು ಹೇಳುತ್ತವೆ? ಎಂಬ ಬಗ್ಗೆ ವಿವರವಾದ ವಿಶ್ಲೇಷಣೆ ಇಲ್ಲಿದೆ ನೋಡಿ..

ಘೋಷಿತ ಅಪರಾಧಿಯಾಗಿ ಘೋಷಿಸಲ್ಪಟ್ಟ ಆರೋಪಿಯ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದ ಕಾನೂನು ಬಹುಕಾಲದಿಂದ ಸ್ಥಿರವಾಗಿದ್ದು, ಪ್ರಕರಣಗಳಲ್ಲಿ ಆರೋಪಿಯನ್ನು ಘೋಷಿತ ಅಪರಾಧಿಯಾಗಿ ಘೋಷಿಸುವುದನ್ನು ನಿರೀಕ್ಷಣಾ ಜಾಮೀನು ಅಧಿಕಾರದ ಪ್ರಯೋಗಕ್ಕೆ ತೀರಾ ಸಂಪೂರ್ಣ ನಿರ್ಬಂಧವೆಂದು ಪರಿಗಣಿಸಲಾಗುತ್ತಿತ್ತು. ಇದರ ಪರಿಣಾಮವಾಗಿ, ನ್ಯಾಯಾಂಗ ಪರಿಶೀಲನೆಯ ಗಮನವು ಪ್ರಕರಣದ ಮೂಲ ವಾಸ್ತವಾಂಶಗಳಿಂದ ದೂರ ಸರಿದು, ಕೇವಲ ಘೋಷಣಾ ಆದೇಶದ ಅಸ್ತಿತ್ವದ ಮೇಲೆ ಕೇಂದ್ರೀಕರಿಸಿತು. ದೇಶದಾದ್ಯಂತ ನ್ಯಾಯಾಲಯಗಳು, ಘೋಷಣಾ ಪ್ರಕ್ರಿಯೆಗಳ ಬಗ್ಗೆ ಗಮನಕ್ಕೆ ಬಂದ ತಕ್ಷಣ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 438 ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಸಾಮಾನ್ಯವಾಗಿ ವಜಾಗೊಳಿಸುತ್ತಿದ್ದವು. ಇದರಿಂದಾಗಿ ಪ್ರಾಯೋಗಿಕವಾಗಿ, ಇದು ಪ್ರಕರಣದ ವಾಸ್ತವಾಂಶಗಳು, ಆರೋಪಿಯ ನಡೆನುಡಿ ಅಥವಾ ಆ ರೀತಿಯ ಘೋಷಣೆಗೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ಹೆಚ್ಚಿನ ಪರಿಶೀಲನೆ ಇಲ್ಲದೇ, ಬಹುತೇಕ ಯಾಂತ್ರಿಕ ರೀತಿಯಲ್ಲಿ ಪರಿಹಾರ ನಿರಾಕರಣೆಗೇ ದಾರಿ ಮಾಡಿಕೊಟ್ಟಿತು.

ಈ ವಿಧಾನವು ಸುಪ್ರೀಂ ಕೋರ್ಟ್ ನೀಡಿದ State (NCT of Delhi) v. Lavesh ಪ್ರಕರಣದ ತೀರ್ಪಿನಿಂದ ತನ್ನ ಮೂಲವನ್ನು ಪಡೆದಿದೆ. ಆ ಪ್ರಕರಣದಲ್ಲಿ, ಘೋಷಿತ ಅಪರಾಧಿಯಾಗಿ ಘೋಷಿಸಲ್ಪಟ್ಟ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ಸೌಲಭ್ಯ ಲಭ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಈ ಸಿದ್ದಾಂತವನ್ನು ನಂತರ State of Madhya Pradesh v. Pradeep Sharma Shಚಿಡಿmಚಿ ಪ್ರಕರಣದಲ್ಲಿ ಪುನರ್ ದೃಢೀಕರಿಸಲಾಯಿತು. Srikant Upadhyay & Ors. v. State of Bihar ಪ್ರಕರಣದಲ್ಲಿಯೂ ಪುನರುಚ್ಚರಿಸಲಾಯಿತು. ಈ ತೀರ್ಪುಗಳ ಬಳಿಕ ಘೋಷಿತ ಅಪರಾಧಿಗೆ ಮುಂಗಡ ಜಾಮೀನು ನೀಡುವುದನ್ನು ಬಹುತೇಕ ಸ್ಥಿರವಾದ ನಿರ್ಬಂಧವೆಂದು ಪರಿಗಣಿಸಲಾಯಿತು. ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್ ಗಳು ಸಹ ಈ ನಿರ್ಬಂಧವನ್ನು ಸಂಪೂರ್ಣವೆಂದು ಪರಿಗಣಿಸಿ, ಘೋಷಣೆಯ ಹೊರತು ವಾಸ್ತವಾಂಶಗಳನ್ನು ಪರಿಶೀಲಿಸುವುದು ಅಪರೂಪವಾಗಿತ್ತು. ಆದರೆ, ಕ್ರಿಮಿನಲ್ ಕಾನೂನು ತನ್ನ ಸ್ವಭಾವದಿಂದಲೇ ಸ್ಥಿರವಾಗಿರುವುದಿಲ್ಲ.

ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಅವರು 2024ರ ಕೊನೆಯಲ್ಲಿ Asha Dubey v. State of Madhya Pradesh ಪ್ರಕರಣದಲ್ಲಿ ಬರೆದ ತೀರ್ಪಿನಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಸುಪ್ರೀಂ ಕೋರ್ಟ್, Pradeep Sharma ಪ್ರಕರಣವನ್ನು ಸೂಕ್ಷ್ಮವಾಗಿ ವಿಭೇದಿಸಿ, ಹಿಂದಿನ ತೀರ್ಪುಗಳನ್ನು ಘೋಷಿತ ಅಪರಾಧಿ ಘೋಷಣೆಯಿದ್ದರೆ ಮಾತ್ರ ನಿರೀಕ್ಷಣಾ ಜಾಮೀನಿಗೆ ಸಂಪೂರ್ಣ ಮತ್ತು ಕಠಿಣ ನಿರ್ಬಂಧವಿದೆ ಎಂದು ಓದಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿದ್ದು. ಸೆಕ್ಷನ್ 438 ಅಡಿನ ಅಧಿಕಾರವು ವಾಸ್ತವಾಂಶ ಆಧಾರಿತವಾಗಿಯೂ ಮತ್ತು ಸಂವಿಧಾನಾತ್ಮಕ ತತ್ವಗಳ ಆಧಾರದ ಮೇಲೂ ಇರಬೇಕು ಎಂದು ಸೂಚಿಸಿತು. ಮುಖ್ಯವಾಗಿ, Asha Dubey ತೀರ್ಪು ಸೆಕ್ಷನ್ 438 ಅಡಿಯಲ್ಲಿ ನ್ಯಾಯಾಂಗ ವಿವೇಚನೆಯ ಕೇಂದ್ರಸ್ಥಾನವನ್ನು ಪುನಃ ಸ್ಥಾಪಿಸುತ್ತದೆ. ಸುಪ್ರೀಂ ಕೋರ್ಟ್ ಘೋಷಣಾ ಪ್ರಕ್ರಿಯೆಗಳ ಗಂಭೀರತೆಯನ್ನು ಕಡಿಮೆ ಮಾಡಲಿಲ್ಲ. ಬದಲಾಗಿ, ಇಂತಹ ಪ್ರಕ್ರಿಯೆಗಳು ಸಂದರ್ಭದಿಂದ ಬೇರ್ಪಟ್ಟ ನ್ಯಾಯಾಂಗ ನಿರ್ಬಂಧವಾಗಿ ಕಾರ್ಯನಿರ್ವಹಿಸಬಾರದು ಎಂದು ಸ್ಪಷ್ಟಪಡಿಸಿತು.

ಇತ್ತೀಚೆಗೆ, ದೆಹಲಿ Shamshad v. State (NCT of Delhi) ಪ್ರಕರಣದಲ್ಲಿ Asha Dubeyತೀರ್ಪಿನ ಅನುಪಾತವನ್ನು ಅನುಸರಿಸಿ, ಘೋಷಿತ ಅಪರಾಧಿಯಾಗಿದ್ದರೂ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿತು. ಈ ವಿಷಯದಲ್ಲಿ ನ್ಯಾಯಾಲಯದ ಮೊದಲಾದ ರೀತಿಯ ತೀರ್ಪಾಗಿ ಗುರುತಿಸಲಾಗಿದೆ. ಗಮನಾರ್ಹವಾಗಿ, ಈ ಬೆಳೆಯುತ್ತಿರುವ ನ್ಯಾಯಶಾಸ್ತ್ರದ ಹೃದಯದಲ್ಲಿ ಕಾನೂನು ಚೌಕಟ್ಟು ಸ್ವತಃ ಇದೆ. ಸೆಕ್ಷನ್ 438 CrPc “ಬಂಧನದ ನಿರೀಕ್ಷೆ” ಮೇಲೆ ಆಧಾರಿತವಾಗಿದೆ. ಇದರಲ್ಲಿ ಘೋಷಿತ ಅಪರಾಧಿಗಳನ್ನು ಹೊರತುಪಡಿಸುವ ಯಾವುದೇ ವಿನಾಯಿತಿ ಇಲ್ಲ.

ಅದೇ ರೀತಿ, 2023ರಲ್ಲಿ ಜಾರಿಗೆ ಬಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಯ ಸೆಕ್ಷನ್ 482 ಕೂಡ ಇದೇ ಶಾಸನ ತತ್ತ್ವವನ್ನು ಉಳಿಸಿಕೊಂಡಿದೆ. ಹಿಂದಿನ ನ್ಯಾಯಾಂಗ ವ್ಯಾಖ್ಯಾನಗಳನ್ನು ಸಂಪೂರ್ಣವಾಗಿ ಅರಿತಿದ್ದರೂ, ಘೋಷಿತ ಅಪರಾಧಿಯನ್ನು ಮುಂಗಡ ಜಾಮೀನು ಕೋರುವುದರಿಂದ ವಂಚಿಸುವ ಯಾವುದೇ ನಿರ್ಬಂಧವನ್ನು ಶಾಸನಸಭೆ ಉದ್ದೇಶಪೂರ್ವಕವಾಗಿ ಸೇರಿಸಿಲ್ಲ. ಈ ಶಾಸನಾತ್ಮಕ ಮೌನ ಅಸಂಬದ್ಧವಲ್ಲ. ಇದು, ಕಾನೂನಿನಲ್ಲಿ ನಿರ್ಬಂಧವಿಲ್ಲದಿರುವಾಗ ನ್ಯಾಯಾಲಯಗಳು ರಚಿಸಿದ ನಿರ್ಬಂಧಗಳಿಂದ ಮುಂಗಡ ಜಾಮೀನು ಅಧಿಕಾರವನ್ನು ಕಡಿತಗೊಳಿಸಲಾಗುವುದಿಲ್ಲ ಎಂಬ ತತ್ವವನ್ನು ಬಲಪಡಿಸುತ್ತದೆ.ಇತ್ತೀಚಿನ ತೀರ್ಪುಗಳು ಸ್ವಾಗತಾರ್ಹ ದಿಕ್ಕು ಬದಲಾವಣೆಯನ್ನು ಸೂಚಿಸುತ್ತವೆ. ಘೋಷಣಾ ಪ್ರಕ್ರಿಯೆಗಳು ಹಾಜರಾತಿಯನ್ನು ಖಚಿತಪಡಿಸುವ ಪ್ರಕ್ರಿಯಾತ್ಮಕ ಸಾಧನಗಳೇ ಹೊರತು, ವೈಯಕ್ತಿಕ ಸ್ವಾತಂತ್ರ್ಯವನ್ನು ಶಾಶ್ವತವಾಗಿ ಮಸುಕುಗೊಳಿಸುವ ದಂಡಾತ್ಮಕ ಸಾಧನಗಳಲ್ಲ ಎಂಬುದನ್ನು ಗುರುತಿಸುವ ಬದಲಾವಣೆ. ಕ್ರಿಮಿನಲ್ ಕಾನೂನು ಮುಂದುವರಿದಂತೆ, ಕಠಿಣ ಸೂತ್ರಗಳ ಬಲಿಗೆ ಸ್ವಾತಂತ್ರ್ಯವನ್ನು ತ್ಯಾಗ ಮಾಡಲಾಗುವುದಿಲ್ಲ ಎಂಬುದನ್ನು ನ್ಯಾಯಾಲಯಗಳು ಮತ್ತೆ ಮತ್ತೆ ದೃಢಪಡಿಸುತ್ತಿರುವಂತೆ ಕಾಣುತ್ತದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಘೋಷಿತ ಅಪರಾಧಿಗಳಿಗೆ ನಿರೀಕ್ಷಣಾ ಜಾಮೀನು..? ನ್ಯಾಯತೀರ್ಪುಗಳ ವಿಶ್ಲೇಷಣೆ ಏನು..? ಇಲ್ಲಿದೆ ವಿವರ appeared first on Law Guide Kannada.

]]>
ಯುವ ವಕೀಲರು ಮೊದಲು ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾಕ್ಟಿಸ್ ಮಾಡಲಿ-ಅಎI ಸೂರ್ಯಕಾಂತ್ ಸಲಹೆ https://www.lawguidekannada.com/young-lawyers-should-practice-law-in-district-courts-first-aai-suryakant-suggests/ Mon, 26 Jan 2026 10:02:32 +0000 https://www.lawguidekannada.com/?p=3291 ನವದೆಹಲಿ, ಜನವರಿ,24,2026 (www.justakannnada.in) ಯುವ ವಕೀಲರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಜಿಲ್ಲಾ ನ್ಯಾಯಾಲಯಗಳಲ್ಲಿ ಕಾನೂನು ಅಭ್ಯಾಸ ಮಾಡಬೇಕು. ಏಕೆಂದರೇ...

The post ಯುವ ವಕೀಲರು ಮೊದಲು ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾಕ್ಟಿಸ್ ಮಾಡಲಿ-ಅಎI ಸೂರ್ಯಕಾಂತ್ ಸಲಹೆ appeared first on Law Guide Kannada.

]]>
ನವದೆಹಲಿ, ಜನವರಿ,24,2026 (www.justakannnada.in) ಯುವ ವಕೀಲರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಜಿಲ್ಲಾ ನ್ಯಾಯಾಲಯಗಳಲ್ಲಿ ಕಾನೂನು ಅಭ್ಯಾಸ ಮಾಡಬೇಕು. ಏಕೆಂದರೇ ಟ್ರಯಲ್ ಕೋರ್ಟ್ ಅನುಭವ ಅಮೂಲ್ಯವಾದುದು. ನಿಜವಾದ ವೃತ್ತಿಪರರಾಗಿ ಸಂಪೂರ್ಣ ತರಬೇತಿಯು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾರಂಭವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಕಿವಿಮಾತು ಹೇಳಿದರು.

ದೆಹಲಿ ಬಾರ್ ಕೌನ್ಸಿಲ್ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಕಾನೂನು ಪದವೀಧರರಲ್ಲಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಲ್ಲಿ ಅಭ್ಯಾಸ ಮಾಡುವುದು ಸೂಕ್ತ ಎಂಬ ತಪ್ಪು ಕಲ್ಪನೆ ಇದೆ. ಆದರೆ ಯುವ ವಕೀಲರು ಮತ್ತು ಕಾನೂನು ವೃತ್ತಿಪರರ ನಿಜವಾದ ತರಬೇತಿ ಆರಂಭವಾಗುವುದು ಜಿಲ್ಲಾ ನ್ಯಾಯಾಲಯಗಳಲ್ಲಿಯೇ. ಯುವ ವಕೀಲರು ಮೊದಲು ಮೊಕದ್ದಮೆ ಹೂಡುವುದನ್ನು ಅಲ್ಲಿಂದ ಕಲಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಜಿಲ್ಲಾ ನ್ಯಾಯಾಲಯಗಳು ವೃತ್ತಿಪರರಿಗೆ ಅಮೂಲ್ಯ ಕೇಂದ್ರಗಳಾಗಿದ್ದು, ವೃತ್ತಿಪರ ಸಂಸ್ಕೃತಿಯನ್ನು ಬೆಳೆಸುವ ಕೇಂದ್ರಗಳಾಗಿವೆ, ಕಾನೂನು ವೃತ್ತಿಯ ಬೇರುಗಳಿಗೆ ಅಗತ್ಯವಾದ ಬಲವನ್ನು ನೀಡುವ ಕೇಂದ್ರಗಳಾಗಿವೆ. ನ್ಯಾಯವು ಪ್ರಾಥಮಿಕವಾಗಿ ಮೇಲ್ಮನವಿ ವೇದಿಕೆಗಳಲ್ಲಿ ಮಾತ್ರ ನೆಲೆಗೊಂಡಿಲ್ಲ. ನಿಜವಾದ ನ್ಯಾಯವು ತಳಮಟ್ಟದ ನ್ಯಾಯಾಲಯಗಳಲ್ಲಿ ಮಾತ್ರ ನೆಲೆಗೊಳ್ಳುತ್ತದೆ ಏಕೆಂದರೆ ಸಾಮಾನ್ಯ ನಾಗರಿಕನು ತನ್ನ ಹಕ್ಕನ್ನು ಜಾರಿಗೊಳಿಸಲು ಜಿಲ್ಲಾ ನ್ಯಾಯಾಲಯಗಳಲ್ಲಿ ಮಾತ್ರ ಹೋದಾಗ ಮೊದಲ ಮುಖಾಮುಖಿಯಾಗುತ್ತಾನೆ, ವಕೀಲರ ಎಲ್ಲಾ ಹಿರಿಯ ಸದಸ್ಯರಿಗೆ ನನ್ನ ಪ್ರಾಮಾಣಿಕ ಮನವಿ. ನಿಮ್ಮಲ್ಲಿರುವ ಜ್ಞಾನವನ್ನು ದಯವಿಟ್ಟು ಮುಂದಿನ ಪೀಳಿಗೆಯ ವಕೀಲರಿಗೆ ನೀಡಿ. ಆದ್ದರಿಂದ ತಲೆಮಾರುಗಳವರೆಗೆ, ಜಿಲ್ಲಾ ನ್ಯಾಯಾಲಯದ ವಕೀಲರು ತಮ್ಮ ವೃತ್ತಿಪರ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ,” ಎಂದು ಸಿಜೆಐ ಸೂರ್ಯಕಾಂತ್ ನುಡಿದರು.

ನ್ಯಾಯಾಲಯಗಳು ನ್ಯಾಯ ವಿತರಣಾ ವ್ಯವಸ್ಥೆಯ ಅವಿಭಾಜ್ಯ ಪಾಲುದಾರರಾಗಿದ್ದು, ಸವಾಲುಗಳನ್ನು ಎದುರಿಸುವಾಗ ಒಟ್ಟಾಗಿ ಕಾರ್ಯನಿರ್ವಹಿಸಬೇಕು. ನಾವು ಯುವ ವಕೀಲರನ್ನು ಜಿಲ್ಲಾ ನ್ಯಾಯಾಲಯಕ್ಕೆ ಸೇರಲು ಸ್ವಲ್ಪ ಸಮಯದವರೆಗೆ ಪ್ರೋತ್ಸಾಹಿಸಬೇಕು ಮತ್ತು ನಂತರ ಅಂತಿಮವಾಗಿ ಇತರ ನ್ಯಾಯಾಲಯಗಳಿಗೆ ಸ್ಥಳಾಂತರಗೊಳ್ಳಬೇಕು. ನಿಜವಾದ ವೃತ್ತಿಪರರಾಗಿ ಸಂಪೂರ್ಣ ತರಬೇತಿಯು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾರಂಭವಾಗುತ್ತದೆ. ನಾನು ಜೀವನದಲ್ಲಿ ಯಾವುದೇ ಯಶಸ್ಸನ್ನು ಪಡೆಯಬಹುದಾದರೂ, ಜಿಲ್ಲಾ ನ್ಯಾಯಾಲಯದಲ್ಲಿನ ನನ್ನ ಅಡಿಪಾಯವು ಅದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ, ಎಂದು ಸೂರ್ಯಕಾಂತ್ ಅವರು ಹೇಳಿದರು.

ಜಿಲ್ಲಾ ನ್ಯಾಯಾಲಯಗಳನ್ನು ಹಿಂದೆ ‘ಕೆಳ ನ್ಯಾಯಾಲಯಗಳು” ಎಂದು ತಪ್ಪಾಗಿ ಬ್ರಾಂಡ್ ಮಾಡಲಾಗಿದೆ, ತಪ್ಪಾಗಿ ಶೀರ್ಷಿಕೆ ನೀಡಲಾಗಿದೆ ಮತ್ತು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ವಿಷಾದಿಸಿದ ಸಿಜೆಐ ಸೂರ್ಯಕಾಂತ್, ಕಾನೂನು ವೃತ್ತಿಯ ಬೇರುಗಳಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ನ್ಯಾಯಾಲಯಗಳನ್ನು ಅವರು ಶ್ಲಾಘಿಸಿದರು.

“ವ್ಯವಸ್ಥೆಯಿಂದ ನಿರೀಕ್ಷೆಗಳಿವೆ ಮತ್ತು ನ್ಯಾಯ ವಿತರಣಾ ವ್ಯವಸ್ಥೆಯು ಸವಾಲುಗಳಿಗೆ ಸ್ಪಂದಿಸಬೇಕು. ನಾವೆಲ್ಲರೂ ಒಂದೇ ತಂಡವಾಗಿ ಒಟ್ಟಾಗಿದ್ದಾಗ ನಾವು ಸವಾಲನ್ನು ಯಶಸ್ವಿಯಾಗಿ ಎದುರಿಸುತ್ತೇವೆ. ನಾವೆಲ್ಲರೂ ಸಹ-ಪಾಲುದಾರರು, ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಅವಿಭಾಜ್ಯ ಪಾಲುದಾರರು… ಸಮಸ್ಯೆಗಳು ಅಥವಾ ಸವಾಲುಗಳು ಬಂದಾಗಲೆಲ್ಲಾ, ನಾವು ಅವುಗಳನ್ನು ಜಂಟಿಯಾಗಿ ಮತ್ತು ಸಾಮಾನ್ಯವಾಗಿ ಎದುರಿಸಬೇಕಾಗುತ್ತದೆ” ಎಂದು ಸೂರ್ಯಕಾಂತ್ ನುಡಿದರು.

ಸಭೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಅಧ್ಯಕ್ಷ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಮತ್ತು ದೆಹಲಿ ಹೈಕೋರ್ಟ್ ನ್ಯಾಯಾಧೀಶರು ಉಪಸ್ಥಿತರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಯುವ ವಕೀಲರು ಮೊದಲು ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾಕ್ಟಿಸ್ ಮಾಡಲಿ-ಅಎI ಸೂರ್ಯಕಾಂತ್ ಸಲಹೆ appeared first on Law Guide Kannada.

]]>