07/03/2026

Law Guide Kannada

Online Guide

ಚೆಕ್ ಬೌನ್ಸ್ ಕೇಸ್: ವಿಚಾರಣೆ ಸಮಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕಡ್ಡಾಯವಾಗಿ ಹಾಜರಾಗಬೇಕೆ..?

ಲಡಾಖ್: ಚೆಕ್ ಅಮಾನ್ಯ ಪ್ರಕರಣದ ವಿಚಾರಣಾ ಸಮಯದಲ್ಲಿ ಬ್ಯಾಂಕ್ ಮ್ಯಾನೇಜರ್ ಹಾಜರಾತಿ ಕಡ್ಡಾಯವಲ್ಲ ಎಂದು ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ತೀರ್ಪು ನೀಡಿದೆ.

ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ಧರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಚೆಕ್ ಬೌನ್ಸ್ ಪ್ರಕರಣದ ಕೋರ್ಟ್ ವಿಚಾರಣೆಯಲ್ಲಿ ಬ್ಯಾಂಕ್ ಪರವಾಗಿ ಅದರ ಮ್ಯಾನೇಜರ್ ಹಾಜರಾತಿ ಕಡ್ಡಾಯವಾಗಿ ಅಗತ್ಯವಲ್ಲ. ಮ್ಯಾನೇಜರ್ ಅವರ ಬದಲಿಗೆ, ಬ್ಯಾಂಕಿನ ಅಧಿಕಾರ ಪತ್ರ ಹೊಂದಿರುವ ಅದರ ಅಧಿಕೃತ ಅಧಿಕಾರಿ ಸಾಕ್ಷ್ಯ ನೀಡಬಹುದು ತೀರ್ಪು ಪ್ರಕಟಿಸಿದೆ.

ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆಯ ಸಮಯದಲ್ಲಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ವೈಯಕ್ತಿಕವಾಗಿ ಹಾಜರಾಗುವುದು ಕಡ್ಡಾಯವಲ್ಲ. ಸಾಮಾನ್ಯ ಹಾಗೂ ದೈನಂದಿನ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಬ್ಯಾಂಕಿನ ಸಂಬಂಧಿತ ದಾಖಲೆಗಳಿಗೆ ಪರಿಶೀಲಿಸುವ ಅಧಿಕಾರ ಹೊಂದಿರುವ ಯಾವುದೇ ಅಧಿಕೃತ ಬ್ಯಾಂಕ್ ಅಧಿಕಾರಿ ಸಮರ್ಥವಾಗಿ ಸಾಕ್ಷ್ಯ ನೀಡಬಹುದು.

ಹಾಗೆಯೇ ಇಂತಹ ಪ್ರಕರಣಗಳಲ್ಲಿನ ಸಾಕ್ಷ್ಯಗಳು ಅಧಿಕೃತ ಬ್ಯಾಂಕ್ ದಾಖಲೆಗಳನ್ನು ಆಧರಿಸಿರುವುದರಿಂದ, ಶಾಖಾ ವ್ಯವಸ್ಥಾಪಕರು ವೈಯಕ್ತಿಕವಾಗಿ ಸಾಕ್ಷ್ಯ ನುಡಿಯುವ ಅಗತ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.