ಶಾಲಾ ದಾಖಲೆಯಲ್ಲಿ ಜಾತಿ ತಿದ್ದುಪಡಿ ಅಧಿಕಾರ ಸಿವಿಲ್ ಕೋರ್ಟ್ ಗಳಿಗಿದೆ- ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಶಾಲಾ-ಕಾಲೇಜುಗಳ ದಾಖಲೆಗಳಲ್ಲಿ ಜಾತಿಗೆ ಸಂಬಂಧಿಸಿದಂತೆ ನಮೂದಾಗಿರುವ ತಪ್ಪುಗಳನ್ನು ಸರಿಪಡಿಸಲು ನಿರ್ದೇಶಿಸುವಂತೆ ಕೋರಿದ ದಾವೆಯ ವಿಚಾರಣೆ ನಡೆಸಿ ಆದೇಶ ಪ್ರಕಟಿಸುವ ಅಧಿಕಾರ ಸಿವಿಲ್ ನ್ಯಾಯಾಲಯಗಳಿಗಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ.ಸಚಿನ್ ಶ0ಕರ್ ಮಗ್ದೂಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ತಹಶೀಲ್ದಾರ್ ಜಾರಿಗೊಳಿಸಿರುವ ಜಾತಿ ಪ್ರಮಾಣ ಪತ್ರದ ಆಧಾರದಲ್ಲಿ ಶಾಲೆಯ ದಾಖಲೆಗಳಲ್ಲಿ ತನ್ನ ಜಾತಿಯ ನಮೂದನ್ನು ತಿದ್ದುಪಡಿ ಮಾಡುವಂತೆ ಶಾಲೆಗಳಿಗೆ ನಿರ್ದೇಶನಾತ್ಮಕ ಆದೇಶ ಹೊರಡಿಸುವಂತೆ ಕೋರಿ ಸಲ್ಲಿಸುವ ಅರ್ಜಿಗಳನ್ನು ಇತ್ಯರ್ಥ ಮಾಡುವ ಅಧಿಕಾರ ಸಿವಿಲ್ ನ್ಯಾಯಾಲಯಗಳಿಗೆ ಇದೆ ಎ0ದು ಹೇಳಿದೆ.
ಶಾಲಾ ದಾಖಲೆಗಳಲ್ಲಿ ವಿದ್ಯಾರ್ಥಿಯ ಜಾತಿ ತಪ್ನಾಗಿ ಮುದ್ರಿತವಾಗಿದ್ದರೆ, ಅಂತಹ ತಪ್ಪುಗಳನ್ನು ತಹಶೀಲ್ದಾರ್ ಒದಗಿಸುವ ಜಾತಿ ಪ್ರಮಾಣ ಪತ್ರದ ಮೂಲಕ ಸರಿಪಡಿಬಹುದು. ಇಲ್ಲವೇ ಅರ್ಜಿದಾರರು, ಶಾಲೆಗಳಿಗೆ ಈ ಬಗ್ಗೆ ನಿರ್ದೇಶನಾತ್ಮಕ ಆದೇಶ ಹೊರಡಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಬಹುದು. ಅರ್ಜಿಯನ್ನು ಇತ್ಯರ್ಥಪಡಿಸಲು ಸಿವಿಲ್ ನ್ಯಾಯಾಲಯಕ್ಕೆ ನ್ಯಾಯವ್ಯಾಪ್ತಿ ಇರುತ್ತದೆ ಎ0ದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ