BSNL ಕಂಪೆನಿಗೆ ದಂಡ ವಿಧಿಸಿ ಗ್ರಾಹಕರ ಕೋರ್ಟ್: ಕಾರಣವೇನು..?
ಮಂಗಳೂರು: ಗ್ರಾಹಕರಿಗೆ ದೋಷಯುಕ್ತ 4G ನೆಟ್ವರ್ಕ್ ಒದಗಿಸಿದ್ದ ಬಿಎಸ್ ಎನ್ ಎಲ್ (BSNL) ಗೆ ದಂಡ ವಿಧಿಸಿದ ಗಾಹಕ ನ್ಯಾಯಾಲಯವು ಅದನ್ನು 65 ದಿನಗಳೊಳಗೆ ಪಾವತಿಸುವಂತೆ ಆದೇಶ ಹೊರಡಿಸಿದೆ.
ದೋಷಯುಕ್ತ 4G ನೆಟ್ವರ್ಕ್ ಒದಗಿಸಿದ್ದ BSNL ಕಂಪೆನಿಗೆ ದಂಡ ವಿಧಿಸಿ ಗ್ರಾಹಕನ ಪರ ದಕ್ಷಿಣ ಕನ್ನಡ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ. ಪ್ರಮಾದ ಎಸಗಿದ BSNL ಸಂಸ್ಥೆಯು ಅನಿರ್ಬಂದಿತ 4ಉ ನೆಟ್ವರ್ಕ್ ಅನ್ನು ನಿರಂತರವಾಗಿ ನೀಡಬೇಕು ಹಾಗೂ 4G ನೆಟ್ವರ್ಕ್ ರಿಚಾರ್ಜ್ ರೂ. 3880/-ನ್ನು ಶೇಕಡಾ 6ರ ಬಡ್ಡಿ ಮತ್ತು ಇದರ ಜೊತೆಗೆ ಸೇವಾ ನ್ಯೂನ್ಯತೆಗಾಗಿ ರೂ. 10,000/- ದಂಡ ಹಾಗೂ ಪ್ರಕರಣದ ವೆಚ್ಚವಾಗಿ ರೂ. 5000/-ವನ್ನು 65 ದಿನದೊಳಗೆ ಪಾವತಿಸುವಂತೆ ಆದೇಶ ನೀಡಿತು.
ಏನಿದು ಪ್ರಕರಣ
ಮಂಗಳೂರಿನಲ್ಲಿ ವಕೀಲ ತೇಜ ಕುಮಾರ್ ಡಿ.ಯಂ ಎಂಬುವವರು BSNL ಕಂಪೆನಿಯ ಸಿಮ್ ನ್ನು 2014ರಿಂದ ಉಪಯೋಗಿಸುತ್ತಿದ್ದು, 2023 ರಿಂದ 4ಉ ನೆಟ್ವರ್ಕ್ ಸಿಮ್ ಗೆ ವಿಸ್ತರಿಸಿದ್ದರು. ವಿಸ್ತರಿಸಿದ ಕೆಲವು ತಿಂಗಳು 4G ನೆಟ್ವರ್ಕ್ ಲಭ್ಯವಾಗಿತ್ತು ತದ ನಂತರದಲ್ಲಿ 4G ನೆಟ್ವರ್ಕ್ ಹಠಾತ್ತಾಗಿ ಸ್ಥಗಿತಗೊಳ್ಳುತ್ತಿತ್ತು. ಸ್ವಲ್ಪ ಸಮಯ ಕಳೆದ ಮತ್ತೆ ಬಿಟ್ಟು ಬಿಟ್ಟು 4G ನೆಟ್ವರ್ಕ್ ಲಭ್ಯವಾಗಿತ್ತು. ಈ ಬಗ್ಗೆ ಗ್ರಾಹಕ ವಕೀಲ ತೇಜ ಕುಮಾರ್ ಡಿ.ಯಂ ಅವರು ಹಲವಾರು ಬಾರಿ ಸಂಸ್ಥೆಗೆ ದೂರು ನೀಡಿದ್ದರು.
ಆದರೆ, ಬಿಟ್ಟು ಬಿಟ್ಟು ಬರುವ 4ಉ ನೆಟ್ವರ್ಕ್ ಸಮಸ್ಯೆಯಿಂದ ಗ್ರಾಹಕ ತೇಜಕುಮಾರ್ ಅವರು ತೀವ್ರ ಸಮಸ್ಯೆಗೆ ಎದುರಿಸಿದ್ದರು. ಸಮಸ್ಯೆಯನ್ನು ಸರಿಪಡಿಸಲು ಹಳೆಯ BSNL ಕಂಪೆನಿಯ ಸಿಮ್ ಅನ್ನು ಸಂಸ್ಥೆ ಯ ನಿರ್ದೇಶನದಂತೆ ಬದಲಾಯಿಸಿ ಹೊಸ 4ಉ ನೆಟ್ವರ್ಕ್ ಸಿಮ್ ಅನ್ನೂ ಖರೀದಿಸಿದರು. ಹೊಸ ಸಿಮ್ ಕಾರ್ಡ್ ಖರೀದಿಸಿದರೂ ಕೂಡ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಫಲವಾಗಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಹಕ ತೇಜಕುಮಾರ್ ಅವರು ಸಂಸ್ಥೆಯಿಂದ ಪರಿಹಾರ ಕೋರಿ ಗ್ರಾಹಕರ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು. ತೇಜ ಕುಮಾರ್ ಡಿ.ಯಂ. ಸಲ್ಲಿಸಿದ ದೂರನ್ನು ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ, BSNL ಸಂಸ್ಥೆಯು ನಿರಂತರವಾಗಿ ಗ್ರಾಹಕರಿಗೆ, 4G ನೆಟ್ವರ್ಕ್ ಒದಗಿಸವಲ್ಲಿ ನ್ಯೂನ್ಯತೆ ತೋರಿದೆ ಎಂದು ತೀರ್ಪು ನೀಡಿ ದಂಡ ವಿಧಿಸಿತು.
ಮಂಗಳೂರಿನ ವಕೀಲರಾದ ತೇಜ ಕುಮಾರ್ ಡಿ.ಎಂ. ಅವರು ಸ್ವತಃ ದೂರುದಾರರಾಗಿ ವಾದ ಮಂಡಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
