06/03/2026

Law Guide Kannada

Online Guide

ಜಾಮೀನು ರಹಿತ ವಾರೆಂಟ್ ಗಳ ಜಾರಿ ಖಚಿತಪಡಿಸುವುದು ನ್ಯಾಯಾಲಯದ ಕರ್ತವ್ಯ- ಹೈಕೋರ್ಟ್

ಬೆಂಗಳೂರು: ವಿಚಾರಣೆ ನಡೆಸದೇ ಇದ್ದ ಕಾರಣಕ್ಕೆ ದೂರನ್ನು ವಜಾಗೊಳಿಸುವುದು ಸಮರ್ಥನೀಯವಲ್ಲ. ಅಂತಹ ಆದೇಶಗಳನ್ನು ಹೊರಡಿಸುವ ಮೊದಲು ಜಾಮೀನು ರಹಿತ ವಾರೆಂಟ್ ಗಳನ್ನು ಜಾರಿಗೊಳಿಸುವುದನ್ನು ಖಚಿತಪಡಿಸುವುದು ನ್ಯಾಯಾಲಯದ ಕರ್ತವ್ಯ ಎಂದು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.

ಗಣೇಶ್ ಸಾಯಿ ಫೈನಾನ್ಸ್ ವಿರುದ್ಧ ಯತೀಂದ್ರ ಪಟೇಲ್ ಪ್ರಕರಣ ಕುರಿತು ವಿಚಾರಣೆ ನಡೆಸುವ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಜಿ. ಬಸವರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.

ಜಾರಿ ಮಾಡಲು ನೀಡಲಾದ ಜಾಮೀನು ರಹಿತ ವಾರೆಂಟ್ ಗಳ ಜಾರಿಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳದೆ, ವಿಚಾರಣೆ ನಡೆಸದೇ ಇದ್ದದ್ದಕ್ಕಾಗಿ ದೂರನ್ನು ವಜಾಗೊಳಿಸುವುದು ಸಮರ್ಥನೀಯವಲ್ಲ. ಅಂತಹ ಆದೇಶಗಳ ಜಾರಿಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವುದು ನ್ಯಾಯಾಲಯದ ಕರ್ತವ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.