ಕ್ರಿಮಿನಲ್ ಪ್ರಕರಣ: 180 ದಿನ ಮೀರಿದ ನಂತರ ಮೇಲ್ಮನವಿ ಅರ್ಜಿ ಯಾವುದೇ ಕಾರಣಕ್ಕೂ ಸ್ವೀಕರಿಸುವಂತಿಲ್ಲ- ಹೈಕೋರ್ಟ್
ಬೆಂಗಳೂರು: ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿ ಖುಲಾಸೆಗೊಂಡ 90 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬೇಕು. 180 ದಿನಗಳು ಮೀರಿದ ನಂತರ ನ್ಯಾಯಾಲಯಗಳು ಯಾವುದೇ ಕಾರಣಕ್ಕೂ ಮೇಲ್ಮನವಿ ಸ್ವೀಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಢಿದೆ.
ಕ್ರಿಮಿನಲ್ ಪ್ರಕರಣಗಳ ಖುಲಾಸೆ ಪ್ರಶ್ನಿಸಲು ಹೈಕೋರ್ಟ್ ಕಾಲಮಿತಿ ನಿಗದಿ ಮಾಡಿದ್ದು, ಮೇಲ್ಮನವಿ ಮೀರಿದ ಅರ್ಜಿ ಸ್ವೀಕರಿಸಲು ನಿರ್ಬಂಧ ಹೇರಿದೆ. ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದ್ದು, ಕ್ರಿಮಿನಲ್ ಮೊಕದ್ದಮೆಯಲ್ಲಿ ಆರೋಪಿ ಖುಲಾಸೆಗೊಂಡ 90 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬೇಕು. 180 ದಿನಗಳ ನಂತರ ಯಾವುದೇ ಕಾರಣಕ್ಕೂ ಮೇಲ್ಮನವಿ ಸ್ವೀಕರಿಸಬಾರದು ಎಂದು ಅಭಿಪ್ರಾಯಪಟ್ಟಿದೆ.
ಕ್ರಿಮಿನಲ್ ಮೊಕದ್ದಮೆಯಲ್ಲಿ ಕಾಲಮಿತಿ ಮೀರಿದ ಅರ್ಜಿಗಳನ್ನು ಸ್ವೀಕರಿಸಲು ನ್ಯಾಯಾಲಯಗಳು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು. ಕ್ರಿಮಿನಲ್ ಅಪರಾಧಗಳ ಕಾಲಮಿತಿಯ ಬಗ್ಗೆ ನ್ಯಾಯಾಲಯಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. 180 ದಿನಗಳನ್ನು ಮೀರಿದ ಮೇಲ್ಮನವಿ ಅರ್ಜಿಗಳನ್ನು ನ್ಯಾಯಾಲಯಗಳು ಯಾವುದೇ ಕಾರಣಕ್ಕೂ ಸ್ವೀಕರಿಸುವಂತಿಲ್ಲ ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ಖುಲಾಸೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು 90 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು. 180 ದಿನಗಳ ನಂತರ, ವಿಳಂಬಕ್ಕೆ ಕಾರಣ ಏನೇ ಇರಲಿ, ಮೇಲ್ಮನವಿಯನ್ನು ಸ್ವೀಕರಿಸಲಾಗುವುದಿಲ್ಲ. ನ್ಯಾಯಾಲಯಗಳು ಈ ಕಠಿಣ ನಿಯಮವನ್ನು ಪಾಲಿಸಬೇಕು
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
