05/03/2026

Law Guide Kannada

Online Guide

ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪಾಲಿಸದೇ ಇರುವುದು ಕ್ಷಮಾರ್ಹವಲ್ಲ-ಹೈಕೋರ್ಟ್

ಅಲಹಾಬಾದ್: ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಮಹತ್ವದ ತಿಳಿಸುವಂತಹ ತೀರ್ಪೊಂದನ್ನ ಅಲಹಾಬಾದ್ ಹೈಕೋರ್ಟ್ ಕೊಟ್ಟಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಪಾಲಿಸದೇ ಇರುವುದು ‘ಕ್ಷಮಾರ್ಹವಲ್ಲ. ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಮ್ಯಾಜಿಸ್ಟ್ರೇಟ್ ತನ್ನ ನ್ಯಾಯಿಕ ಕಾರ್ಯವನ್ನು ನಿರ್ವಹಿಸುವಾಗ, ಅವರು ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪೊಲೀಸ್ ಮುಖ್ಯಸ್ತರಿಗಿಂತಲೂ ಹಾಗೂ ರಾಜ್ಯದ ರಾಜಕೀಯ ಮುಖ್ಯಸ್ಮರಿಗಿಂತಲೂ ಮೇಲಿರುವ ಸ್ಥಾನದಲ್ಲಿರುತ್ತಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಪಾಲಿಸದೇ ಇರುವುದು ‘ಕ್ಷಮಾರ್ಹವಲ್ಲ.’ ನ್ಯಾಯಪೀಠವು ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಿಕ ಅಧಿಕಾರಿ ನೀಡಿದ ಆದೇಶಗಳನ್ನು ಅವಮಾನಿಸುವುದು ಕೇವಲ ನ್ಯಾಯಾಂಗ ನಿಂದನೆ ಮಾತ್ರವಲ್ಲ, ಅದು ಕಾನೂನಿನ ಪ್ರಾಮುಖ್ಯತೆಗೆ ನೇರ ಸವಾಲು ಎಂಬುದಾಗಿ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಲಲಿತ್ ಪುರ್ ನ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (CJM) ಅವರ ಆದೇಶಗಳನ್ನು ನಿರ್ಲಕ್ಷಿಸಿದ ತಪ್ಪಿತಸ್ತ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ನಿಲುವು ತಾಳಿದ ನ್ಯಾಯಪೀಠವು. ಠಾಣಾಧಿಕಾರಿ (ಸ್ಟೇಷನ್ ಹೌಸ್ ಆಫೀಸರ್ SHO) ಹಾಗೂ ತನಿಖಾ ಅಧಿಕಾರಿ (10) ಅವರನ್ನು ಕಲಾಪ ಮುಗಿಯುವವರೆಗೆ ನ್ಯಾಯಾಂಗ ಕಸ್ಟಡಿಯಲ್ಲಿ ಇರಿಸಲು ಆದೇಶಿಸಿತು.

ಪ್ರಕರಣ ಹಿನ್ನೆಲೆ ಏನು?
ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಾನು ಅಲಿಯಾಸ್ ರಶೀದ್ ಅವರ ಅವರನ್ನು 14 ಸೆಪ್ಟೆಂಬರ್ 2025ರಂದು ಅಧಿಕೃತ ಬಂಧನದ ದಾಖಲೆ ಇಲ್ಲದೆ ಕಸ್ಟಡಿಗೆ ತೆಗೆದುಕೊಂಡಿದ್ದಾಗಿ ಆರೋಪವಿತ್ತು. 16 ಸೆಪ್ಟೆಂಬರ್ ರಂದು, ಅವರ ಸಹೋದರಿ ಲಲಿತಪುರ್ನ CJM ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಸಹೋದರನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರೂ ಬಂಧನ ದಾಖಲೆ ಮಾಡಿಲ್ಲವೆಂದುಅರೋಫಿಸಿದರು. ಅದೇ ದಿನ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ಸಲ್ಲಿಸಲಾಯಿತು. ಆದರೆ 17 ಸೆಪ್ಟೆಂಬರ್ ಬೆಳಿಗ್ಗೆ, ಬಂಧನ ನಡೆದಿದೆ ಎಂದು ಡಿಜಿಸಿ (ಕ್ರಿಮಿನಲ್) ತಿಳಿಸಿದ ಹಿನ್ನೆಲೆಯಲ್ಲಿ 18 ಸೆಪ್ಟೆಂಬರ್ ರಂದು ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾಯಿತು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಿಜಿಎಂ ನ್ಯಾಯಾಲಯ, 22 ಸೆಪ್ಟೆಂಬರ್, 30 ಸೆಪ್ಟೆಂಬರ್ ಹಾಗೂ 3 ನವೆಂಬರ್ 2025ರಂದು ಕ್ರಮವಾಗಿ ಆದೇಶ ನೀಡಿ, ಅಕ್ರಮ ಕಸ್ಟಡಿಗೆ ಸಂಬಂಧಿಸಿದ ದಿನಾಂಕಗಳ ಪೊಲೀಸ್ ಠಾಣೆಯ ಅಅಖಿಗಿ ದೃಶ್ಯಾವಳಿಗಳನ್ನು ಸಲ್ಲಿಸಲು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿತು. ಆದರೆ, ಈ ನಿರ್ದೇಶನವನ್ನು ಪೊಲೀಸರು ಪಾಲಿಸದೆ ನಿರ್ಲಕ್ಷ ತೋರಿದ್ದರು ಎನ್ನಲಾಗಿದೆ.

CJM ಅವರು ತಮ್ಮ ಆದೇಶದಲ್ಲಿ Paramvir Singh Saini v. Baljit Singh ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿದರು, ಅಲ್ಲಿ ಪೊಲೀಸ್ ಠಾಣೆಗಳಲ್ಲಿ CCTV ಕ್ಯಾಮೆರಾ ಅಳವಡಿಕೆ ಮತ್ತು ವೀಡಿಯೋ ಸಂರಕ್ಷಣೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಇದೇ ವೇಳೆ, ಸೂರ್ಯಾಸ್ತದ ನಂತರ ಹಾಗೂ ಸೂರ್ಯೋದಯದ ಮೊದಲು ಮಹಿಳೆಯನ್ನು ಬಂಧಿಸಲು ಕಾನೂನು ಅವಕಾಶ ನೀಡುವುದಿಲ್ಲ. ಆದರೂ ಸಹ ಆರೋಪಿ ರಶೀದಾ ಅವರನ್ನು ಬೆಳಗ್ಗೆ 4:00 ಗಂಟೆಗೆ ಬಂಧಿಸಿರುವುದರ ಬಗ್ಗೆ ಕೋರ್ಟ್ ಸ್ಪಷ್ಟಿಕರಣ ಕೇಳಿತು.

ಆರೋಪಿಯನ್ನು ಕುಟುಂಬಕ್ಕೆ ತಿಳಿಸದೆ ಮೂರು ದಿನಗಳ ಕಾಲ ಅಕ್ರಮವಾಗಿ ಕಸ್ಟಡಿಯಲ್ಲಿ ໖, D.K. Basu v. State of West Bengal ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ, ರಾಜ್ಯ ಸರ್ಕಾರವು ಅರ್ಜಿದಾರರಿಗೆ ರೂ.1 ಲಕ್ಷ ಪರಿಹಾರ ನೀಡಲು ಆದೇಶಿಸಲಾಯಿತು. ನಂತರ ಈ ಮೊತ್ತವನ್ನು ಸಂಬಂಧಿಸಿದ ಪೊಲೀಸ್ ಸಿಬ್ಬಂದಿಗಳ ವೇತನದಿಂದ ವಸೂಲು ಮಾಡಲು ರಾಜ್ಯಕ್ಕೆ ಸ್ವಾತಂತ್ರ ನೀಡಲಾಯಿತು.

ಪ್ರತಿಯೊಂದು ಜಿಲ್ಲೆಯ CJM ಅಥವಾ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ಗಳು ತಮ್ಮ ಅಧಿಕೃತ ಕರ್ತವ್ಯದ ಭಾಗವಾಗಿ, ಜಿಲ್ಲಾ ನ್ಯಾಯಾಧೀಶರಿಗೆ ಪೂರ್ವ ಸೂಚನೆ ನೀಡಿ, ನ್ಯಾಯಾಲಯ ಸಮಯದ ನಂತರ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಅಅಖಿಗಿ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಆಕಸ್ಮಿಕವಾಗಿ ಪರಿಶೀಲಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿತು. ಈ ಪರಿಶೀಲನೆ Paramvir Singh Saini ಪ್ರಕರಣದ ಸುಪ್ರೀಂ ಕೋರ್ಟ್ ನಿರ್ದೇಶನಗಳಿಗೆ ಅನುಗುಣವಾಗಿದ್ದು, ಅದು ಅವರ ಅಧಿಕೃತ ಕರ್ತವ್ಯದ ಭಾಗವೆಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.