ಬಡ್ಡಿದರ ನಿರ್ಧರಿಸುವ ಅಧಿಕಾರ ನ್ಯಾಯಾಲಯಕ್ಕಿದೆಯೇ…?

ನವದೆಹಲಿ: ಬಡ್ಡಿದರ ನಿರ್ಧರಿಸುವ ಅಧಿಕಾರ ನ್ಯಾಯಾಲಯಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.
ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲಾದ ಷೇರುಗಳ ಮೌಲ್ಯಮಾಪನದ ಕುರಿತು ಐಕೆ ಮರ್ಚೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ರಾಜಸ್ಥಾನ ಸರ್ಕಾರ ಸೇರಿದಂತೆ ಖಾಸಗಿ ಪಕ್ಷಗಳ ನಡುವಿನ 52 ವರ್ಷಗಳ ಸುದೀರ್ಘ ಕಾನೂನು ಹೋರಾಟವನ್ನು ಕೊನೆಗೊಳಿಸಿದ ತೀರ್ಪಿನಲ್ಲಿ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಾಲಯಗಳು ಬಡ್ಡಿದರವನ್ನು ನಿರ್ಧರಿಸಲು ಮತ್ತು ಮೊಕದ್ದಮೆ ಹೂಡುವ ದಿನಾಂಕದಿಂದ, ಅದಕ್ಕೂ ಮುಂಚಿನ ಅವಧಿಯಿಂದ ಅಥವಾ ತೀರ್ಪಿನ ದಿನಾಂಕದಿಂದ ಬಡ್ಡಿಯನ್ನು ಪಾವತಿಸಬೇಕೆ ಬೇಡವೇ ಎಂದು ನಿರ್ಧರಿಸಲು ಅಧಿಕಾರ ಹೊಂದಿವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ಹಾಗೆಯೇ ಷೇರುಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದ ವಿಳಂಬ ಪಾವತಿಗಳಿಗೆ ಅನ್ವಯವಾಗುವ ಬಡ್ಡಿದರವನ್ನು ಪೀಠವು ಮಾರ್ಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ