ಅವಧಿ ಮೀರಿದ ಚಾಲನಾ ಪರವಾನಗಿ (DL) 30 ದಿನಗಳ ಗ್ರೇಸ್ ಅವಧಿಗೆ ಮಾನ್ಯವಾಗಿರುತ್ತೆ- ಹೈಕೋರ್ಟ್
ಚಂಡಿಗಢ: ಅವಧಿ ಮೀರಿದ ಚಾಲಕರ ಪರವಾನಗಿಯು ಶಾಸನಬದ್ದ ಮೂವತ್ತು ದಿನಗಳ ಗ್ರೇಸ್ ಅವಧಿಯಲ್ಲಿ ಕಾನೂನುಬದ್ಧವಾಗಿ ಮಾನ್ಯವಾಗಿರುತ್ತದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿಮಾ ಕಂಪನಿಯ ವಸೂಲಾತಿ ಹಕ್ಕುಗಳ ಮನವಿಯನ್ನು ತಿರಸ್ಕರಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿ ನೀಡಿದ ಪರಿಹಾರವನ್ನು ಎತ್ತಿಹಿಡಿಯಿತು. ಅವಧಿ ಮೀರಿದ ಚಾಲನಾ ಪರವಾನಗಿ 30 ದಿನಗಳ ಶಾಸನಬದ್ಧ ಗ್ರೇಸ್ ಅವಧಿಯಲ್ಲಿ ಮಾನ್ಯವಾಗಿರುತ್ತದೆ. ಎಂದ ನ್ಯಾಯಾಲಯವು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 14 ರ ಅಡಿಯಲ್ಲಿ ಶಾಸನಬದ್ಧ ನಿಬಂಧನೆಗಳು ಅಪಘಾತವು ಗ್ರೇಸ್ ಅವಧಿಯೊಳಗೆ ಸಂಭವಿಸಿದಲ್ಲಿ ವಿಮಾ ಕಂಪನಿಯು ಈಗಾಗಲೇ ಸಂತ್ರಸ್ತರಿಗೆ ಪಾವತಿ ಮಾಡಿದ ಪರಿಹಾರ ಧನವನ್ನು ಚಾಲಕನಿಂದ ಮರು ವಸೂಲಿ ಪಡೆಯದಂತೆ ರಕ್ಷಿಸುತ್ತದೆ ಎಂದು ಹೇಳಿತು.
ಜಿಂದ್ ನ ಮೋಟಾರ್ ಅಪಘಾತ ಕ್ಲೈಮ್ ಗಳ ನ್ಯಾಯಮಂಡಳಿಯು, ಹಕ್ಕುದಾರರಿಗೆ ಪರಿಹಾರವನ್ನು ನೀಡಿ, ವಿಮಾ ಕಂಪನಿಗೆ ವಸೂಲಾತಿ ಹಕ್ಕುಗಳನ್ನು ನೀಡದೆ ಹೊಣೆಗಾರರನ್ನಾಗಿ ಮಾಡಿದ್ದ ಮೋಟಾರ್ ಅಪಘಾತ ಪ್ರಕರಣದಿಂದ ಈ ಮೇಲ್ಮನವಿ ಹೈಕೋರ್ಟ್ ಗೆ ಸಲ್ಲಿಸಲಾಯಿತು.
ಈ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಹರಿಯಾಣ ರಾಜ್ಯ ವಿರುದ್ಧ ಕಾರ್ಕೋರ್ ಮತ್ತು ಓರಿಯಂಟಲ್ ಇನ್ಮುರೆನ್ಸ್ ಕಂಪನಿ ಲಿಮಿಟೆಡ್ ವಿರುದ್ಧ ಶ್ರೀಮತಿ ಸಂತೋಷ್ ಕುಮಾರಿ ಸೇರಿದಂತೆ ಪೂರ್ವನಿದರ್ಶನಗಳನ್ನು ಉಲ್ಲೇಖಿಸಿ, ಕಾನೂನುಬದ್ಧ ಅವಧಿಯೊಳಗೆ ಪರವಾನಗಿ ಅವಧಿ ಮುಗಿದಿದೆ ಎಂಬ ಕಾರಣಕ್ಕಾಗಿ ವಿಮಾದಾರರು ಮರುಪಡೆಯುವಿಕೆ ಪಡೆಯಲು ಸಾಧ್ಯವಿಲ್ಲ. ವಿಮಾ ಕಂಪನಿಯ ಮನವಿಗೆ ಅರ್ಹತೆ ಇಲ್ಲ ಮತ್ತು ನ್ಯಾಯಮಂಡಳಿಯ ತೀರ್ಪಿನಲ್ಲಿ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿ ವಿಮಾ ಕಂಪನಿಯ ಮೇಲ್ಮನವಿಯನ್ನು ವಜಾಗೊಳಿಸಿತು.
ಜಿಂದ್ ನ ಮೋಟಾರ್ ಅಪಘಾತ ಕ್ಷೇಮ್ ಗಳ ನ್ಯಾಯಮಂಡಳಿ ನೀಡಿದ ಪರಿಹಾರವನ್ನು ದೃಢಪಡಿಸಿತು. ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಬಾಕಿ ಇರುವ ಅರ್ಜಿಗಳನ್ನು ಸಹ ವಿಲೇವಾರಿ ಮಾಡಲಾಯಿತು.
ವಿಮಾ ಕಂಪನಿ ಪರ ವಾದ ಮಂಡಿಸಿದ್ದ ವಕೀಲರು, ಅಪಘಾತದ ದಿನಾಂಕದಂದು ಅಪರಾಧಿ ವಾಹನದ ಚಾಲಕ ಮಾನ್ಯ ಚಾಲನಾ ಪರವಾನಗಿಯನ್ನು ಹೊಂದಿಲ್ಲ, ಏಕೆಂದರೆ ಘಟನೆಗೆ ಮೊದಲು ಅವರ ಪರವಾನಗಿ ಅವಧಿ ಮುಗಿದಿತ್ತು ಮತ್ತು ನಂತರ ನವೀಕರಿಸಲಾಯಿತು. ಅಪಘಾತ ಸಂಭವಿಸುವ ಮೊದಲೇ ಚಾಲನಾ ಪರವಾನಗಿ ಅವಧಿ ಮುಗಿದಿದ್ದು, ಇದು ಪಾಲಿಸಿ ಷರತ್ತುಗಳ ಉಲ್ಲಂಘನೆಗೆ ಕಾರಣವಾಗಿದೆ ಮತ್ತು ಆದ್ದರಿಂದ ಚಾಲಕನಿಂದ ಪಾವತಿಸಿದ ಪರಿಹಾರವನ್ನು ಮರುಪಡೆಯಲು ಅರ್ಹತೆ ಹೊಂದಿದೆ ಎಂದು ವಿಮಾ ಕಂಪನಿ ವಾದಿಸಿತು. ಅಪಘಾತದ ಸಮಯದಲ್ಲಿ ಚಾಲಕನ ಪರವಾನಗಿ ಇಲ್ಲದ ಸ್ಥಿತಿಯನ್ನು ಪರಿಗಣಿಸದೆ ನ್ಯಾಯಮಂಡಳಿಯು ಅದನ್ನು ಹೊಣೆಗಾರರನ್ನಾಗಿ ಮಾಡುವಲ್ಲಿ ತಪ್ಪು ಮಾಡಿದೆ ಎಂದು ವಿಮಾ ಕಂಪನಿ ವಾದ ಮಂಡಿಸಿತ್ತು.
ವಾಹನ ಮಾಲೀಕರನ್ನು ಪ್ರತಿನಿಧಿಸುವ ಪ್ರತಿವಾದಿಯು ವಾದಮಂಡಿಸಿ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 14 ರ ಶಾಸನಬದ್ಧ ನಿಬಂಧನೆಯ ಅಡಿಯಲ್ಲಿ ಪರವಾನಗಿ ಮಾನ್ಯವಾಗಿ ಉಳಿದಿದೆ ಎಂದು ಪ್ರತಿಪಾದಿಸಿದರು, ಇದು ಅವಧಿ ಮುಗಿದ ದಿನಾಂಕದಿಂದ 30 ದಿನಗಳ ವಿಸ್ತರಣೆಯನ್ನು ಒದಗಿಸುತ್ತದೆ. ಚಾಲನಾ ಪರವಾನಗಿ ಜೂನ್ 4, 2001 ರಂದು ಮುಕ್ತಾಯಗೊಂಡಿದೆ ಎಂದು ವಕೀಲರು ಒತ್ತಿ ಹೇಳಿದರು, ಆದರೆ ಶಾಸನಬದ್ಧ ಗ್ರೇಸ್ ಅವಧಿಯು ಅಪಘಾತದ ದಿನವಾದ ಜುಲೈ 4, 2001 ರಂದು ಮಧ್ಯರಾತ್ರಿಯವರೆಗೆ ಅದರ ಸಿಂಧುತ್ವವನ್ನು ವಿಸ್ತರಿಸಿತು. ಆದ್ದರಿಂದ, ಘಟನೆಯ ಸಮಯದಲ್ಲಿ ಚಾಲಕ ಕಾನೂನುಬದ್ಧವಾಗಿ ಪರವಾನಗಿ ಪಡೆದಿದ್ದರು ಎಂದು ತಿಳಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, ನಿಬಂಧನೆಯ ಸರಳ ಓದುವಿಕೆಯು ಪ್ರತಿ ಚಾಲನಾ ಪರವಾನಗಿಯು ಅದರ ಅವಧಿ ಮುಗಿದಿದ್ದರೂ ಸಹ, ಅಂತಹ ಅವಧಿ ಮುಗಿದ ಮೂವತ್ತು ದಿನಗಳ ಅವಧಿಗೆ ಪರಿಣಾಮಕಾರಿಯಾಗಿ ಮುಂದುವರಿಯುತ್ತದೆ ಎಂದು ಸೂಚಿಸುತ್ತದೆ ಎಂದಿತು. ಸೆಕ್ಷನ್ 14 ರ ನಿಬಂಧನೆಯನ್ನು ಪರಿಶೀಲಿಸಿತು. ಪ್ರಸ್ತುತ ಪ್ರಕರಣದಲ್ಲಿ, ಪರವಾನಗಿ 04.06.2001 ರಂದು ಮುಕ್ತಾಯಗೊಂಡಿತು ಮತ್ತು ಶಾಸನಬದ್ಧ ಮೂವತ್ತು ದಿನಗಳ ಅವಧಿಯು 05.06.2001 ರಂದು ಪ್ರಾರಂಭವಾಯಿತು, ಇದು 04.07.2001 ರವರೆಗೆ ಸಿಂಧುತ್ವವನ್ನು ವಿಸ್ತರಿಸುತ್ತದೆ. ಈ ಅವಧಿಯಲ್ಲಿ ಅಪಘಾತ ಸಂಭವಿಸಿದೆ ಮತ್ತು ಹೀಗಾಗಿ, ಪರವಾನಗಿ ಕಾನೂನು ಬದ್ಧವಾಗಿ ಪರಿಣಾಮಕಾರಿಯಾಗಿತ್ತು ಎಂದು ಉಲ್ಲೇಖಿಸಿ ವಿಮಾಕಂಪನಿಯ ಮೇಲ್ಮನವಿ ತಿರಸ್ಕರಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
