Law Guide Kannada https://www.lawguidekannada.com/ Online Guide Sun, 07 Jun 2026 00:49:26 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg Law Guide Kannada https://www.lawguidekannada.com/ 32 32 ಬಡ ಭೂಮಾಲೀಕರ ಭೂಮಿ ಸ್ವಾಧೀನವು ಕಾನೂನಿನ ಮೇಲೆ ನಡೆಸಿದ ವಂಚನೆ – ಹೈಕೋರ್ಟ್ ಛೀಮಾರಿ https://www.lawguidekannada.com/land-acquisition-of-poor-landowners-is-a-fraud-on-the-law-high-court-reprimands/ Sun, 07 Jun 2026 00:49:26 +0000 https://www.lawguidekannada.com/?p=4025 ಬೆಂಗಳೂರು: ಬಡ ಭೂಮಾಲೀಕರ ಹಿತಾಸಕ್ತಿಗೆ ಧಕ್ಕೆ ತಂದು ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಹೈಕೋರ್ಟ್, ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ...

The post ಬಡ ಭೂಮಾಲೀಕರ ಭೂಮಿ ಸ್ವಾಧೀನವು ಕಾನೂನಿನ ಮೇಲೆ ನಡೆಸಿದ ವಂಚನೆ – ಹೈಕೋರ್ಟ್ ಛೀಮಾರಿ appeared first on Law Guide Kannada.

]]>
ಬೆಂಗಳೂರು: ಬಡ ಭೂಮಾಲೀಕರ ಹಿತಾಸಕ್ತಿಗೆ ಧಕ್ಕೆ ತಂದು ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಹೈಕೋರ್ಟ್, ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC)ದ ಪಾರ್ಕಿಂಗ್ ವಲಯಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

ಲಾಭ ಗಳಿಸುವ ಖಾಸಗಿ ಸಂಸ್ಥೆಯ ವಿಸ್ತರಣೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾಗಿದೆ. ಅಲ್ಪ ಪರಿಹಾರ ನೀಡಿ ಜನರ ಭೂಮಿಯನ್ನು ಕಸಿದುಕೊಳ್ಳಲು ಅಧಿಕಾರಿಗಳು ಕಾನೂನಿನ ಮೇಲೆ ನಡೆಸಿದ ವಂಚನೆಯಾಗಿದೆ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ. ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಟಿ ಎಂ ನಡಾಫ್ ಅವರಿದ್ದ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.

ಈ ಭೂಮಿಯನ್ನು M/s Indian Machine Tools Manufacturers’ Association (IMTMA) ಸ್ಥಾಪಿಸಿರುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದ ಪಾರ್ಕಿಂಗ್ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಐಎಂಟಿಎಂಎಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂಪೂರ್ಣ ಪ್ರಕ್ರಿಯೆಯು ಸಂವಿಧಾನಾತ್ಮಕ ವ್ಯವಸ್ಥೆಗೆ ವಿರುದ್ಧವಾಗಿದೆ. ಬಡ ಭೂಮಾಲೀಕರ ಹಿತಾಸಕ್ತಿಗೆ ಧಕ್ಕೆ ತಂದು ಸರ್ಕಾರ ತನ್ನ ಆಯ್ಕೆಯ ಖಾಸಗಿ ಸಂಸ್ಥೆಗೆ ಭೂಮಿಯನ್ನು ಒದಗಿಸಲು ಸಾಧ್ಯವಿಲ್ಲ. ಸರ್ಕಾರದ ‘ಎಮಿನೆಂಟ್ ಡೊಮೇನ್’ ಅಧಿಕಾರದ ಬಳಕೆ ಕಾನೂನುಬದ್ಧ ವಂಚನೆಯಾಗಬಾರದು ಅಥವಾ ಖಾಸಗಿ ಕೈಗಳಿಗೆ ಭೂಮಿ ವರ್ಗಾಯಿಸುವ ಸಾಧನವಾಗಬಾರದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

2013ರಲ್ಲಿ ಭೂಮಾಲೀಕರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಅಂಗೀಕರಿಸಿದ ನ್ಯಾಯಪೀಠವು, KIADB ಮತ್ತು IMTMA ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದೆ. ಜೊತೆಗೆ, ಏಕಸದಸ್ಯ ನ್ಯಾಯಮೂರ್ತಿಗಳ ಆದೇಶವನ್ನು ರದ್ದುಪಡಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನೇ ಅಮಾನ್ಯಗೊಳಿಸಿದೆ.

ಅಂತಿಮ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 14 ವರ್ಷಗಳಾದರೂ ಪರಿಹಾರದ ಮೊತ್ತ ನಿಗದಿಪಡಿಸುವ ಪ್ರಶಸ್ತಿ (Award) ಘೋಷಿಸಿಲ್ಲ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆಯು ಕಾಲಹರಣಗೊಂಡಿದೆ ಎಂದು ನಾವು ಅಭಿಪ್ರಾಯಪಡುತ್ತೇವೆ. ಹಣಕಾಸು ದಾಖಲೆಗಳಿಂದ ಸ್ಪಷ್ಟವಾಗುವಂತೆ ಲಾಭದಾಯಕ ಖಾಸಗಿ ಸಂಸ್ಥೆಗಾಗಿ ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿರಲಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB ) ಕಾಯ್ದೆಯ ಉದ್ದೇಶವು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಭೂಮಿ ಸ್ವಾಧೀನಪಡಿಸಿಕೊಳ್ಳುವುದೇ ಹೊರತು, ನಿರ್ದಿಷ್ಟ ಖಾಸಗಿ ಸಂಸ್ಥೆಗಾಗಿ ಭೂಮಿ ಸಂಗ್ರಹಿಸುವುದಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿದ ನಂತರ, ಅಲ್ಲಿ ಕೈಗಾರಿಕೆ ಸ್ಥಾಪಿಸಲು ಅರ್ಜಿದಾರರಿಗೆ ಭೂಮಿ ಹಂಚಿಕೆ ಮಾಡಬಹುದು ಎಂದು ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಬಡ ಭೂಮಾಲೀಕರ ಭೂಮಿ ಸ್ವಾಧೀನವು ಕಾನೂನಿನ ಮೇಲೆ ನಡೆಸಿದ ವಂಚನೆ – ಹೈಕೋರ್ಟ್ ಛೀಮಾರಿ appeared first on Law Guide Kannada.

]]>
ಪತಿ ವಿರುದ್ದ ನಿರಂತರ ಸುಳ್ಳು ದೂರು ಮಾನಸಿಕ ಕ್ರೌರ್ಯಕ್ಕೆ ಸಮ: ವಿಚ್ಚೇದನ ಆದೇಶ ಸರಿಯಿದೆ – ಹೈಕೋರ್ಟ್ https://www.lawguidekannada.com/continuous-false-complaints-against-husband-amount-to-mental-cruelty-divorce-order-is-valid-high-court/ Sat, 06 Jun 2026 11:09:31 +0000 https://www.lawguidekannada.com/?p=4019 ಬೆಂಗಳೂರು: ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತ್ನಿ...

The post ಪತಿ ವಿರುದ್ದ ನಿರಂತರ ಸುಳ್ಳು ದೂರು ಮಾನಸಿಕ ಕ್ರೌರ್ಯಕ್ಕೆ ಸಮ: ವಿಚ್ಚೇದನ ಆದೇಶ ಸರಿಯಿದೆ – ಹೈಕೋರ್ಟ್ appeared first on Law Guide Kannada.

]]>
ಬೆಂಗಳೂರು: ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ, ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಅರ್ಜಿಯನ್ನ ವಜಾಗೊಳಿಸಿದೆ. ಪತಿಯ ವೃತ್ತಿ ಜೀವನ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಸುಳ್ಳು ಆರೋಪಗಳನ್ನು ಹೊರಿಸಿ ಆತನ ಮೇಲಾಧಿಕಾರಿಗಳಿಗೆ ಪತ್ರ ಬರೆಯುವ ಮತ್ತು ದೂರು ನೀಡುವ ಪತ್ನಿಯ ಕೃತ್ಯವು ಮಾನಸಿಕ ಕ್ರೌರ್ಯಕ್ಕೆ ಸಮಾನ. ಪತ್ನಿಯ ನಿರಂತರ ಸುಳ್ಳು ದೂರುಗಳು ಮತ್ತು ವರ್ತನೆಯಿಂದ ಪತಿಯು ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಈ ಹಿನ್ನಲೆಯಲ್ಲಿ ವಿಚ್ಛೇದನ ನೀಡಿರುವ ಆದೇಶವು ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿದೆ.

ವಿಚಾರಣೆಯ ವೇಳೆ ದಂಪತಿಯು 2013ರಿಂದಲೇ ಯಾವುದೇ ಸಂಪರ್ಕ ಮತ್ತು ಸಹಜೀವನವಿಲ್ಲದೆ ದೂರು ಉಳಿದಿರುವುದು ನ್ಯಾಯಲಯದ ಗಮನಕ್ಕೆ ಬಂದಿದೆ. ಪತ್ನಿಯು ತನ್ನ ಕ್ರಾಸ್ ಎಕ್ಸಾಮಿನೇಷನ್ ನಲ್ಲಿ ತನಗೆ ಪತಿಯೊಂದಿಗೆ ಮರಳಿ ಸಂಸಾರ ನಡೆಸುವ ಇಚ್ಛೆ ಇದೆ ಎಂದು ಎಲ್ಲೂ ಹೇಳಿಲ್ಲ. ಬದಲಿಗೆ ಪತಿಯು ಹೊಸದಾಗಿ ನಿರ್ಮಿಸಿರುವ ಮನೆಯ ಒಂದು ಭಾಗದಲ್ಲಿ ವಸತಿ ಮತ್ತು ಜೀವನಾಂಶದ ಹಣದ ಹೆಚ್ಚಳವನ್ನು ಮಾತ್ರ ಕೋರಿದ್ದಾರೆ. ಇದರಿಂದಾಗಿ ಇಬ್ಬರ ನಡುವಿನ ವೈವಾಹಿಕ ಸಂಬಂಧವು ಸಂಪೂರ್ಣವಾಗಿ ಕೊನೆಗೊಂಡಿದೆ ಎಂದು ತಿಳಿಯುತ್ತದೆ ಎಂದು ನ್ಯಾಯಪೀಠ ಹೇಳಿತು.

ಪ್ರಕರಣದ ವಿವರ..
ದಂಪತಿಗಳು 2008ರಲ್ಲಿ ಕೊಡಗಿನಲ್ಲಿ ವಿವಾಹವಾಗಿದ್ದು, ಒಬ್ಬ ಗಂಡು ಮಗನಿಂದ್ದಾನೆ. ತಾನು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣ, ಪತ್ನಿಯು ಪದೇ ಪದೇ ಯಾವುದೇ ಕಾರಣ ನೀಡದೆ ಮನೆ ಬಿಟ್ಟು ಆಕೆಯ ತವರಿಗೆ ಹೋಗುತ್ತಿದ್ದಳು. ನಂತರದ ದಿನಗಳಲ್ಲಿ ಮಹಿಳಾ ಸಾಂತ್ವನ ಕೇಂದ್ರ ಮತ್ತು ತನ್ನ ಸೇನಾ ಮೇಲಾಧಿಕಾರಿಗಳಿಗೆ ನಿರಂತವಾಗಿ ಸುಳ್ಳು ಆರೋಪಗಳನ್ನು ಹೊರಿಸಿ ದೂರು ನೀಡಿದ್ದಾಳೆ. ಈ ಆರೋಪಗಳು ತನ್ನ ಸೇನಾ ವೃತ್ತಿ ಮತ್ತು ಗೌರವಕ್ಕೆ ತೀವ್ರ ಚ್ಯುತಿ ತಂದಿವೆ ಎಂದು ಕೋರಿ ಪತಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಕೌಟುಂಬಿಕ ನ್ಯಾಯಾಲಯ ವಿಚ್ಚೇದನ ಮಂಜೂರು ಮಾಡಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಪತಿ ವಿರುದ್ದ ನಿರಂತರ ಸುಳ್ಳು ದೂರು ಮಾನಸಿಕ ಕ್ರೌರ್ಯಕ್ಕೆ ಸಮ: ವಿಚ್ಚೇದನ ಆದೇಶ ಸರಿಯಿದೆ – ಹೈಕೋರ್ಟ್ appeared first on Law Guide Kannada.

]]>
ಆನ್ ಲೈನ್ ಬೆಟ್ಟಿಂಗ್ ಗೇಮ್ ಗಳಿಗೆ ಸಾಂವಿಧಾನಿಕ ರಕ್ಷಣೆಯಿಲ್ಲ: ನಿಷೇಧ ಕ್ರಮ ಎತ್ತಿಹಿಡಿದ ಸುಪ್ರೀಂಕೋರ್ಟ್ https://www.lawguidekannada.com/online-betting-games-have-no-constitutional-protection-supreme-court-upholds-ban/ Sat, 06 Jun 2026 11:00:44 +0000 https://www.lawguidekannada.com/?p=4015 ನವದೆಹಲಿ: ಆನ್ ಲೈನ್ ಬೆಟ್ಟಿಂಗ್ ಗೇಮ್ ಗಳು ಮೂಲಭೂತ ಹಕ್ಕು ಅಲ್ಲ, ಕೌಶಲ್ಯದ ಹೆಸರಲ್ಲೂ ಬೆಟ್ಟಿಂಗ್ ನಡೆಸುವ ಯಾವುದೇ ಗೇಮ್...

The post ಆನ್ ಲೈನ್ ಬೆಟ್ಟಿಂಗ್ ಗೇಮ್ ಗಳಿಗೆ ಸಾಂವಿಧಾನಿಕ ರಕ್ಷಣೆಯಿಲ್ಲ: ನಿಷೇಧ ಕ್ರಮ ಎತ್ತಿಹಿಡಿದ ಸುಪ್ರೀಂಕೋರ್ಟ್ appeared first on Law Guide Kannada.

]]>
ನವದೆಹಲಿ: ಆನ್ ಲೈನ್ ಬೆಟ್ಟಿಂಗ್ ಗೇಮ್ ಗಳು ಮೂಲಭೂತ ಹಕ್ಕು ಅಲ್ಲ, ಕೌಶಲ್ಯದ ಹೆಸರಲ್ಲೂ ಬೆಟ್ಟಿಂಗ್ ನಡೆಸುವ ಯಾವುದೇ ಗೇಮ್ ಗಳಿಗೂ ಸಾಂವಿಧಾನಿಕ ರಕ್ಷಣೆಯಿಲ್ಲ. ಅವುಗಳನ್ನ ನಿಷೇಧಿಸಿರುವ ಕ್ರಮ ಸರಿಯಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಆನ್ ಲೈನ್ ಬೆಟ್ಟಿಂಗ್ ಗೇಮ್ ಸಂಪೂರ್ಣವಾಗಿ ನಿಷೇಧಿಸುವ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ಕ್ರಮವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಆನ್ ಲೈನ್ ಜೂಜಾಟವನ್ನು ನಿಷೇಧಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸ್ಪಷ್ಟಪಡಿಸಿತು 

ಆನ್ಲೈನ್ ಬೆಟ್ಟಿಂಗ್ ನೀಷಧ ಹೇರಿದ್ದ ಎರಡೂ ರಾಜ್ಯ ಸರ್ಕಾರಗಳ ವಿರುದ್ಧ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಬಿ. ಪಾರ್ಥಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠವು, ಆನ್ ಲೈನ್ ರಮ್ಮಿ ಮತ್ತು ಪೋಕರ್ ನಂತಹ ಅಪ್ಲಿಕೇಶನ್ ಗಳಲ್ಲಿ ಬೆಟ್ಟಿಂಗ್ ನಡೆಸುವ ಅಭ್ಯಾಸವನ್ನು ತೀವ್ರವಾಗಿ ಖಂಡಿಸಿತು.

ಸಂವಿಧಾನದ ಪ್ರಕಾರ ಬೆಟ್ಟಿಂಗ್ ಮತ್ತು ಜೂಜಾಟದ ಬಗ್ಗೆ ಕಾನೂನುಗಳನ್ನು ಮಾಡುವ ಏಕೈಕ ಅಧಿಕಾರ ರಾಜ್ಯಗಳಿಗೆ ಇದೆ. ಆಟವನ್ನು ಆಡಲು ಕೌಶಲ್ಯ ಅಗತ್ಯವಿದ್ದರೂ, ಅದರ ಮೇಲೆ ಹಣವನ್ನು ಪಣತೊಟ್ಟರೆ ಮಾತ್ರ ಅದು ಜೂಜಾಟದ ವರ್ಗಕ್ಕೆ ಸೇರುತ್ತದೆ.

ಆನ್ ಲೈನ್ ಬೆಟ್ಟಿಂಗ್ ವ್ಯಸನಗಳಿಗೆ ಮಾರು ಹೋಗಿ ಯುವಕರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಾಮಾಜಿಕ ಪರಿಸ್ಥಿತಿಗಳನ್ನು ನಮ್ಮ ಮುಂದಿವೆ. ಸಮಾಜದ ಹಿತದೃಷ್ಟಿಯಿಂದ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಆನ್ ಲೈನ್ ಗೇಮಿಂಗ್ ಪ್ಲಾಟ್ ಫಾರ್ಮ್ಗಳ ಮೇಲೆ ನಿಷೇಧ ಹೇರುವುದು ಸರಿಯಾದ ನಿರ್ಧಾರ ಎಂದು ನ್ಯಾಯಪೀಠ ತಿಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಆನ್ ಲೈನ್ ಬೆಟ್ಟಿಂಗ್ ಗೇಮ್ ಗಳಿಗೆ ಸಾಂವಿಧಾನಿಕ ರಕ್ಷಣೆಯಿಲ್ಲ: ನಿಷೇಧ ಕ್ರಮ ಎತ್ತಿಹಿಡಿದ ಸುಪ್ರೀಂಕೋರ್ಟ್ appeared first on Law Guide Kannada.

]]>
ವಿದ್ಯಾರ್ಹತೆಗೆ ತಕ್ಕಂತೆ ಅರ್ಹರಿಗೆ ಉದ್ಯೋಗ – ಅತಿಯಾದ ವಿದ್ಯಾರ್ಹತೆ ವಿವಾದ ಕುರಿತು ಸ್ಪಷ್ಟ ತೀರ್ಪು ಕೊಟ್ಟ ಸುಪ್ರೀಂ https://www.lawguidekannada.com/supreme-court-clarifies-law-on-overqualified-candidates-and-employment/ Sat, 06 Jun 2026 10:40:04 +0000 https://www.lawguidekannada.com/?p=4012 ನವದೆಹಲಿ: ಕಡಿಮೆ ವಿದ್ಯಾರ್ಹತೆಯ ಹುದ್ದೆಗೆ ಅತಿಯಾದ ಅರ್ಹತೆ ಹೊಂದಿದವರು ಹಕ್ಕು ಸಾಧಿಸುವಂತಿಲ್ಲ. ವಿದ್ಯಾರ್ಹತೆಗೆ ತಕ್ಕಂತೆ ಅರ್ಹರಿಗೆ ಉದ್ಯೋಗ ಸಿಗಬೇಕು ಎಂದು...

The post ವಿದ್ಯಾರ್ಹತೆಗೆ ತಕ್ಕಂತೆ ಅರ್ಹರಿಗೆ ಉದ್ಯೋಗ – ಅತಿಯಾದ ವಿದ್ಯಾರ್ಹತೆ ವಿವಾದ ಕುರಿತು ಸ್ಪಷ್ಟ ತೀರ್ಪು ಕೊಟ್ಟ ಸುಪ್ರೀಂ appeared first on Law Guide Kannada.

]]>
ನವದೆಹಲಿ: ಕಡಿಮೆ ವಿದ್ಯಾರ್ಹತೆಯ ಹುದ್ದೆಗೆ ಅತಿಯಾದ ಅರ್ಹತೆ ಹೊಂದಿದವರು ಹಕ್ಕು ಸಾಧಿಸುವಂತಿಲ್ಲ. ವಿದ್ಯಾರ್ಹತೆಗೆ ತಕ್ಕಂತೆ ಅರ್ಹರಿಗೆ ಉದ್ಯೋಗ ಸಿಗಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ತಾತ್ಕಾಲಿಕ ಬ್ಯಾಂಕ್ ಅಟೆಂಡೆಂಟ್ ಒಬ್ಬರನ್ನು ಕೆಲಸಕ್ಕೆ ಮರು ನೇಂಕಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸುವ ವೇಳೆ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆರ್. ಮಹದೇವನ್ ಅವರ ಪೀಠವು ಈ ತೀರ್ಪು ನೀಡಿದೆ.

ಕಡಿಮ ವಿದ್ಯಾರ್ಹತೆ ಹೊಂಧಿರುವವರಿಗೆ ಮೀಸಲಿಟ್ಟ ಕೆಲಸವನ್ನು ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ವ್ಯಕ್ತಿ ಪಡೆದುಕೊಳ್ಳಲು ಅನುಮತಿ ನೀಡುವುದರಿಂದ ನಿಜವಗಿಯೂ ಆ ಹುದ್ದೆಗೆ ಅರ್ಹರಾದ ಅಭ್ಯರ್ಥಿಯ ಅವಕಾಶ ಕಸಿದುಕೊಂಡಂತಾಗುತ್ತದೆ . ನಿಗದಿತ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗಾವಕಾಶಗಳು ಸಿಗುವಂತೆ ಮಾಡಬೇಕು. ನಿಗದಿತ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆಗಿಂತ ಹೆಚ್ಚಿನ ಪದವಿ ಪಡೆದ ಅಭ್ಯರ್ಥಿಗಳು, ಕೇವಲ ತಾವು ಹೆಚ್ಚು ಓದಿದ್ದೇವೆ ಎಂಬ ಕಾರಣಕ್ಕೆ ಆ ಹುದ್ದೆಯನ್ನು ಪಡೆಯಲು ಹಕ್ಕಿನಿಂದ ಒತ್ತಾಯಿಸುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಯಾವುದೇ ಒಂದು ಹುದ್ದೆಗೆ ನೇಮಕಾತಿ ಮಾಡುವಾಗ, ಆ ಹುದ್ದೆಯ ನಿರ್ವಹಣೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯೇ ಮಾನದಂಡವಾಗಬೇಕು. ಅತಿಯಾದ ಅರ್ಹತೆ ಹೊಂದಿದವರು ಆ ಹುದ್ದೆಗೆ ಸೂಕ್ತವಲ್ಲ ಎಂದು ಉದ್ಯೋಗದಾತರು ಪರಿಗಣಿಸಿದರೆ, ಅದನ್ನು ಪ್ರಶ್ನಿಸುವಂತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಯಾವ ಅಭ್ಯರ್ಥಿ ಸೂಕ್ತ ಮತ್ತು ಯಾರಿಗೆ ಆದ್ಯತೆ ನೀಡಬೇಕು ಎಂಬುದು ಸಂಪೂರ್ಣವಾಗಿ ಉದ್ಯೋಗದಾತರ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಅರ್ಹತೆ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ನೇಮಿಸಿಕೊಳ್ಳಲೇಬೇಕೆಂಬ ನಿಯಮವಿಲ್ಲ. ಅತಿಯಾದ ಅರ್ಹತೆ ಹೊಂದಿದವರು ಭವಿಷ್ಯದಲ್ಲಿ ಆ ಕೆಲಸದಲ್ಲಿ ಅತೃಪ್ತಿ ಹೊಂದಬಹುದು ಅಥವಾ ಬೇರೆ ಉತ್ತಮ ಅವಕಾಶ ಸಿಕ್ಕಾಗ ಹುದ್ದೆಯನ್ನು ಬಿಟ್ಟು ಹೋಗಬಹುದು ಎಂಬ ಆತಂಕ ಉದ್ಯೋಗದಾತರಿಗೆ ಇರುತ್ತದೆ. ಇಂತಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಹುದ್ದೆಗೆ ಸರಿಹೊಂದುವವರನ್ನೇ ಆಯ್ಕೆ ಮಾಡುವುದು ಆಡಳಿತಾತ್ಮಕವಾಗಿ ಸರಿಯಾದ ಕ್ರಮ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ವಿದ್ಯಾರ್ಹತೆಗೆ ತಕ್ಕಂತೆ ಅರ್ಹರಿಗೆ ಉದ್ಯೋಗ – ಅತಿಯಾದ ವಿದ್ಯಾರ್ಹತೆ ವಿವಾದ ಕುರಿತು ಸ್ಪಷ್ಟ ತೀರ್ಪು ಕೊಟ್ಟ ಸುಪ್ರೀಂ appeared first on Law Guide Kannada.

]]>
ಅನುಕಂಪದ ನೌಕರಿ: ವಿವಾಹಿತ ಪುತ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಸುಪ್ರೀಂ https://www.lawguidekannada.com/compassionate-jobs-supreme-court-gives-good-news-to-married-daughters/ Fri, 05 Jun 2026 16:42:13 +0000 https://www.lawguidekannada.com/?p=4008 ನವದೆಹಲಿ: ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿಗೆ ನೇಮಕಾತಿ ಮಾಡುವ ಹಕ್ಕಿಗೆ ಸಂಬಂಧಿಸಿದಂತೆ ವಿವಾಹಿತ ಪುತ್ರಿಯರಿಗೆ ಸುಪ್ರೀಂ ಕೋರ್ಟ್ ಗುಡ್ ನ್ಯೂಸ್...

The post ಅನುಕಂಪದ ನೌಕರಿ: ವಿವಾಹಿತ ಪುತ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಸುಪ್ರೀಂ appeared first on Law Guide Kannada.

]]>
ನವದೆಹಲಿ: ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿಗೆ ನೇಮಕಾತಿ ಮಾಡುವ ಹಕ್ಕಿಗೆ ಸಂಬಂಧಿಸಿದಂತೆ ವಿವಾಹಿತ ಪುತ್ರಿಯರಿಗೆ ಸುಪ್ರೀಂ ಕೋರ್ಟ್ ಗುಡ್ ನ್ಯೂಸ್ ನೀಡಿದೆ.

ಕುಟುಂಬ ವ್ಯಾಪ್ತಿಯಿಂದ ವಿವಾಹಿತ ಹೆಣ್ಣುಮಕ್ಕಳನ್ನು ಹೊರಗಿಡುವುದು ಸಾಧ್ಯವಿಲ್ಲ. ಕುಟುಂಬ’ದ ವ್ಯಾಖ್ಯಾನದಿಂದ ವಿವಾಹಿತ ಪುತ್ರಿಯರನ್ನು ಹೊರಗಿಡುವುದು ನ್ಯಾಯಸಮ್ಮತವಲ್ಲ ಮತ್ತು ಸಾಂವಿಧಾನಿಕವಾಗಿ ಅದು ಸಿಂಧುವಲ್ಲ ಎಂದು ಹೇಳುವ ಮೂಲಕ ಕುಟುಂಬ ವ್ಯಾಪ್ತಿಗೆ ಹೊಸ ವ್ಯಾಖ್ಯೆ ಬರೆದಿರುವ ಸುಪ್ರೀಂಕೋರ್ಟ್ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶ ವಜಾಗೊಳಿಸಿದೆ.

ಅನುಕಂಪದ ಆಧಾರದಲ್ಲಿ ನೇಮಕಾತಿ ವಿಚಾರವಾಗಿ ವಿವಾಹಿತ ಪುತ್ರಿಯನ್ನು ಕುಟುಂಬದ ವ್ಯಾಖ್ಯಾನದಿಂದ ಹೊರಗಿಟ್ಟು ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ನ್ಯಾಯಪೀಠ ವಜಾಗೊಳಿಸಿ ಐತಿಹಾಸಿಕ ತೀರ್ಪು ಪ್ರಕಟಿಸಿದೆ,  ನ್ಯಾಯಬೆಲೆ ಅಂಗಡಿಯೊಂದರ ವಿತರಕ (ಡೀಲರ್) ಮೃತರಾದ ಬಳಿಕ ಅವರ ಪುತ್ರಿಯು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠವು, ಅವಲಂಬನೆ, ಹಣಕಾಸಿನ ಅಗತ್ಯ, ವಸತಿ ಹಾಗೂ ಡೀಲರ್ ಶಿಪ್ ಗೆ ಸಂಬಂಧಿಸಿದ ಹೊಣೆಗಾರಿಕೆಯನ್ನು ನಿರ್ವಹಿಸುವ ಅರ್ಜಿದಾರರ ಸಾಮರ್ಥ್ಯವನ್ನು ಪರಿಗಣಿಸಬೇಕಾಗುತ್ತದೆ. ಅವಲಂಬನೆಯು ವಾಸ್ತವದ ಪ್ರಶ್ನೆಯಾಗಿದ್ದು, ಮದುವೆಯಾದ ಮಾತ್ರಕ್ಕೆ ಮಗಳು ಆಕೆಯ ತವರಿನೊಂದಿಗಿನ ಬಾಂಧವ್ಯವನ್ನು ಕಡೆದುಕೊಳ್ಳುವುದಿಲ್ಲ ಅಥವಾ ತವರು ಕುಟುಂಬದ ಮೇಲೆ ಆಕೆ ಅವಲಂಬನೆ ಹೊಂದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಹೆಚ್ಚಿನ ಸಂದರ್ಭಗಳಲ್ಲಿ ಪುತ್ರರು ಕುಟುಂಬದ ವ್ಯಾಖ್ಯಾನಕ್ಕೆ ಒಳಪಟ್ಟಿದ್ದರೂ ಕುಟುಂಬದ ಮೇಲೆ ಅವಲಂಬಿತರಾಗಿರುವುದಿಲ್ಲ’ ಎಂದು ಪೀಠವು ಹೇಳಿದೆ.

‘ವಿವಾಹಿತ ಪುತ್ರಿ ತವರು ಮನೆಯ ಅಗತ್ಯಗಳನ್ನು ಪೂರೈಸದೇ ಇರಬಹುದು’ ಎಂಬ ರಾಜ್ಯದ ವಾದವನ್ನು ‘ಅಸಮರ್ಥನೀಯ. ‘ಅರ್ಜಿದಾರರು ಮದುವೆಯಾದ ಬಳಿಕವೂ ಅದೇ ಊರಿನಲ್ಲಿ ಇದ್ದು ಕೊಂಡು ನ್ಯಾಯಬೆಲೆ ಅಂಗಡಿಯ ಕಾರ್ಯಾಚರಣೆಯಲ್ಲಿ ತಾಯಿಗೆ ಸಕ್ರಿಯವಾಗಿ ಸಹಕಾರ ನೀಡಿದ್ದಾರೆ. ತಾಯಿಯ ಸಾವಿನ ಬಳಿಕ ಅಂಧರೊಬ್ಬರೂ ಸೇರಿದಂತೆ ಸಹೋದರಿಯರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಹೇಳಿದೆ.

‘ಅನುಕಂಪದ ಆಧಾರದ ನೇಮಕಾತಿ ಕೋಟಾವು ಉತ್ತರಾಧಿಕಾರದ ಹಕ್ಕನ್ನು ಅಥವಾ ಡೀಲರ್ ಶಿಪ್ ನಲ್ಲಿ ಅನುವಂಶೀಯ ಹಕ್ಕು ಸ್ಥಾಪಿಸುವ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ, ಮೃತ ಡೀಲರ್ ಅವರ ಅವಲಂಬಿತ ಕುಟುಂಬಕ್ಕೆ ತಕ್ಷಣದ ಹಣಕಾಸು ಪರಿಹಾರ ಒದಗಿಸುವುದು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನಿರಂತರತೆ ಖಚಿತಪಡಿಸಿಕೊಳ್ಳುವುದೇ ಆಗಿದೆ’ ಎಂದು ಸ್ಪಷ್ಟಪಡಿಸಿದೆ.

‘ಮದುವೆಯಾದ ಹೊರತಾಗಿಯೂ ಪುತ್ರರನ್ನು ಕುಟುಂಬದ ವ್ಯಾಖ್ಯಾನದಿಂದ ಕಾಯ್ದೆಯು ಹೊರಗಿಡುವುದಿಲ್ಲ. ಆದರೆ ಅದೇ ಕಾರಣಕ್ಕೆ ಹೆಣ್ಣುಮಕ್ಕಳನ್ನು ಹೊರಗಿಡಲಾಗುತ್ತದೆ. ಮದುವೆಯಾದ ಹೆಣ್ಣುಮಕ್ಕಳು ಬೇರೆ ಕುಟುಂಬದ ಭಾಗವಾಗುತ್ತಾರೆ ಹಾಗೂ ತವರು ಕುಟುಂಬದೊಂದಿಗಿನ ಎಲ್ಲ ಬಾಂಧವ್ಯಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಹಳೆಯಕಾಲದ ಲಿಂಗ ತಾರತಮ್ಯ ಧೋರಣೆ ಇಲ್ಲಿದೆ. ಇದು ಸಂವಿಧಾನದಲ್ಲಿನ ಸಮಾನತೆಯ ಆಶಯಕ್ಕೆ ವಿರುದ್ಧವಾದದ್ದು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಅನುಕಂಪದ ನೌಕರಿ: ವಿವಾಹಿತ ಪುತ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಸುಪ್ರೀಂ appeared first on Law Guide Kannada.

]]>
6 ವಕೀಲರು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ: ಸುಪ್ರಿಂ ಕೊಲೀಜಿಯಂ ಶಿಫಾರಸ್ಸು https://www.lawguidekannada.com/6-lawyers-appointed-as-high-court-judges-supreme-collegium-recommends/ Fri, 05 Jun 2026 01:34:52 +0000 https://www.lawguidekannada.com/?p=4005 ಬೆಂಗಳೂರು: ಆರು ಮಂದಿ ವಕೀಲರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಕೊಲೀಜಿಯಂ ಶಿಫಾರಸ್ಸು ಮಾಡಿದೆ....

The post 6 ವಕೀಲರು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ: ಸುಪ್ರಿಂ ಕೊಲೀಜಿಯಂ ಶಿಫಾರಸ್ಸು appeared first on Law Guide Kannada.

]]>
ಬೆಂಗಳೂರು: ಆರು ಮಂದಿ ವಕೀಲರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಕೊಲೀಜಿಯಂ ಶಿಫಾರಸ್ಸು ಮಾಡಿದೆ.

ರಾಘವೇಂದ್ರ ಸೀತಾರಾಮ ಶ್ರೀವಾತ್ಸವ, ಹೇಮಾ ಕುಲಕರ್ಣಿ, ಸುಬ್ರಮಣ್ಯ ರಂಗಾರಾವ್, ಟಿ.ಪಿ. ವಿವೇಕಾನಂದ, ಬಕ್ಕೇಶ್ವರ ಪ್ರಮೋದ್, ಹೊಂಬೇಗೌಡ ಶಾಂತಿಭೂಷಣ್ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕವಾಗಲು ಶಿಫಾರಸ್ಸುಗೊಂಡ ವಕೀಲರು.

ಜೂನ್ 2ರಂದು ನಡೆದ ಸಭೆಯಲ್ಲಿ ಕರ್ನಾಟಕ ಹೈಕೋರ್ಟ್ ಪೀಠಕ್ಕೆ 6 ಮಂದಿ ವಕೀಲರ ಹೆಸರುಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಮತ್ತು ಸುಪ್ರೀಂ ಕೋರ್ಟ್ ನ ಇಬ್ಬರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡ ಕೊಲಿಜಿಯಂ ಶಿಫಾರಸು ಮಾಡಿದೆ.

ಕೆಳ ದಿನಗಳ ಹಿಂದೆಯಷ್ಟೇ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದ್ದು, ಆ ಮೂವರು ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

ಹೈಕೋರ್ಟ್ಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಶಿಫಾರಸ್ಸುಗೊಂಡಿರುವ ವಕೀಲರ ಹೆಸರಿಗೆ ಒಪ್ಪಿಗೆ ದೊರೆತರೆ ನ್ಯಾಯಮೂರ್ತಿಗಳ ಸಂಖ್ಯೆ 54 ಕ್ಕೆ ಏರಿಕೆಯಾಗಲಿದೆ. ಎಚ್ ಶಾಂತಿಭೂಷಣ್ ಅವರು ಸದ್ಯ ಡೆಪ್ಯೂಟಿ ಸಾಲಿಸಿಟರ್ ಜನರಲ್ ಆಗಿ ಕರ್ನಾಟಕ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post 6 ವಕೀಲರು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ: ಸುಪ್ರಿಂ ಕೊಲೀಜಿಯಂ ಶಿಫಾರಸ್ಸು appeared first on Law Guide Kannada.

]]>
ಪರಸ್ಪರ ‘ಒಪ್ಪಿಗೆ ವಿಚ್ಚೇದನ’ಕ್ಕೆ ಒಪ್ಪಿ ನಂತರ ಹಿಂದೆ ಸರಿದು ಗೃಹ ಹಿಂಸೆ ಕೇಸ್ ಹಾಕಿದ ಪತ್ನಿಗೆ ಶಾಕ್ ಕೊಟ್ಟ ಸುಪ್ರೀಂ https://www.lawguidekannada.com/supreme-court-wife-cannot-reopen-dispute-after-consenting-to-mutual-divorce-and-settlement/ Fri, 05 Jun 2026 01:20:43 +0000 https://www.lawguidekannada.com/?p=4002 ನವದೆಹಲಿ: ಪರಸ್ಪರ ಒಪ್ಪಿಗೆ ವಿಚ್ಚೇದನಕ್ಕೆ ಒಪ್ಪಿ ನಂತರ ಅದರಿಂದ ಹಿಂದೆ ಸರಿದು ಪತಿ ಮತ್ತು ಅವರ ತಾಯಿಯ ವಿರುದ್ದ ಗೃಹ...

The post ಪರಸ್ಪರ ‘ಒಪ್ಪಿಗೆ ವಿಚ್ಚೇದನ’ಕ್ಕೆ ಒಪ್ಪಿ ನಂತರ ಹಿಂದೆ ಸರಿದು ಗೃಹ ಹಿಂಸೆ ಕೇಸ್ ಹಾಕಿದ ಪತ್ನಿಗೆ ಶಾಕ್ ಕೊಟ್ಟ ಸುಪ್ರೀಂ appeared first on Law Guide Kannada.

]]>
ನವದೆಹಲಿ: ಪರಸ್ಪರ ಒಪ್ಪಿಗೆ ವಿಚ್ಚೇದನಕ್ಕೆ ಒಪ್ಪಿ ನಂತರ ಅದರಿಂದ ಹಿಂದೆ ಸರಿದು ಪತಿ ಮತ್ತು ಅವರ ತಾಯಿಯ ವಿರುದ್ದ ಗೃಹ ಹಿಂಸೆ ಪ್ರಕರಣ ದಾಖಲಿಸಿದ ಪತ್ನಿ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ ಪ್ರಕರಣವನ್ನೇ ರದ್ದುಗೊಳಿಸಿದೆ.

ಹಾಗೆಯೇ ಪರಸ್ಪರ ಒಪ್ಪಿಗೆಯ ವಿಚ್ಚೇದನ ಪ್ರಕರಣದಲ್ಲಿ ₹170 ಕೋಟಿ ಒಪ್ಪಂದದ ಪತ್ನಿಯ ವಾದವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್, ವಿಚ್ಛೇದನದ ಅಂತಿಮ ಡಿಕ್ರಿ ಹೊರಬರುವ ಮೊದಲು ಯಾವುದೇ ಪಕ್ಷ ತನ್ನ ಒಪ್ಪಿಗೆಯನ್ನು ಹಿಂಪಡೆಯಬಹುದು. ಆದರೆ, ಮಧ್ಯಸ್ಥಿಕೆ (Mediation) ಮೂಲಕ ಮಾಡಿಕೊಂಡಿರುವ ವಿವಾಹ ಸಂಬಂಧಿತ ವಿವಾದಗಳ ಇತ್ಯರ್ಥದ ಒಪ್ಪಂದದ ಷರತ್ತುಗಳನ್ನು ಏಕಪಕ್ಷೀಯವಾಗಿ ತಿರಸ್ಕರಿಸಲು ಅಥವಾ ಕೈಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ವಿಜಯ್ ಬಿಡೋಯಿ ಅವರನ್ನೊಳಗೊಂಡ ಪೀಠವು, ಮಧ್ಯಸ್ಥಿಕೆಯ ಮೂಲಕ ದೃಢೀಕರಿಸಲ್ಪಟ್ಟ ಒಪ್ಪಂದವನ್ನು ಕೇವಲ ಬಲವಂತ, ವಂಚನೆ, ಅಕ್ರಮ ಪ್ರಭಾವ ಅಥವಾ ಒಪ್ಪಂದದ ಷರತ್ತುಗಳ ಉಲ್ಲಂಘನೆ ಸಾಬೀತಾದ ಸಂದರ್ಭದಲ್ಲಷ್ಟೇ ಪ್ರಶ್ನಿಸಬಹುದು ಎಂದು ಹೇಳಿದೆ.

2000ರಲ್ಲಿ ಅಪೀಲುದಾರ ಪತಿ ಮತ್ತು ಪ್ರತಿವಾದಿ ಪತ್ನಿಯ ವಿವಾಹವು ಹಿಂದೂ ಸಂಪ್ರದಾಯದಂತೆ ನೆರವೇರಿತ್ತು. ಅವರಿಗೆ ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರನಿದ್ದಾರೆ. ದಾಂಪತ್ಯ ಭಿನ್ನಾಭಿಪ್ರಾಯಗಳಿಂದಾಗಿ ಅವರು 2022-23ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಮಧ್ಯೆ ಪತಿ ವಿಚ್ಛೇದನಕ್ಕಾಗಿ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ಬಳಿಕ, ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳುಹಿಸಲಾಯಿತು. 2024ರಲ್ಲಿ ಉಭಯ ಪಕ್ಷಗಳು ಎಲ್ಲಾ ವಿವಾದಗಳನ್ನು ಇತ್ಯರ್ಥಗೊಳಿಸುವ ಒಪ್ಪಂದಕ್ಕೆ ಬಂದವು.

ಆದ ಒಪ್ಪಂದವೇನು…?
ಪತಿ ಅಂತಿಮ ಇತ್ಯರ್ಥ ಮೊತ್ತದ ಮೊದಲ ಕಂತಾಗಿ ₹75 ಲಕ್ಷ ಪಾವತಿಸಿದರು. ಕಾರು ಖರೀದಿಗಾಗಿ ₹14 ಲಕ್ಷ ನೀಡಿದರು. ಅಭರಣಗಳನ್ನು ಹಿಂದಿರುಗಿಸಿದರು.

ಪತ್ನಿಯು ತನ್ನ ಬಾಧ್ಯತೆಯಂತೆ ₹2.52 ಕೋಟಿ ಮೊತ್ತವನ್ನು ಪತಿಗೆ ವರ್ಗಾಯಿಸಿದರು. ಆದರೆ ನಂತರ ಪತ್ನಿ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ನೀಡಿದ್ದ ಒಪ್ಪಿಗೆಯನ್ನು ಹಿಂಪಡೆದು, 2025ರಲ್ಲಿ ಪತಿ ಹಾಗೂ ಅವರ ತಾಯಿಯ ವಿರುದ್ಧ ಗೃಹಹಿಂಸೆ ಪ್ರಕರಣ ದಾಖಲಿಸಿದರು.

ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮುಂದೆ ವಾದಿಸಿದ ಪತ್ನಿ, ಒಪ್ಪಂದದಲ್ಲಿ ಉಲ್ಲೇಖಿಸಿರುವ ಮೊತ್ತದ ಹೊರತಾಗಿ 120 ಕೋಟಿ ಮೌಲ್ಯದ ಆಭರಣಗಳು, 50 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್ತುಗಳು, ತನ್ನ ಸ್ತ್ರೀಧನದ ಬದಲಾಗಿ ನೀಡುವುದಾಗಿ ಪತಿ ಭರವಸೆ ನೀಡಿದ್ದರು ಎಂದು ವಾದಿಸಿದರು. ಈ ಷರತ್ತುಗಳನ್ನು ಆದಾಯ ತೆರಿಗೆ ಇಲಾಖೆಯ ಗಮನ ತಪ್ಪಿಸಲು ಹಾಗೂ ಸಂಪತ್ತಿನ ತೆರಿಗೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಒಪ್ಪಂದದಲ್ಲಿ ಸೇರಿಸಿರಲಿಲ್ಲ ಎಂದು ಕೂಡ ಅವರು ಆರೋಪಿಸಿದರು.

ಇಂತಹ ವಾದ ನ್ಯಾಯಾಲಯದ ಮುಂದೆ ಮಂಡಿಸಿರುವ ಧೈರ್ಯ ನಮಗೆ ಆಘಾತವನ್ನುಂಟು ಮಾಡಿದೆ.
ಇದಕ್ಕೆ ತೀಕ್ಷ ಪ್ರತಿಕ್ರಿಯೆ ನೀಡಿದ ನ್ಯಾಯಪೀಠವು, ಇಂತಹ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಿರುವ ಧೈರ್ಯ ನಮಗೆ ಆಘಾತವನ್ನುಂಟು ಮಾಡಿದೆ. ಇದು ಕಾನೂನು ವ್ಯವಸ್ಥೆಯ ಬಗ್ಗೆ ತೋರಿಸಿರುವ ನಿರ್ಲಕ್ಷ್ಯದ ಪ್ರತೀಕವಾಗಿದೆ” ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ಎರಡನೇ ಮೋಶನ್ ಅರ್ಜಿ ಸಲ್ಲಿಕೆಯಾಗಿದ ನಂತರ ಸುಮಾರು ಎಂಟು ತಿಂಗಳುಗಳ ಕಾಲ ಕಾಯ್ತು. ಬಳಿಕ ಗೃಹಹಿಂಸೆ ಪ್ರಕರಣ ದಾಖಲಿಸಿರುವುದಕ್ಕೆ ಪತ್ನಿಯು ಯಾವುದೇ ಸಮಂಜಸವಾದ ಕಾರಣ ನೀಡಿಲ್ಲ ಎಂದು ಕೋರ್ಟ್ ಗಮನಿಸಿತು. ದೀರ್ಘಕಾಲದ ವೈವಾಹಿಕ ವಿವಾದಗಳಲ್ಲಿ ಭಾವನೆಗಳು ಪ್ರಬಲವಾಗಿರುವುದು ಸಹಜ. ಆದರೆ ಆ ಭಾವನೆಗಳೇ ಕ್ರಿಮಿನಲ್ ಮೊಕದ್ದಮೆಗೆ ಆಧಾರವಾಗಲು ಅವಕಾಶ ನೀಡಬಾರದು. ಇಲ್ಲವಾದರೆ ಅದು ಕಾನೂನಿನ ದುರುಪಯೋಗ ಮತ್ತು ಅನಗತ್ಯ ಕಿರುಕುಳಕ್ಕೆ ಕಾರಣವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ಗೃಹಹಿಂಸೆ ಪ್ರಕರಣವು ಪೂರ್ವನಿಯೋಜಿತವಾಗಿದ್ದು, ಕಾನೂನಿನ ದುರುಪಯೋಗವಾಗಿದೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಪೀಠವು ಅದನ್ನು ರದ್ದುಪಡಿಸಿತು. ಇದಲ್ಲದೆ, ಭಾರತದ ಸಂವಿಧಾನದ ಅನುಚ್ಛೇದ 142ರ ಅಸಾಧಾರಣ ಅಧಿಕಾರವನ್ನು ಬಳಸಿ, ವಿವಾಹ ಸಂಬಂಧವು ಸಂಪೂರ್ಣವಾಗಿ ಮುರಿದು ಹೋಗಿರುವುದರಿಂದ ವಿವಾಹವನ್ನು ವಿಸರ್ಜಿಸಿತು.

ಮಧ್ಯಸ್ಥಿಕೆಯ ಮೂಲಕ ದೃಢೀಕರಿಸಲ್ಪಟ್ಟ ಒಪ್ಪಂದದಿಂದ ಹಿಂದೆ ಸರಿಯುವ ಪಕ್ಷದ ವಿರುದ್ಧ ಸಾಮಾನ್ಯವಾಗಿ ಭಾರೀ ವೆಚ್ಚ (Costs) ವಿಧಿಸಬೇಕೆಂದು ಕೂಡ ನ್ಯಾಯಪೀಠ ಸೂಚಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಪರಸ್ಪರ ‘ಒಪ್ಪಿಗೆ ವಿಚ್ಚೇದನ’ಕ್ಕೆ ಒಪ್ಪಿ ನಂತರ ಹಿಂದೆ ಸರಿದು ಗೃಹ ಹಿಂಸೆ ಕೇಸ್ ಹಾಕಿದ ಪತ್ನಿಗೆ ಶಾಕ್ ಕೊಟ್ಟ ಸುಪ್ರೀಂ appeared first on Law Guide Kannada.

]]>
ಗಣನೀಯ ತೊಂದರೆ, ವಿಳಂಬ ವೇಳೆ ಮಧ್ಯಸ್ಥಿಕೆ ತೀರ್ಪು ಮಾರ್ಪಡಿಸಬಹುದು- 14 ವರ್ಷಗಳ ಹಳೇ ವಿವಾದಕ್ಕೆ ತೆರೆ ಎಳೆದ ಸುಪ್ರೀಂ https://www.lawguidekannada.com/arbitration-award-can-be-modified-in-case-of-substantial-inconvenience-delay-supreme-court-opens-14-year-old-dispute/ Tue, 02 Jun 2026 12:26:38 +0000 https://www.lawguidekannada.com/?p=3999 ನವದೆಹಲಿ: ಗಣನೀಯ ತೊಂದರೆ, ವಿಳಂಬ ಸಂದರ್ಭದಲ್ಲಿ ಮಧ್ಯಸ್ಥಿಕೆ ತೀರ್ಪನ್ನು ರದ್ದುಪಡಿಸದೇ ಅದನ್ನು ಮಾರ್ಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವ...

The post ಗಣನೀಯ ತೊಂದರೆ, ವಿಳಂಬ ವೇಳೆ ಮಧ್ಯಸ್ಥಿಕೆ ತೀರ್ಪು ಮಾರ್ಪಡಿಸಬಹುದು- 14 ವರ್ಷಗಳ ಹಳೇ ವಿವಾದಕ್ಕೆ ತೆರೆ ಎಳೆದ ಸುಪ್ರೀಂ appeared first on Law Guide Kannada.

]]>
ನವದೆಹಲಿ: ಗಣನೀಯ ತೊಂದರೆ, ವಿಳಂಬ ಸಂದರ್ಭದಲ್ಲಿ ಮಧ್ಯಸ್ಥಿಕೆ ತೀರ್ಪನ್ನು ರದ್ದುಪಡಿಸದೇ ಅದನ್ನು ಮಾರ್ಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವ ಮೂಲಕ 14 ವರ್ಷಗಳ ಹಳೆ ವಿವಾದಕ್ಕೆ ತೆರೆ ಎಳೆದಿದೆ.

ಗಣನೀಯ ತೊಂದರೆ ಹಾಗೂ ವಿಳಂಬ ಉಂಟಾಗುವ ಸಂದರ್ಭಗಳಲ್ಲಿ ಮಧ್ಯಸ್ಥಿಕೆ ತೀರ್ಪನ್ನು ರದ್ದುಪಡಿಸುವ ಬದಲು ನ್ಯಾಯಾಲಯಗಳು ಅದನ್ನು ಮಾರ್ಪಡಿಸಬಹುದು ಮಧ್ಯಸ್ಥಿಕೆ ತೀರ್ಪಿನಲ್ಲಿ ದೋಷಗಳಿದ್ದರೂ, ಅದನ್ನು ಸಂಪೂರ್ಣವಾಗಿ ರದ್ದು ಪಡಿಸಿ ಪಕ್ಷಕಾರರನ್ನು ಮತ್ತೊಮ್ಮೆ ಮಧ್ಯಸ್ಥಿಕೆ ಮತ್ತು ನ್ಯಾಯಾಂಗ ಹೋರಾಟದ ಸುತ್ತಿಗೆ ತಳ್ಳುವ ಬದಲು, ನ್ಯಾಯ ಸಾಧನೆಗಾಗಿ ಸಂವಿಧಾನದ ವಿಧಿ 142 ಅಡಿಯಲ್ಲಿ ತೀರ್ಪನ್ನು ಮಾರ್ಪಡಿಸಿ ಅಂತಿಮ ಪರಿಹಾರ ನೀಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.

ಪ್ರಕರಣದ ವಿವರ…
2010ರಲ್ಲಿ ನಡೆದ ಪುನರ್ ನಿರ್ಮಾಣ ಒಪ್ಪಂದದ ಪ್ರಕಾರ, ದೆಹಲಿಯ ಭಯಾನಾ ಕುಟುಂಬವು ತಮ್ಮ ಹಳೆಯ ಕಟ್ಟಡವನ್ನು ಮರುನಿರ್ಮಿಸಲು ಬಿಲ್ಡರ್ ಗೆ ಅವಕಾಶ ನೀಡಿತ್ತು. ಪ್ರತಿಯಾಗಿ ಬಿಲ್ಡರ್ ಗೆ ಕಟ್ಟಡದ ಎರಡನೇ ಮಹಡಿಯನ್ನು ಉಳಿಸಿಕೊಳ್ಳುವ ಹಕ್ಕು ನೀಡಲಾಗಿತ್ತು. ಜೊತೆಗೆ, ಬಿಲ್ಡರ್ ಮಾಲೀಕರಿಗೆ 64 ಲಕ್ಷ ರೂ. ವನ್ನು ಮುಂಗಡ ಹಣ ಮತ್ತು ಪರಿಹಾರವಾಗಿ ಪಾವತಿಸಬೇಕಿತ್ತು. ಒಪ್ಪಂದದ ಪ್ರಕಾರ, ನಿರ್ಮಾಣ ಕಾರ್ಯವನ್ನು 12 ತಿಂಗಳೊಳಗೆ ಪೂರ್ಣಗೊಳಿಸಬೇಕಾಗಿದ್ದು. ಹೆಚ್ಚುವರಿ 2 ತಿಂಗಳ ಸಡಿಲಾವಧಿಯೂ ನೀಡಲಾಗಿತ್ತು. ಅದಾದ ಬಳಿಕವೂ ಕೆಲಸ ಪೂರ್ಣಗೊಳ್ಳದಿದ್ದರೆ, ಪ್ರತಿದಿನ 10,000 ರೂ.ದಂಡ ಪಾವತಿಸಬೇಕೆಂದು ನಿಗದಿಪಡಿಸಲಾಗಿತ್ತು. ಈ ಪ್ರಕರಣದಲ್ಲಿ, ನಿರ್ಮಾಣ ಕಾರ್ಯವು ಕೇವಲ ನೆಲಮಾಳಿಗೆ, ಸ್ಕಿಲ್ಡ್ ಮತ್ತು ನೆಲಮಹಡಿ ನಿರ್ಮಾಣದ ನಂತರ 2011ರ ಆಗಸ್ಟ್ನಲ್ಲಿ ಸ್ಥಗಿತಗೊಂಡಿತ್ತು. ನಂತರ ಮಾಲೀಕರು 2011ರ ನವೆಂಬನರ್ಲ್ಲಿ ಒಪ್ಪಂದವನ್ನು ರದ್ದು ಪಡಿಸಿದರು. ಬಳಿಕ ವಿವಾದವನ್ನು ಮಧ್ಯಸ್ಥಿಕೆಗೆ ಒಪ್ಪಿಸಲಾಯಿತು.

2013ರಲ್ಲಿ ಮಧ್ಯಸ್ಥರು (Arbitrator) ಬಿಲ್ಡರ್ ಒಪ್ಪಂದ ಉಲ್ಲಂಘನೆ ಮಾಡಿರುವುದಾಗಿ ಕಂಡು ಪರಿಹಾರಧನ ನೀಡಿದರು. ಜೊತೆಗೆ, ಬಿಲ್ಡರ್ ಪ್ರತಿದಾವೆಯನ್ನು ಭಾಗಶಃ ಅಂಗೀಕರಿಸಿದರು. ನಂತರ ಈ ಪ್ರಕರಣವು ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆ, 1996ರ ಸೆಕ್ಷನ್ 34 ಮತ್ತು 37ರ ಅಡಿಯಲ್ಲಿ ದೆಹಲಿ ಹೈಕೋರ್ಟ್ ಮೂಲಕ ಸುಪ್ರೀಂ ಕೋರ್ಟ್ ಅಂಗಳಕ್ಕೆ ತಲುಪಿತು.
ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ತೀರ್ಪಿನಲ್ಲಿ ಒಪ್ಪಂದದ ದಂಡದ ಲೆಕ್ಕಾಚಾರ ಸೇರಿದಂತೆ ಹಲವು ಅಂಶಗಳಲ್ಲಿ ಸ್ಪಷ್ಟ ಕಾನೂನುಬಾಹಿರತೆ (Patent Illegality) ಇರುವುದನ್ನು ಗಮನಿಸಿತು. ಆದರೆ, ಈ ಹಂತದಲ್ಲಿ ತೀರ್ಪನ್ನು ರದ್ದುಪಡಿಸಿದರೆ 2012ರಿಂದ ಬಾಕಿ ಇರುವ ವಿವಾದ ಮತ್ತೊಮ್ಮೆ ಆರಂಭವಾಗಿ, ಪಕ್ಷಕಾರರು ಹೊಸ ಮಧ್ಯಸ್ಥಿಕೆ ಮತ್ತು ಹೊಸ ನ್ಯಾಯಾಂಗ ಹೋರಾಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಮಧ್ಯಸ್ಥಿಕೆ ತೀರ್ಪು ಸ್ಪಷ್ಟ ಕಾನೂನುಬಾಹಿರತೆಯಿಂದ ಕೂಡಿರುವುದರಿಂದ, ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ ಸೆಕ್ಷನ್ 34(2ಂ) ಅಡಿಯಲ್ಲಿ ಅದನ್ನು ರದ್ದುಪಡಿಸಬಹುದಾಗಿದೆ. ಆದಾಗ್ಯೂ, ಪಕ್ಷಕಾರರು 2012ರಿಂದಲೇ ಈ ವಿವಾದದಲ್ಲಿ ನ್ಯಾಯಾಂಗ ಹೋರಾಟ ನಡೆಸುತ್ತಿರುವುದನ್ನು ಪರಿಗಣಿಸಿದಾಗ, ಅದನ್ನು ರದ್ದು ಪಡಿಸುವುದು ನ್ಯಾಯದ ಹಿತಾಸಕ್ತಿಗೆ ಅನುಕೂಲಕರವಾಗುವುದಿಲ್ಲ. ತೀರ್ಪನ್ನು ರದ್ದುಪಡಿಸುವುದರಿಂದ ಗಣನೀಯ ತೊಂದರೆ ಮತ್ತು ಅನಗತ್ಯ ವಿಳಂಬ ಉಂಟಾಗುವ ಸಂದರ್ಭಗಳಲ್ಲಿ, ಹಿಂದಿನ ತೀರ್ಪಿನಲ್ಲಿ ನಿಗದಿಪಡಿಸಿದ ಮಿತಿಗಳೊಳಗೆ ನ್ಯಾಯಾಲಯವು ಮಾರ್ಪಡಿಬಹುದು. ಜೊತೆಗೆ, ಪಕ್ಷಕಾರರ ನಡುವೆ ಸಾರ್ಥಕ ನ್ಯಾಯ ಸಾಧಿಸಲು, ಅವರನ್ನು ಮತ್ತೊಂದು ಹಂತದ ವ್ಯಾಜ್ಯಕ್ಕೆ ತಳ್ಳುವ ಬದಲು, ಸಂವಿಧಾನದ ವಿಧಿ 142ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನ್ನ ಅಧಿಕಾರವನ್ನು ಬಳಸಬಹುದು. ಆದ್ದರಿಂದ, ಈ ವಿವಾದಕ್ಕೆ ಅಂತಿಮ ತೆರೆ ಎಳೆಯುವ ಉದ್ದೇಶದಿಂದ ನಾವು ವಿಧಿ 142ರ ಅಧಿಕಾರವನ್ನು ಚಲಾಯಿಸುತ್ತಿದ್ದೇವೆ ಎಂದು ನ್ಯಾಯಪೀಠ ನುಡಿಯಿತು.

ಅಂತಿಮವಾಗಿ, ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ತೀರ್ಪನ್ನೇ ಮಾರ್ಪಾಡು ಮಾಡಿ, 2011ರ ಸೆಪ್ಟೆಂಬರ್ನಿಂದ ನವೆಂಬರ್ ವರೆಗಿನ ಸೀಮಿತ ಅವಧಿಗೆ ಮಾಲೀಕರು 6.3 ಲಕ್ಷ ರೂ. ಒಪ್ಪಂದದ ದಂಡ ಪಡೆಯಲು ಅರ್ಹರು ಎಂದು ತೀರ್ಮಾನಿಸಿತು. ಅದೇ ವೇಳೆ, ಬಿಲ್ಡರ್ ಗೆ ಮರುಪಾವತಿ ಮತ್ತು ನಿರ್ಮಾಣ ವೆಚ್ಚ ಸೇರಿ ಒಟ್ಟು 181.92 ಲಕ್ಷ ರೂ. ಪಡೆಯುವ ಹಕ್ಕು ಇದೆ ಎಂದು ಘೋಷಿಸಿತು.

ಹಿಂದಿನ ಆದೇಶಗಳ ಪ್ರಕಾರ ಈಗಾಗಲೇ ಪಾವತಿಸಲಾದ ಮೊತ್ತಗಳನ್ನು ಸರಿಹೊಂದಿಸಿದ ಬಳಿಕ, ಉಳಿದ ಮೊತ್ತವನ್ನು ಪಾವತಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತು. ಜೊತೆಗೆ, ಎರಡೂ ಪಕ್ಷಗಳಿಗೆ ಬಡ್ಡಿ ಪಡೆಯುವ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಗಣನೀಯ ತೊಂದರೆ, ವಿಳಂಬ ವೇಳೆ ಮಧ್ಯಸ್ಥಿಕೆ ತೀರ್ಪು ಮಾರ್ಪಡಿಸಬಹುದು- 14 ವರ್ಷಗಳ ಹಳೇ ವಿವಾದಕ್ಕೆ ತೆರೆ ಎಳೆದ ಸುಪ್ರೀಂ appeared first on Law Guide Kannada.

]]>
ತನಗಲ್ಲದಿದ್ದರೂ ಇನ್ನೊಬ್ಬರಿಗಾಗಿ ಲಂಚ ಪಡೆಯುವುದೂ ಸಹ ಅಪರಾಧ: ‘ಹೈ’ ತೀರ್ಪು ರದ್ದುಗೊಳಿಸಿದ ಸುಪ್ರೀಂ https://www.lawguidekannada.com/even-accepting-bribe-for-someone-else-is-also-a-crime-supreme-court-quashes-high-verdict/ Tue, 02 Jun 2026 12:23:41 +0000 https://www.lawguidekannada.com/?p=3996 ನವದೆಹಲಿ: ಸರ್ಕಾರಿ ನೌಕರನು ತನಗೆ ಅಲ್ಲದಿದ್ದರೂ, ತನಗಲ್ಲದಿದ್ದರೂ ಇನ್ನೊಬ್ಬರಿಗಾಗಿ ಲಂಚ ಪಡೆದರೂ ಸಹ ಅದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಪರಾಧ...

The post ತನಗಲ್ಲದಿದ್ದರೂ ಇನ್ನೊಬ್ಬರಿಗಾಗಿ ಲಂಚ ಪಡೆಯುವುದೂ ಸಹ ಅಪರಾಧ: ‘ಹೈ’ ತೀರ್ಪು ರದ್ದುಗೊಳಿಸಿದ ಸುಪ್ರೀಂ appeared first on Law Guide Kannada.

]]>
ನವದೆಹಲಿ: ಸರ್ಕಾರಿ ನೌಕರನು ತನಗೆ ಅಲ್ಲದಿದ್ದರೂ, ತನಗಲ್ಲದಿದ್ದರೂ ಇನ್ನೊಬ್ಬರಿಗಾಗಿ ಲಂಚ ಪಡೆದರೂ ಸಹ ಅದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಪರಾಧ ಎಂದು ಸ್ಪಷ್ಟಪಡಿಸಿದ ಸುಪ್ರೀಂಕೋರ್ಟ್ ಈ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪಿಎಸ್ ಐ ಕೆ.ರಂಗಯ್ಯ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರ ಪೀಠವು ಈ ತೀರ್ಪು ನೀಡಿದೆ.

ರಂಗಯ್ಯ ನೇರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿಲ್ಲ ಅಥವಾ ಲಂಚದ ಹಣವನ್ನು ವೈಯಕ್ತಿಕವಾಗಿ ಪಡೆದುಕೊಂಡಿಲ್ಲ ಎಂದು ಹೇಳಿ ಕರ್ನಾಟಕ ಹೈಕೋರ್ಟ್ 2023ರ ಜೂನ್ ನಲ್ಲಿ ದಾಖಲಾಗಿದ್ದ ಎಫ್ ಐಆರ್ ಅನ್ನು ರದ್ದುಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ಎಫ್ ಐಆರ್ ಅನ್ನು ಮರುಸ್ಥಾಪಿಸಿದ ಸುಪ್ರೀಂ ಕೋರ್ಟ್ ಪೀಠ, ಕಾನೂನು ಪ್ರಕಾರ ಪ್ರಕರಣವನ್ನು ಮುಂದುವರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ಸರ್ಕಾರಿ ನೌಕರನು ಅಧೀನ ನೌಕರ ಒಳಗೊಂಡಂತೆ ಇನ್ನೊಬ್ಬನಿಗಾಗಿ ಲಂಚಕ್ಕೆ ಬೇಡಿಕೆಯಿಟ್ಟರೆ ಅಥವಾ ಲಂಚ ಪಡೆಯಲು ಪ್ರಯತ್ನಿಸಿದರೆ ಆತನನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಪರಾಧಿಯಾಗಿ ಪರಿಗಣಿಸಬಹುದು. ಸರ್ಕಾರಿ ನೌಕರನೊಬ್ಬ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತಪ್ಪಿತಸ್ಥ ಎನಿಸಿಕೊಳ್ಳಲು ವೈಯಕ್ತಿವಾಗಿ ಲಂಚ ಪಡೆಯಬೇಕು ಎಂದೇನಿಲ್ಲ ಎಂದು ತನ್ನ ತೀರ್ಪಿನಲ್ಲಿ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸರ್ಕಾರಿ ನೌಕರನು ಅಕ್ರಮವಾಗಿ ಬೇರೊಬ್ಬನಿಗೆ ಲಾಭ ತಂದುಕೊಡಲು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಕೃತ್ಯವು ಈ ಕಾಯ್ದೆಯ ಸೆಕ್ಷನ್ 7ರ ವ್ಯಾಪ್ತಿಗೆ ಬರುತ್ತದೆ. ‘ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಲಂಚದ ಆರೋಪ ಹೊರಿಸಲು ನಿರ್ದಿಷ್ಟ ಸರ್ಕಾರಿ ನೌಕರನು ಲಂಚದ ಹಣವನ್ನು ತನಗಾಗಿ ಪಡೆಯಬೇಕು ಎಂಬುದು ಅನಿವಾರ್ಯವಲ್ಲ. ಮತ್ತೊಬ್ಬ ವ್ಯಕ್ತಿಗಾಗಿ ಲಂಚದ ಬೇಡಿಕೆ ಇಟ್ಟಂತಹ ಪ್ರಕರಣಗಳನ್ನೂ ಇದು ಒಳಗೊಳ್ಳುತ್ತದೆ’ ಎಂಬುದನ್ನು ಪೀಠವು ಗಮನಿಸಿತು.

ಸರ್ಕಾರಿ ನೌಕರ ವೈಯಕ್ತಿಕ ಪ್ರಭಾವ ಬಳಸಿ ನೇರವಾಗಿ ಅಪರಾಧ ಮಾಡಬಹುದು ಅಥವಾ ಇನ್ನೊಬ್ಬ ನೌಕರನ ಮೂಲಕ ಆ ಅಪರಾಧವನ್ನು ನಡೆಸಲೂಬಹುದು. ತೆರೆಮರೆಯಲ್ಲಿ ನಿಂತು ಅಧೀನ ನೌಕರನ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟರೆ ಆತನೂ ಆ ಕೃತ್ಯಕ್ಕೆ ಜವಾಬ್ದಾರನಾಗುತ್ತಾನೆ ಎಂದು ನ್ಯಾಯಪೀಠ ಹೇಳಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ತನಗಲ್ಲದಿದ್ದರೂ ಇನ್ನೊಬ್ಬರಿಗಾಗಿ ಲಂಚ ಪಡೆಯುವುದೂ ಸಹ ಅಪರಾಧ: ‘ಹೈ’ ತೀರ್ಪು ರದ್ದುಗೊಳಿಸಿದ ಸುಪ್ರೀಂ appeared first on Law Guide Kannada.

]]>
ಮದುವೆಯಾದ ಮಾತ್ರಕ್ಕೆ ಮಹಿಳೆಯ ವ್ಯಕ್ತಿತ್ವ, ಐಡೆಂಟಿಟಿ ಕಳೆದು ಹೋಗಲ್ಲ- ಸುಪ್ರೀಂ ಕೋರ್ಟ್ https://www.lawguidekannada.com/a-womans-personality-and-identity-do-not-disappear-just-because-she-gets-married-supreme-court/ Tue, 02 Jun 2026 12:20:37 +0000 https://www.lawguidekannada.com/?p=3994 ನವದೆಹಲಿ: ಪತ್ನಿಯು ತನ್ನ ವೃತ್ತಿಜೀವನದ ಆಸೆಗಳನ್ನು ಮುಂದುವರಿಸುವುದನ್ನು ‘ವೈವಾಹಿಕ ಕ್ರೌರ್ಯ’ ಎಂದು ಕರೆಯುವುದು ಪ್ರತಿಗಾಮಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಆಕೆ ಮದುಯಾದ...

The post ಮದುವೆಯಾದ ಮಾತ್ರಕ್ಕೆ ಮಹಿಳೆಯ ವ್ಯಕ್ತಿತ್ವ, ಐಡೆಂಟಿಟಿ ಕಳೆದು ಹೋಗಲ್ಲ- ಸುಪ್ರೀಂ ಕೋರ್ಟ್ appeared first on Law Guide Kannada.

]]>
ನವದೆಹಲಿ: ಪತ್ನಿಯು ತನ್ನ ವೃತ್ತಿಜೀವನದ ಆಸೆಗಳನ್ನು ಮುಂದುವರಿಸುವುದನ್ನು ‘ವೈವಾಹಿಕ ಕ್ರೌರ್ಯ’ ಎಂದು ಕರೆಯುವುದು ಪ್ರತಿಗಾಮಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಆಕೆ ಮದುಯಾದ ಮಾತ್ರಕ್ಕೆ ಐಡೆಂಟಿಟಿ ಕಳೆದು ಹೋಗಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ವೈವಾಹಿಕ ಜೀವನದಲ್ಲಿ ಲಿಂಗ ಸಮಾನತೆ ಕುರಿತು ಅತ್ಯಂತ ಕಠಿಣ ಮಾತುಗಳಲ್ಲಿ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ನ್ಯಾಯಪೀಠವು, ಮಹಿಳೆಯು ಮದುವೆ ಆದ ಮಾತ್ರಕ್ಕೆ ಆಕೆ ತನ್ನ ವ್ಯಕ್ತಿತ್ವ ಹಾಗೂ ಐಡೆಂಟಿಟಿಯನ್ನು ಕಳೆದುಕೊಳ್ಳುವುದಿಲ್ಲ. ಪತ್ನಿಯು ತನ್ನ ವೃತ್ತಿಜೀವನದ ಆಸೆಗಳನ್ನು ಮುಂದುವರಿಸುವುದನ್ನು ‘ವೈವಾಹಿಕ ಕ್ರೌರ್ಯ’ ಎಂದು ಕರೆಯುವುದು ಪ್ರತಿಗಾಮಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇದು ಆಧುನಿಕ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ.

ಪತ್ನಿಯ ವೃತ್ತಿಪರ ಗುರುತು ಪತಿಯ ಅನುಮೋದನೆಗೆ ಒಳಪಟ್ಟಿರುತ್ತದೆ ಮತ್ತು ಆಕೆ ತನ್ನ ಆಸೆಗಳನ್ನು ಪತಿಯ ಕೆಲಸದ ಬೇಡಿಕೆಗಳಿಗಾಗಿ ತ್ಯಾಗ ಮಾಡಬೇಕು ಎಂಬ ಕೆಳಹಂತದ ನ್ಯಾಯಾಲಯಗಳ ಧೋರಣೆಯು “ಪ್ರಾಚೀನ ಸಾಮಾಜಿಕ ಕಲ್ಪನೆಗಳ ಮೇಲೆ ಆಧಾರಿತವಾಗಿದೆ. ಸಮಾಜವು ಮಹಿಳಾ ಸಬಲೀಕರಣದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಈ ಯುಗದಲ್ಲಿ, ಪತ್ನಿಯು ತನ್ನ ವೃತ್ತಿಜೀವನದ ಗುರಿಗಳನ್ನು ಬೆನ್ನಟ್ಟುವುದರಿಂದ ಪತಿ ಅಥವಾ ಅತ್ತೆ-ಮಾವಂದಿರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಅದನ್ನು ‘ಕ್ರೌರ್ಯ’ ಎಂದು ಕರೆಯುವುದು ಅತ್ಯಂತ ಆಕ್ಷೇಪಾರ್ಹ ಮತ್ತು ಖಂಡನೀಯ. ಮದುವೆಯು ಮಹಿಳೆಯ ವ್ಯಕ್ತಿತ್ವ ಅಥವಾ ಸ್ವಾಯತ್ತತೆಯನ್ನು ಅಳಿಸಿಹಾಕುವುದಿಲ್ಲ. ಆಕೆಯನ್ನು ಕೇವಲ ಪತಿಯ ಮನೆಯ ಒಂದು ‘ಅಂಗ’ (ಚಿಠಿಠಿeಟಿಜಚಿge) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಹೇಳಿದೆ.

ದಂತ ವೈದ್ಯೆಯಾಗಿದ್ದ ಪತ್ನಿಯ ವಿರುದ್ಧ ಕೌಟುಂಬಿಕ ನ್ಯಾಯಾಲಯ ಮತ್ತು ಗುಜರಾತ್ ಉಚ್ಚ ನ್ಯಾಯಾಲಯವು ನೀಡಿದ್ದ ‘ಕ್ರೌರ್ಯ ಮತ್ತು ಪರಿತ್ಯಾಗ’ (ಜeseಡಿಣioಟಿ) ಎಂಬ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿತು. ಸೇನಾ ಅಧಿಕಾರಿಯಾಗಿದ್ದ ಪತಿಯು, ಪತ್ನಿಯು ತನ್ನ ವೃತ್ತಿಜೀವನಕ್ಕಾಗಿ ಅಹಮದಾಬಾದ್ ನಲ್ಲಿ ನೆಲೆಸಿದ್ದನ್ನು ಕ್ರೌರ್ಯ ಎಂದು ಸುಪ್ರೀಂನಲ್ಲಿ ವಾದಿಸಿದ್ದರು.

ಈ ವೇಳೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠವು, ಮಕ್ಕಳ ಆರೋಗ್ಯ ಮತ್ತು ಉತ್ತಮ ಭವಿಷ್ಯಕ್ಕಾಗಿ ಪತ್ನಿಯು ಸುರಕ್ಷಿತ ವಾತಾವರಣವನ್ನು ಹುಡುಕುವುದು ತಪ್ಪಲ್ಲ. ಒಂದು ವೇಳೆ ಪರಿಸ್ಥಿತಿ ಉಲ್ಟಾ ಆಗಿದ್ದರೆ, ಅಂದರೆ ಪತ್ನಿಗೆ ವರ್ಗಾವಣೆಯಾಗುವ ಕೆಲಸವಿದ್ದಿದ್ದರೆ, ಪತಿಯು ತನ್ನ ವೃತ್ತಿಯನ್ನು ಬಿಡಬೇಕೆಂದು ಯಾರೂ ನಿರೀಕ್ಷಿಸುತ್ತಿರಲಿಲ್ಲ. ಪತಿಯು ದೂರದ ಪ್ರದೇಶದಲ್ಲಿ ಸೇನಾ ಅಧಿಕಾರಿಯಾಗಿದ್ದಾರೆ ಎಂಬ ಕಾರಣಕ್ಕೆ, ಪತ್ನಿಯು ತನ್ನ ದಂತ ವೈದ್ಯಕೀಯ ವೃತ್ತಿಯ ಬಗ್ಗೆ ಯೋಚಿಸಬಾರದು ಎಂಬ ನಿರೀಕ್ಷೆಯು “ಊಳಿಗಮಾನ್ಯ ಮತ್ತು ಪ್ರತಿಗಾಮಿ ಮನಸ್ಥಿತಿಯ ಸಂಕೇತವಾಗಿದೆ ಎಂದು ನ್ಯಾಯಪೀಠ ಟೀಕಿಸಿದೆ.

ನ್ಯಾಯಾಲಯವು ಕ್ರೌರ್ಯದ ಆರೋಪಗಳನ್ನು ತೆಗೆದು ಹಾಕಿದರೂ, ವಿಚ್ಛೇದನ ಆದೇಶವನ್ನು ರದ್ದುಗೊಳಿಸಲಿಲ್ಲ. ಏಕೆಂದರೆ ಪತ್ನಿಯು ಮದುವೆಯನ್ನು ಮುಂದುವರಿಸಲು ಇಚ್ಛಿಸಿರಲಿಲ್ಲ ಮತ್ತು ಪತಿಯು ಈಗಾಗಲೇ ಮರುಮದುವೆಯಾಗಿದ್ದರು. ಆದ್ದರಿಂದ ಈ ವಿಚ್ಚೇದನವನ್ನು “ಸರಿಪಡಿಸಲಾಗದ ವೈವಾಹಿಕ ಸಂಬಂಧದ ಬಿರುಕು” ಎಂಬ ಆಧಾರದ ಮೇಲೆ ನೀಡಲಾಗಿದೆ ಎಂದು ಪರಿಗಣಿಸಲಾಯಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಮದುವೆಯಾದ ಮಾತ್ರಕ್ಕೆ ಮಹಿಳೆಯ ವ್ಯಕ್ತಿತ್ವ, ಐಡೆಂಟಿಟಿ ಕಳೆದು ಹೋಗಲ್ಲ- ಸುಪ್ರೀಂ ಕೋರ್ಟ್ appeared first on Law Guide Kannada.

]]>