06/03/2026

Law Guide Kannada

Online Guide

ಆಸ್ಪತ್ರೆ ಎಮರ್ಜೆನ್ಸಿ ವಾರ್ಡ್ ರೀತಿಯಲ್ಲಿ ಹೈಕೋರ್ಟ್ ಗಳು ನ್ಯಾಯದಾನ ಪ್ರಕ್ರಿಯೆ ನಡೆಸಬೇಕು –  ನ್ಯಾ.ಸೂರ್ಯಕಾಂತ್

ನವದೆಹಲಿ: ಆಸ್ಪತ್ರೆಗಳ ತುರ್ತು ನಿಗಾ ಘಟಕ, ಎಮರ್ಜೆನ್ಸಿ ವಾರ್ಡ್ ರೀತಿಯಲ್ಲಿ ಹೈಕೋರ್ಟ್ಗಳು ಅರ್ಜಿಗಳ ವಿಲೇವಾರಿ ಮಾಡುವ ಮೂಲಕ ನ್ಯಾಯದಾನ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

ಜಾರ್ಖಂಡ್ ಹೈಕೋರ್ಟ್ ‘ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯದಾನ ಪ್ರಕ್ರಿಯೆಯಲ್ಲಿ ಕೋರ್ಟ್ಗಳಿಗೆ ವೇಗ, ಸಮನ್ವಯತೆ ಮತ್ತು ತಂತ್ರಜ್ಞಾನದ ಬಳಕೆ ಅಗತ್ಯ. ಹೈಕೋರ್ಟ್ಗಳು ಸಾಮಾಜಿಕ ಪರಿವರ್ತನೆಯ ಎಂಜಿನ್ಗಳಂತೆ ಕಾರ್ಯನಿರ್ವಹಿಸಬೇಕು. ಇದರಿಂದ ಸರಿಯಾದ ಸಮಯಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗಲಿದೆ. “ಅನ್ಯಾಯದ ವಿರುದ್ಧ ಹೈಕೋರ್ಟ್ಗಳು ಆಸ್ಪತ್ರೆಗಳಲ್ಲಿನ ತುರ್ತು ಚಿಕಿತ್ಸಾ ಘಟಕಗಳ ಮಾದರಿಯಲ್ಲಿ ತ್ವರಿತವಾಗಿ ಹಾಗೂ ನಿಖರವಾಗಿ ನ್ಯಾಯದಾನ ಮಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ತುರ್ತು ನಿಗಾ ಘಟಕದ ವಾರ್ಡ್ ನಲ್ಲಿ ಆಸ್ಪತ್ರೆಗಳು ಸ್ವಲ್ಪ ತಡ ಮಾಡಿದರೆ, ನಿರ್ಲಕ್ಷ್ಯ ತೋರಿದರೆ ಜೀವಗಳಿಗೆ ಆಪತ್ತು ಉಂಟಾಗುತ್ತದೆ. ಅಂತಹ ಸ್ಥಿತಿ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸುವವರದ್ರೂ ಕೂಡ ಬರುತ್ತದೆ. ಸಾಂವಿಧಾನಿಕ ಪ್ರಜಾಪ್ರಭುತ್ವದ ಅಗತ್ಯತೆಗಳನ್ನು ಕ್ಷಿಪ್ರವಾಗಿ ಹಾಗೂ ಸ್ಪಷ್ಟವಾಗಿ ಪೂರೈಸುವ ಸವಾಲು ನಮ್ಮ ಎದುರಿಗಿದೆ” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದ್ದಾರೆ.

ಪ್ರಸ್ತುತ ಸುಪ್ರೀಂಕೋರ್ಟ ಮುಖ್ಯ ನ್ಯಾಯಮೂರ್ತಿಯಾಗಿರುವ ಬಿ.ಆರ್.ಗವಾಯಿ ಅವರು 2025ರ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ. ನವೆಂಬರ್ 24ರಂದು ದೇಶದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.