06/03/2026

Law Guide Kannada

Online Guide

ಚೆಕ್ ಬೌನ್ಸ್ ಕೇಸ್ ನಲ್ಲಿ 20 ಸಾವಿರ ರೂ. ಮೇಲ್ಪಟ್ಟ ನಗದು ವ್ಯವಹಾರ ನಿರ್ವಹಣೆಗೆ ಯೋಗ್ಯ – ಸುಪ್ರೀಂಕೋರ್ಟ್

ನವದಹಲಿ: ಚೆಕ್ ಅಮಾನ್ಯ ಪ್ರಕರಣದಲ್ಲಿ 20 ಸಾವಿರ ರೂಪಾಯಿಗೂ ಮೇಲ್ಪಟ್ಟ ನಗದು ವ್ಯವಹಾರ ನಿರ್ವಹಣೆಗೆ ಯೋಗ್ಯ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

20 ಸಾವಿರಕ್ಕೆ ಮೇಲ್ಪಟ್ಟ ನಗದು ವಹಿವಾಟನ್ನು ಒಳಗೊಂಡ ಪ್ರಕರಣದ ಚೆಕ್ ಅಮಾನ್ಯ ಪ್ರಕರಣ ನಿರ್ವಹಣೆಗೆ ಯೋಗ್ಯವಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ವಿವಾದಾತ್ಮಕ ತೀರ್ಪು ನೀಡಿತ್ತು.

ಈ ಸಂಬಂಧ ಕೇರಳ ಹೈಕೋರ್ಟ್ ತೀರ್ಪನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ವಿಭಾಗೀಯ ನ್ಯಾಯಪೀಠವು, 20 ಸಾವಿರಕ್ಕೂ ಮೇಲ್ಪಟ್ಟ ಮೊತ್ತವನ್ನು ನಗದು ರೂಪದಲ್ಲಿ ವ್ಯವಹಾರ ನಡೆಸಿದ್ದ ಹಿನ್ನೆಲೆಯಲ್ಲಿ ಉದ್ಭವಿಸಿದ ಚೆಕ್ ಅಮಾನ್ಯ ಪ್ರಕರಣವೂ ನಿರ್ವಹಣೆಗೆ ಯೋಗ್ಯವಾಗಿದೆ ಎಂದು ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.