20/05/2025

Law Guide Kannada

Online Guide

ಲೈಂಗಿಕ ದೌರ್ಜನ್ಯ ಸಾಬೀತುಪಡಿಸಲು ಗಾಯ ಇರಲೇಬೇಕು ಎನ್ನಲಾಗದು: ಸುಪ್ರೀಂ ಕೋರ್ಟ್‌

ನವದೆಹಲಿ : ಲೈಂಗಿಕ ದೌರ್ಜನ್ಯ ಸಾಬೀತು ಪಡಿಸಲು ‘ಸಂತ್ರಸ್ತೆ’ ಗಾಯಗಳಿಂದ ಬಳಲುವುದು, ಕೂಗಾಡುವುದು ಮುಖ್ಯವಲ್ಲ. ಲೈಂಗಿಕ ದೌರ್ಜನ್ಯ ಸಾಬೀತುಪಡಿಸಲು ಗಾಯ ಇರಲೇಬೇಕು ಎನ್ನಲಾಗದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ ವಿ ಎನ್ ಭಟ್ಟಿ ಅವರ ನ್ಯಾಯಪೀಠವು, ಲೈಂಗಿಕ ದೌರ್ಜನ್ಯವನ್ನು ಸಾಬೀತುಪಡಿಸಲು ಸಂತ್ರಸ್ತೆ ದೈಹಿಕ ಗಾಯಗಳಿಂದ ಬಳಲುತ್ತಿರುವುದು ಅಥವಾ ಕೂಗಾಡುವುದು ಮುಖ್ಯವಲ್ಲ. ಇಂತಹ ಪ್ರಕರಣಗಳಲ್ಲಿ ಏಕರೂಪದ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದು ವಾಸ್ತವಿಕವೂ ಅಲ್ಲ ಅಥವಾ ನ್ಯಾಯಯುತವೂ ಅಲ್ಲ.
ಲೈಂಗಿಕ ದೌರ್ಜನ್ಯವು ಗಾಯಗಳನ್ನು ಬಿಡಬೇಕು ಎಂಬುದು ಸಾಮಾನ್ಯ ಮಿಥ್ಯೆ ಎಂದು ನ್ಯಾಯಾಲಯ ಗಮನಸೆಳೆದಿದೆ.

“ಭಯ, ಆಘಾತ, ಸಾಮಾಜಿಕ ಕಳಂಕ ಅಥವಾ ಅಸಹಾಯಕತೆಯ ಭಾವನೆಗಳಂತಹ ಅಂಶಗಳಿಂದ ಪ್ರಭಾವಿತರಾದ ಸಂತ್ರಸ್ತರು ಆಘಾತಕ್ಕೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಳಂಕವು ಮಹಿಳೆಯರಿಗೆ ಗಮನಾರ್ಹ ಅಡೆತಡೆಗಳನ್ನು ಸೃಷ್ಟಿಸುತ್ತದೆ, ಇದರಿಂದಾಗಿ ಘಟನೆಯನ್ನು ಇತರರಿಗೆ ಬಹಿರಂಗಪಡಿಸಲು ಕಷ್ಟವಾಗುತ್ತದೆ” ಎಂದು ಕೋರ್ಟ್ ತಿಳಿಸಿದೆ.

ಆಘಾತಕಾರಿ ಘಟನೆಗಳಿಗೆ ವಿಭಿನ್ನ ಜನರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಹೇಳುವ ಸುಪ್ರೀಂ ಕೋರ್ಟ್ ನ ಲಿಂಗ ಸ್ಟೀರಿಯೊಟೈಪ್ ಗಳ ಕೈಪಿಡಿ (2023) ಅನ್ನು ನ್ಯಾಯಪೀಠ ಉಲ್ಲೇಖಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.