ಆಧಾರ್ ಕಾರ್ಡ್ ಗುರುತಿನ ಪುರಾವೆಗೆ ಮಾತ್ರ ಸೀಮಿತವೇ..? ಪೌರತ್ವದ ದಾಖಲೆಯಾಗಿ ಬಳಸಬಹುದೆ..? ಸುಪ್ರೀಂನಲ್ಲಿ ಚು.ಆಯೋಗದ ವಾದವಿದು..!
ನವದೆಹಲಿ: ಆಧಾರ್ ಕಾರ್ಡ್ ಪೌರತ್ವದ ದಾಖಲೆಯಾಗಿ ಪರಿಗಣಿಸಲಾಗುವುದಿಲ್ಲ. ಅದನ್ನು ಗುರುತಿನ ಪುರಾವೆಯಾಗಿ ಮಾತ್ರ ಬಳಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ವೇಲೆ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯಮಾಲಾ ಬಾಗಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಈ ರೀತಿ ವಾದ ಮಂಡಿಸಿರುವ ಚುನಾವಣಾ ಆಯೋಗವು, ಭಾರತದಲ್ಲಿ ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಮಾತ್ರ ಬಳಕೆ ಮಾಡಬಹುದು. ಆದರೆ, ಅದನ್ನು ಭಾರತೀಯ ಪೌರತ್ವದ ದಾಖಲೆ ಎಂಬುದಾಗಿ ಪರಿಗಣಿಸಲಾಗುವುದಿಲ್ಲ ಎಂದಿದೆ.
ಆಧಾರ್ ಅನ್ನು ಜನ್ಮ ದಿನಾಂಕ, ವಾಸಸ್ಥಳ ಮತ್ತು ಪೌರತ್ವದ ದಾಖಲೆಯಾಗಿ ಬಳಕೆ ಮಾಡುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪುಗಳು ಹೇಳಿವೆ. ಆಧಾರ್ ಕಾಯ್ದೆಯಲ್ಲೂ ಅದನ್ನೇ ಹೇಳಲಾಗಿದೆ. ಬಿಹಾರದ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅಥವಾ ರದ್ದುಪಡಿಸಲು ಅಧಾರ್ ಕಾರ್ಡನ್ನು ಗುರುತಿನ ದಾಖಲೆಯಾಗಿ ಬಳಸಲು ಸೂಚಿಸಲಾಗಿದೆಯೇ ಹೊರತು ಪೌರತ್ವದ ಪುರಾವೆಯಾಗಿ ಅಲ್ಲ’ ಎಂದು ಚುನಾವಣಾ ಆಯೋಗ ವಾದ ಮಂಡಿಸಿತು.
‘ಮತದಾರರ ಪಟ್ಟಿ ಪರಿಷ್ಕರಿಸಲು ಆಧಾರ್ ಬಳಕೆ ಕುರಿತು ನ್ಯಾಯಾಲಯವು ಸೆ. 8ರಂದೇ ಸ್ಪಷ್ಟಪಡಿಸಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆ-19500 (2) ಜಕ್ಕೆ 23(4) ರ ಪ್ರಕಾರ ಗುರುತು ಪತ್ತೆ ಮಾಡುವ ಉದ್ದೇಶಕ್ಕಾಗಿ ಆಧಾರ್ ಕಾರ್ಡ್ ಬಳಸಬೇಕೆಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಆಧಾರ್ ಕಾರ್ಡ್ ಅನ್ನು ಗುರುತಿನ ದಾಖಲೆಯಾಗಿ ಬಳಸಬೇಕು ಪೌರತ್ವದ ಪುರಾವೆಯಾಗಿ ಅಲ್ಲ’ ಎಂದು ತಿಳಿಸಿದ್ದೇವೆ ಎಂದು ವಾದಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
