ದೇಶದಲ್ಲಿ ಆಸ್ತಿ ನೋಂದಣಿಗೆ ಆಧಾರ್ ಕಡ್ಡಾಯ ಇಲ್ಲ?: ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ
ನವದೆಹಲಿ: ದೇಶದಲ್ಲಿ ಆಸ್ತಿ ನೋಂದಣಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಕೇಂದ್ರ ಸರ್ಕಾರ ಸಜ್ಜಾಗಿದೆ. 1908ರಲ್ಲಿ ಜಾರಿಗೆ ಬಂದ 117 ವರ್ಷಗಳ ಹಳೆಯ ನೋಂದಣಿ ಕಾಯ್ದೆಗೆ ತಿದ್ದುಪಡಿ ತರಲಿದೆ.
ಹೌದು ಆಸ್ತಿಯ ದಾಖಲೆಪತ್ರಗಳು, ಭೂ ದಾಖಲೆಗಳು ಮತ್ತು ಇತರೆ ಆಸ್ತಿ ವಹಿವಾಟುಗಳ ನೋಂದಣಿ ವೇಳೆ ಆಧಾರಿತ ದೃಢೀಕರಣವನ್ನು ಐಚ್ಛಿಕ ಆಯ್ಕೆಯನ್ನಾಗಿ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. 117 ವರ್ಷ ಹಿಂದಿನ ನೋಂದಣಿ ಕಾಯ್ದೆ 1908 ಇದಕ್ಕೆ ತಿದ್ದುಪಡಿ ತರಲು ಕೇಂದ್ರ ಸರಕಾರ ಮುಂದಾಗಿದ್ದು, ಭೂ ಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಈ ಕುರಿತ ಕರಡು ವಿಧೇಯಕವನ್ನು ಸಿದ್ದಪಡಿಸಿದೆ. ಈ ಕರಡು ವಿಧೇಯಕ ಆನ್ಲೈನ್ ಮೂಲಕ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸಿದೆ. ಆದರೆ ಆಧಾರ ಸಂಖ್ಯೆ ಆಧಾರಿತ ದೃಢೀಕರಣವನ್ನು ಕಡ್ಡಾಯಗೊಳಿಸಿಲ್ಲ. ಇದಕ್ಕೆ ಬದಲಾಗಿ, ಆಧಾರ್ ದೃಢೀಕರಣವನ್ನು ಐಚ್ಚಿಕ ಆಯ್ಕೆಯನ್ನಾಗಿ ಮಾಡಿದೆ. ಆಧಾರ ಬದಲಿಗೆ ಪರ್ಯಾಯ ದಾಖಲೆಗಳನ್ನು ದೃಢೀಕರಣಕ್ಕಾಗಿ ಬಳಸಲು ಅವಕಾಶ ಕಲ್ಪಿಸಲಾಗಿದೆ.
ಆಧಾರ ಸಂಖ್ಯೆ ಹೊಂದಿಲ್ಲದವರು ಅಥವಾ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳಲು ಬಯಸದೆ ಇರುವವರಿಗೆ ಪರ್ಯಾಯ ಮಾರ್ಗ ಆಯ್ಕೆ ಮಾಡಿಕೊಳ್ಳಬಹುದು ಹೊಸ ವಿಧೇಯಕ ಸಂಸತ್ತಿನಲ್ಲಿ ಅನುಮೋದನೆಗೊಂಡು ಕಾನೂನಾಗಿ ಜಾರಿಯಾದರೆ ಆನ್ಲೈನ್ ಮೂಲಕವೇ ದಾಖಲೆಗಳ ಸಲ್ಲಿಕೆ, ದಾಖಲೆಗಳ ಇ-ದೃಢೀಕರಣ, ಆನ್ಲೈನ್ ಮೂಲಕವೇ ನೋಂದಣಿ ಪ್ರಮಾಣ ಪತ್ರ ವಿತರಣೆಗೆ ಅವಕಾಶ ದೊರೆಯಲಿದೆ.
ದಾಖಲೆಗಳು ಡಿಜಿಟಲ್ ರೂಪದಲ್ಲಿ ಸಂಗ್ರಹಗೊಳ್ಳಲಿವೆ
ಹೊಸ ವಿಧೇಯಕ ಕಾನೂನಾಗಿ ಜಾರಿಯಾದಲ್ಲಿ, ಆಸ್ತಿಗಳ ಆನ್ಲೈನ್ ನೋಂದಣಿ, ಆನ್ಲೈನ್ ಮೂಲಕವೇ ದಾಖಲೆಗಳ ಸಲ್ಲಿಕೆ, ದಾಖಲೆಗಳ ಇ-ದೃಢೀಕರಣ ಮತ್ತು ಆನ್ಲೈನ್ ಮೂಲಕವೇ ನೋಂದಣಿ ಪ್ರಮಾಣ ಪತ್ರ ವಿತರಣೆಗೆ ಅವಕಾಶ ದೊರೆಯಲಿದೆ. ಅಲ್ಲದೆ, ಈ ಕುರಿತ ದಾಖಲೆಗಳು ಡಿಜಿಟಲ್ ರೂಪದಲ್ಲಿ ಸಂಗ್ರಹಗೊಳ್ಳಲಿವೆ.
ಈ ಕರಡು ವಿಧೇಯಕವನ್ನು ಸಾರ್ವಜನಿಕರ ಅವಲೋಕನಕ್ಕೆ ಮುಕ್ತವಾಗಲಿಡಲಾಗಿದೆ. ಈ ಬಗ್ಗೆ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಇಲಾಖೆ ಆಹ್ವಾನ ಮಾಡಿದೆ.
ಮತ್ತೊಂದೆಡೆ, ಕರ್ನಾಟಕ ಸರಕಾರ ತನ್ನ ರಾಜ್ಯದಲ್ಲಿ ಆಸ್ತಿ ವರ್ಗಾವಣೆಯಲ್ಲಿ ನಡೆಯುವ ಅಕ್ರಮ ತಡೆಯುವ ನಿಟ್ಟಿನಲ್ಲಿ ನೋಂದಣಿಗೆ ಆಧಾರ್ ಇ-ದೃಢೀಕರಣ ಕಡ್ಡಾಯ ಮಾಡಲು ನಿರ್ಧರಿಸಿದೆ. ಈ ಸಂಬಂಧ ಅದು ಕೇಂದ್ರ ಸರಕಾರಕ್ಕೂ ಪತ್ರ ಬರೆದಿದ್ದು, ಮಾಹಿತಿಯನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
