07/03/2026

Law Guide Kannada

Online Guide

ಅಂತಿಮ ಅಧಿಸೂಚನೆ ಬಳಿಕ ಭೂ ಸ್ವಾಧೀನದ ನಡವಳಿ ಪ್ರಶ್ನಿಸಲು ಕಾನೂನಿನಡಿ ಅವಕಾಶವಿದೆಯೇ..?

ಬೆಂಗಳೂರು: ಭೂ ಸ್ವಾಧೀನಕ್ಕೆ ಸಂಬಂಧಿಸಿದ ಅಂತಿಮ ಅಧಿಸೂಚನೆ ಹೊರಬಿದ್ದ ಬಳಿಕ ಭೂ ಸ್ವಾಧೀನದ ನಡವಳಿಯನ್ನು ಪ್ರಶ್ನಿಸಲು ಕಾನೂನು ಅಡಿ ಯಾವುದೇ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಭೂ ಸ್ವಾಧೀನದ ಪ್ರಾರಂಭಿಕ ಮತ್ತು ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಭೂ ಸ್ವಾಧೀನದ ನಡವಳಿ ಪ್ರಶ್ನಿಸಲು ಕಾನೂನಿನಡಿ ಅವಕಾಶವಿಲ್ಲ. ಸೂಕ್ತ ಕಾನೂನು ಪ್ರಕ್ರಿಯೆ ಅನುಸರಿಸಿ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಅಂತಿಮ ಅಧಿಸೂಚನೆ ಹೊರಬಿದ್ದ ಬಳಿಕ ಭೂ ಸ್ವಾಧೀನದ ನಡವಳಿಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ, ಖರೀದಿದಾರರು ಪ್ರಸ್ತಾಪಿತ ಭೂಮಾಲೀಕರು ತಮ್ಮ ಭೂ ಒಡೆತನದ ಆಧಾರದಲ್ಲಿ ಪರಿಹಾರಕ್ಕೆ ಹಕ್ಕೊತ್ತಾಯ ಸಲ್ಲಿಸಬಹುದು. ಭೂ ಒಡೆಯನಿಗೆ ಅದೊಂದು ಮಾತ್ರ ಉಳಿದ ಮಾರ್ಗವಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಾಥಮಿಕ ಮತ್ತು ಅಂತಿಮ ಸ್ವಾಧೀನ ಅಧಿಸೂಚನೆಯ ನಂತರ, ನಂತರದ ಭೂ ಖರೀದಿದಾರರು ಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಲು ಯಾವುದೇ ಕಾನೂನುಬದ್ಧ ಸ್ಥಾನಮಾನವನ್ನು ಹೊಂದಿರುವುದಿಲ್ಲ, ಏಕೆಂದರೆ ಖರೀದಿಯು ಸ್ವಾಧೀನಪಡಿಸಿಕೊಳ್ಳುವ ಪ್ರಾಧಿಕಾರದ ವಿರುದ್ಧ ಅನೂರ್ಜಿತವಾಗಿದೆ. ಅವರ ಏಕೈಕ ಮಾರ್ಗವೆಂದರೆ ಅವರ ಮಾರಾಟಗಾರರ ಶೀರ್ಷಿಕೆಯ ಆಧಾರದ ಮೇಲೆ ಪರಿಹಾರವನ್ನು ಪಡೆಯುವುದು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ತಿಳಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.