ಮಹಿಳೆ ಅಳುತ್ತಿದ್ದರೆಂಬ ಕಾರಣಕ್ಕೆ ಅದು ವರದಕ್ಷಿಣೆ ಕಿರುಕುಳ ಎಂದು ಪರಿಗಣಿಸು ಸಾಧ್ಯವಿಲ್ಲ : ಹೈಕೋರ್ಟ್
ನವದೆಹಲಿ: ಮಹಿಳೆ ಅಳುತ್ತಿದ್ದಳು ಎಂಬ ಕಾರಣಕ್ಕೆ ಅದು ವರದಕ್ಷಿಣೆ ಕಿರುಕುಳವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್ ತೀರ್ಪು ನೀಡಿದೆ.
ಪತಿ ಮತ್ತು ಆತನ ಕುಟುಂಸ್ಥರನ್ನು ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಈ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 2010ರಲ್ಲಿ ವಿವಾಹವಾಗಿದ್ದ ಮಹಿಳೆ ತನ್ನ ಪತಿ ಮತ್ತು ಅತ್ತೆಯಿಂದ ವರದಕ್ಷಿಣೆ ಕಿರುಕುಳ ಅನುಭವಿಸಿದ್ದರು.. ಮದುವೆಗೆ ಸುಮಾರು 4 ಲಕ್ಷ ರೂಪಾಯಿ ಖರ್ಚು ಮಾಡಲಾಗಿತ್ತು. ಆ ಬಳಿಕ ಪತಿ ಮತ್ತು ಅತ್ತೆ ಬೈಕ್, ನಗದು ಮತ್ತು ಚಿನ್ನಕ್ಕಾಗಿ ಬೇಡಿಕೆಯಿಟ್ಟು ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದರು.
ಸಂತ್ರಸ್ತೆಗೆ ಕರೆ ಮಾಡಿದಾಗಲೆಲ್ಲ ಅಳುತ್ತಿದ್ದಳೆಂದು ಆಕೆ ಸಹೋದರಿ ಆಪಾದಿಸಿದ್ದರು. ಆದರೆ ಮಹಿಳೆಯ ಸಾವಿಗೆ ನ್ಯುಮೋನಿಯಾ ಕಾರಣವೆಂದು, ವರದಕ್ಷಿಣೆ ನೀಡಿರುವುದಕ್ಕೆ ಸಾಕ್ಷ್ಯಗಳು ಇಲ್ಲದಿರುವುದನ್ನು ಗಮನಿಸಿ ಮಹಿಳೆ ಪತಿ ಮತ್ತಾತನ ಕುಟುಂಬದ ವಿರುದ್ಧದ ಪ್ರಕರಣವನ್ನ ನ್ಯಾಯಪೀಠ ವಜಾಗೊಳಿಸಿತು.
ಮೃತ ವ್ಯಕ್ತಿಯ ಸಹೋದರಿ ಹೋಳಿ ಹಬ್ಬದ ಸಂದರ್ಭದಲ್ಲಿ ತನ್ನ ಸಹೋದರಿಗೆ ಕರೆ ಮಾಡಿ ಅಳುತ್ತಿರುವುದನ್ನು ಕಂಡಿದ್ದಾಗಿ ಸಿಆರ್ ಪಿಸಿ ಸೆಕ್ಷನ್ 161 ರ ಅಡಿಯಲ್ಲಿ ಹೇಳಿಕೆ ದಾಖಲಿಸಲಾಗಿದೆ. ಆದರೆ, ಮೃತರು ಅಳುತ್ತಿದ್ದ ಮಾತ್ರಕ್ಕೆ ವರದಕ್ಷಿಣೆ ಕಿರುಕುಳದ ಯಾವುದೇ ಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ” ಎಂದು ಹೈಕೋರ್ಟ್ ಹೇಳಿದೆ.
ವಿಚಾರಣಾ ನ್ಯಾಯಾಲಯವು ಆರೋಪಿಯ ಸಾವು ನೈಸರ್ಗಿಕ ಕಾರಣವಾದ ನ್ಯುಮೋನಿಯಾದಿಂದ ಸಂಭವಿಸಿದೆ ಎಂದು ತಿಳಿಸಿ ಅವರನ್ನು ಖುಲಾಸೆಗೊಳಿಸಿತ್ತು. ಮರಣೋತ್ತರ ಪರೀಕ್ಷೆಯ ವರದಿಯು ಸಾವಿಗೆ ಕ್ರೌರ್ಯವಲ್ಲ, ನ್ಯುಮೋನಿಯಾ ಕಾರಣ ಎಂದು ಹೇಳಿದೆ ಎಂದು ಹೈಕೋರ್ಟ್ ಒತ್ತಿ ಹೇಳಿದೆ.
“ಪ್ರಸ್ತುತ ಪ್ರಕರಣದಲ್ಲಿ, ಮಹಿಳೆಯ ಸಾವಿಗೆ ಕಾರಣವಾಗುವ ಕ್ರೌರ್ಯದ ಷರತ್ತು ತರಲು, ಮೃತರು ಯಾವುದೇ ಕ್ರೌರ್ಯದ ಕೃತ್ಯದಿಂದಲ್ಲ, ಬದಲಾಗಿ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ಗಮನಿಸಬಹುದು… ಆದ್ದರಿಂದ, ಐಪಿಸಿ ಸೆಕ್ಷನ್ 498ಎ ಗೆ ಲಗತ್ತಿಸಲಾದ ವಿವರಣೆಯ ಷರತ್ತು (ಎ) ಅನ್ವಯಿಸುವುದಿಲ್ಲ” ಎಂದು ನ್ಯಾಯಪೀಠ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
