14/03/2026

Law Guide Kannada

Online Guide

ಜಡ್ಜ್ ಹುದ್ದೆ ಹೂವಿನ ಹಾಸಿಗೆಯಲ್ಲ, ಹಗ್ಗದ ಮೇಲಿನ ನಡಿಗೆ: ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟ ನ್ಯಾ. ಎಂ.ಜಿ. ಉಮಾ

ಬೆಂಗಳೂರು: ನ್ಯಾಯಾಧೀಶರ ಹುದ್ದೆ ಹೂವಿನ ಹಾಸಿಗೆಯಲ್ಲ, ಅದು ಹಗ್ಗದ ಮೇಲಿನ ನಡಿಗೆಯಿದ್ದಂತೆ ಎಂದು ನಿವೃತ್ತರಾದ ನ್ಯಾಯಮೂರ್ತಿ ಎಂ. ಜಿ. ಉಮಾ ನುಡಿದರು.

ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ನ್ಯಾಯಮೂರ್ತಿ ಎಂ. ಜಿ. ಉಮಾ ಅವರಿಗೆ ಬೆಂಗಳೂರು ವಕೀಲರ ಸಂಘದ (ಎಎಬಿ) ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್ಬಿಸಿ) ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾ.ಎಂ. ಜಿ. ಉಮಾ ಅವರು ಮಾತನಾಡಿದರು.

ಜಗತ್ತಿನಲ್ಲಿ ‘ಯಾವುದೂ ಶಾಶ್ವತವಲ್ಲ. ನಾವೆಲ್ಲರೂ ಇಲ್ಲಿ ಸೀಮಿತ ಅವಧಿಗೆ ಮಾತ್ರವೇ ಇರುತ್ತೇವೆ. ಆದ್ದರಿಂದ, ಈ ಮಹಾನ್ ಸಂಸ್ಥೆಯ ಘನತೆಯನ್ನು ಎತ್ತಿಹಿಡಿಯಲು ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು’ ಎಂದು ನ್ಯಾ. ಎಂ.ಜಿ.ಉಮಾ ತಿಳಿಸಿದರು.

‘ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆಯಾಗಿ ಈ ಹಂತ ತನಕ ನಡೆದು ಬಂದಿದ್ದೇನೆ. ಈ ವೃತ್ತಿ ಹೂವಿನ ಹಾಸಿಗೆಯಲ್ಲ. ಹಗ್ಗದ ಮೇಲಿನ ನಡಿಗೆ ಎಂದು ಅವರು ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟ ನ್ಯಾ. ಎಂ.ಜಿ.ಉಮಾ ಅವರು, ತಮ್ಮ ಸೇವಾವಧಿಯಲ್ಲಿ ಮೈಸೂರು, ಬಳ್ಳಾರಿ, ಮಂಗಳೂರು, ರಾಮನಗರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆಯಾಗಿ ನಂತರ ಹೈಕೋರ್ಟ್ಗೆ ಪದೋನ್ನತಿ ಹೊಂದಿ ನ್ಯಾಯಮೂರ್ತಿಯಾಗಿ ನಾನು ಮಾಡಿರುವ ಕೆಲಸ ನನಗೆ ಸಂಪೂರ್ಣ ಸಮಾಧಾನ ಮತ್ತು ತೃಪ್ತಿ ಇದೆ’ ಎಂದು ಸ್ಮರಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.